Murder: ಉಂಡು, ಮಲಗಿದವರ ಮೇಲೆ ಅದೆಂಥಾ ದ್ವೇಷ? ಮಂಡ್ಯದಲ್ಲಿ ನಾಲ್ವರು ಮಕ್ಕಳ ಜೊತೆ ಮಹಿಳೆ ಕೊಂದಿದ್ಯಾರು?

ಗಂಡ ವ್ಯಾಪಾರಕ್ಕೆ ಹೋಗಿದ್ದ. ಹೀಗಾಗಿ ಮನೆಯಲ್ಲಿದ್ದ ಹೆಂಡತಿ, ಮಕ್ಕಳೊಂದಿಗೆ ಉಂಡು ಮಲಗಿದ್ದಳು. ಅದೇ ಕೊನೆ, ಅವರು ಮರುದಿನ ಏಳಲೇ ಇಲ್ಲ. ಹಾಗಿದ್ರೆ ಐವರನ್ನು ಇಷ್ಟು ಭೀಕರವಾಗಿ ಕೊಲೆ ಮಾಡಿದ್ದು ಯಾರು? ಪೊಲೀಸರು ಈ ಬಗ್ಗೆ ಏನು ಹೇಳುತ್ತಾರೆ?

ಕೊಲೆಯಾದ ಮಹಿಳೆ ಮತ್ತು ಮಕ್ಕಳು

ಕೊಲೆಯಾದ ಮಹಿಳೆ ಮತ್ತು ಮಕ್ಕಳು

  • Share this:
ಮಂಡ್ಯ: ಆ ಕುಟುಂಬ (Family) ತಾವಾಯ್ತು, ತಮ್ಮ ಕೆಲಸ ಆಯ್ತು ಅಂತ ತಮ್ಮ ಪಾಡಿಗೆ ತಾವಿದ್ದ ಕುಟುಂಬ. ಯಾರ ಬಳಿ ಜಗಳಕ್ಕೆ ಹೋದವರಲ್ಲ. ಗಂಡ (Husband), ಹೆಂಡ್ತಿ (Wife), ಮಕ್ಕಳು (Children) ಅಂತ ಸುಖವಾಗಿದ್ರು. ಆದ್ರೆ ರಾತ್ರಿ (Night) ಎಂದಿನಂತೆ ಊಟ (Dinner) ಮಾಡಿ ಅವರು ಮಲಗಿದ್ದೇ ಕೊನೆ. ಮತ್ತೆ ಏಳಲೇ ಇಲ್ಲ. ಬೆಳಗಾಗುವುದರೊಳಗೆ ನಾಲ್ವರು ಮಕ್ಕಳು, ಸೇರಿದಂತೆ ಓರ್ವ ಮಹಿಳೆಯ ಭೀಕರ ಹತ್ಯೆಯಾಗಿದೆ (Murder). ಯಾರೋ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿದ್ದಾರೆ. ಇಷ್ಟಕ್ಕೂ ಈ ಘಟನೆ ನಡೆದಿದ್ದು ಮಂಡ್ಯ (Mandya) ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆ.ಆರ್‌.ಎಸ್ ಗ್ರಾಮದಲ್ಲಿ. ಹಾಗಿದ್ರೆ ಇಲ್ಲಿ ಕೊಲೆಯಾದ ಮಹಿಳೆ ಯಾರು? ಮಕ್ಕಳ ಮೇಲೆ ಹಂತಕರಿಗೆ ಏನಿತ್ತು ದ್ವೇಷ? ಅಸಲಿಗೆ ಈ ಭೀಕರ ಹತ್ಯೆಗೆ ಕಾರಣವೇನು? ಈ ಎಲ್ಲವುಗಳ ಬಗ್ಗೆ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ಓದಿ…

ನಾಲ್ವರು ಮಕ್ಕಳ ಜೊತೆಗೆ ಮಹಿಳೆಯ ಭೀಕರ ಹತ್ಯೆ

ಮನೆಯೊಳಗೆ ಬಿದ್ದಿರುವ ಒಂದರ ಜೊತೆ ಒಂದು ಶವಗಳು.  ದುಃಖ, ಆತಂಕದಿಂದ ಮನೆ ಮುಂದೆ ಜಮಾಯಿಸಿರುವ ನೂರಾರು ಜನರು.. ಮನೆಯನ್ನ ಸುತ್ತುವರೆದು ಕೊಲೆ ಸಂಬಂಧ ತನಿಖೆ ನಡೆಸ್ತಿರೋ ಪೊಲೀಸರು. ಪೊಲೀಸ್ ಶ್ವಾನ ಆರೋಪಿಗಳ ಸುಳಿವು ಪತ್ತೆಗೆ ಸರ್ಚ್ ಮಾಡ್ತಿರೊ ದೃಶ್ಯ. ಈ ಎಲ್ಲಾ ದೃಶ್ಯ ಕಂಡು ಬಂದಿದ್ದು, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ KRS ಗ್ರಾಮದಲ್ಲಿ.

ಮನೆ ಮನೆಗೆ ತಿರುಗಿ ವ್ಯಾಪಾರ ಮಾಡುವ ಕುಟುಂಬ

KRSನ ಬಜಾರ್ ಲೈನ್ ನಲ್ಲಿ ಗಂಗಾರಾಮ್ ಎಂಬುವವರ ಕುಟುಂಬ ವಾಸವಿತ್ತು. ಬಟ್ಟೆ, ಅಲಂಕಾರಿಕ ವಸ್ತುಗಳನ್ನ ಹಳ್ಳಿ ಹಳ್ಳಿಗಳಲ್ಲಿ ತಿರುಗಿ ವ್ಯಾಪಾರ ಮಾಡಿಕೊಂಡಿದ್ದ ಈ ಕುಟುಂಬ, ಕಳೆದ 15-20 ವರ್ಷಗಳಿಂದ ಇಲ್ಲೇ ವಾಸವಿತ್ತು. ವ್ಯಾಪಾರ ಸಂಬಂಧ ಗಂಗಾರಾಮ್ ಎರಡು ದಿನಗಳ ಹಿಂದೆಯೇ ಹೊರ ರಾಜ್ಯಕ್ಕೆ ತೆರಳಿದ್ರು. ಗಂಗಾರಾಮ್ ಪತ್ನಿ ಲಕ್ಷ್ಮೀ, ತನ್ನ ಮೂವರು ಮಕ್ಕಳು ಹಾಗೂ ಅಣ್ಣನ ಮಗನ ಜೊತೆ ಮನೆಯಲ್ಲೇ ಮಲಗಿದ್ದರು. ಬೆಳಿಗ್ಗೆ ಎದ್ದು ನೋಡುವಷ್ಟರಲ್ಲಿ ಮನೆಯಲ್ಲಿದ್ದ ಐವರು ಭೀಕರವಾಗಿ ಹತ್ಯೆಯಾಗಿದ್ದಾರೆ..

ಇದನ್ನೂ ಓದಿ: Honeytrap: 'ಪದ್ಮ'ನ ಹಿಂದೆ ಹೋಗಿದ್ದವ 'ಹನಿ' ಬಲೆಗೆ ಬಿದ್ದ! ಯಾರದ್ದೋ ಮನೆಗೆ ಹೋಗುವ ಮುನ್ನ ಎಚ್ಚರ

ಅಕ್ಕಪಕ್ಕದವರು ಬಂದು ನೋಡಿದಾಗ ಘಟನೆ ಬೆಳಕಿಗೆ

ಇನ್ನು ಮೃತ ಲಕ್ಷ್ಮಿ ಬೆಳಿಗ್ಗೆ 8 ಗಂಟೆಯಾದರು ಮನೆಯಿಂದ ಹೊರ ಬಾರದಿದ್ದಕ್ಕೆ ಪಕ್ಕದ ಮನೆಯ ಲಕ್ಷ್ಮಿ ಬಾಗಿಲ ಬಳಿ ಹೋಗಿದ್ದಾರೆ. ಈ ವೇಳೆ ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಘಟನೆಯಲ್ಲಿ 30 ವರ್ಷದ ಲಕ್ಷ್ಮೀ, ಅಣ್ಣನ ಮಗ 12 ವರ್ಷದ ರಾಜ್, ತನ್ನ ಮಕ್ಕಳಾದ 8 ವರ್ಷದ ಗೋವಿಂದ, 7 ವರ್ಷದ ಕೋಮಲ್ ಹಾಗೂ 4 ವರ್ಷದ ಕುನಾಲ್ ಅವರನ್ನ ಶಾರ್ಫ್ ಆಯುಧಗಳಿಂದ ಭೀಕರವಾಗಿ  ಕೊಲೆ ಮಾಡಿದ್ದಾರೆ.

ಘಟನೆಗೆ ಕಾರಣ ಏನು ಅನ್ನೋದು ಇನ್ನು ಗೊತ್ತಿಲ್ಲ. ಈ ಭೀಕರ ಹತ್ಯೆಯಿಂದಾಗಿ ಇಡೀ KRS ಗ್ರಾಮವೇ ಬೆಚ್ಚಿಬಿದ್ದಿದ್ದು, ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿತ್ತು.

ಹಂತಕರ ಬಂಧನಕ್ಕೆ ಬಲೆ ಬೀಸಿದ ಪೊಲೀಸರು

ಇನ್ನು ವಿಷಯ ತಿಳಿಯುತ್ತಿದ್ದಂತೆ ಮಂಡ್ಯ ಎಸ್ಪಿ ಯತೀಶ್ ಹಾಗು ಪೊಲೀಸರ ತಂಡ ಸ್ಥಳಕ್ಕೆ ಭೇಟಿ ನೀಡಿತ್ತು. ಶ್ವಾನದಳ, ಬೆರಳಚ್ಚು ತಜ್ಞರು ಸ್ಥಳದಲ್ಲಿ ಪರಿಶೀಲನೆ ಮಾಡಿ, ಮಾಹಿತಿ ಕಲೆ ಹಾಕಿದ್ರು. ಇನ್ನು ದಕ್ಷಿಣ ವಲಯ ಐಜಿ ಪ್ರವೀಣ್ ಮಧುಕರ್ ಪವರ್ ಭೇಟಿ ನೀಡಿ ಮಾಹಿತಿ ಕಲೆ ಹಾಕಿ, ಪರಿಶೀಲನೆ ನಡೆಸಿದ್ರು. ಪ್ರ

ಕರಣದ ಸಂಬಂಧ ವಿಶೇಷ ತನಿಖಾ ತಂಡ ರಚಿಸಿದ್ದು, ಆರೋಪಿಗಳ ಪತ್ತೆಗೆ ಎಲ್ಲಾ ಆಯಾಮಗಳಲ್ಲೂ ತನಿಖೆ ಕೈಗೊಂಡಿದ್ದಾರೆ. ಜಿಲ್ಲೆಯಲ್ಲಿ ಈ ಹಿಂದೆ ಇಂತಹ ಘಟನೆ ನಡೆದಿರಲಿಲ್ಲ. ಆದಷ್ಟು ಬೇಗ ಆರೋಪಿಗಳನ್ನ ಪತ್ತೆ‌ಹಚ್ಚುವ ವಿಶ್ವಾಸವನ್ನ ಮಂಡ್ಯ ಎಸ್ಪಿ ವ್ಯಕ್ತಪಡಿಸಿದ್ರು.

ಇದನ್ನೂ ಓದಿ: Bengaluru: ನಂಬರ್ ಕೇಳ್ತಾರೆ, ಫೋಟೋ ಕೇಳ್ತಾರೆ ಆಮೇಲೆ ಹಣ ಕೀಳ್ತಾರೆ! ಆ್ಯಪ್‌ ಬಳಸೋ ಮಹಿಳೆಯರೇ ಹುಷಾರ್

ಒಟ್ಟಾರೆ ಊರೂರು ಸುತ್ತಿ ಜೀವನ ಕಟ್ಟಿಕೊಂಡಿದ್ದ ಕುಟುಂಬ ರಣ ಭೀಕರವಾಗಿ ಹತ್ಯೆಯಾಗಿರುವುದು ಮನಕಲುವಂತಾಗಿದ್ದು, ಪೊಲೀಸರು ಆರೋಪಿಗಳನ್ನ ಶೀಘ್ರವೇ ಪತ್ತೆ ಹಚ್ಚಬೇಕಿದೆ. ಭೀಕರ ಘಟನೆಯಿಂದ ಇಡೀ ಮಂಡ್ಯ ಜಿಲ್ಲೆಯೇ ಬೆಚ್ಚಿ ಬಿದ್ದಿದೆ.
Published by:Annappa Achari
First published: