ಕುಮಾರಸ್ವಾಮಿ ನಂತರ ಬಿಎಸ್​ವೈಗೆ ಬಿಗ್​ ರಿಲೀಫ್​; ಅಕ್ರಮ ಡಿನೋಟಿಫಿಕೇಷನ್​ ಆರೋಪದಿಂದ ಖುಲಾಸೆ

ನಿನ್ನೆ ಕುಮಾರಸ್ವಾಮಿ, ಇಂದು ಬಿ.ಎಸ್​. ಯಡಿಯೂರಪ್ಪ. ಡಿನೋಟಿಫಿಕೇಷನ್​ ಪ್ರಕರಣದಿಂದ ಮಾಜಿ - ಹಾಲಿ ಮುಖ್ಯಮಂತ್ರಿಗಳಿಗೆ ಕ್ಲೀನ್​ ಚಿಟ್​

news18
Updated:August 28, 2018, 3:13 PM IST
ಕುಮಾರಸ್ವಾಮಿ ನಂತರ ಬಿಎಸ್​ವೈಗೆ ಬಿಗ್​ ರಿಲೀಫ್​; ಅಕ್ರಮ ಡಿನೋಟಿಫಿಕೇಷನ್​ ಆರೋಪದಿಂದ ಖುಲಾಸೆ
ಬಿ.ಎಸ್​. ಯಡಿಯೂರಪ್ಪ ಮತ್ತು ಎಚ್​.ಡಿ. ಕುಮಾರಸ್ವಾಮಿಯವರ ಸಾಂದರ್ಭಿಕ ಚಿತ್ರ
news18
Updated: August 28, 2018, 3:13 PM IST
ಬೆಂಗಳೂರು: ಸೋಮವಾರ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರ ಮೇಲಿದ್ದ ಡಿನೋಟಿಫಿಕೇಷನ್ ಪ್ರಕರಣದಿಂದ ದೋಷ ಮುಕ್ತರಾಗಿದ್ದರು. ಇಂದು ಮಾಜಿ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರಿಗೆ ಕೋರ್ಟ್​ ಬಿಗ್​ ರಿಲೀಫ್​ ನೀಡಿದೆ.

ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ಮೇಲಿದ್ದ ಡಿನೋಟಿಫಿಕೇಷನ್​ ಪ್ರಕರಣ ಸಂಬಂಧ ಸೆಷನ್ಸ್​ ನ್ಯಾಯಾಲಯ ಇಂದು ಕ್ಲೀನ್​ ಚಿಟ್​ ನೀಡಿ ಆದೇಶಿಸಿದೆ. ಸಿರಾಜಿನ್ ಬಾಷಾ ಮತ್ತು ಬಾಲಕೃಷ್ಣ ಎಂಬುವವರು ಯಡಿಯೂರಪ್ಪ ವಿರುದ್ಧ ದೂರು ಸಲ್ಲಿಸಿದ್ದರು. ಈ ಪ್ರಕರಣವನ್ನು ಕೋರ್ಟ್​ ಈಗ ವಜಾಗೊಳಿಸಿ ಆದೇಶಿಸಿದೆ.

ಬೆಂಗಳೂರಿನ ರಾಚೇನಹಳ್ಳಿ ಡಿನೋಟಿಫಿಕೇಷನ್​ ಸೇರಿದಂತೆ ಒಟ್ಟೂ 15 ಪ್ರಕರಣಗಳಲ್ಲಿ ಯಡಿಯೂರಪ್ಪ ಆರೋಪಿಯಾಗಿದ್ದರು. ಈ ಎಲ್ಲಾ ಪ್ರಕರಣಗಳಿಂದಲೂ ಯಡಿಯೂರಪ್ಪ ಮುಕ್ತಿ ಪಡೆದಿದ್ದಾರೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಬಿ.ವಿ. ಪಾಟೀಲ್​ ಈ ಆದೇಶವನ್ನು ಹೊರಡಿಸಿದ್ದಾರೆ.

ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆದಿಲ್ಲ ಎಂಬ ಕಾರಣಕ್ಕೆ ಪ್ರಕರಣವನ್ನು ವಜಾಗೊಳಿಸುತ್ತಿರುವುದಾಗಿ ನ್ಯಾಯಾಧೀಶರು ತಿಳಿಸಿದ್ದಾರೆ. ಈ ಹಿಂದೆ ಪ್ರಕರಣವನ್ನು ರದ್ದು ಮಾಡಿ ಹೈಕೋರ್ಟ್ ಆದೇಶಿಸಿತ್ತು. ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್​ನಲ್ಲಿ ಸಾಮಾಜಿಕ ಕಾರ್ಯಕರ್ತ ಎಸ್​.ಆರ್​. ಹಿರೇಮಠ್​ ಅರ್ಜಿ ಸಲ್ಲಿಸಿದ್ದರು. ಜತೆಗೆ ಪ್ರಕರಣದ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸುವಂತೆಯೂ ಹಿರೇಮಠ್​ ಮನವಿ ಮಾಡಿದ್ದರು.

ನಂತರ ಸಿಬಿಐ ತನಿಖೆಯ ನಂತರ ಪ್ರಕರಣಗಳನ್ನು ಸುಪ್ರೀಂ ಕೋರ್ಟ್​ ರದ್ದು ಮಾಡಿತ್ತು. ಆದರೂ ಸಿರಾಜಿನ್​ ಬಾಷಾ ಸಲ್ಲಿಸಿದ್ದ ದೂರು ಸೆಷನ್ಸ್ ಕೋರ್ಟ್​ನಲ್ಲಿ ಬಾಕಿ ಉಳಿದಿತ್ತು. ಇಂದು ವಿಚಾರಣೆ ನಡೆಸಿದ ಸಂಸದರ ಮತ್ತು ಶಾಸಕರ ವಿರುದ್ಧದ ಪ್ರಕರಣಗಳ ವಿಶೇಷ ನ್ಯಾಯಾಲಯ ಪ್ರಕರಣವನ್ನು ರದ್ದುಗೊಳಿಸಿದೆ.
First published:August 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...