ವೀರಶೈವರು ಕಾಂಗ್ರೆಸ್​ ಅಭ್ಯರ್ಥಿಗಳಿಗೆ ಮತ ಹಾಕಲ್ಲ ಎಂಬ ವಿಶ್ವಾಸವಿದೆ; ಯಡಿಯೂರಪ್ಪ

ಕಾಂಗ್ರೆಸ್​ನವರಿಗೆ ವೀರಶೈವರ ಬಗ್ಗೆ ಮಾತನಾಡುವ  ನೈತಿಕತೆ ಇಲ್ಲ. ಅವರು ನಂಬಿಕೆ ಮತ್ತು ವಿಶ್ವಾಸದ್ರೋಹಿಗಳು. ವೀರೇಂದ್ರ ಪಾಟೀಲರಿಗೆ ಮಾಡಿದ ಅಪಮಾನ ಎಲ್ಲರಿಗೂ ಗೊತ್ತು

Seema.R | news18
Updated:May 17, 2019, 7:23 PM IST
ವೀರಶೈವರು ಕಾಂಗ್ರೆಸ್​ ಅಭ್ಯರ್ಥಿಗಳಿಗೆ ಮತ ಹಾಕಲ್ಲ ಎಂಬ ವಿಶ್ವಾಸವಿದೆ; ಯಡಿಯೂರಪ್ಪ
ಫೈಲ್​ ಫೋಟೊ: ಬಿಎಸ್​ ಯಡಿಯೂರಪ್ಪ
Seema.R | news18
Updated: May 17, 2019, 7:23 PM IST
ಹುಬ್ಬಳ್ಳಿ (ಮೇ.17): ಲಿಂಗಾಯತ -ವೀರಶೈವ ಮತಗಳ ನಡುವೆ ಭಿನ್ನಾಭಿಪ್ರಾಯ ಮೂಡಿಸಿದವರು. ವೀರೇಂದ್ರ ಪಾಟೀಲರಿಗೆ ಅವಮಾನಿಸಿದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ವೀರಶೈವರು ಮತ ಹಾಕುವುದಿಲ್ಲ ಎಂಬ ವಿಶ್ವಾಸವಿದೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.

ಕುಂದಗೋಳದ ನಿರ್ಣಯಕ ಮತಗಳ ಮೇಲೆ ಕಣ್ಣಿಟ್ಟಿರುವ ಅವರು  ಧರ್ಮ ಪ್ರಚೋದನೆ ಹೇಳಿಕೆ ನೀಡುವ ಮೂಲಕ ಜಾತಿ ರಾಜಕೀಯಕ್ಕೆ ಮುಂದಾಗಿದ್ದಾರೆ. ಕಳೆದ ಎರಡುದಿನಗಳ ಹಿಂದೆ ಕೂಡ ಅವರು ಲಿಂಗಾಯತರು ಕಾಂಗ್ರೆಸ್​ ಗೆ ಮತ ಹಾಕಿದರೆ ಅದು ಅಪರಾಧ ಎನ್ನುವ ಮೂಲಕ ಸುದ್ದಿಯಾಗಿದ್ದರು. ಯಡಿಯೂರಪ್ಪ ಹೇಳಿಕೆ ಹಿನ್ನೆಲೆ ಕಾಂಗ್ರೆಸ್​ ಕೂಡ ಧರ್ಮ ಪ್ರಚೋದನೆ ಹೇಳಿಕೆಯನ್ನು ಬಿಜೆಪಿ ನೀಡುತ್ತಿದೆ ಎಂದು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ಪ್ರತ್ಯೇಕ ಲಿಂಗಾಯತ ಧರ್ಮ ರಚನೆಗೆ ಮುಂದಾಗುವ ಮೂಲಕ ಧರ್ಮ ಒಡೆಯುವ ಕಾರ್ಯವನ್ನು ಕಾಂಗ್ರೆಸ್​ ನಡೆಸಿದ್ದರು. ಕಾಂಗ್ರೆಸ್​ನವರಿಗೆ ವೀರಶೈವರ ಬಗ್ಗೆ ಮಾತನಾಡುವ  ನೈತಿಕತೆ ಇಲ್ಲ. ಅವರು ನಂಬಿಕೆ ಮತ್ತು ವಿಶ್ವಾಸದ್ರೋಹಿಗಳು. ವೀರೇಂದ್ರ ಪಾಟೀಲರಿಗೆ ಮಾಡಿದ ಅಪಮಾನ ಎಲ್ಲರಿಗೂ ಗೊತ್ತು ಎಂದು ಹರಿಹಾಯ್ದರು.

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದು ಶತಸಿದ್ಧ. ಮೋದಿ ಮತ್ತೊಮ್ಮೆ ಪ್ರಧಾನಿಯಾಗೋದು ಸೂರ್ಯಚಂದ್ರರಷ್ಟೇ ಸತ್ಯ. ಕುಂದಗೋಳ, ಚಿಂಚೋಳಿಯಲ್ಲಿ ಬಿಜೆಪಿ ಗೆಲ್ಲಲಿದೆ.

ರಾಜ್ಯದಲ್ಲಿ ತುಘಲಕ್​ ಆಡಳಿತವಿದೆ. ಸರ್ಕಾರ ಸತ್ತಿದೆ. ಮೈತ್ರಿ ಸರ್ಕಾರದ ದ್ರೋಹವನ್ನು ಯಾರೂ ಮರೆತಿಲ್ಲ. ಜೆಡಿಎಸ್​ - ಕಾಂಗ್ರೆಸ್ ಕಚ್ಚಾಟ ಜನರಿಗೆ ಬೇಸರವಾಗಿದೆ. ಮೇ 23ರ ನಂತರ ರಾಜಕೀಯದಲ್ಲಿ ಏರುಪೇರಾಗಲಿದೆ ಎಂದು ಭವಿಷ್ಯ ನುಡಿದರು.

ಇದನ್ನು ಓದಿ: ಧರಂ ಸಿಂಗ್ ಸರಕಾರದ ವೇಳೆ ನಡೆದ ನಾಟಕೀಯ ಬೆಳವಣಿಗಳೇನು? ಗೌಡರ ಆಟಗಳೇನು?; ಮಾಜಿ ಗುಪ್ತಚರ ಮುಖ್ಯಸ್ಥರ ಪುಸ್ತಕದಲ್ಲಿವೆ ರೋಚಕ ಕಥೆಗಳುಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕು ಎಂದು ಕನಸು ಕಾಣುತ್ತಿದ್ದಾರೆ. ಆದರೆ, ಸರ್ಕಾರ ಇದ್ದರೆ ತಾನೇ ಯಾರು ಸಿಎಂ ಆಗಬೇಕು ಎಂಬ ಚರ್ಚೆಯಾಗಬೇಕು. ನಾನು ಹಗಲು ಕನಸು ಕಾಣುತ್ತಿದ್ದೇನೆ ಎಂದು ಸಿದ್ದರಾಮಯ್ಯ ಲೇವಡಿ ಮಾಡುತ್ತಿದ್ದರೆ, ಆದರೆ ಕನಸು ಕಾಣುತ್ತಿರುವು ನಾನಲ್ಲ, ಅವರು. ಫಲಿತಾಂಶದ ನಂತರ ಸಿದ್ದರಾಮಯ್ಯಗೆ  ತಾವೆಲ್ಲಿದ್ದಾರೆಂದು ತಿಳಿಯಲಿದೆ ಎಂದು ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು.

ಚುನಾವಣೆ ಬಳಿಕ ಕಾಂಗ್ರೆಸ್​ ಜೆಡಿಎಸ್​ ಮೈತ್ರಿ ಮುರಿದು  ಬಿಜೆಪಿ ಜೊತೆ ಬರುತ್ತಾರೆ ಎನ್ನುವುದರಲ್ಲಿ ಸತ್ಯಾಂಶವಿಲ್ಲ. ಜೆಡಿಎಸ್ ಜೊತೆ ಹೊಂದಾಣಿಕೆಯ ಅಗತ್ಯವಿಲ್ಲ. ಹೊಂದಾಣಿಕೆ ಮಾಡಿಕೊಳ್ಳುವ ಯೋಚನೆಯೂ ನಮಗಿಲ್ಲ. ಕುಮಾರಸ್ವಾಮಿ‌ ಪ್ರಾಮಾಣಿಕರಿದ್ದರೆ ಖರ್ಗೆಯನ್ನು‌ ಸಿಎಂ ಮಾಡಲಿ ಎಂದು ಸವಾಲು ಹಾಕಿದ್ದರು.

'ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್​​ಚಾಟ್ ನಲ್ಲೂ ಹಿಂಬಾಲಿಸಿ'

First published:May 17, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ