ರಾಜ್ಯದಲ್ಲಿ ಸರ್ಕಾರ ಇದೆ ಎಂದು ಯಾರಿಗೂ ಅನಿಸುತ್ತಿಲ್ಲ: ಮಾಜಿ ಸಿಎಂ ಬಿ.ಎಸ್​. ಯಡಿಯೂರಪ್ಪ

ನನ್ನ ದೂರವಾಣಿಯನ್ನು ಕದ್ದಾಲಿಕೆ ಮಾಡುತ್ತಿದ್ದಾರೆ. ನನ್ನದಷ್ಟೇ ಅಲ್ಲ ಸಿದ್ದರಾಮಯ್ಯ ಅವರ ಫೋನ್​ ಕೂಡ ಟ್ಯಾಪ್​ ಮಾಡಲಾಗುತ್ತಿದೆ, ಬಿಎಸ್​ ಯಡಿಯೂರಪ್ಪ ಗಂಭೀರ ಆರೋಪ.

news18
Updated:August 29, 2018, 12:20 PM IST
ರಾಜ್ಯದಲ್ಲಿ ಸರ್ಕಾರ ಇದೆ ಎಂದು ಯಾರಿಗೂ ಅನಿಸುತ್ತಿಲ್ಲ: ಮಾಜಿ ಸಿಎಂ ಬಿ.ಎಸ್​. ಯಡಿಯೂರಪ್ಪ
ಬಿ.ಎಸ್​. ಯಡಿಯೂರಪ್ಪ ಅವರ ಸಾಂದರ್ಭಿಕ ಚಿತ್ರ
news18
Updated: August 29, 2018, 12:20 PM IST
ರಮೇಶ್​ ಹಿರೇಜಂಬೂರು: ರಾಜ್ಯದಲ್ಲಿ ಸರ್ಕಾರ ಇದೆ ಎಂದು ಯಾರಿಗೂ ಅನ್ನಿಸುತ್ತಿಲ್ಲ, ಅವರಾಗೇ ಬಡಿದಾಡಿ ಸರ್ಕಾರ ಬಿದ್ರೆ ನಾವು ಹೊಣೆಯಲ್ಲ, ಎಂಬುದಾಗಿ ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದಲ್ಲಿ ಏಕಕಾಲಕ್ಕೆ ಅತೀವೃಷ್ಟಿ ಮತ್ತು ಅನಾವೃಷ್ಟಿ ಸೃಷ್ಟಿಯಾಗಿದೆ. ಸೂಕ್ತ ಕ್ರಮ ಜರುಗಿಸಿ ಸಹಾಯ ಹಸ್ತ ಚಾಚುವಂತೆ ಯಾರನ್ನು ಕೇಳಬೇಕು ಎಂಬ ಗೊಂದಲದ ವಾತಾವರಣ ಸಮ್ಮಿಶ್ರ ಸರ್ಕಾರದಿಂದ ಸೃಷ್ಟಿಯಾಗಿದೆ ಎಂದು ಅವರು ಹೇಳಿದ್ದಾರೆ.

ಮಾಧ್ಯಮಕ್ಕೆ ಹೇಳಿಕೆ ನೀಡಿದ ಯಡಿಯೂರಪ್ಪ, "ರಾಜ್ಯದ 13 ಜಿಲ್ಲೆಯಲ್ಲಿ ಭೀಕರ ಬರ, ಉಳಿದ ಕಡೆ ಅತಿವೃಷ್ಟಿ ಇದೆ. ಆದರೆ ವಿಧಾನ ಸೌಧದಲ್ಲಿ ಯಾವ ಸಚಿವರೂ ಸಿಕ್ಕೋದಿಲ್ಲ
ಸಿದ್ದರಾಮಯ್ಯ ಕುಮಾರಸ್ವಾಮಿ ನಡುವೆ ಭಿನ್ನಾಭಿಪ್ರಾಯವಿದೆ. ಇಬ್ಬರ ಗೊಂದಲದಿಂದ ರಾಜ್ಯದ ಆಡಳಿತ ಹದಗೆಟ್ಟಿದೆ," ಎಂದಿದ್ದಾರೆ.

ಮಡಿಕೇರಿಯಲ್ಲಿ ಪ್ರಕೃತಿ ವಿಕೋಪದ ಹಾನಿಗೆ ಭಾರೀ ಪರಿಹಾರ ಬರುತ್ತಿದೆ. ನಮ್ಮ ನಾಯಕರೂ ಸ್ಪಂದಿಸಿ ನೆರವು ನೀಡಿದ್ದಾರೆ. ಗಾಡಿಗೇರಿಯಲ್ಲಿ 250 ಕುಟುಂಬಗಳು ಬೀದಿಗೆ ಬಿದ್ದಿವೆ. ಹೆಬ್ಬಟ್ಟುಗಿರಿ, ಉದಯಗಿರಿ ಮತ್ತಿತರ ಗ್ರಾಮಗಳು ನಾಶ ಆಗಿವೆ. ಕೇಂದ್ರಕ್ಕೆ ನಾನೂ ಪತ್ರ ಬರೆದಿದ್ದೇನೆ. ಹೆಚ್ಚುವರಿ ನೆರವು ಬೇಕು ಎಂದು ಕೇಳಿದ್ದೇನೆ, ಎಂದು ಯಡಿಯೂರಪ್ಪ ಹೇಳಿದ್ದಾರೆ.

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​ ಈಗಾಗಲೇ 1 ಕೋಟಿ ರೂ. ನೀಡಿದ್ದಾರೆ, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನಷ್ಟು ನೆರವು ಕೇಂದ್ರ ಸರ್ಕಾರ ನೆರವು ನೀಡಲಿದೆ ಎಂಬ ನಂಬಿಕೆ ಇದೆ, ಎಂದು ಯಡಿಯೂರಪ್ಪ ಹೇಳಿದ್ದಾರೆ.

ಕೈ ಬಿಟ್ಟು ಕಮಲ ಹಿಡಿದ ಚಿಂಚನಸೂರು:

ಲೋಕಸಭಾ ಚುನಾವಣೆ ದೃಷ್ಟಿಯಿಂದ ಬಿಜೆಪಿಗೆ ಆನೆಬಲ ಬಂದಿದೆ ಎಂದಿರುವ ಯಡಿಯೂರಪ್ಪ, ಕಲಬುರಗಿ ಸುತ್ತಮುತ್ತಲ ಜಿಲ್ಲೆಗಳಲ್ಲಿ ಬಿಜೆಪಿಯ ಬಲ ಇಮ್ಮಡಿಯಾಗಿದೆ ಎಂದಿದ್ದಾರೆ. ಬಾಬೂರಾವ್​ ಚಿಂಚನಸೂರು ಕಾಂಗ್ರೆಸ್​ ತೊರೆದು ಬಿಜೆಪಿ ಸೇರ್ಪಡೆಯಾಗಿರುವುದಕ್ಕೆ ಯಡಿಯೂರಪ್ಪ ಹರ್ಷ ವ್ಯಕ್ತಪಡಿಸಿದ್ದಾರೆ. ಬಹಳ ವರ್ಷಗಳಿಂದ ಬಿಜೆಪಿ ಸೇರ್ಪಡೆಗೆ ಬಹಳ ಪ್ರಯತ್ನ ಮಾಡುತ್ತಿದ್ದೆವು. ಈಗ ನರೇಂದ್ರ ಮೋದಿ ಅವರ ಕಾರ್ಯಕ್ರಮಗಳನ್ನು ಮೆಚ್ಚಿ ಪಕ್ಷಕ್ಕೆ ಬಂದಿದ್ದಾರೆ. ಕೋರ್ ಕಮಿಟಿಯಲ್ಲಿ ಚರ್ಚೆ ಮಾಡಿ ರಾಜ್ಯ ಮಟ್ಟದಲ್ಲಿ ಬಾಬುರಾವ್ ಚಿಂಚನಸೂರ್ ಗೆ ದೊಡ್ಡ ಜವಾಬ್ದಾರಿ ಕೊಡುತ್ತೇವೆ ಎಂದು ಬಿಎಸ್​ವೈ ಹೇಳಿದರು.
Loading...

ಫೋನ್​ ಟ್ಯಾಪಿಂಗ್​:

ರಾಜ್ಯ ಸರ್ಕಾರದ ಮೇಲೆ ಯಡಿಯೂರಪ್ಪ ಗಂಭೀರವಾದ ಆರೋಪವನ್ನು ಮಾಡಿದ್ದಾರೆ. ನನ್ನ ಫೋನನ್ನು ರಾಜ್ಯ ಸರ್ಕಾರ ಟ್ಯಾಪ್​ ಮಾಡುತ್ತಿದೆ. ಕೇವಲ ನನ್ನದೊಂದೇ ಅಲ್ಲ, ಸಿದ್ದರಾಮಯ್ಯ ಅವರ ಫೋನ್​ ಕೂಡ ಟ್ಯಾಪ್​ ಆಗುತ್ತಿದೆ ಎಂಬ ಮಾಹಿತಿಯಿದೆ. ಈ ಹಿಂದೆ ಫೋನ್​ ಕದ್ದಾಲಿಕೆ ಮಾಡಿದ ಸರ್ಕಾರಗಳು ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಯಡಿಯೂರಪ್ಪ ಹೇಳಿದರು.

ಖರ್ಗೆ ಸೋಲಿಸಲು ರಣತಂತ್ರ:

ಈ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರು ಕಾಂಗ್ರೆಸ್​ ಹಿರಿಯ ನಾಯಕ ಮಲ್ಲಿಕಾರ್ಜುನ್​ ಖರ್ಗೆಯವರಿಂದ ವಿದಾಯ ಭಾಷಣ ಮಾಡಿಸುತ್ತೇನೆ ಎಂಬ ಹೇಳಿಕೆ ನೀಡಿದ್ದರು. ಇದನ್ನು ಸಮರ್ಥಿಸಿಕೊಂಡ ಯಡಿಯೂರಪ್ಪ, ಹೌದು ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ ಪ್ರಭಾವಿ ನಾಯಕ ಖರ್ಗೆಯವರನ್ನು ಸೋಲಿಸಲು ಚಿಂತನೆ ನಡೆಸಿದ್ದೇವೆ. ಖರ್ಗೆ ವಿರುದ್ಧ ಬಲಿಷ್ಠ ಎದುರಾಳಿಯನ್ನು ಕಣಕ್ಕಿಳಿಸುತ್ತೇವೆ, ಎಂದು ಬಿಎಸ್​ವೈ ಹೇಳಿದರು.

ಬಿಜೆಪಿ ಮಾಜಿ ಸಿಎಸ್​ ರತ್ನಪ್ರಭಾ?:

ರಾಜ್ಯ ಮಾಜಿ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅವರು ಬಿಜೆಪಿಗೆ ಸೇರ್ಪಡೆಯಾಗುವ ಸಾಧ್ಯತೆಯ ಬಗ್ಗೆ ಮಾತನಾಡಿದ ಯಡಿಯೂರಪ್ಪ, ನಮ್ಮ ಜತೆ ರತ್ನಪ್ರಭಾ ನಿರಂತರ ಸಂಪರ್ಕದಲ್ಲಿದ್ದಾರೆ. ಆದರೆ ಈ ಬಗ್ಗೆ ಅಧಿಕೃತ ಚರ್ಚೆಯನ್ನು ಮಾಡಿಲ್ಲ. ರತ್ನಪ್ರಭಾ ಸೇರಿದಂತೆ ಹಲವು ಅಧಿಕಾರಿಗಳು ಕೂಡ ರಾಜಕೀಯ ಪ್ರವೇಶದ ಬಗ್ಗೆ ಸಂಪರ್ಕದಲ್ಲಿ ಇರುವುದು ನಿಜ ಎಂದಷ್ಟೇ ಯಡಿಯೂರಪ್ಪ ಹೇಳಿದರು.
First published:August 29, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...