ಚುನಾವಣೆಗೆ ಸಜ್ಜಾದ ಬಿಜೆಪಿ; ಇಂದಿನಿಂದ ಯಡಿಯೂರಪ್ಪ ರಾಜ್ಯ ಪ್ರವಾಸ ಆರಂಭ

news18
Updated:August 9, 2018, 9:02 AM IST
ಚುನಾವಣೆಗೆ ಸಜ್ಜಾದ ಬಿಜೆಪಿ; ಇಂದಿನಿಂದ ಯಡಿಯೂರಪ್ಪ ರಾಜ್ಯ ಪ್ರವಾಸ ಆರಂಭ
news18
Updated: August 9, 2018, 9:02 AM IST
ಬಸವರಾಜ್​ ಕಡಗಂಚಿ, ನ್ಯೂಸ್​ 18 ಕನ್ನಡ

ಬೀದರ್​ (ಆ.9): ವಿಧಾನಸಭಾ ಚುನಾವಣೆಯಲ್ಲಿ ದಣಿವರಿಯದಂತೆ ರಾಜ್ಯ ಪ್ರವಾಸ ಮಾಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್​ ಯಡಿಯೂರಪ್ಪ ಅತಿಹೆಚ್ಚಿನ ಸ್ಥಾನ ಗೆಲ್ಲುವಲ್ಲಿ ಸಫಲರಾದರೂ ಅಧಿಕಾರ ಚುಕ್ಕಾಣಿ ಅವರ ಕೈ ತಪ್ಪಿ ಹೋಗಿತ್ತು. ಈಗ ಆ ತಪ್ಪು ಮತ್ತೆ ಆಗದಂತೆ ಸಿದ್ಧವಾಗಿದ್ದು,  ಇದಕ್ಕಾಗಿ ಭಾರೀ ಸಿದ್ಧತೆ ಮಾಡಿದ್ದಾರೆ.

ಲೋಕಸಭಾ ಹಾಗೂ ಸ್ಥಳೀಯ ಚುನಾವಣೆ ಘೋಷಣೆಯಾಗಿದ್ದು, ಇದರ ಮೇಲೆ ಕಣ್ಣಿಟ್ಟಿರುವ ಅವರು, ಈ ಬಾರಿ ಮಾತ್ರ ಬಹುಮತ ಗೆಲ್ಲಲ್ಲೇಬೇಕೆಂಬ ಹುಮ್ಮಸ್ಸಿನಲ್ಲಿದ್ದಾರೆ  ಇದಕ್ಕಾಗಿ ಮತ್ತೆ ರಾಜ್ಯ ಪ್ರವಾಸಕ್ಕೆ ಸಿದ್ಧತೆ ನಡೆಸಿದ್ದು, ಇಂದಿನಿಂದ ತಮ್ಮ ರಾಜ್ಯ ಪ್ರವಾಸ ಕೈಗೊಳ್ಳಲಿದ್ದು, ಮೈತ್ರಿ ಸರ್ಕಾರದ ವಿರುದ್ಧ ಸಮರ ಸಾರಲು ಸಜ್ಜಾಗಿದ್ದಾರೆ.

ಪ್ರತ್ಯೇಕ ಉತ್ತರ ಕನ್ನಡ ಜಿಲ್ಲೆಯ ಕಾವು ಹೆಚ್ಚಿರುವ ಹಿನ್ನಲೆ ಇದರ ಲಾಭಾ ಪಡೆಯುವ ಉದ್ದೇಶದಿಂದಾಗಿ ಅವರು ಇಂದಿನಿಂದ ಬೀದರ್​ ಕ್ಷೇತ್ರದಿಂದಲೇ ತಮ್ಮ ರಾಜ್ಯ ಪ್ರವಾಸ ನಡೆಸಲಿದ್ದಾರೆ.

ರಾಜ್ಯ ಪ್ರವಾಸಕ್ಕಾಗಿ ಈಗಾಗಲೇ ಬಿಜೆಪಿ ಮೂರು ತಂಡವನ್ನು ರಚನೆ ಮಾಡಿದ್ದು  ಮೊದಲತಂಡದಲ್ಲಿ ಯಡಿಯೂರಪ್ಪ, ಶೋಭಾ ಕರದ್ಲಾಂಜೆ, ಗೋವಿಂದ ಕಾರಜೋಳ ಅವರು ಉತ್ತರ ಕರ್ನಾಟಕದ 13 ಜಿಲ್ಲೆಗಳ ಪ್ರವಾಸ ಆರಂಭಿಸಲು ಸಿದ್ಧರಾಗಿದ್ದಾರೆ. ಇನ್ನು ಎರಡನೇ ತಂಡದಲ್ಲಿ ನೇತೃತ್ವ ಜವಾಬ್ದಾರಿ ಜಗದೀಶ್​ ಶೆಟ್ಟರ್​ ವಹಿಸಿದ್ದು, ಮೂರನೇ ತಂಡದ ಜವಾಬ್ದಾರಿ ಈಶ್ವರಪ್ಪ ಹೆಗಲೇರಿದೆ

ಮೈತ್ರಿ ಸರ್ಕಾರದ ವಿರುದ್ಧ ಹರಿಹಾಯಲು ಸಿದ್ಧತೆ ನಡೆಸಿರುವ ಬಿಜೆಪಿ ನಾಯಕರು ತಮ್ಮ  ಪ್ರವಾಸದಲ್ಲಿ   ಸಂಪೂರ್ಣ ಸಾಲಮನ್ನಾ, ಬಜೆಟ್​ ಅನ್ಯಾಯ, ಪ್ರತ್ಯೇಕ  ಉತ್ತರ ಕರ್ನಾಟಕದ ಕೂಗಿನಂತಹ ಪ್ರಮುಖ ವಿಷಯದ ಲಾಭ ತೆಗೆದುಕೊಳ್ಳಲು ಅವರು ಮುಂದಾಗಿದ್ದಾರೆ.

ದೆಹಲಿಯಿಂದ ಮರಳುತ್ತಿದ್ದಂತೆ ಪ್ರವಾಸ ಆರಂಭಿಸಿರುವ ಅವರು ಲೋಕಸಭಾ ಚುನಾವಣೆ ಹಾಗೂ ಸ್ಥಳೀಯ ಸಂಸ್ಥೆ ಚುನಾವಣೆಗೆ ಸಿದ್ಧತೆ ಕುರಿತು ರಾಷ್ಟ್ರೀಯ ನಾಯಕರು ಸಲಹೆ ನೀಡಿದ್ದು, ಅದರಂತೆ ಕಾರ್ಯತಂತ್ರ ರೂಪಿಸಲಿದ್ದಾರೆ.
Loading...

ಆ.8ರ ರಾತ್ರಿಯೇ ಬಿಜೆಪಿ ನಾಯಕರ ತಂಡ ಬೀದರ್ ​ಹಬ್ಸಿಕೋಟ್​​​ನಲ್ಲಿ ವಾಸ್ತವ್ಯ ಹೂಡಿದ್ದು,  ಇಂದು ಪಕ್ಷದ ನಾಯಕರ ಜೊತೆ ಕೋರ್​ ಕಮಿಟಿ ಸಭೆ ನಡೆಸಿ ಚುನಾವಣಾ ರೂಪು ರೇಷ ಸಿದ್ಧಪಡಿಸಲಿದ್ದಾರೆ.

 
First published:August 9, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...