ಬೆಂಗಳೂರು (ಅ.04): ಇತ್ತೀಚಿನ ದಿನಗಳಲ್ಲಿ ಜನರು ಮಾನವೀಯತೆಯನ್ನೇ (Humanity) ಮರೆತು ಹೋಗಿರುವಂತೆ ಕಾಣಿಸುತ್ತಿದೆ. ಮೂಕ ಪ್ರಾಣಿಗಳ ಮೇಲೆ ಅದ್ಯಾಕೆ ಮಾನವನಿಗೆ ಈ ಪರಿ ಸಿಟ್ಟು, ರಸ್ತೆಯಲ್ಲಿ ಮಲಗಿದ್ದ ನಾಯಿ (Dog) ಮೇಲೆ ಕಾರು ಹರಿಸೋದು, ಬೀದಿ ನಾಯಿಗೆ (Street Dog) ವಿಷ ಹಾಕಿ ಕೊಲ್ಲುವ ಜನರು (Pepole) ಕೂಡ ನಮ್ಮ ನಡುವೆ ಇದ್ದಾರೆ. ಇತ್ತೀಚಿಗೆ ಯುವಕನೋರ್ವ ನಾಯಿಯನ್ನು ಮನಸೋ ಇಚ್ಛೆ ಥಳಿಸಿರೋ ವಿಡಿಯೋ ವೈರಲ್ (Video Viral) ಆಗಿದೆ.
ದೊಣ್ಣೆಯಲ್ಲಿ ನಾಯಿಗೆ ಹೊಡೆದ ಸಹೋದರರು
ಈತ ನಾಯಿಗೆ ಹೊಡೆದಿರೋ ವಿಡಿಯೋ ನೋಡಿದ್ರೆ ನಿಜಕ್ಕೂ ಕಣ್ಣೀರು ಬರುತ್ತೆ. ತಾನು ಸಾಕಿದ ನಾಯಿಯನ್ನು ಪಕ್ಕದ ಮನೆಯ ನಾಯಿ ಕಚ್ಚಿದೆ ಎಂದು ಕೋಪಗೊಂಡ ಯುವಕ ನಾಯಿಯನ್ನು ಎಳೆದು ತಂದು ಕಟ್ಟಿ ಹಾಕಿ, ದೊಣ್ಣೆಗಳಿಂದ ಹಲ್ಲೆ ಮಾಡಿದ್ದಾನೆ. ಇದಕ್ಕೆ ಆತನ ಸಹೋದರ ಸಹ ಸಾಥ್ ನೀಡಿದ್ದಾನೆ.
ನಾಯಿಯನ್ನ ಮನಸ್ಸೊಯಿಚ್ಚೆ ಥಳಿಸಿ, ವಿಕೃತ ಮೆರೆದ ಯುವಕರು. ಮನೆಯಲ್ಲಿದ್ದ ನಾಯಿಯನ್ನು ಪಕ್ಕದ ಮನೆಯ ನಾಯಿ ಕಚ್ಚಿದೆ ಎಂದು ಥಳಿತ. ನಾಯಿಯನ್ನ ಕಟ್ಟಿಹಾಕಿ, ದೊಣ್ಣೆಗಳಿಂದ ಹಲ್ಲೆ ಮಾಡಿದ ಸಹೋದರರು. ಕೆಆರ್ ಪುರಂನ ಭಟ್ಟರಹಳ್ಳಿಯ ಮಂಜುನಾಥ್ ಲೇಔಟ್ನಲ್ಲಿ ತಡರಾತ್ರಿ ಘಟನೆ.ಲೋಹಿತ್ ಕುಮಾರ್ ಹಾಗೂ ಅವನ ಸಹೋದರ ನಿಂದ ಹಲ್ಲೆ pic.twitter.com/fHjMxbDfWW
— News18 Kannada (@News18Kannada) October 4, 2022
ಸಹೋದರರಿಬ್ಬರ ಮೃಗೀಯ ವರ್ತನೆ ಕಂಡು ಸ್ಥಳೀಯ ಜನರೇ ಬೆಚ್ಚಿಬಿದ್ದಿದ್ದಾರೆ. ಕೆ.ಆರ್ ಪುರಂನ ಭಟ್ಟರಹಳ್ಳಿಯ ಮಂಜುನಾಥ್ ಲೇಔಟ್ ನಲ್ಲಿ ತಡರಾತ್ರಿ ಈ ಘಟನೆ ನಡೆದಿದೆ. ಗದ್ದುಗಪ್ಪ ಎಂಬುವರಿಗೆ ಸೇರಿದ ನಾಯಿಗೆ ಹಲ್ಲೆ ಮಾಡಿ ಯುವಕರು ವಿಕೃತ ಮೆರೆದಿದ್ದಾರೆ.
ಲೋಹಿತ್ ಕುಮಾರ್ನನ್ನು ಬಂಧಿಸಿದ ಪೊಲೀಸರು
ಕೆ.ಆರ್ ಪುರಂನ ಭಟ್ಟರಹಳ್ಳಿಯ ಮಂಜುನಾಥ್ ಲೇಔಟ್ನ ಲೋಹಿತ್ ಕುಮಾರ್ ಹಾಗೂ ಅವನ ಸಹೋದರ ಸೇರಿ ಕೊಂಡು ನಾಯಿ ಮೇಲೆ ಹಲ್ಲೆ ನಡೆಸಿದ್ದಾರೆ. ನಾಯಿ ಮಾಲೀಕ ಗದ್ದಿಗಪ್ಪ ಅವರು ಕೆ.ಆರ್ ಪುರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಲೋಹಿತ್ ಕುಮಾರ್ನನ್ನು ಬಂಧಿಸಿದ್ದು, ಮತ್ತೊಬ್ಬ ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.
ಇದನ್ನೂ ಓದಿ: Buffalo: ಕಿತ್ತೋದ ಬಸ್ ನಿಲ್ದಾಣದ ಅದ್ಧೂರಿ ಉದ್ಘಾಟನೆ; ಚೀಫ್ ಗೆಸ್ಟ್ ಆಗಿ ಬಂದಿದ್ದು ಎಂಎಲ್ಎ ಅಲ್ಲ, ಎಮ್ಮೆ!
ತನ್ನನ್ನು ನೋಡಿ ಬೊಗಳಿದ ನಾಯಿಯನ್ನೇ ಕೊಂದ ನೀಚ!
ತನ್ನನ್ನು ನೋಡಿ ಬೊಗಳುತ್ತೆ ಅಂತ ನೀಚನೋರ್ವ ನಾಯಿಯನ್ನು ಕೊಲೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಮಾದಗೊಂಡನಹಳ್ಳಿಯಲ್ಲಿ ನಡೆದಿದೆ. ಕೃಷ್ಣಪ್ಪ ಎಂಬಾತನೇ ನಾಯಿಯನ್ನು ಕೊಂದ ನೀಚ. ಕೃಷ್ಣಪ್ಪ ಸಹ ಮಾದಗೊಂಡನಹಳ್ಳಿಯ ನಿವಾಸಿಯಾಗಿದ್ದಾನೆ. ಹರೀಶ್ ಎಂಬವರು ಈ ನಾಯಿಯನ್ನು ಸಾಕಿದ್ದರು. ನಾಯಿಗೆ ರಾಕಿ ಎಂದು ಹೆಸರಿಟ್ಟಿದ್ದರು.
ಯಾವಾಗಲೂ ತನನ್ನ ನೋಡಿ ಬೊಗಳುತ್ತದೆ ಮತ್ತು ಕಚ್ಚುತ್ತದೆ ಎಂದು ಹೇಳಿ ಏರ್ ಗನ್ನಿಂದ ಹೊಡೆದು ಕೃಷ್ಣಪ್ಪ ನಾಯಿಯನ್ನು ಕೊಂದಿದ್ದಾನೆ. ನಾಯಿ ಕೊಲೆ ಸಂಬಂಧ ಹರೀಶ್ ಅವರು ಕೃಷ್ಣಪ್ಪ ವಿರುದ್ಧ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: Tushar Girinath: ಬೊಮ್ಮನಹಳ್ಳಿ ವಲಯದಲ್ಲಿ ಸಮಸ್ಯೆಗಳೇನು? ಜನರ ಪ್ರಶ್ನೆ, ಮುಖ್ಯ ಆಯುಕ್ತರ ಉತ್ತರ
52,262 ಜನರಿಗೆ ಕಚ್ಚಿದ ಬೀದಿ ನಾಯಿಗಳು
2020ರಿಂದ ಇಲ್ಲಿಯವರೆಗೆ ಬಿಬಿಎಂಪಿ (Bruhat Bengaluru Mahanagara Palike- BBMP) ವ್ಯಾಪ್ತಿಯಲ್ಲಿ 52,262 ಜನರು ಬೀದಿ ನಾಯಿಗಳ (Street Dogs) ಕಡಿತಕ್ಕೆ ಒಳಗಾಗಿರುವ ಮಾಹಿತಿ ಪಾಲಿಕೆಯ ಸಮೀಕ್ಷೆಯಲ್ಲಿ (Survey) ಬಹಿರಂಗಗೊಂಡಿದೆ. ಈ ಸಂಬಂಧ ಬೀದಿ ಬದಿ ಶ್ವಾನಗಳ ಜನನ ನಿಯಂತ್ರಣದ ಕಾರ್ಯವನ್ನು ಕ್ಷಿಪ್ರಗತಿಯಲ್ಲಿ ನಡೆಸುವಂತೆ ಪಾಲಿಕೆ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಗೆ (AWBI- Animal Welfare Board of India) ಮನವಿ ಮಾಡಿಕೊಂಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ