Drought Monitor: ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಬರಪ್ರವಾಸ ಮುಂದೂಡಿಕೆ; ಕಾರಣವೇನು ಗೊತ್ತಾ?

ತೆಂಗು, ಅಡಿಕೆ, ಕಬ್ಬು ನೀರಿಲ್ಲದೆ ಒಣಗುತ್ತಿವೆ. ಮಂಡ್ಯ ಜಿಲ್ಲೆಯಲ್ಲಿ ಬೆಳೆದು ನಿಂತ ಬೆಳೆಗಳಿಗೆ ನೀರು ಬಿಡುಗಡೆ ಮಾಡುತ್ತಿಲ್ಲ. ರೈತರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ- ಬಿ.ಎಸ್​ವೈ

Ganesh Nachikethu
Updated:July 3, 2019, 7:26 AM IST
Drought Monitor: ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಬರಪ್ರವಾಸ ಮುಂದೂಡಿಕೆ; ಕಾರಣವೇನು ಗೊತ್ತಾ?
ಬಿ.ಎಸ್​. ಯಡಿಯೂರಪ್ಪ.
Ganesh Nachikethu
Updated: July 3, 2019, 7:26 AM IST
ಬೆಂಗಳೂರು(ಜುಲೈ.03): ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​​ ಯಡಿಯೂರಪ್ಪ ಅವರ ಬರ ಅಧ್ಯಯನ ಪ್ರವಾಸವನ್ನು ದಿಢೀರ್​​ ಮುಂದೂಡಲಾಗಿದೆ. ಇಂದಿನಿಂದಲೇ ಎರಡು ದಿನಗಳ ಕಾಲ ಹಾಸನ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಕೈಗೊಳ್ಳಬೇಕಿದ್ದ ಬರಪ್ರವಾಸ ಅನಿವಾರ್ಯ ಕಾರಣಾಂತರಗಳಿಂದ ಮುಂದೂಡಲಾಗಿದೆ. ಶೀಘ್ರದಲ್ಲೇ ಬರ ಪೀಡಿತ ಪ್ರದೇಶಗಳಿಗೆ ವಿರೋಧ ಪಕ್ಷದ ನಾಯಕರು ಭೇಟಿ ನೀಡಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಇತ್ತೀಚೆಗಷ್ಟೇ ಬರ ಪೀಡಿತ ಪ್ರದೇಶಗಳಲ್ಲಿ ಸರ್ಕಾರ ಪರಿಹಾರ ಕಾರ್ಯ ಕೈಗೊಂಡಿಲ್ಲ. ಇಂತಹ ಪ್ರದೇಶಗಳಲ್ಲಿ ಮತ್ತೊಮ್ಮೆ ಪ್ರವಾಸ ಮಾಡಿ ವಾಸ್ತವ ಸ್ಥಿತಿ ಅಧ್ಯಯನ ಮಾಡುವುದಾಗಿ ಹೇಳಿದ್ದರು ಬಿ.ಎಸ್ ಯಡಿಯೂರಪ್ಪನವರು.

ಜತೆಗೆ ರಾಜ್ಯದ 81 ತಾಲ್ಲೂಕುಗಳಲ್ಲಿ ಮಳೆಯ ತೀವ್ರ ಕೊರತೆ ಇದೆ. 62 ತಾಲ್ಲೂಕುಗಳಲ್ಲಿ ಮಳೆಯಾಗಿದ್ದರೂ ಜನ- ಜಾನುವಾರುಗಳ ಕುಡಿಯುವ ನೀರಿನ ಸ್ಥಿತಿ ಸುಧಾರಿಸಿಲ್ಲ. ಭೀಕರ ಬರ ಪರಿಸ್ಥಿತಿ ಇದ್ದರೂ ಸಿಎಂ ಅಮೆರಿಕಕ್ಕೆ ಹೋಗಿದ್ದಾರೆ. ಸಚಿವರು ಮತ್ತು ಅಧಿಕಾರಿಗಳು ಕೂಡ ಇತ್ತ ಗಮನ ಹರಿಸುತ್ತಿಲ್ಲ ಎಂದು ದೂರಿದ್ದರು.

ಹೀಗೆ ಮಾತು ಮುಂದುವರೆಸಿದ್ದ ಇವರು, ತೆಂಗು, ಅಡಿಕೆ, ಕಬ್ಬು ನೀರಿಲ್ಲದೆ ಒಣಗುತ್ತಿವೆ. ಮಂಡ್ಯ ಜಿಲ್ಲೆಯಲ್ಲಿ ಬೆಳೆದು ನಿಂತ ಬೆಳೆಗಳಿಗೆ ನೀರು ಬಿಡುಗಡೆ ಮಾಡುತ್ತಿಲ್ಲ. ರೈತರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. 1,758 ಹಳ್ಳಿಗಳಲ್ಲಿ ಕುಡಿಯುವ ನೀರಿನ ತೀವ್ರ ಅಭಾವವಿದೆ ಎಂದರು.

ಇದನ್ನೂ ಓದಿ: ಫ್ಯಾಕ್ಸ್​ ಮೂಲಕ ರಾಜೀನಾಮೆ ಸ್ವೀಕರಿಸಲು ನಾನೇನು ಪೋಸ್ಟ್​​ ಮಾಸ್ಟ್ರಾ?; ರಮೇಶ್​​ ಕುಮಾರ್​​​

ರಾಜ್ಯದಲ್ಲಿ ಲಿಂಗನಮಕ್ಕಿ, ವರಾಹಿ, ಹಾರಂಗಿ, ಹೇಮಾವತಿ, ಕೆಆರ್‌ಎಸ್‌, ಕಬಿನಿ, ಭದ್ರಾ, ತುಂಗಭದ್ರಾ, ಘಟಪ್ರಭಾ, ಮಲಪ್ರಭಾ, ಆಲಮಟ್ಟಿ ಮುಂತಾದ ಪ್ರಮುಖ ಜಲಾಶಯಗಳು ಇವೆ. 15 ವರ್ಷಗಳಿಗೆ ಹೋಲಿಸಿದರೆ ಅತಿ ಕಡಿಮೆ ಪ್ರಮಾಣದ ನೀರಿನ ಮಟ್ಟ ಇದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಲಿದೆ. ಪರಿಸ್ಥಿತಿ ನಿಭಾಯಿಸುವ ಬಗ್ಗೆ ಸರ್ಕಾರ ಏನೂ ಮಾಡುತ್ತಿಲ್ಲ ಎಂದು ಆರೋಪಿಸಿದರು.

ಕಳೆದ ವರ್ಷ ಅತಿವೃಷ್ಟಿ ಸಂದರ್ಭದಲ್ಲಿ ಕೊಡಗು ಸಂತ್ರಸ್ತರು ತತ್ತರಿಸಿ ಹೋಗಿದ್ದರು. ಇವರ ಬಳಕೆಗಾಗಿ ಸರ್ಕಾರದ ಬೊಕ್ಕಸಕ್ಕೆ ಸಾರ್ವಜನಿಕರಿಂದ ₹150 ಕೋಟಿ ದೇಣಿಗೆ ಹರಿದು ಬಂದಿತ್ತು. ಈ ದೇಣಿಗೆ ಹಣ ಏನಾಗಿದೆ? ಯಾವುದಕ್ಕೆ ಖರ್ಚು ಮಾಡಲಾಗಿದೆ? ಎಂಬುದನ್ನು ತಿಳಿಸಬೇಕು ಎಂದು ಪ್ರಶ್ನಿಸಿದರು.
--------------
First published:July 3, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...