ಮಂಡ್ಯ ಜನರ ಮನ ಗೆದ್ದ ನಾಯಕ ಅಂಬರೀಶ್​​​ ಎಂದ ಬಿಎಸ್​​ವೈ; ಸಿಎಂ ಎಚ್​​ಡಿಕೆ ವಿರುದ್ಧ ಕಿಡಿ!

ಇನ್ನು ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್ ಬಗ್ಗೆ ಚರ್ಚೆ ಆಗಿಲ್ಲ. ರಾಜ್ಯದಲ್ಲಿ 22 ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಲಿದ್ದೇವೆ. ಅಲ್ಲದೇ ದೇಶದಲ್ಲಿ 300ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲಲಿದ್ದೇವೆ. ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕುಮಾರಸ್ವಾಮಿ- ಯಡಿಯೂರಪ್ಪ

ಕುಮಾರಸ್ವಾಮಿ- ಯಡಿಯೂರಪ್ಪ

  • News18
  • Last Updated :
  • Share this:
ಗದಗ(ಮಾ.07): "ಮಂಡ್ಯ ಜನರ ಮನ ಗೆದ್ದ ನಾಯಕ ಅಂಬರೀಶ್, ಇವರ ಬಗ್ಗೆ ಹಗುರವಾಗಿ ಮಾತನಾಡಿದ್ದು ಸಿಎಂ ಎಚ್​​.ಡಿ ಕುಮಾರಸ್ವಾಮಿಯವರಿಗೆ ಶೋಭೆ ತರುವುದಿಲ್ಲ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​​ ಯಡಿಯೂರಪ್ಪನವರು ಕಿಡಿಕಾರಿದ್ದಾರೆ. ಹಾಗೆಯೇ ಸುಮಲತಾ ಅವರು ಬಿಜೆಪಿಯನ್ನ ಸಂಪರ್ಕಿಸಿಲ್ಲ; ನಾವು ಕೂಡ ಅವರನ್ನು ಸಂಪರ್ಕ ಮಾಡಿಲ್ಲ. ಹೀಗಾಗಿ ಸುಮಲತಾ ಅಂಬರೀಶ್​​ ಅವರ ನಿರ್ಧಾರದ ಬಳಿಕ ಬಿಜೆಪಿ ನಿಲುವು ಪ್ರಕಟ ಮಾಡುತ್ತೇವೆ ಎಂದಿದ್ದಾರೆ.

ಇಂದು ಸುಮಲತಾ ಅಂಬರೀಶ್​​ ಅವರಿಗೆ ಬಿಜೆಪಿ ಬೆಂಬಲ ನೀಡಲಿದೆಯಾ? ಎಂಬ ಪ್ರಶ್ನೆಗೆ ಗದಗ್​ನಲ್ಲಿ ಬಿ.ಎಸ್​​ ಯಡಿಯೂರಪ್ಪನವರು ಪ್ರತಿಕ್ರಿಯಿಸಿದರು. ಈ ವೇಳೆ ಸುದ್ದಿಗಾರರ ಜತೆ ಮಾತಾಡಿದ ಇವರು, "ಸುಮಲತಾ ಅಂಬರೀಶ್​​’ ನಿರ್ಧಾರ ಬಳಿಕ ಬಿಜೆಪಿ ನಿಲುವು ಪ್ರಕಟವಾಗಲಿದೆ. ತಮ್ಮ ಪುತ್ರ ನಿಖಿಲ್​​​ಗೆ ಸುಮಲತಾ ಸ್ಪರ್ಧೆ ಅಡ್ಡಿಯಾಗುತ್ತೇ ಎಂಬ ಕಾರಣಕ್ಕೆ ಅಂಬರೀಶ್​​ ಬಗ್ಗೆ ಬಹಳ ಹಗುರವಾಗಿ ಮಾತನಾಡಿದ್ದಾರೆ. ಸಿಎಂ ಎಚ್​​​.ಡಿ ಕುಮಾರಸ್ವಾಮಿಯವರ ಈ ನಡೆ ಸರಿಯಾದುದಲ್ಲ" ಎಂದು ಬಿಎಸ್​ವೈ ತಪರಾಕಿ ಬಾರಿಸಿದ್ದಾರೆ.

ಇನ್ನು ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್ ಬಗ್ಗೆ ಚರ್ಚೆ ಆಗಿಲ್ಲ. ರಾಜ್ಯದಲ್ಲಿ 22 ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಲಿದ್ದೇವೆ. ಅಲ್ಲದೇ ದೇಶದಲ್ಲಿ 300ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲಲಿದ್ದೇವೆ. ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಸುಮಲತಾ ಬೆನ್ನಿಗೆ ನಿಂತ ಚಾಲೆಂಜಿಂಗ್​ ಸ್ಟಾರ್​ ದರ್ಶನ್​; ಅಂಬರೀಷ್​​ ಹೆಂಡತಿಗೆ ಸಿಕ್ತು ಆನೆಬಲ

ಹೀಗೆ ಮಾತು ಮುಂದುವರೆಸಿದ ಬಿಎಸ್​ವೈ " ಲೋಕಸಭಾ ಚುನಾವಣೆ ಬಳಿಕ ಸಮ್ಮಿಶ್ರ ಸರ್ಕಾರ ಪತನವಾಗಲಿದೆ. ಕಾಂಗ್ರೆಸ್ಸಿನ 20ಕ್ಕೂ ಹೆಚ್ಚು ಶಾಸಕರು ಸಿಎಂ  ಕುಮಾರಸ್ವಾಮಿ ಅವರನ್ನು ಒಪ್ಪುತ್ತಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಸಾಕಷ್ಟು ಗೊಂದಲವಿದೆ. ಹೀಗಾಗಿಯೇ ಲೋಕಸಭಾ ಚುನಾವಣೆ ಬಳಿಕ ಸರ್ಕಾರ ಕುಸಿಯಲಿದೆ ಎಂದರು. ಇದೇ ಸಂದರ್ಭದಲ್ಲಿ  ಹಾವೇರಿ-ಗದಗ ಲೋಕಸಭಾ ಕ್ಷೇತ್ರದಲ್ಲಿ ಶಿವಕುಮಾರ್ ಉದಾಸಿ 1 ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತಾರೆ. ಈ ಕ್ಷೇತ್ರದಲ್ಲಿ ಶಿವಕುಮಾರ್ ವಿರುದ್ಧ ಸರಿಯಾದ ಎದುರಾಳಿ ಇಲ್ಲ ಎಂದು ತಿಳಿಸಿದರು.

ಇದನ್ನೂ ಓದಿ: ಮಂಡ್ಯದಿಂದ ಸ್ಪರ್ಧಿಸೋದು ಪಕ್ಕಾ ಎಂದ ಅಂಬರೀಶ್​​ ಪತ್ನಿ; ‘ಸುಮಲತಾ’ಗೆ ನಮ್ಮ ಬೆಂಬಲ ಎಂದ ಸ್ಥಳೀಯ ಕಾಂಗ್ರೆಸ್ಸಿಗರು

ಬಳ್ಳಾರಿಯಿಂದ ಲಖನ್ ಜಾರಕಿಹೊಳಿ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯಾಧ್ಯಕ್ಷ, ಇನ್ನೂ ಯಾವುದು ನಿರ್ಧಾರವಾಗಿಲ್ಲ. ಈ ವಿಚಾರದಲ್ಲಿ ಶ್ರೀರಾಮುಲು ಬಿಟ್ಟು ಯಾವುದೇ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಿಲ್ಲ.ಲೋಕಸಭಾ ಚುನಾವಣೆ ಬಳಿಕ ಯಾರೂ ಧೂಳಿಪಟ ಆಗಲಿದ್ದಾರೆ ಎಂದು ಕಾದು ನೋಡಿ. ಸಮ್ಮಿಶ್ರ ಸರ್ಕಾರ ಧೂಳಿಪಟವಾಗುತ್ತೋ, ಬಿಜೆಪಿ ಆಗುತ್ತೋ ಎಂದು ನೋಡುತ್ತಿರಿ. ನಾಳೆ ದೆಹಲಿಗೆ ತೆರಳಿ ಅಮಿತ್ ಶಾ ಅವರನ್ನು ಭೇಟಿ ಮಾಡುತ್ತೇನೆ. ಅಲ್ಲಿಯೇ ಲೋಕಸಭಾ ಚುನಾವಣೆ ಅಭ್ಯರ್ಥಿಗಳ ಪಟ್ಟಿ ಅಂತಿಮ ಮಾಡಲಿದ್ದೇನೆ ಎಂದು ಹೇಳಿದರು.
First published: