ಸಹೋದರನ ವಿರುದ್ಧ ಸ್ಪರ್ಧೆಗಾಗಿ ಬಿಜೆಪಿ ಕದ ತಟ್ಟಿದ ಲಖನ್ ಜಾರಕಿಹೊಳಿ


Updated:March 15, 2018, 2:57 PM IST
ಸಹೋದರನ ವಿರುದ್ಧ ಸ್ಪರ್ಧೆಗಾಗಿ ಬಿಜೆಪಿ ಕದ ತಟ್ಟಿದ ಲಖನ್ ಜಾರಕಿಹೊಳಿ

Updated: March 15, 2018, 2:57 PM IST
ಚಂದ್ರಕಾಂತ್ ಸುಗಂಧಿ, ನ್ಯೂಸ್ 18 ಕನ್ನಡ

ಬೆಳಗಾವಿ(ಮಾ.15): ಜಾರಕಿಹೊಳಿ ಸಹೋದರರ ನುಡುವ ರಾಜಕೀಯ ತಿಕ್ಕಾಟ ಇದೀಗ ಕ್ಲೈಮಾಕ್ಸ್ ಹಂತಕ್ಕೆ ಬಂದು ತಲುಪಿದೆ. ಮಕನಮರಡಿ ಕ್ಷೇತ್ರದ ಶಾಸಕ ಹಾಗೂ ಎಐಸಿಸಿ ಕಾರ್ಯದರ್ಶಿ ಸತೀಶ ಜಾರಕಿಹೊಳಿ ವಿರುದ್ಧ ಸ್ಪರ್ಧೆಗೆ ಸಹೋದರ ಲಖನ ಜಾರಕಿಹೊಳಿ ಯತ್ನಿಸಿದ್ದರು. ಕಾಂಗ್ರೆಸ್ ಟಿಕೆಟ್ ನೀಡುವಂತೆ ಸಿಎಂ, ಕೆಪಿಸಿಸಿ ಅಧ್ಯಕ್ಷರನ್ನು ಭೇಟಿಯಾಗಿದ್ದರು. ಆದರೇ ಹಾಲಿ ಪ್ರಭಾವಿ ಶಾಸಕ ಸತೀಶ ಜಾರಕಿಹೊಳಿ ಕೈಬಿಟ್ಟು ಲಖನ ಜಾರಕಿಹೊಳಿಗೆ ಟಿಕೆಟ್ ನೀಡುವ ಬಗ್ಗೆ ಸೂಕ್ತ ಸ್ಪಂಧನೆ ಸಿಕ್ಕಿರಲಿಲ್ಲ. ಇದರಿಂದ ಬೇಸತ್ತ ಲಖನ್ ಜಾರಕಿಹೊಳಿ ಬಿಜೆಪಿ ಕದ ತಟ್ಟಿದ್ದಾರೆ.

ಈಗಾಗಲೇ ಬೆಳಗಾವಿ ಜಿಲ್ಲೆಯ ಮಾಜಿ ಸಚಿವರೊಬ್ಬರ ಮೂಲಕ ಬಿಜೆಪಿ ಸೇರ್ಪಡೆಗೆ ಯತ್ನ ನಡೆಸಿದ್ದು. ವರಿಷ್ಠರು ಸಹ ಲಖನ್ ಜಾರಕಿಹೊಳಿ ಬಿಜೆಪಿ ಸೇರ್ಪಡೆಗೆ ಒಪ್ಪಿಗೆ ಸೂಚಿಸಿದ್ದಾರೆ. ಇದೀಗ ಬಿಜೆಪಿ ಸೇರ್ಪಡೆಗೆ ದಿನಾಂಕವೊಂದೆ ಬಾಕಿ ಉಳಿದಿದ್ದು, ಶೀಘ್ರದಲ್ಲಿಯೇ ನಿರ್ಣಯವಾಗಲಿದೆ. ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಲಖನ್ ಜಾರಕಿಹೊಳಿ ಸ್ಪಷ್ಟನೆ ನೀಡಿದ್ದಾರೆ.

ಇನ್ನೂ ಲಖನ್ ಜಾರಕಿಹೊಳಿ ಬಿಜೆಪಿ ಸೇರ್ಪಡೆಗೊಂಡು ಸಹೋದರ ಸತೀಶ್ ಜಾರಕಿಹೊಳಿ ವಿರುದ್ಧ ಯಮಕನಮರಡಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲಿದ್ದಾರೆ. ಈಗಾಗಲೇ ಕ್ಷೇತ್ರಾದ್ಯಂತ ಹಲವು ಸುತ್ತಿನ ಪ್ರವಾಸ ನಡೆಸಿ ಕಾರ್ಯಕರ್ತರ ಜತೆಗೆ ಲಖನ ಜಾರಕಿಹೊಳಿ ನಿರಂತರ ಸಂಪರ್ಕದಲ್ಲಿದ್ದಾರೆ. ಈ ಬಾರಿ ಸತೀಶ್ ಜಾರಕಿಹೊಳಿ ವಿರುದ್ಧ ಲಖನ್ ಜಾರಕಿಹೊಳಿ ಸ್ಪರ್ಧೆಯಿಂದ ಕ್ಷೇತ್ರ ಚುನಾವಣಾ ಕಣ ರಂಗೇರಲಿದೆ. ಈಗಾಗಲೇ ಮೂರು ಜನ ಜಾರಕಿಹೊಳಿ ಸಹೋದರರು ಶಾಸಕರಾಗಿ ಆಯ್ಕೆಯಾಗಿದ್ದ ಇದೀನ ನಾಲ್ಕನೇ ಸಹೋದರ ಸಹ ಸಕ್ರೀಯ ರಾಜಕಾರಣಕ್ಕೆ ಬರಲಿದ್ದಾರೆ.
First published:March 15, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...