• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Congress ಕಥೆ ಈಗ ಮುಂಡಾಸು ಇಲ್ಲದಿರೋ ಮದುಮಗನ ಥರ ಆಗಿದೆ; ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ ಕಿಡಿ

Congress ಕಥೆ ಈಗ ಮುಂಡಾಸು ಇಲ್ಲದಿರೋ ಮದುಮಗನ ಥರ ಆಗಿದೆ; ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ ಕಿಡಿ

ಸಿದ್ಗರಾಮಯ್ಯ, ಮಾಜಿ ಸಿಎಂ

ಸಿದ್ಗರಾಮಯ್ಯ, ಮಾಜಿ ಸಿಎಂ

ದುಡ್ಡು ಕೊಟ್ಟು ಜನರನ್ನು ಕರೆದು ತರುವುದು, ಅವರಿಗೆಲ್ಲ ಬಿಟ್ಟಿ ಬಿಟ್ಟಿ ಭಾಗ್ಯ ಘೋಷಣೆ ಮಾಡುವುದು. ಆ ಕಡೆ ಅದೂ ಇಲ್ಲ, ಈ ಕಡೆ ಇದೂ ಇಲ್ಲ. ಕಾಂಗ್ರೆಸ್ ಕಥೆ ಈಗ ಮುಂಡಾಸು ಇಲ್ಲದಿರೋ ಮದುಮಗನ ಥರ ಆಗಿದೆ ಎಂದು ಬರೆದು ಬಿಜೆಪಿ ಟ್ವೀಟ್ ಮಾಡಿದೆ.

  • Share this:

ಬೆಂಗಳೂರು: ಬೆಳಗಾವಿಯ ಪ್ರಜಾಧ್ವನಿ ಸಮಾವೇಶ (Prajadhwani Rally) ಮುಗಿಸಿ ವಾಪಸ್ ಆಗ್ತಿದ್ದಾಗ ಮಾಜಿ ಸಿಎಂ ಸಿದ್ದರಾಮಯ್ಯ (Former CM Siddaramaiah) ಮಾತಾಡಿರುವ ವಿಡಿಯೋ ವೈರಲ್ (Video Viral)​ ಆಗಿದೆ. ಸಮಾವೇಶಕ್ಕೆ ಪ್ರತಿಯೊಬ್ಬರಿಗೆ 500 ರೂ. ಕೊಟ್ಟು ಕರ್ಕೊಂಡು ಬರಬೇಕು. ಬಿಜೆಪಿಯವರು (BJP) ಕರ್ಕೊಂಡ್​ ಬರ್ತಾರೆ. ನಾವು ಜನರನ್ನ ಸೇರಿಸಬೇಕು ಅಂತಾ ಪ್ರಜಾಧ್ವನಿ ಯಾತ್ರೆ ಬಸ್​ನಲ್ಲಿ ಸಿದ್ದರಾಮಯ್ಯ ಆಡಿದ ಮಾತು ವೈರಲ್  ವೈರಲ್ ಆಗಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್​ ಜಾರಕಿಹೊಳಿ (Satish Jarkiholi), ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್​ಗೆ (MLA Laxmi Hebbalkar) ಸಿದ್ದರಾಮಯ್ಯ ಸೂಚನೆ ಕೊಟ್ಟಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋನವನ್ನು ಟ್ವಿಟ್ಟರ್​ನಲ್ಲಿ ಹಂಚಿಕೊಂಡಿರುವ ಬಿಜೆಪಿ, ಭ್ರಷ್ಟ ಕಾಂಗ್ರೆಸ್ ಎಂದು ವಾಗ್ದಾಳಿ ನಡೆಸಿದೆ.


ದುಡ್ಡು ಕೊಟ್ಟು ಜನರನ್ನು ಕರೆದು ತರುವುದು, ಅವರಿಗೆಲ್ಲ ಬಿಟ್ಟಿ ಬಿಟ್ಟಿ ಭಾಗ್ಯ ಘೋಷಣೆ ಮಾಡುವುದು. ಆ ಕಡೆ ಅದೂ ಇಲ್ಲ, ಈ ಕಡೆ ಇದೂ ಇಲ್ಲ. ಕಾಂಗ್ರೆಸ್ ಕಥೆ ಈಗ ಮುಂಡಾಸು ಇಲ್ಲದಿರೋ ಮದುಮಗನ ಥರ ಆಗಿದೆ ಎಂದು ಬರೆದು ಬಿಜೆಪಿ ಟ್ವೀಟ್ ಮಾಡಿದೆ.


ಸಿದ್ದರಾಮಯ್ಯ ವಾಸ್ತವ್ಯವಿದ್ದ ಹೋಟೆಲ್ ಮುಂದೆ ಪ್ರತಿಭಟನೆ


ಸಿದ್ದರಾಮಯ್ಯ ಬೆಳಗಾವಿ ಬಂದಾಗಲೇ ರಾಮದುರ್ಗ ಕಾಂಗ್ರೆಸ್​ನಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ರಾಮದುರ್ಗ ವಿಧಾನಸಭಾ ಕ್ಷೇತ್ರದಿಂದ ಚಿಕ್ಕರೇವಣ್ಣಗೆ ಟಿಕೆಟ್ ನೀಡುವಂತೆ ಅಭಿಮಾನಿಗಳು ಪಟ್ಟು ಹಿಡಿದ್ರು. ಬೆಳಗಾವಿಯಲ್ಲಿ ಸಿದ್ದರಾಮಯ್ಯ ವಾಸ್ತವ್ಯ ಹೂಡಿದ ಖಾಸಗಿ ಹೋಟೆಲ್ ಮುಂದೆ ಅರ್ಧ ಗಂಟೆಗಳ ಕಾಲ ಬೆಂಬಲಿಗರು ಹೈಡ್ರಾಮಾ ನಡೆಸಿದರು.


ಚಿಕ್ಕರೇವಣ್ಣಗೆ ಟಿಕೆಟ್ ಘೋಷಣೆ ಮಾಡಲೇಬೇಕೆಂದು ಪಟ್ಟು ಹಿಡಿದು ಬೆಂಬಲಿಗರು ಪ್ರತಿಭಟನೆ ನಡೆಸಿದರು. ಕಳೆದ ಎರಡು ದಿನಗಳ ಹಿಂದೆ ಸಿದ್ದರಾಮಯ್ಯ ರಾಮದುರ್ಗ ಟಿಕೆಟ್ ಆಕಾಂಕ್ಷಿಗಳ ಸಭೆ ನಡೆಸಿದ್ದರು.


ಬೆಂಬಲಿಗರನ್ನು ಕಳುಹಿಸಿ ಹೈಡ್ರಾಮಾ


ಚಿಕ್ಕರೇವಣ್ಣಗೆ ಮನವೂಲಿಸಿ ಅಶೋಕ್ ಪಟ್ಟಣ್​ ಸ್ಪರ್ಧೆ ಮಾಡುತ್ತಾರೆಂದು ಘೋಷಣೆ ಮಾಡಿದ್ದರು. ಇದಕ್ಕೆ ಚಿಕ್ಕರೇವಣ್ಣ ಸಹ ಸಿದ್ದರಾಮಯ್ಯ ಮಾತಿಗೆ ಒಪ್ಪಿಗೆ ಸೂಚಿಸಿದ್ದರು.


ಇದೀಗ ಮತ್ತೆ ಉಲ್ಟಾ ಹೊಡೆದ ಚಿಕ್ಕರೇವಣ್ಣ ಬೆಂಬಲಿಗರನ್ನ ಕಳುಹಿಸಿ ಹೈಡ್ರಾಮಾ ನಡೆಸಿದ್ದಾರೆ. ಬೆಳಗ್ಗೆ ಭೇಟಿಯಾಗುತ್ತೇನೆ ಅಂತಾ ಹೇಳಿ ಸಿದ್ದರಾಮಯ್ಯ ಪ್ರತಿಭಟನಾಕಾರರನ್ನು ಕಳುಹಿಸಿದ್ದು, ಬಂದ ದಾರಿಗೆ ಸುಂಕ ಇಲ್ಲ ಎನ್ನುವಂತೆ ಚಿಕ್ಕರೇವಣ್ಣ ಬೆಂಬಲಿಗರು ವಾಪಸ್ ಆದರು.



ಜೆಡಿಎಸ್​ನ ಮತ್ತೊಂದು ವಿಕೆಟ್​ ಪತನ


ಅರಸೀಕೆರೆ ತೋಟದ ಮನೆಯಲ್ಲಿ ಬೆಂಬಲಿಗರ ಜೊತೆ ಶಾಸಕ ಶಿವಲಿಂಗೇಗೌಡ (JDS MLA Shivalingegowda) ಸಭೆ ನಡೆಸಿದ್ದಾರೆ. ಶಿವಲಿಂಗೇಗೌಡ ಕಾಂಗ್ರೆಸ್​​ ಸೇರಲು ಸಾವಿರಾರು ಬೆಂಬಲಿಗರನ್ನ ಕರೆದು ಸಭೆ ನಡೆಸಿ ಅಭಿಪ್ರಾಯ ಕೇಳಿದ್ದಾರೆ.




ನನ್ನನ್ನ ಕೂಡ ಜಿಟಿ ದೇವೇಗೌಡರಂತೆ ರಾಜಿ ಮಾಡಿಸಬಹುದಿತ್ತು. ಆದ್ರೆ ನನ್ನೊಟ್ಟಿಗೆ ಗುರುತಿಸಿಕೊಂಡ ಎಲ್ಲರನ್ನು ಪಕ್ಷದಿಂದ ತೆಗೆದರು. ಅವರೇ ನಮ್ಮನ್ನ ಬೆತ್ತಲೆ ಮಾಡೋಕೆ ನೋಡಿದ್ರು ಅಂತ JDS ಮೇಲೆ ವಾಗ್ದಾಳಿ ನಡೆಸಿದ್ದಾರೆ.




ಇನ್ನು  ಬೆಂಬಲಿಗರು ಶಿವಲಿಂಗೇಗೌಡರಿಗೆ ಕಾಂಗ್ರೆಸ್​ ಸೇರ್ಪಡೆಗೆ ಹಸಿರುನಿಶಾನೆ ತೋರಿಸಿದ್ದಾರೆ. ಮಾರ್ಚ್ 5ಕ್ಕೆ ಅರಸೀಕೆರೆಗೆ ಸಿದ್ದರಾಮಯ್ಯ ಬಂದಾಗ ಪಕ್ಷ ಸೇರ್ಪಡೆ ಸಾಧ್ಯತೆ ಇದೆ.


ಇದನ್ನೂ ಓದಿ:  Karnataka Election 2023: ಡಿಕೆಶಿ ಸೈಲೆಂಟ್​ ಆಪರೇಷನ್! ಹಾಸನ ಜೆಡಿಎಸ್​​ಗೆ ಶಾಕ್​ ಕೊಡ್ತಾರಾ DKS? HDK ಕೆಂಡಾಮಂಡಲ


ರೈತರ ಮಕ್ಕಳಿಗೆ ಇ.ಡಿ ನೋಟಿಸ್​​ ಕೊಟ್ಟಿರುವುದನ್ನು ನೋಡಿದ್ದೀರಾ?


ಜೆಡಿಎಸ್‌ ಮನೆಯಲ್ಲಿ ಹಾಸನ ಟಿಕೆಟ್ ಕಿಚ್ಚು ಧಗಧಗಿಸುತ್ತಿದೆ. ಸ್ವರೂಪ್‌ಗೆ ಟಿಕೆಟ್‌ ಕೊಡಲು ಹೆಚ್​ಡಿ ಕುಮಾರಸ್ವಾಮಿ ಪಣತೊಟ್ಟಿದ್ದಾರೆ. ಮತ್ತೊಂದೆಡೆ ಭವಾನಿಗೆ ಟಿಕೆಟ್‌ ಬೇಕು ಎಂದು ಹೆಚ್​ಡಿ ರೇವಣ್ಣ ಜಿದ್ದಿಗೆ ಬಿದ್ದಿದ್ದು ಟಿಕೆಟ್‌ ಗುದ್ದಾಟ ಪ್ರತಿಷ್ಠೆ ಯುದ್ಧವಾಗಿ ಬದಲಾಗಿದೆ. ಇದರ ಮಧ್ಯೆ ಡಿ.ಕೆ.ಶಿವಕುಮಾರ್ ಆಪರೇಷನ್ ಹಸ್ತಕ್ಕೆ ಕೈ ಹಾಕಿರುವುದು ಜೆಡಿಎಸ್​​ಗೆ ಅದರಲ್ಲೂ ಕುಮಾರಸ್ವಾಮಿಗೆ ನುಂಗಲಾರದ ತುತ್ತಾಗಿದೆ.

Published by:Mahmadrafik K
First published: