ಬಿಆರ್​ಟಿ ಹುಲಿರಕ್ಷಿತಾರಣ್ಯದಲ್ಲಿ ಕಾಡುಪ್ರಾಣಿಗಳನ್ನು ಹಿಮ್ಮೆಟ್ಟಿಸಲು ಪಟಾಕಿ ಬದಲು ಪೈಪ್ ಗನ್ ಬಳಕೆ

ಕೋವಿಡ್-19 ಹಿನ್ನಲೆಯಲ್ಲಿ ಪಟಾಕಿ ಉತ್ಪಾದನೆ ಕುಂಠಿತಗೊಂಡ ಪರಿಣಾಮ ಪೂರೈಕೆಯಾಗುತ್ತಿಲ್ಲ. ಇದರಿಂದಾಗಿ ಅದಕ್ಕೆ ಪರ್ಯಾಯ ಮಾರ್ಗವನ್ನು ಅರಣ್ಯ ಇಲಾಖೆ ನಡೆಸಿದೆ.

news18-kannada
Updated:October 17, 2020, 2:48 PM IST
ಬಿಆರ್​ಟಿ ಹುಲಿರಕ್ಷಿತಾರಣ್ಯದಲ್ಲಿ ಕಾಡುಪ್ರಾಣಿಗಳನ್ನು ಹಿಮ್ಮೆಟ್ಟಿಸಲು ಪಟಾಕಿ ಬದಲು ಪೈಪ್ ಗನ್ ಬಳಕೆ
ಸಾಂದರ್ಭಿಕ ಚಿತ್ರ
  • Share this:
ಚಾಮರಾಜನಗರ (ಅ. 17): ಬಿಳಿಗಿರಿ ರಂಗನಾಥ ಸ್ವಾಮಿ ದೇವಾಲಯ (ಬಿಆರ್​ಟಿ) ಹುಲಿ ರಕ್ಷಿತಾರಣ್ಯದ ವ್ಯಾಪ್ತಿಯ ಕೆಲವೆಡೆ  ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದೆ.  ಅದರಲ್ಲೀ ಆನೆಗಳು,  ಕಾಡುಹಂದಿಗಳು, ಕೃಷ್ಣಮೃಗಗಳು ಹಾಗು ಜಿಂಕೆಗಳು ರೈತರ ಬೆಳೆಗಳನ್ನೆಲ್ಲಾ ಹಾಳು ಮಾಡುತ್ತಿವೆ.  ಕಾಡಿನಿಂದ ನೀರು ಮೇವನ್ನರಿಸಿ ನಾಡಿನೆಡೆಗೆ ಬರುವ ಈ ವನ್ಯಜೀವಿಗಳನ್ನು ಹಿಮ್ಮೆಟ್ಟಿಸುವುದು ಸವಾಲ್​ ಅಗಿದೆ. ಪ್ರಾಣಿಗಳ ದಾಳಿ ತಪ್ಪಿಸಲು ಜೋರಾಗಿ ಶಬ್ದ ಮಾಡುವುದು, ಪಟಾಕಿ ಹೊಡೆಯುವುದು, ಸಾಕಾನೆಗಳನ್ನು ಬಳಸುವುದು, ಗಾಳಿಯಲ್ಲಿ ಗುಂಡು ಹಾರಿಸುವುದು ಹೀಗೆ ನಾನಾ ರೀತಿಯಲ್ಲಿ ವಿಧಾನಗಳನ್ನು ಬಳಕೆ ಮಾಡಲಾಗುತ್ತಿದೆ. ಆದರೆ, ಈಗ ಕೋವಿಡ್​ ಹಿನ್ನಲೆ ಪಟಾಕಿ ಪೂರೈಕೆಯಾಗುತ್ತಿಲ್ಲ. ಈ ಹಿನ್ನಲೆ ಪಿವಿಸಿ ಪೈನ್ ಗನ್ ಬಳಸಿ ಕಾಡುಪ್ರಾಣಿಗಳನ್ನು ಹಿಮ್ಮೆಟ್ಟಿಸಲು ಅರಣ್ಯ ಇಲಾಖೆ ಮುಂದಾಗಿದೆ. ಈ ಕುರಿತು ಕಾಡಂಚಿನ ಗ್ರಾಮಗಳಲ್ಲಿ ಪ್ರಾತ್ಯಕ್ಷಿಕೆ ಮೂಲಕ ಅರಿವು ನೀಡಲು ಕೂಡ ಮುಂದಾಗಿದೆ. 

ಕಾಡು ಪ್ರಾಣಿಗಳನ್ನು ಬೆದರಿಸಲು ಅರಣ್ಯದಂಚಿನ ಗ್ರಾಮಸ್ಥರು ಪಟಾಕಿಗಳ ಬಳಕೆ ಮಾಡುವುದು ಸಾಮಾನ್ಯವಾಗಿದೆ. ಆದರೆ ಈ ಬಾರಿ  ತಮಿಳುನಾಡಿನ ಶಿವಕಾಶಿಯಿಂದ ಪಟಾಕಿ ಸರಬರಾಜು ಆಗುತ್ತಿಲ್ಲ.  ಕೋವಿಡ್-19 ಹಿನ್ನಲೆಯಲ್ಲಿ ಪಟಾಕಿ ಉತ್ಪಾದನೆ ಕುಂಠಿತಗೊಂಡ ಪರಿಣಾಮ ಪೂರೈಕೆಯಾಗುತ್ತಿಲ್ಲ. ಇದರಿಂದಾಗಿ ಅದಕ್ಕೆ ಪರ್ಯಾಯ ಮಾರ್ಗವನ್ನು ಅರಣ್ಯ ಇಲಾಖೆ ನಡೆಸಿದೆ. ಈ ಕುರಿತು ಗ್ರಾಮಸ್ಥರಿಗೂ ಕೂಡ ಅರಿವು ಮೂಡಿಸುತ್ತಿದೆ.

ಏನಿದು ಪೈಪ್​ ಗನ್​? 

ಪಿವಿಸಿ ಪೈಪ್ ಬಳಸಿ ಈ ಗನ್ ತಯಾರಿಸಲಾಗುತ್ತದೆ.  ಕ್ಯಾಲ್ಸಿಯಂ ಕಾರ್ಬೈಡ್ ಗೆ  ನೀರು ಮಿಶ್ರಣ ಮಾಡಿ  ಪೈಪ್ ನ ಹಿಂಬದಿಯಲ್ಲಿ ತುಂಬಿ ಮುಚ್ಚಳ ಹಾಕಲಾಗುತ್ತದೆ. ಪೈಪ್ ನ ಹಿಂಬದಿಯ ಮೇಲ್ಭಾಗದಲ್ಲಿ  ಗ್ಯಾಸ್ ಲೈಟರ್ ನ್ನು ಸಹ ಅಳವಡಿಸಲಾಗುತ್ತದೆ. ಗ್ಯಾಸ್ ಲೈಟರ್ ಒತ್ತಿದಾಗ  ನೀರು ಮಿಶ್ರಿತ ಕ್ಯಾಲ್ಸಿಯಂ ಕಾರ್ಬೈಡ್ ನಿಂದ ಉತ್ಪತ್ತಿಯಾಗಿರುವ  ಗ್ಯಾಸ್ ಗೆ ಬೆಂಕಿ ತಗುಲಿ   ಪೈಪ್ ಮುಂಭಾಗದಿಂದ ಜೋರಾದ  ಶಬ್ದ ಬರುತ್ತದೆ.  ಪಟಾಕಿ ಸದ್ದಿಗಿಂತಲು ಹೆಚ್ಚು ಶಬ್ದ ಹೊರಹೊಮ್ಮುತ್ತದೆ.  ಗುಂಡಿನಂತೆ ಮೊಳಗುವ ಈ ಶಬ್ದಕ್ಕೆ ಗಾಬರಿಯಾಗಿ  ವನ್ಯಜೀವಿಗಳು ಕಾಡಿನೆಡೆಗೆ ಓಡಿ ಹೋಗುತ್ತವೆ.

ಇದನ್ನು ಓದಿ: ಭೋರ್ಗರೆದ ಭೀಮಾ; ಪ್ರವಾಹಕ್ಕೆ ಬಿಸಿಲನಾಡ ರಾಯಚೂರು ತತ್ತರ

ಪಕ್ಕದ ಬಂಡೀಪುರ ಹುಲಿರಕ್ಷಿತಾರಣ್ಯದ ಸಿಬ್ಬಂದಿ ಇದನ್ನು ವಿನ್ಯಾಸಗೊಳಿಸಿ ಬಳಸುತ್ತಿದ್ದಾರೆ. ನಾವು ಕೂಡ ಈಗ ಅದನ್ನೇ ಅನುಸರಿಸಲು ಮುಂದಾಗಿದ್ದೇವೆ.   ಪ್ರತಿ ವಲಯಕ್ಕೂ ತಲಾ ಎರಡು ಪಿ.ವಿ.ಸಿ.ಗನ್ ನೀಡಲಾಗಿದೆ. ಕಾಡಂಚಿನ ಜನರೂ ಇದೇ ಮಾದರಿಯ ಗನ್ ತಯಾರಿಸಿಕೊಂಡು ಬಳಸುವಂತೆ ಪ್ರಾತ್ಯಕ್ಷಿತೆ ನೀಡಲಾಗುತ್ತಿದೆ ಎಂದು  ಬಿ.ಆರ್.ಟಿ ಹುಲಿರಕ್ಷಿತಾರಣ್ಯದ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್ ಕುಮಾರ್ ತಿಳಿಸಿದ್ದಾರೆ

ಪಟಾಕಿ ಸಿಡಿಸುವಾಗ ಕೆಲವು ಅಪಾಯಗಳು ಉಂಟಾಗುವ ಸಾಧ್ಯತೆಗಳಿರುತ್ತವೆ.  ಆದರೆ,  ಈ ಪೈಪ್ ಗನ್ ನಿಂದ ಯಾವುದೇ  ರೀತಿಯ ಅಪಾಯ ಇರುವುದಿಲ್ಲ,  ಈ ಗನ್  ತಯಾರಿಸಲು ಕೇವಲ 350 ರೂಪಾಯಿ ಖರ್ಚಾಗುತ್ತದೆ. 150 ರೂಪಾಯಿಗೆ ಒಂದು ಕೆ.ಜಿ. ಕ್ಯಾಲ್ಸಿಯಂ ಕಾರ್ಬೈಡ್ ಸಿಗಲಿದ್ದು, ಇದನ್ನು ಮೂರು ತಿಂಗಳ ಕಾಲ ಬಳಸಬಹುದು ಎಂದರು.ಅರಣ್ಯ ಸಿಬ್ಬಂದಿ ಬಳಸುವ ಈ ಪಿವಿಸಿ ಪೈನ್ ಗನ್ ನೋಡಿದ ಚಾಮರಾಜನಗರದ  ತಾಲೂಕು ಚಂದಕವಾಡಿ ಗ್ರಾಮದ ರಾಮಶೆಟ್ಟಿ ಎಂಬ ರೈತ  ಇದೇ ರೀತಿಯ ಪೈನ್ ಗನ್ ತಯಾರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದ ಯಾವುದೇ ಅಪಾಯವಿಲ್ಲ, ಹಾನಿ ಕೂಡ ಆಗುವುದಿಲ್ಲ.  ಯಾರು  ಸುಲಭವಾಗಿ ಇದರ ಬಳಕೆ ಮಾಡಬಹುದು.  ಅರಣ್ಯ ಇಲಾಖೆ ಅಥವಾ ಇತರ ರೈತರು  ಕೇಳಿದರೆ ಅವರಿಗೆ ಅಗತ್ಯ ಇರುವಷ್ಟು ಪೈನ್ ಗನ್ ತಯಾರಿಸಿ ಒದಗಿಸಲು ಸಿದ್ದ ಎನ್ನುತ್ತಾರೆ ರಾಮಶೆಟ್ಟಿ.
Published by: Seema R
First published: October 17, 2020, 2:48 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading