ಬಿಎಸ್​ವೈ ಪ್ರಮಾಣ ವಚನಕ್ಕೆ ಮುಹೂರ್ತ ಫಿಕ್ಸ್; ಶುಕ್ರವಾರ ಸಂಜೆ 4ಕ್ಕೆ ನಾಲ್ಕನೇ ಭಾರಿ ಮುಖ್ಯಮಂತ್ರಿಯಾಗಿ ಪದಗ್ರಹಣ?

ಇಂದು ರಾಜ್ಯಪಾಲರನ್ನು ಭೇಟಿ ಮಾಡಲಿರುವ ಬಿಎಸ್​ವೈ ಸರ್ಕಾರ ರಚಿಸಲು ಹಕ್ಕು ಮಂಡಿಸಲಿದ್ದಾರೆ. ನಂತರ ಬಿಜೆಪಿ ಪಕ್ಷದ ಕಾರ್ಯಾಲಯದಲ್ಲಿ ನಡೆಯಲಿರುವ ಪಕ್ಷದ ಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡುವ ಪ್ರಕ್ರಿಯೆ ಸಾಂಕೇತಿಕವಾಗಿ ನಡೆಯಲಿದೆ.

MAshok Kumar | news18
Updated:July 24, 2019, 10:44 AM IST
ಬಿಎಸ್​ವೈ ಪ್ರಮಾಣ ವಚನಕ್ಕೆ ಮುಹೂರ್ತ ಫಿಕ್ಸ್; ಶುಕ್ರವಾರ ಸಂಜೆ 4ಕ್ಕೆ ನಾಲ್ಕನೇ ಭಾರಿ ಮುಖ್ಯಮಂತ್ರಿಯಾಗಿ ಪದಗ್ರಹಣ?
ಬಿ.ಎಸ್. ಯಡಿಯೂರಪ್ಪ.
  • News18
  • Last Updated: July 24, 2019, 10:44 AM IST
  • Share this:
ಬೆಂಗಳೂರು (ಜುಲೈ.24); ಬಿಜೆಪಿ ನಿರೀಕ್ಷೆಯಂತೆ 14 ತಿಂಗಳ ರಾಜ್ಯದ ಮೈತ್ರಿ ಸರ್ಕಾರ ಕೊನೆಗೂ ಪತನವಾಗಿದೆ. ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡುವುದು ಬಹುತೇಕ ಖಚಿತವಾಗಿದ್ದು ಶುಕ್ರವಾರ ಸಂಜೆ 4ಕ್ಕೆ ಮುಹೂರ್ತವನ್ನೂ ಫಿಕ್ಸ್ ಮಾಡಲಾಗಿದೆ.

ಇಂದು ರಾಜ್ಯಪಾಲರನ್ನು ಭೇಟಿ ಮಾಡಲಿರುವ ಬಿಎಸ್​ವೈ ಸರ್ಕಾರ ರಚಿಸಲು ಹಕ್ಕು ಮಂಡಿಸಲಿದ್ದಾರೆ. ನಂತರ ಬಿಜೆಪಿ ಪಕ್ಷದ ಕಾರ್ಯಾಲಯದಲ್ಲಿ ನಡೆಯಲಿರುವ ಪಕ್ಷದ ಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡುವ ಪ್ರಕ್ರಿಯೆ ಸಾಂಕೇತಿಕವಾಗಿ ನಡೆಯಲಿದೆ.

ಈ ಸಭೆಯಲ್ಲಿ ಬಿಎಸ್​ವೈ ಅವರು ಪಕ್ಷದ ನಾಯಕನಾಗಿ ಸರ್ವಾನುಮತದಿಂದ ಆಯ್ಕೆಯಾದ ನಂತರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರಕ್ಕೆ ಮುಹೂರ್ತ ಅಧೀಕೃತವಾಗಿ ಫಿಕ್ಸ್ ಆಗಲಿದೆ. ಈಗಾಗಲೇ ಬಿಎಸ್​ವೈ ಆಪ್ತ ಶಾಸ್ತ್ರಿಗಳಿಂದ ಪ್ರಮಾಣ ವಚನಕ್ಕೆ ದಿನಾಂಕ ಮತ್ತು ಸಮಯ ನಿಗದಿಯಾಗಿದ್ದು, ಇದಕ್ಕೆ ಇನ್ನೂ ಯಡಿಯೂರಪ್ಪ ಅನುಮತಿಯೊಂದು ಬಾಕಿ ಇದೆ ಎಂದು ಹೇಳಲಾಗುತ್ತಿದೆ.

ಶಾಸಕಾಂಗ ಪಕ್ಷದ ಸಭೆಯ ನಂತರ ಬಿಎಸ್​ವೈ ದೆಹಲಿಗೆ ಹೊರಡಲಿದ್ದು,  ಅಮಿತ್ ಷಾ, ಪಿಯೂಷ್ ಗೋಯೆಲ್, ರಾಜನಾಥ್ ಸಿಂಗ್, ಜೆ.ಪಿ.ನಡ್ಡಾ, ನಿತಿನ್ ಗಡ್ಕರಿ ಹಾಗೂ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಲಿದ್ದಾರೆ. ಅಲ್ಲದೆ ತಮ್ಮ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಆಹ್ವಾನಿಸಲಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ : ತಮಗೆ ಅಡ್ಡಬಂದರೆ ಸ್ವಪಕ್ಷದವರನ್ನೂ ಬಿಡಲ್ಲ ಯಡಿಯೂರಪ್ಪ; ಇಲ್ಲಿದೆ ವಿಡಿಯೋ ಸಾಕ್ಷಿ!

First published:July 24, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ