ಗೊಂದಲಗಳ ನಡುವೆ ಸಿಲುಕಿದ್ದ ಅಮಿತ್​ ಶಾ ಗೆ ಬಿಎಸ್​ವೈ ಅಭಯ; ಕೊನೆಗೂ ನಿಗದಿಯಾಯ್ತು ಪದಗ್ರಹಣಕ್ಕೆ ಸಮಯ!

ಸರ್ಕಾರ ಬಿದ್ದರೂ ಕಾಂಗ್ರೆಸ್ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಮುಂದಿನ ರಣತಂತ್ರ ಏನಿರಬಹುದು? ಅತೃಪ್ತ ಶಾಸಕರು ಕೊನೆಯವರೆಗೆ ಬಂಡೆಯಂತೆ ಬಿಜೆಪಿ ಜೊತೆ ನಿಲ್ಲುತ್ತಾರೆಯೇ? ಹಾಗೂ ಸ್ಪೀಕರ್ ರಮೇಶ್ ಕುಮಾರ್ ಯೋಚನೆ-ಯೋಜನೆ ಏನಿರಬಹುದು? ಹೀಗೆ ಹತ್ತಾರು ಗೊಂದಲಗಳು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಗೆ ಕಾಡುತ್ತಿತ್ತು. ಇದೇ ಕಾರಣಕ್ಕೆ ಅವರು ಸರ್ಕಾರ ರಚನೆಗೆ ಮೀನಾಮೇಷ ಎಣಿಸುತ್ತಿದ್ದರು ಎನ್ನಲಾಗುತ್ತಿತ್ತು.

MAshok Kumar | news18
Updated:July 26, 2019, 11:40 AM IST
ಗೊಂದಲಗಳ ನಡುವೆ ಸಿಲುಕಿದ್ದ ಅಮಿತ್​ ಶಾ ಗೆ ಬಿಎಸ್​ವೈ ಅಭಯ; ಕೊನೆಗೂ ನಿಗದಿಯಾಯ್ತು ಪದಗ್ರಹಣಕ್ಕೆ ಸಮಯ!
ಬಿ.ಎಸ್​. ಯಡಿಯೂರಪ್ಪ, ಅಮಿತ್ ಶಾ.
  • News18
  • Last Updated: July 26, 2019, 11:40 AM IST
  • Share this:
ಬೆಂಗಳೂರು (ಜುಲೈ.26); ಕಳೆದ ಒಂದು ವರ್ಷದಿಂದ ಮೈತ್ರಿ ಸರ್ಕಾರವನ್ನು ಉರುಳಿಸಲು ಬಿಜೆಪಿ ರಾಜ್ಯ ನಾಯಕರು ನಿರಂತರವಾಗಿ ದಾಳ ಉರುಳಿಸುತ್ತಲೇ ಇದ್ದದ್ದು ಸುಳ್ಳಲ್ಲ. ಕೊನೆಗೂ ಸರ್ಕಾರ ಬೀಳಿಸುವ ಬಿಜೆಪಿ ಯೋಜನೆ ಕಳೆದ ಮಂಗಳವಾರ ಫಲ ನೀಡಿತ್ತು. ಹೀಗಾಗಿ ಒಂದೆಡೆ ಸರ್ಕಾರ ಉರುಳುತ್ತಿದ್ದಂತೆ, ಮತ್ತೊಂದೆಡೆ ಬಿಜೆಪಿ ನೂತನ ಸರ್ಕಾರ ರಚಿಸಲಿದೆ ಎಂದೇ ರಾಜಕೀಯ ತಜ್ಞರು ಊಹಿಸಿದ್ದರು. ಆದರೆ, ಕಳೆದ ಒಂದು ತಿಂಗಳ ಎಲ್ಲಾ ರಾಜಕೀಯ ಪ್ರಹಸನಗಳಿಗೆ ಪತ್ಯಕ್ಷ ಹಾಗೂ ಪರೋಕ್ಷವಾಗಿ ಕಾರಣವಾಗಿದ್ದ ಬಿಜೆಪಿ ಮಾತ್ರ ಸರ್ಕಾರ ರಚಿಸಲು ಮೀನಾಮೇಷ ಎಣಿಸುತ್ತಿತ್ತು. ಇದಕ್ಕೆ ಕಾರಣ ಕೇಂದ್ರ ನಾಯಕರಿಗೆ ಕಾಡುತ್ತಿದ್ದ ಭಯ ಹಾಗೂ ಗೊಂದಲ.

ಅಸಲಿಗೆ ಬಿಜೆಪಿ ಮನಸ್ಸು ಮಾಡಿದ್ದರೆ ಬುಧವಾರ ಅಥವಾ ಗುರುವಾರವೇ ನೂತನ ಸರ್ಕಾರ ರಚನೆ ಮಾಡಬಹುದಿತ್ತು. ಬಿ.ಎಸ್. ಯಡಿಯೂರಪ್ಪ ನಾಲ್ಕನೇ ಬಾರಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಬಹುದಿತ್ತು. ಆದರೆ, ರಾಜ್ಯ ರಾಜಕೀಯದಲ್ಲಿ ಮನೆ ಮಾಡಿದ್ದ ಹಲವಾರು ಗೊಂದಲಗಳಿಂದಾಗಿ ಸರ್ಕಾರ ರಚಿಸಲು ಕೇಂದ್ರ ನಾಯಕರು ಗ್ರೀನ್ ಸಿಗ್ನಲ್ ನೀಡಿರಲಿಲ್ಲ. ಆದರೆ, ಕೊನೆಗೂ ಕೇಂದ್ರ ನಾಯಕರಿಗೆ ಬಿಎಸ್​ವೈ ಎಲ್ಲಾ ಸಮಸ್ಯೆಗಳನ್ನು, ಗೊಂದಲಗಳನ್ನೂ ಬಗೆಹರಿಸುವ ಭರವಸೆ ನೀಡಿದ್ದಾರೆ. ಪರಿಣಾಮ ಅವರ ಪ್ರಮಾಣ ವಚನಕ್ಕೆ ಸಮಯ ನಿಗದಿಯಾಗಿದೆ.

ಇದನ್ನೂ ಓದಿ : ಯಾರು ತೃಪ್ತರೋ ಯಾರು ಅತೃಪ್ತರೋ ನನಗೆ ಸಂಬಂಧ ಇಲ್ಲ, ನನ್ನ ಕರ್ತವ್ಯ ನಾನು ಮಾಡಿದ್ದೇನೆ; ಸ್ಪೀಕರ್ ರಮೇಶ್ ಕುಮಾರ್

ಅಮಿತ್ ಶಾಗೆ ಕಾಡುತ್ತಿತ್ತು ಹಲವಾರು ಗೊಂದಲ: ಬಗೆಹರಿಸಿದ ಬಿಎಸ್​ವೈ!

ಪ್ರಸ್ತುತ ರಾಜಕೀಯ ಪರಿಸ್ಥಿತಿಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚಿಸುವುದು ಕಷ್ಟವೇನಲ್ಲ. ಬಿಜೆಪಿಗೆ ಅನುಕೂಲಕರವಾದ ವಾತಾವರಣ ಸದ್ಯಕ್ಕಿದೆ. ಆದರೆ, ಸರ್ಕಾರ ರಚನೆ ಮಾಡಿದರೂ ಸುಸ್ಥಿರ ಆಡಳಿತ ನೀಡುವುದು ಅನುಮಾನ ಎಂಬ ಮಾತುಗಳು ಕೇಳಿ ಬರುತ್ತಿರುವುದು ಸುಳ್ಳಲ್ಲ. ಅದಕ್ಕೆ ಕಾರಣ ಅತೃಪ್ತರ ನಡೆ, ಸಿದ್ದರಾಮಯ್ಯ ರಣತಂತ್ರ ಹಾಗೂ ಸ್ಪೀಕರ್ ರಮೇಶ್ ಕುಮಾರ್ ನಿರ್ಧಾರ.

ಸರ್ಕಾರ ಬಿದ್ದರೂ ಕಾಂಗ್ರೆಸ್ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಮುಂದಿನ ರಣತಂತ್ರ ಏನಿರಬಹುದು? ಅತೃಪ್ತ ಶಾಸಕರು ಕೊನೆಯವರೆಗೆ ಬಂಡೆಯಂತೆ ಬಿಜೆಪಿ ಜೊತೆ ನಿಲ್ಲುತ್ತಾರೆಯೇ? ಹಾಗೂ ಸ್ಪೀಕರ್ ರಮೇಶ್ ಕುಮಾರ್ ಯೋಚನೆ-ಯೋಜನೆ ಏನಿರಬಹುದು? ಹೀಗೆ ಹತ್ತಾರು ಗೊಂದಲಗಳು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಗೆ ಕಾಡುತ್ತಿತ್ತು. ಇದೇ ಕಾರಣಕ್ಕೆ ಅವರು ಸರ್ಕಾರ ರಚನೆಗೆ ಮೀನಾಮೇಷ ಎಣಿಸುತ್ತಿದ್ದರು ಎನ್ನಲಾಗುತ್ತಿತ್ತು.

ಆದರೆ, ನಿನ್ನೆ ರಾತ್ರಿ ಅಮಿತ್ ಶಾ ಅವರಿಗೆ ಖುದ್ದು ಕರೆ ಮಾಡಿರುವ ಯಡಿಯೂರಪ್ಪ ಎಲ್ಲಾ ಗೊಂದಲಗಳನ್ನೂ ನಿವಾರಿಸುವ ಭರವಸೆ ನೀಡಿದ್ದಾರೆ. ಅಲ್ಲದೆ ಕೇಂದ್ರದ ನಿಯೋಗಕ್ಕೆ ಸ್ಥಿರ ಸರ್ಕಾರ ನೀಡಲು ತಮ್ಮಿಂದ ಸಾಧ್ಯ ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ. ಪರಿಣಾಮ ಕೇಂದ್ರದ ಬಿಜೆಪಿ ವರಿಷ್ಠರು ಕೊನೆಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಆದರೆ, ಪ್ರಸ್ತುತ ರಾಜಕೀಯ ಪರಿಸ್ಥಿತಿಯಲ್ಲಿ ಬಿಜೆಪಿ ನಿಜಕ್ಕೂ ಸ್ಥಿರ ಸರ್ಕಾರ, ಸುಸ್ಥಿರ ಆಡಳಿತ ನೀಡುವುದು ಸಾಧ್ಯವೇ? ಎಂಬುದನ್ನು ಕಾದುನೋಡಬೇಕಿದೆ.ಇದನ್ನೂ ಓದಿ : ಯಡಿಯೂರಪ್ಪ ಪಟ್ಟಾಭಿಷೇಕ; ಸಂಜೆ 6 ಗಂಟೆಗೆ ಮುಖ್ಯಮಂತ್ರಿಯಾಗಿ ಬಿಎಸ್​ವೈ ಅಧಿಕಾರ ಸ್ವೀಕಾರ

First published:July 26, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading