LIVE NOW

BSY As New CM LIVE: ಸಿಎಂ ಆದ ಬಳಿಕ ಬಿಎಸ್​ವೈ ಸುದ್ದಿಗೋಷ್ಠಿ; ನೇಕಾರರ ಸಾಲ ಮನ್ನಾ ಘೋಷಣೆ

Karnataka Political Update: ರಾಜ್ಯದ 31ನೇ ಮುಖ್ಯಮಂತ್ರಿಯಾಗಿ ಬಿಎಸ್​ ಯಡಿಯೂರಪ್ಪ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.

Kannada.news18.com | July 26, 2019, 8:23 PM IST
facebook Twitter Linkedin
Last Updated July 26, 2019
auto-refresh
Karnataka Political  update LIVE: ಹಲವು ದಿನಗಳ ರಾಜಕೀಯ ಕಣ್ಣಾಮುಚ್ಚಾಳೆ ಆಟವು ಸದ್ಯಕ್ಕೆ ಬಿಜೆಪಿಗೆ ಅಧಿಕಾರ ಸಿಗುವುದರೊಂದಿಗೆ ಹೊಸ ತಿರುವು ಪಡೆದುಕೊಂಡಿದೆ. ಮೂವರು ಶಾಸಕರು ಅನರ್ಹಗೊಂಡ ಬಳಿಕ ಎದ್ದಿದ್ದ ಪ್ರಶ್ನಾರ್ಥಕ ಚಿಹ್ನೆಗೆ ಯಡಿಯೂರಪ್ಪ ಸಿಎಂ ಆಗುವ ಮೂಲಕ ಉತ್ತರ ನೀಡಿದ್ಧಾರೆ. ಸಂಜೆ 6:20ಕ್ಕೆ ಬಿಎಸ್​ವೈ 4ನೇ ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದರು. ಅದಾದ ಬಳಿಕ ಸುದ್ದಿಗೋಷ್ಠಿ ನಡೆಸಿ ಕೆಲ ಮಹತ್ವದ ಘೋಷಣೆಗಳನ್ನ ಹೊರಡಿಸಿದರು. ನೇಕಾರ ಸಮುದಾಯದ ಎಲ್ಲಾ ಸಾಲಗಳನ್ನ ಮನ್ನಾ ಮಾಡುವುದಾಗಿ ಹೇಳಿದರು. ರೈತರಿಗೆ 2 ಕಂತುಗಳಲ್ಲಿ 4 ಸಾವಿರ ರೂ ಕೊಡುವುದಾಗಿ ತಿಳಿಸಿದರು. ಹಾಗೆಯೇ, ಧ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ವಿಪಕ್ಷಗಳಿಗೆ ಸಮಾಧಾನ ಕೂಡ ಮಾಡಿದರು. ಈ ಎಲ್ಲದರ ಕುರಿತೂ ಕ್ಷಣಕ್ಷಣದ ಮಾಹಿತಿ ನ್ಯೂಸ್​18 ಕನ್ನಡದಲ್ಲಿ ಲಭ್ಯ. Read More
Load More