ಬಾಗಲಕೋಟೆ: ಒಬ್ಬ ಹಿಂದೂ (Hindu), ಭಾರೀ ಕಟ್ಟರ್ ಹಿಂದೂ ಆದ್ರೆ ರಾಮ ರಾಜ್ಯ ಕೊಡುತ್ತಾನೆ. ಟಿಪ್ಪು ಸುಲ್ತಾನ್ (Tipu Sultna) ಅಂತಹವರು ಮೂರುವರೆ ದೇವಸ್ಥಾನ ಕೆಡವಿ ಹಾಕಿ, ಲಕ್ಷಾಂತರ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಮಾಡಿದ. ಲಕ್ಷಾಂತರ ಜನರನ್ನು ಮತಾಂತರ ಮಾಡಿದ ಎಂದು ಬಾಗಲಕೋಟೆಯಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagowda Patil Yatnal) ಹೇಳಿದರು. ಶಿವಾಜಿ ಮಹಾರಾಜರ (Chatrapati Shivaji Maharaj) ಬಗ್ಗೆ ಮಾತನಾಡಿದ್ರೆ ಕೆಲವರಿಗೆ ನೋವು ಆಗುತ್ತದೆ. ನಮ್ಮಲ್ಲಿ ಕೆಲವರು ಟಿಪ್ಪುವಿಗೆ ಹುಟ್ಟಿದಂಗೆ ಮಾತನಾಡುತ್ತಾರೆ. ನಾ ಹಿಂದೂ ಅಂತ ಹಿಂದುತ್ವ ಒಪ್ಪಂಗಿಲ್ಲಂತ. ನಾನು ಅಪ್ಪಗ ಹುಟ್ಟಿನಿ, ಆದರ ಗ್ಯಾರಂಟಿ ಇಲ್ಲ ಅಂತೆ ಎಂದು ಪರೋಕ್ಷವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಛತ್ರಪತಿ ಶಿವಾಜಿ ಮಹಾರಾಜ ಸಮುದಾಯಕ್ಕಾಗಿ ಮರಾಠಾ ಅಭಿವೃದ್ಧಿ ಪ್ರಾಧಿಕಾರ ಮಾಡಲಾಯ್ತು. ಇಲ್ಲಿ ಟಿಪ್ಪು ಸುಲ್ತಾನ್ ಗೆ ಹುಟ್ಟಿದಂತ ಕೆಲವರು ಇದನ್ನು ವಿರೋಧ ಮಾಡಿದರು. ಛತ್ರಪತಿ ಶಿವಾಜಿ ಹುಟ್ಟದೇ ಇದ್ರೆ ಮಕ್ಕಳ, ನಾವು ಇಲ್ಲಿ ಕೂತಂತಹ 224 ಜನ ನೀವ್ಯಾರು ಹಿಂದೂಗಳಾಗಿ ಇರುತ್ತಿರಲಿಲ್ಲ. ನೀವು ಗಡ್ಡ ಬಿಟ್ಗೊಂಡ ಪಾಕಿಸ್ತಾನ ಸೆಷನ್ ನಲ್ಲಿ ಕೂತಿರುವಂತೆ ಕುಳಿತಕೊಳ್ಳುತ್ತಿದ್ದೀರಿ ಎಂದು ಬೆಳಗಾವಿ ಅಧಿವೇಶನದಲ್ಲಿ ಹೇಳಿದರು.
ಶಿವಾಜಿ ಮೂರ್ತಿಗೆ ರಾತ್ರಿ ಕಪ್ಪು ಮಸಿ ಹಚ್ಚಿದ್ದರು. ಟಿಪ್ಪು ಸುಲ್ತಾನ್ ನನ್ನೇಕೆ ಹೊಗಳ್ತಾರಾ? ಯಾರೂ ಅಪಮಾನದ ಬಗ್ಗೆ ಮಾತನಾಡೋದಿಲ್ಲ. ಭಾರತದಲ್ಲಿ ಕ್ಷತ್ರೀಯರು ಇದ್ದಾರೆನ್ನುವ ಕಾರಣಕ್ಕೆ ಹಿಂದು ಸಮಾಜ ಉಳಿದಿದೆ ಎಂದು ಶಾಸಕ ಯತ್ನಾಳ್ ಹೇಳಿದರು.
ಮೋದಿಗೆ ದಿಕ್ಕಾರ ಅಂತಾರೆ
ಪಾಕಿಸ್ತಾನದಲ್ಲಿ 100 ಸಾವಿರ ರೂಪಾಯಿ ಸಿಲಿಂಡರ್ ಆಗಿದೆ. ನಮ್ಮಲ್ಲಿ 100 ರೂಪಾಯಿ ಹೆಚ್ಚಾದ್ರೆ ಮೋದಿ ಕಾರಣ ಅಂತಾರೆ. 10 ರೂಪಾಯಿ ಪೆಟ್ರೋಲ್ ಹೆಚ್ಚಾದ್ರೆ ದಿಕ್ಕಾರ, ದಿಕ್ಕಾರ ಮೋದಿಗೆ ದಿಕ್ಕಾರೆ ಅಂತಾರೆ. ಹೋಗ್ರಾಪ್ಪಾ ಮಕ್ಕಳ ಹೋಗ್ರಿ, ಪಾಕಿಸ್ತಾನಕ್ಕೆ ಹೋಗಿ ಇರಿ ಎಂದು ವಿರೋಧಿಗಳಿಗೆ ಟಾಂಗ್ ನೀಡಿದರು.
ಎಲ್ಲರೂ ಪಾಕಿಸ್ತಾನಕ್ಕೆ ಗುಳೆ ಹೋಗಿ
ನಮ್ಮ ಗಾಂಧಿ ಮುತ್ಯಾ ಪಾಕಿಸ್ತಾನ ಮಾಡಿ ಕೊಟ್ಟಾನಲ್ಲ.ಹೋಗ್ರಿ ಮಕ್ಕಳ ಎಲ್ಲಾರೂ ಗುಳೆ ಹೋಗಿ. ಒಂದು ಕಡೆಯಿಂದ ಹೋಗಿ ಪಾಕಿಸ್ತಾನದಲ್ಲಿರಿ. ಇಲ್ಲಿ ನಾವೆಲ್ಲಾ ಹಿಂದೂಗಳು ಆರಾಮಾಗಿ ಇರುತ್ತೇವೆ. ಪಾಕಿಸ್ತಾನ ಒಡೆಯಬೇಡಿ ಎಂದು ಅಂದು ಅಂಬೇಡ್ಕರ್ ಹೇಳಿದ್ದರು. ಆದರೂ ಇಬ್ಭಾಗ ಮಾಡಲಾಯ್ತು. ಅಲ್ಲಿಯ ಹಿಂದೂಗಳನ್ನೆಲ್ಲಾ ಭಾರತಕ್ಕೆ ಕರೆದುಕೊಂಡು ಬನ್ನಿ ಎಂದು ಹೇಳಿದರು.
ಘರ್ ಘರ್ ಮೇ ಶಿವಾಜಿ ಹೈ, ಘರ್ ಮೆ ಮಹಾರಾಣಾ ಪ್ರತಾಪ ಪೈದಾ ಹೋ ರಹೆ ಹೈ ಹಿಂದುಸ್ತಾನ್ ಮೆ, ಪ್ರಧಾನ ಮಂತ್ರಿ ಮೋದಿ , ಛತ್ರಪತಿ ಶಿವಾಜಿ ಕಾ ಅವತಾರ್ ಹೈ ಎಂದು ಯತ್ನಾಳ್ ಘೋಷಣೆ ಕೂಗಿದರು.
ನಡ್ಡಾಗೆ ಶ್ರೀಗಳ ಹತ್ತಾರು ಬೇಡಿಕೆ
ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ (BJP President JP Nadda) ಕರ್ನಾಟಕ ಪ್ರವಾಸದಲ್ಲಿದ್ದಾರೆ. ಇಂದು ಉಡುಪಿ ಶ್ರೀಕೃಷ್ಣ ಮಠಕ್ಕೆ ಜೆಪಿ ನಡ್ಡಾ ಭೇಟಿ ಕೊಟ್ರು. ಇದೇ ಸಂದರ್ಭದಲ್ಲಿ ಜೆ.ಪಿ ನಡ್ಡಾಗೆ ಕರಾವಳಿಯ ಸ್ವಾಮೀಜಿಗಳು ಕೆಲವು ಬೇಡಿಕೆಗಳನ್ನಿಟ್ಟರು.
ಇದನ್ನೂ ಓದಿ: Rohini Sindhuri Vs D Roopa: ಇದನ್ನೆಲ್ಲಾ ಸುಮ್ನೆ ಬಿಡಲ್ಲ ಎಂದ ರೋಹಿಣಿ ಸಿಂಧೂರಿ; ಇತ್ತ ದೂರು ದಾಖಲಿಸಿದ ಸುಧೀರ್ ರೆಡ್ಡಿ
ಬಳಿಕ ಮಾತಾಡಿದ ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಸನಾತನ ಧರ್ಮ ಸಂಸ್ಕೃತಿಗಳಿಗೆ ಸದಾ ಮನ್ನಣೆ ನೀಡಬೇಕು. ರಾಜ್ಯದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಗೆ ಕ್ರಮ ಕೈಗೊಳ್ಳಿ. ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ಆದ್ಯತೆ ನೀಡಿ. ಕರಾವಳಿಯ ಸಮೃದ್ಧ ಪ್ರಾಕೃತಿಕ ಮತ್ತು ಸಾಂಸ್ಕೃತಿಕ ಧಾರ್ಮಿಕ ಸಂಪನ್ಮೂಲಗಳಿಗೆ ಹಾನಿಯಾಗಬಾರದು. ತುಳು ಭಾಷೆಗೆ ಸೂಕ್ತ ಮಾನ್ಯತೆ ನೀಡಿ ಎಂದು ಮನವಿ ಮಾಡಿದ್ದೇವೆ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ