ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳೋಕೆ ನಂಗೇನ್ ತಲೆ ಕೆಟ್ಟಿದಿಯಾ; ಬಿ.ಎಸ್. ಯಡಿಯೂರಪ್ಪ

ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ನಮ್ಮ ಪಕ್ಷಕ್ಕೆ ಸೇರಿಸಿಕೊಳ್ಳಲು ನಂಗೇನ್ ತಲೆ ಕೆಟ್ಟಿದೆಯಾ? ಅವರ ಸಲುವಾಗಿಯೇ ಇಂದು ಕಾಂಗ್ರೆಸ್ ಶಾಸಕರು ಮುಂಬೈನಲ್ಲಿ ಕುಳಿತಿದ್ದಾರೆ. ಹೀಗಾಗಿ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳುವ ಪ್ರಶ್ನೆಯೇ ಇಲ್ಲ” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್​ವೈ ಸ್ಪಷ್ಟಪಡಿಸಿದ್ದಾರೆ.

MAshok Kumar | news18
Updated:July 14, 2019, 10:41 AM IST
ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳೋಕೆ ನಂಗೇನ್ ತಲೆ ಕೆಟ್ಟಿದಿಯಾ; ಬಿ.ಎಸ್. ಯಡಿಯೂರಪ್ಪ
ಬಿ.ಎಸ್​. ಯಡಿಯೂರಪ್ಪ-ಲಕ್ಷ್ಮೀ ಹೆಬ್ಬಾಳ್ಕರ್.
  • News18
  • Last Updated: July 14, 2019, 10:41 AM IST
  • Share this:
ಬೆಂಗಳೂರು (ಜುಲೈ.14); ಬೆಳಗಾವಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ನಮ್ಮ ಪಕ್ಷಕ್ಕೆ ಸೇರಿಸಿಕೊಳ್ಳಲು ನಂಗೇನ್ ತಲೆ ಕೆಟ್ಟಿದೆಯಾ? ಎಂದು ಹೇಳುವ ಮೂಲಕ ಲಕ್ಷ್ಮೀ ಹೆಬ್ಬಾಳ್ಕರ್ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂಬ ವದಂತಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಇತಿಶ್ರೀ ಹಾಡಿದ್ದಾರೆ.

ಬೆಳಗಾವಿ ಜಿಲ್ಲೆಯಲ್ಲಿ ಜಾರಕಿಹೊಳಿ ಹಾಗೂ ಹೆಬ್ಬಾಳ್ಕರ್ ಕುಟುಂಬದ ನಡುವೆ ಇತ್ತೀಚೆಗೆ ಸಂಬಂಧ ಸರಿಯಿಲ್ಲ. ಇದರಿಂದ ಬೇಸತ್ತಿರುವ ಬೆಳಗಾವಿ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರಲಿದ್ದಾರೆ ಎನ್ನಲಾಗುತ್ತಿತ್ತು.

ಆದರೆ, ಈ ಸುದ್ದಿಗೆ ಇಂದು ಇತಿಶ್ರೀ ಹಾಡಿದ ಯಡಿಯೂರಪ್ಪ, “ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ನಮ್ಮ ಪಕ್ಷಕ್ಕೆ ಸೇರಿಸಿಕೊಳ್ಳಲು ನಂಗೇನ್ ತಲೆ ಕೆಟ್ಟಿದೆಯಾ? ಅವರ ಸಲುವಾಗಿಯೇ ಇಂದು ಕಾಂಗ್ರೆಸ್ ಶಾಸಕರು ಮುಂಬೈನಲ್ಲಿ ಕುಳಿತಿದ್ದಾರೆ. ಹೀಗಾಗಿ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳುವ ಪ್ರಶ್ನೆಯೇ ಇಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

Lakshmi Hebbalkar
ಲಕ್ಷ್ಮೀ ಹೆಬ್ಬಾಳ್ಕರ್​.


ಅಲ್ಲದೆ, ಸಚಿವ ಎಂಟಿಬಿ ನಾಗರಾಜ್ ಅವರ ರಾಜೀನಾಮೆ ವಾಪಸ್ ನಿರ್ಧಾರದ ಕುರಿತು ಮಾತನಾಡಿದ ಅವರು, “ಎಂಟಿಬಿ ಕುರಿತು ನಾನು ಏನೂ ಪ್ರತಿಕ್ರಿಯೆ ನೀಡಲ್ಲ. ಮುಂದಿನ ರಾಜಕೀಯ ಬೆಳವಣಿಗೆ ನೋಡಿಕೊಂಡು ಮಾತನಾಡುತ್ತೇನೆ” ಎಂದು ತಿಳಿಸಿದ್ಧಾರೆ.

ಇದನ್ನೂ ಓದಿ : ಮುಂಬೈನಲ್ಲಿ ಮಿಡ್​ನೈಟ್​ ಮೀಟಿಂಗ್; ಎಂಟಿಬಿ ರಾಜೀನಾಮೆ ವಾಪಸ್ ನಿರ್ಧಾರದಿಂದ ಗಲಿಬಿಲಿ; ಎರಡು ಬಣವಾದ ಅತೃಪ್ತರ ತಂಡ!

First published:July 14, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ