ಸಿದ್ದರಾಮಯ್ಯ ಸ್ವಕ್ಷೇತ್ರ ಬಾದಾಮಿಯಿಂದಲೇ ಬಿಎಸ್​ವೈ ಬರ ಪ್ರವಾಸ: ಸ್ಥಳೀಯರ ಜತೆಗೆ ಸಂವಾದ

ಈ ಹಿಂದೆಯೇ ಮೈತ್ರಿ ಸರ್ಕಾರದಲ್ಲಿನ ಅಸಮಾಧಾನದ ಬೆಂಕಿಗೆ ಗುರುಗ್ರಾಮದಲ್ಲಿ ಕುಳಿತು ತುಪ್ಪ ಸುರಿದಿದ್ದ ಬಿಜೆಪಿ ಹಠಾತ್‌ ತನ್ನ ನಡೆ ಬದಲಿಸಿಕೊಂಡಿತ್ತು. ರಾಜ್ಯದ ಎಲ್ಲಾ ಬರಪೀಡಿತ ತಾಲೂಕುಗಳಿಗೆ ಪ್ರವಾಸ ನಡೆಸಿ ವರದಿ ಸಿದ್ಧಪಡಿಸಲು ನಿರ್ಧರಿಸಿತ್ತು

Ganesh Nachikethu | news18
Updated:June 7, 2019, 9:03 PM IST
ಸಿದ್ದರಾಮಯ್ಯ ಸ್ವಕ್ಷೇತ್ರ ಬಾದಾಮಿಯಿಂದಲೇ ಬಿಎಸ್​ವೈ ಬರ ಪ್ರವಾಸ: ಸ್ಥಳೀಯರ ಜತೆಗೆ ಸಂವಾದ
ಸಿಎಂ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಬಿಎಸ್​​ ಯಡಿಯೂರಪ್ಪ
Ganesh Nachikethu | news18
Updated: June 7, 2019, 9:03 PM IST
ಬೆಂಗಳೂರು(ಜೂನ್​​.07): ಮಾಜಿ ಸಿಎಂ ಸಿದ್ದರಾಮಯ್ಯನವರ ಸ್ವಕ್ಷೇತ್ರ ಬಾದಾಮಿಯಿಂದಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​​ ಯಡಿಯೂರಪ್ಪನವರು ತಮ್ಮ ಮೂರು ದಿನಗಳ ಬರ ಅಧ್ಯಯನ ಪ್ರವಾಸ ಪ್ರಾರಂಭಿಸಿದ್ದಾರೆ. ಇಂದು ಬಾದಾಮಿಗೆ ಭೇಟಿ ನೀಡಿದ್ದ ಬಿ.ಎಸ್​ ಯಡಿಯೂರಪ್ಪ ಬಳಿ ಜನ ತಮ್ಮ ಸಾಲು ಸಾಲು ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. ನೀರಿಲ್ಲದೇ ಬರಡಾಗಿದ್ದ ಭೂಮಿ ನೋಡಿ ಕೂಡಲೇ ಇವರಿಗೆ ಬರದ ಪರಿಚಯವಾಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ.

ಸ್ಥಳೀಯ ಬಿಜೆಪಿ ಕಾರ್ಯಕರ್ತರೊಂದಿಗೆ ಬಿ.ಎಸ್​ ಯಡಿಯೂರಪ್ಪನವರು ಬಾದಾಮಿ ಸೇರಿದಂತೆ ಮುಷ್ಟಗೇರಿ, ಹಳ್ಳಗೆರ ಗ್ರಾಮಗಳಲ್ಲಿ ಬರ ವೀಕ್ಷಣೆ ಮಾಡಿದರು. ಜತೆಗೆ ಹೋದ ಕಡೆಯೆಲ್ಲಾ ಸ್ಥಳೀಯರೊಂದಿಗೆ ಸಂವಾದ ನಡೆಸಿದರು. ಗ್ರಾಮಸ್ಥರ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದಾಗಿ ಭರವಸೆ ನೀಡಿದರು.

ಬರ ವೀಕ್ಷಣೆ ವೇಳೆ ಯಡಿಯೂರಪ್ಪ ಅವರಿಗೆ ವಿಧಾನಸಭಾ ವಿರೋಧಪಕ್ಷದ ಉಪನಾಯಕ ಗೋವಿಂದ ಕಾರಜೋಳ, ಶಾಸಕ ಪಿ.ಸಿ.ಗದ್ದಿಗೌಡರ, ಮಾಜಿ ಸಚಿವ ಲಕ್ಷ್ಮಣ ಸವದಿ,ವಿಧಾನ ಪರಿಷತ್ ಸದಸ್ಯ ಹನುಮಂತ ನಿರಾಣಿ ಜೊತೆಗೂಡಿದರು.

ಇದನ್ನೂ ಓದಿ: Monsoon Rain: ಕೇರಳಕ್ಕೆ ಮುಂಗಾರು ಪ್ರವೇಶ: ರಾಜ್ಯಾದ್ಯಂತ ತೀವ್ರ ಕಟ್ಟೆಚ್ಚರ

ಈ ಹಿಂದೆಯೇ ಮೈತ್ರಿ ಸರ್ಕಾರದಲ್ಲಿನ ಅಸಮಾಧಾನದ ಬೆಂಕಿಗೆ ಗುರುಗ್ರಾಮದಲ್ಲಿ ಕುಳಿತು ತುಪ್ಪ ಸುರಿದಿದ್ದ ಬಿಜೆಪಿ ಹಠಾತ್‌ ತನ್ನ ನಡೆ ಬದಲಿಸಿಕೊಂಡಿತ್ತು. ರಾಜ್ಯದ ಎಲ್ಲಾ ಬರಪೀಡಿತ ತಾಲೂಕುಗಳಿಗೆ ಪ್ರವಾಸ ನಡೆಸಿ ವರದಿ ಸಿದ್ಧಪಡಿಸಲು ನಿರ್ಧರಿಸಿತ್ತು.

ಇದನ್ನೂ ಓದಿ: ಬೆಂಗಳೂರು ಸುತ್ತಮುತ್ತ ಹಾಗೂ ಮೈಸೂರು, ದಾವಣಗೆರೆಯಲ್ಲಿ ಭಾರೀ ಮಳೆ
Loading...

ಈ ಬೆನ್ನಲ್ಲೇ ರಾಜ್ಯದ ಬರ ಪೀಡಿತ ತಾಲೂಕುಗಳಿಗೆ ಬಿಜೆಪಿ ನಾಯಕರು ಪ್ರವಾಸ ಕೈಗೊಳ್ಳುತ್ತಿರುವುದಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದರು. ರಾಜ್ಯದ 176 ತಾಲೂಕುಗಳ ಪೈಕಿ, 156 ಬರಪೀಡಿತವಾಗಿವೆ. ಕೇಂದ್ರ ಕರ್ನಾಟಕಕ್ಕೆ 900 ಕೋಟಿ ರು ಅನುದಾನ ನೀಡಿದೆ, ಆದರೆ ಪಕ್ಕದ ಮಹಾರಾಷ್ಟ್ರಕ್ಕೆ ನಮಗೆ ನೀಡಿದ ಐದು ಪಟ್ಟು ಹೆಚ್ಚು ಅನುದಾನ ಹಣ ನೀಡಿದೆ ಎಂದು ಸಿಎಂ ಆರೋಪಿಸಿದ್ದರು.
-------------
First published:June 7, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...