ಟೆಂಡರ್ ವಿಚಾರವಾಗಿ ಗಲಾಟೆ; ಲಾಂಗ್ ಹಿಡಿದು ಬೆದರಿಕೆ ಹಾಕಿದ ಕೋಲಾರ ಗ್ರಾಮ ಪಂಚಾಯಿತಿ ಸದಸ್ಯನ ಸಹೋದರ!

ಸಂತೋಷ್ ಲಾಂಗ್ ಹಿಡಿದು ಗ್ರಾಮದ ರಸ್ತೆಗಳಲ್ಲಿ ಒಡಾಡಿದ ಪೋಟೋಗಳು ಇದೀಗ ಜಿಲ್ಲೆಯಾದ್ಯಂತ ವೈರಲ್ ಆಗಿದ್ದು, ಬಂಗಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

MAshok Kumar | news18-kannada
Updated:September 12, 2019, 9:12 AM IST
ಟೆಂಡರ್ ವಿಚಾರವಾಗಿ ಗಲಾಟೆ; ಲಾಂಗ್ ಹಿಡಿದು ಬೆದರಿಕೆ ಹಾಕಿದ ಕೋಲಾರ ಗ್ರಾಮ ಪಂಚಾಯಿತಿ ಸದಸ್ಯನ ಸಹೋದರ!
ಕೈಯಲ್ಲಿ ಲಾಂಗ್ ಹಿಡಿದು ಓಡಾಡಿದ ಸಂತೋಷ್​ ರೆಡ್ಡಿ
MAshok Kumar | news18-kannada
Updated: September 12, 2019, 9:12 AM IST
ಕೋಲಾರ (ಸೆಪ್ಟೆಂಬರ್.12); ಟೆಂಡರ್ ವಿಚಾರವಾಗಿ ಉಂಟಾದ ಗಲಾಟೆಯ ಸಲುವಾಗಿ ವ್ಯಕ್ತಿಯೊಬ್ಬ ಲಾಂಗ್ ಹಿಡಿದು ಗ್ರಾಮದ ರಸ್ತೆಗಳಲ್ಲಿ ಓಡಾಡಿ ಕೊಲೆ ಬೆದರಿಕೆ ಹಾಕಿ ಜನರಲ್ಲಿ ಭಯದ ವಾತಾವರಣ ಉಂಟು ಮಾಡಿದ ಘಟನೆ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಸಕ್ಕನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಲಾಂಗ್ ಹಿಡಿದು ಊರೆಲ್ಲಾ ಓಡಾಡಿ ಕೊಲೆ ಬೆದರಿಕೆ ಹಾಕಿದ ವ್ಯಕ್ತಿಯನ್ನು ಸಂತೋಷ್ ರೆಡ್ಡಿ ಎಂದು ಗುರುತಿಸಲಾಗಿದ್ದು, ಈತ ಇದೇ ಊರಿನ ಮಾಗೊಂದಿ ಗ್ರಾಮ ಪಂಚಾಯಿತಿ ಸದಸ್ಯನ ಖಾಸಾ ಸಹೋದರ ಎಂದು ಹೇಳಲಾಗುತ್ತಿದೆ.

ಸಂತೋಷ್ ರೆಡ್ಡಿ ಹಾಗೂ ಇದೇ ಊರಿಗೆ ಸೇರಿದ ಕುಪೇಂದ್ರ ಎನ್ನುವವರ ನಡುವೆ ಟೆಂಡರ್ ವಿಚಾರವಾಗಿ ಹಲವು ದಿನಗಳಿಂದ ವೈಮನಸ್ಯ ಇದೆ. ಕೆಲ ದಿನಗಳ ಹಿಂದೆ ಸಂತೋಷ್ ಇದೇ ವಿಚಾರವಾಗಿ ಕುಪೇಂದ್ರ ಅವರ ಬಳಿ ಗಲಾಟೆ ಮಾಡಿಕೊಂಡಿದ್ದ ಅಲ್ಲದೆ, ಕೊಲೆ ಬೆದರಿಕೆ ಹಾಕಿದ್ದ. ಆದರೆ, ಇಂದು ಕೈಯಲ್ಲಿ ಲಾಂಗ್ ಹಿಡಿದು ಕುಪೇಂದ್ರ ಅವರನ್ನು ಹುಡುಕುತ್ತಾ ಊರೆಲ್ಲಾ ಓಡಾಡುವ ಮೂಲಕ ಇಡೀ ಗ್ರಾಮದಾದ್ಯಂತ ಭಯದ ವಾತಾರಣ ಉಂಟು ಮಾಡಿದ್ದಾರೆ.

ಸಂತೋಷ್ ಲಾಂಗ್ ಹಿಡಿದು ಗ್ರಾಮದ ರಸ್ತೆಗಳಲ್ಲಿ ಒಡಾಡಿದ ಪೋಟೋಗಳು ಇದೀಗ ಜಿಲ್ಲೆಯಾದ್ಯಂತ ವೈರಲ್ ಆಗಿದ್ದು, ಬಂಗಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಆರ್​ಎಸ್​ಎಸ್​ ಮಾದರಿ ಪಕ್ಷ ಕಟ್ಟಲು ಮುಂದಾದ ಕಾಂಗ್ರೆಸ್, ಗಾಂಧಿ ಜಯಂತಿಯಿಂದ ಕಾರ್ಯಾರಂಭ; ಇಂದಿನ ಸಭೆಯಲ್ಲಿ ಚರ್ಚೆ

First published:September 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...