ಯಡಿಯೂರಪ್ಪ ಮನೆ ಮೇಲೆ ಯಾಕೆ ಐಟಿ ದಾಳಿಯಾಗಿಲ್ಲ? ; ಗೃಹಸಚಿವ ಎಂ.ಬಿ. ಪಾಟೀಲ ಪ್ರಶ್ನೆ

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 18ರಿಂದ 20 ಸ್ಥಾನ ಗೆಲ್ಲುವುದಷ್ಟೇ ನನ್ನ ಮತ್ತು ಡಿ.ಕೆ. ಶಿವಕುಮಾರ್​ ಅವರ ಗುರಿ. ನಾವಿಬ್ಬರೂ ಒಳ್ಳೇ ಸ್ನೇಹಿತರು. ನಮ್ಮಿಬ್ಬರ ಮಧ್ಯೆ ಯಾವುದೇ ರಾಜಕೀಯ ವ್ಯತ್ಯಾಸ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Sushma Chakre | news18
Updated:April 14, 2019, 4:37 PM IST
ಯಡಿಯೂರಪ್ಪ ಮನೆ ಮೇಲೆ ಯಾಕೆ ಐಟಿ ದಾಳಿಯಾಗಿಲ್ಲ? ; ಗೃಹಸಚಿವ ಎಂ.ಬಿ. ಪಾಟೀಲ ಪ್ರಶ್ನೆ
ಗೃಹ ಸಚಿವ ಎಂ.ಬಿ. ಪಾಟೀಲ್
Sushma Chakre | news18
Updated: April 14, 2019, 4:37 PM IST
ಧಾರವಾಡ (ಏ. 14): ಚುನಾವಣೆಗೂ ಮೊದಲು ಯಡಿಯೂರಪ್ಪ ಒಬ್ಬೊಬ್ಬ ಶಾಸಕರಿಗೂ 10 ಕೋಟಿ ರೂ. ಕೊಡುವುದಾಗಿ ಹೇಳಿದ್ದರು. ಲೀಕ್ ಆಗಿದ್ದ ಆಡಿಯೋ ಕೂಡ ತಮ್ಮದೇ ಎಂದು ಒಪ್ಪಿಕೊಂಡಿದ್ದರು. ಆದರೂ ಯಾಕೆ ಯಡಿಯೂರಪ್ಪನವರ ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿಲ್ಲ? ಎಂದು ಗೃಹ ಸಚಿವ ಎಂ.ಬಿ. ಪಾಟೀಲ ಪ್ರಶ್ನಿಸಿದ್ದಾರೆ.

ಧಾರವಾಡ ಜಿಲ್ಲೆಯ ಅಣ್ಣಿಗೇರಿಯಲ್ಲಿ ಮಾತನಾಡಿರುವ ಸಚಿವ ಎಂ.ಬಿ. ಪಾಟೀಲ್, ಯಡಿಯೂರಪ್ಪನವರು ಚುನಾವಣೆ ಖರ್ಚಿಗೆ 50 ಲಕ್ಷ ಕೊಡಬಹುದು. ಆದರೆ ಉಳಿದ 9.5 ಕೋಟಿ ರೂ. ಯಾಕೆ ಕೊಡಲು ಹೊರಟಿದ್ದರು? ಈ ಬಗ್ಗೆ ತನಿಖೆ ಕೂಡ ನಡೆಯುತ್ತಿದೆ. ಆದರೆ ನೀತಿಸಂಹಿತೆ ಹಿನ್ನೆಲೆ ಆ ಬಗ್ಗೆ ಮಾತನಾಡಲಾರೆ ಎಂದು ಹೇಳಿದ್ದಾರೆ.

ನಾಳೆ ಮಂಡ್ಯಕ್ಕೆ ಆಂಧ್ರ ಸಿಎಂ: ನಾಯ್ಡು ಮತ ಓಲೈಕೆಗೆ ಕುಮಾರಸ್ವಾಮಿ ಹೊಸ ತಂತ್ರ?

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 18ರಿಂದ 20 ಸ್ಥಾನ ಗೆಲ್ಲುವುದಷ್ಟೇ ನನ್ನ ಮತ್ತು ಡಿ.ಕೆ. ಶಿವಕುಮಾರ್​ ಅವರ ಗುರಿ. ನಾವಿಬ್ಬರೂ ಒಳ್ಳೇ ಸ್ನೇಹಿತರು. ನಮ್ಮಿಬ್ಬರ ಮಧ್ಯೆ ಯಾವುದೇ ರಾಜಕೀಯ ವ್ಯತ್ಯಾಸ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈಶ್ವರಪ್ಪನವರು ಒಳ್ಳೆಯ ಮನರಂಜನೆ ನೀಡಬಲ್ಲರು.  ಯಡಿಯೂರಪ್ಪ- ಈಶ್ವರಪ್ಪ ಯಾವ ರೀತಿ ಚಪ್ಪಲಿ ಮೂರು ಭಾಗ ಆಗುವಂತೆ ಹೊಡೆದಾಡಿಕೊಂಡಿದ್ದಾರೆಂದು ಇಡೀ ಜಗತ್ತೇ ನೋಡಿದೆ. ಈಗಲೂ ಅವರಿಬ್ಬರ ನಡುವೆ ಹಾಗೇ ಜಗಳವಿದೆ. ಶಿವಮೊಗ್ಗದಲ್ಲಿ ಸಾಕಷ್ಟು ಒಳಜಗಳವಿದೆ ಎಂದಿದ್ದಾರೆ.

ಪಕ್ಷ ತಾತ್ಕಾಲಿಕ ಶಿಕ್ಷೆ ಕೊಟ್ಟರೆ ಸ್ವೀಕರಿಸುತ್ತೇನೆ, ಎಲ್ಲಾ ಮುಗಿದಾಗಿದೆ ಪ್ರಚಾರದ ಅವಶ್ಯಕತೆ ಇಲ್ಲ; ಚೆಲುವರಾಯಸ್ವಾಮಿ
Loading...

ಶಾಸಕ ನಡಹಳ್ಳಿ ಸುದ್ದಿಗೋಷ್ಠಿ ಸಂದರ್ಭದ ಗಲಾಟೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಎಂ.ಬಿ. ಪಾಟೀಲ್, ಅದು ಹಲ್ಲೆಯಲ್ಲ ಅದೊಂದು ಪ್ರತಿಭಟನೆ. ಯಾರ ಮೇಲೆಯೂ ಹಲ್ಲೆ ಮಾಡಿಲ್ಲ. ನಡಹಳ್ಳಿ ಜನರನ್ನು ಪ್ರಚೋದಿಸುವ ಮಾತಾಡುತ್ತಿದ್ದಾರೆ. ಅವರಿಗೆ ಪೊಲೀಸ್ ರಕ್ಷಣೆ ಕೊಡಲಾಗಿದೆ. ಮಂಡ್ಯದಲ್ಲಿ ಸರ್ಕಾರದಿಂದ ಅಧಿಕಾರದ ದುರುಪಯೋಗ ಆಗಿಲ್ಲ. ಯಡಿಯೂರಪ್ಪ ಸುಮ್ಮನೆ ಆರೋಪ ಮಾಡುತ್ತಿದ್ದಾರೆ ಎಂದಿದ್ದಾರೆ.

First published:April 14, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...