ಲೋಕಸಭೆ ಚುನಾವಣೆ: ಬಯಲಾಯ್ತು ಬಿಜೆಪಿ ರಹಸ್ಯ ಸಮೀಕ್ಷೆ; ಸೋಲಿನ ಆತಂಕದಲ್ಲಿ ಬಿಎಸ್​ವೈ

news18
Updated:September 7, 2018, 3:41 PM IST
ಲೋಕಸಭೆ ಚುನಾವಣೆ: ಬಯಲಾಯ್ತು ಬಿಜೆಪಿ ರಹಸ್ಯ ಸಮೀಕ್ಷೆ; ಸೋಲಿನ ಆತಂಕದಲ್ಲಿ ಬಿಎಸ್​ವೈ
news18
Updated: September 7, 2018, 3:41 PM IST
ಚಿದಾನಂದ ಪಟೇಲ್, ನ್ಯೂಸ್​ ​18 ಕನ್ನಡ

ಬೆಂಗಳೂರು (ಸೆ. 7):  ರಾಜ್ಯದಲ್ಲಿ ಈಗಾಗಲೇ ಮುಂದಿನ ಲೋಕಸಭೆ ಚುನಾವಣೆ ಸಿದ್ಧತೆ ಶುರುವಾಗಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​. ಯಡಿಯೂರಪ್ಪ ರಹಸ್ಯ ಸಮೀಕ್ಷೆ ನಡೆಸಿದ್ದಾರೆ.

2019ರ ಲೋಕಸಭೆ ಚುನಾವಣೆ ಸಿದ್ಧತೆಯಲ್ಲಿರುವ ಬಿಜೆಪಿ ಹೈಕಮಾಂಡ್​ ರಾಜ್ಯದಲ್ಲಿ ಬಿಜೆಪಿ ಸೋಲು-ಗೆಲುವು ವರದಿ ಕೇಳಿತ್ತು. ಹೈಕಮಾಂಡ್ ವರದಿ ಹಿನ್ನೆಲೆಯಲ್ಲಿ ಪ್ರತಿ ಲೋಕಸಭಾ ಕ್ಷೇತ್ರದಲ್ಲೂ ಆಪ್ತರ ಮೂಲಕ ವರದಿ ಪಡೆದಿರುವ ಬಿಎಸ್​ವೈ ಸಮೀಕ್ಷೆಯ ವರದಿ ನ್ಯೂಸ್​18 ಕನ್ನಡಕ್ಕೆ ಲಭ್ಯವಾಗಿದೆ.

ರಾಜ್ಯದಲ್ಲಿ ನಡೆಸಿರುವ ರಹಸ್ಯ ವರದಿಯಿಂದ ಯಡಿಯೂರಪ್ಪ ತಲೆಕೆಡಿಸಿಕೊಂಡಿದ್ದಾರೆ.  ಬಿಜೆಪಿ ಗೆದ್ದಿರುವ 6ರಿಂದ 7 ಹಾಲಿ ಕ್ಷೇತ್ರಗಳಲ್ಲಿ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸೋಲುವ ಸಾಧ್ಯತೆ ಇದೆ ಎನ್ನಲಾಗಿದೆ. ಕಳೆದ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿಗೆ 17 ಕ್ಷೇತ್ರಗಳಲ್ಲಿ ಗೆಲುವು ಲಭಿಸಿತ್ತು. 2019ರ ಚುನಾವಣೆಗೆ ಹೈಕಮಾಂಡ್‌ನಿಂದ‌ 20ಕ್ಗುಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಗುರಿ ನೀಡಲಾಗಿದೆ.

ಸೋಲುವ ಸಾಧ್ಯತೆಯಿರುವ ಸಂಸದರಾರು?

ಬಿಜೆಪಿಯನ್ನು ರಾಜ್ಯದಲ್ಲಿ ಬಲಪಡಿಸುವ ಗುರಿ ಹೊಂದಿರುವ ಬಿ.ಎಸ್​. ಯಡಿಯೂರಪ್ಪನವರಿಗೆ ಈ ವರದಿ ತಲೆನೋವು ತಂದಿಟ್ಟಿದೆ. ಲೋಕಸಭೆ ಚುನಾವಣೆಯಲ್ಲಿ ಸೋಲುವ ಬಿಜೆಪಿ ಸಂಸದರ ವಿವರ ಕೂಡ ನ್ಯೂಸ್​18ಗೆ ಲಭ್ಯವಿದೆ.

ವಿಜಯಪುರ- ರಮೇಶ ಜಿಗಜಿಣಗಿ, ಉತ್ತರಕನ್ನಡ- ಅನಂತಕುಮಾರ್‌ ಹೆಗಡೆ, ಬೆಳಗಾವಿ- ಸುರೇಶ್ ಅಂಗಡಿ, ಬಾಗಲಕೋಟೆ- ಪಿ.ಸಿ. ಗದ್ದಿಗೌಡರ್, ಕೊಪ್ಪಳ- ಸಂಗಣ್ಣ ಕರಡಿ ಅವರಿಗೆ ಸೋಲಿನ ಭೀತಿ ಕಾಡುತ್ತಿದೆ. ಇಷ್ಟೂ ಕ್ಷೇತ್ರಗಳಲ್ಲಿ ಮರು ನಿರ್ಧಾರದ ಬಗ್ಗೆ ವರದಿ ಕೇಳಲಾಗಿದೆ.
Loading...

ಮೈತ್ರಿಯೂ ಮುಳ್ಳಾಯ್ತ?

ರಾಜ್ಯದಲ್ಲಿ ಕಾಂಗ್ರೆಸ್​- ಜೆಡಿಎಸ್​ ಮೈತ್ರಿಯಿಂದಲೂ ಬಿಜೆಪಿಗೆ ಸಂಕಷ್ಟ ಎದುರಾಗಿದೆ. ಸುಮಾರು 5ರಿಂದ 7 ಕ್ಷೇತ್ರಗಳಲ್ಲಿ ಮೈತ್ರಿಯಿಂದ ಬಿಜೆಪಿ ಅಭ್ಯರ್ಥಿಗೆ ಸಂಕಷ್ಟ ಎದುರಾಗಲಿದೆ ಎಂದು ಅಂದಾಜಿಸಲಾಗಿದೆ. ಲೋಕಸಭಾ ಚುನಾವಣೆಯಲ್ಲೂಕಾಂಗ್ರೆಸ್​-ಜೆಡಿಎಸ್​ ಮೈತ್ರಿ ಮಾಡಿಕೊಂಡರೆ ಬಿಜೆಪಿಗೆ ಹಾಲಿ ಇರುವ ಕ್ಷೇತ್ರಗಳಲ್ಲಿ ಗೆಲ್ಲುವುದೂ ಕಷ್ಟವೇ ಆಗಲಿದೆ.

ಒಂದುವೇಳೆ ಮೈತ್ರಿಯಾದರೆ ಬೆಂಗಳೂರು ದಕ್ಷಿಣ- ಸಚಿವ ಅನಂತಕುಮಾರ್‌, ಬೆಂಗಳೂರು ಉತ್ತರ- ಸಚಿವ ಡಿ.ವಿ. ಸದಾನಂದ ಗೌಡ, ಬೆಂಗಳೂರು ಸೆಂಟ್ರಲ್- ಸಂಸದ ಪಿ.ಸಿ. ಮೋಹನ್, ಅವರಿಗೆ ಕಠಿಣ ಪೈಪೋಟಿ ಎದುರಾಗಲಿದೆ. ಇಲ್ಲಿನ ಅಹಿಂದ, ಒಕ್ಕಲಿಗ ಮತಗಳು ಮೈತ್ರಿ ಪಕ್ಷಕ್ಕೆ ಸಿಗುವ ಸಾಧ್ಯತೆಯಿದೆ. ಮೈಸೂರು, ಶಿವಮೊಗ್ಗ, ಬಳ್ಳಾರಿ, ಚಿಕ್ಕಮಗಳೂರು, ರಾಯಚೂರು, ಹಾಸನ, ಮಂಡ್ಯ ಕ್ಷೇತ್ರಗಳಲ್ಲೂ ಬಿಜೆಪಿಗೆ ಗೆಲುವು ಕಷ್ಟವಾಗುವ ಸಾಧ್ಯತೆಯಿದೆ.

ಸದ್ಯಕ್ಕೆ ಬಿಜೆಪಿಗೆ ಮೀಸಲು ಕ್ಷೇತ್ರಗಳತ್ತ ಕಣ್ಣಿಟ್ಟರೆ ಅಲ್ಲಿ ಗೆಲ್ಲುವ ಸಾಧ್ಯತೆಗಳಿವೆ ಎಂದು ವರದಿಯಲ್ಲಿ ತಿಳಿದುಬಂದಿದೆ. ಕಲ್ಬುರ್ಗಿ- ಮಲ್ಲಿಕಾರ್ಜುನ ಖರ್ಗೆ ಸ್ಪರ್ಧಿಸುವ ಕ್ಷೇತ್ರವಾದ್ದರಿಂದ ಖರ್ಗೆ ಸೋಲಿಗೂ ಪಣ ತೊಡಲಾಗಿದೆ. ಕೋಲಾರ ಮೀಸಲು ಕ್ಷೇತ್ರದ ಕೈ ಸಂಸದ ಕೆ.ಹೆಚ್. ಮುನಿಯಪ್ಪ, ಚಾಮರಾಜನಗರದ ಕಾಂಗ್ರೆಸ್ ಧ್ರುವನಾರಾಯಣ ಅವರ ಮೀಸಲು ಕ್ಷೇತ್ರಗಳತ್ತ ಸದ್ಯಕ್ಕೆ ಬಿಜೆಪಿ ಚಿತ್ತ ನೆಟ್ಟಿದೆ.
First published:September 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ