• Home
 • »
 • News
 • »
 • state
 • »
 • Political sex tapes in Karnataka | ರಾಜ್ಯ ರಾಜಕಾರಣದಲ್ಲಿ ಕಾಮ ಪ್ರಸಂಗದ ಪ್ರಕರಣಗಳು!

Political sex tapes in Karnataka | ರಾಜ್ಯ ರಾಜಕಾರಣದಲ್ಲಿ ಕಾಮ ಪ್ರಸಂಗದ ಪ್ರಕರಣಗಳು!

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

Political sex tapes in Karnataka | ರಾಜ್ಯದಲ್ಲಿ ಈವರೆಗೆ ಹಲವು ರಾಜಕಾರಣಿಗಳು ಸೆಕ್ಸ್ ವಿವಾದಗಗಳಲ್ಲಿ ಸಿಲುಕಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಲವು ಉದಾಹರಣೆಗಳು ನಮ್ಮ ಮುಂದಿವೆ. ಅವುಗಳಲ್ಲಿ ಪ್ರಮುಖವಾದ ಪ್ರಕರಣಗಳ ವಿವರ ಇಲ್ಲಿದೆ.

 • Share this:

  ಸೂರ್ಯ ಮುಳುಗಿದ ನಂತರ ವಿಸ್ಕಿ ಮತ್ತು ಮಹಿಳೆಯರು ನನ್ನ ದೌರ್ಬಲ್ಯಗಳು ಎಂದು ಅಂದಿನ ಮುಖ್ಯಮಂತ್ರಿ ಜೆಎಚ್ ಪಟೇಲ್ (JH Patel) ಅವರು ನೇರವಾಗಿ ಹೇಳಿದ್ದರು. ಸಿನಿಮಾ ನಟಿಯರು ಸೇರಿದಂತೆ ಹಲವು ಮಹಿಳೆಯರೊಂದಿಗೆ ಜೆ.ಎಚ್.ಪಟೇಲ್ ಅವರಿಗೆ ಸಂಬಂಧವಿದೆ ಎಂದು ಸುದ್ದಿಯಾದಾಗ ಪಟೇಲ್ ಹೀಗೆ ಮುಕ್ತವಾಗಿ ತಮ್ಮ ದೌರ್ಬಲ್ಯದ ಬಗ್ಗೆ ಹೇಳಿಕೊಂಡಿದ್ದರು. ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ರಾಜಕಾರಣಿಗಳು ಎಸಗದ ಆರೋಪಗಳಿಲ್ಲಾ. ಭ್ರಷ್ಟಾಚಾರ, ಕೊಲೆ ಆರೋಪ, ಅವ್ಯವಹಾರ, ಮೋಸ ಇವುಗಳ ಜೊತೆಗೆ ಸೆಕ್ಸ್ ಹಗರಣಗಳು ನಿರಂತರವಾಗಿ ರಾಜಕಾರಣಿಗಳ ಮೇಲೆ ಕೇಳಿಬರುತ್ತಲೇ ಇವೆ. ರಾಜಕಾರಣಿಗಳ ಸೆಕ್ಸ್ ಹಗರಣಗಳಿಗೆ ಅಂತ್ಯವೇ ಇಲ್ಲ ಎಂಬಂತೆ ಒಬ್ಬರಾದ ಮೇಲೆ ಒಬ್ಬರಂತೆ ಹೊಸ ಹೊಸ ಪ್ರಕರಣಗಳು ಕೇಳಿಬರುತ್ತಲೇ ಇವೆ. ಮೈತ್ರಿ ಸರ್ಕಾರ ಪತನಕ್ಕೆ ಕಾರಣವಾಗಿ ಬಿಜೆಪಿ ಸರ್ಕಾರ ರಚನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದ ಹಾಲಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರ ಸಿಡಿ ಪ್ರಕರಣ ರಾಜ್ಯದಲ್ಲಿ ಭಾರೀ ಸದ್ದು ಮಾಡುತ್ತಿದೆ. ಸಿಡಿ ಬಹಿರಂಗಗೊಂಡ ಬೆನ್ನಲ್ಲೇ ರಮೇಶ್ ಜಾರಕಿಹೊಳಿ (Ramesh Jarkiholi) ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಹ ನೀಡಿದ್ದಾರೆ. ರಾಜ್ಯದಲ್ಲಿ ಈವರೆಗೆ ಹಲವು ರಾಜಕಾರಣಿಗಳು ಸೆಕ್ಸ್ ವಿವಾದಗಗಳಲ್ಲಿ ಸಿಲುಕಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಲವು ಉದಾಹರಣೆಗಳು ನಮ್ಮ ಮುಂದಿವೆ. ಅವುಗಳಲ್ಲಿ ಪ್ರಮುಖವಾದ ಪ್ರಕರಣಗಳ ವಿವರ ಇಲ್ಲಿದೆ.


  ರೇಣುಕಾಚಾರ್ಯ  


  2010ರಲ್ಲಿ ಸಚಿವರಾಗಿದ್ದ ಎಂಪಿ ರೇಣುಕಾಚಾರ್ಯ ಹಾಗೂ ನರ್ಸ್ ಜಯಲಕ್ಷ್ಮೀ ನಡುವಿನ ಸಂಬಂಧ ಭಾರೀ ದೊಡ್ಡ ಸದ್ದು ಮಾಡಿತ್ತು. ಇವರಿಬ್ಬರು ಜೊತೆಗಿದ್ದ ಅಶ್ಲೀಲ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲಾರಂಭಿಸಿತು. ಬಳಿಕ ರೇಣುಕಾಚಾರ್ಯ ಅವರಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ಪಡೆಯಲಾಯಿತು.


  ಹರತಾಳ ಹಾಲಪ್ಪ


  ಸೊರಬ ತಾಲೂಕಿನಿಂದ ಬಿಜೆಪಿ ಟಿಕೆಟ್ ಪಡೆದು ಶಾಸಕರಾಗಿ ಆಯ್ಕೆಯಾಗಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾಗಿದ್ದ ಈಡಿಗ ಜನಾಂಗದ ಹತಾಳು ಹಾಲಪ್ಪ ಅವರ ಮೇಲೆ ಅತ್ಯಾಚಾರದ ಪ್ರಕರಣ ದಾಖಲಾಗಿತ್ತು. ಸ್ನೇಹಿತನ ಹೆಂಡತಿ ಚಂದ್ರಾವತಿಯನ್ನು ಮಾನಭಂಗ ಮಾಡಲು ಯತ್ನಸಿದ್ದರು ಎನ್ನುವುದು ಅವರ ಮೇಲೆ ಕೇಳಿ ಬಂದ ಆರೋಪ. ಪ್ರಕರಣ ದಾಖಲಾದ ಬಳಿಕ ತಲೆಮರೆಸಿಕೊಂಡಿದ್ದ ಹಾಲಪ್ಪ ಒಂದು ವಾರದ ನಂತರ ಸಿಐಡಿ ಪೊಲೀಸರ ಮುಂದೆ ಶರಣಾಗಿದ್ದರು.


  ರಘುಪತಿ ಭಟ್


  ಉಡುಪಿ ಶಾಸಕರಾಗಿದ್ದ ರಘುಪತಿ ಭಟ್ ಅವರು ಯುವತಿಯೊಬ್ಬಳ ಜತೆ ಸರಸ ಸಲ್ಲಾಪದಲ್ಲಿ ತೊಡಗಿರುವ ವಿಡಿಯೋ ಜಿಲ್ಲೆಯಾದ್ಯಂತ ಹರಿದಾಡಿತ್ತು. ಈ ವಿಡಿಯೋವನ್ನು ಬೆಂಗಳೂರಿನಲ್ಲಿ ಮಾಧ್ಯಮ ಕಚೇರಿಗಳಿಗೆ ಅನಾಮಧೇಯ ವ್ಯಕ್ತಿಗಳು ತಲುಪಿಸಿದ್ದರು. ಇದರಿಂದ ಅವಮಾನಿತರಾದ ರಘುಪತಿ ಭಟ್ ವಿಧಾನಸಭಾ ಚುನಾವಣಾ ಕಣದಿಂದ ಹಿಂದಕ್ಕೆ ಸರಿದಿದ್ದರು. ಶಾಸಕರಾಗಿ ಆಯ್ಕೆಯಾದ ಹೊಸದರಲ್ಲೇ ಪತ್ನಿ ಪದ್ಮಪ್ರಿಯಾ ಕೊಲೆ ಪ್ರಕರಣ ಕೂಡ ಇವರ ತಲೆಗೆ ಸುತ್ತಿಕೊಂಡಿತ್ತು.


  ಸದನದಲ್ಲಿ ಬ್ಲೂ ಫಿಲಂ ವೀಕ್ಷಣೆ


  2012ರ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಚಿವರಾಗಿದ್ದ ಲಕ್ಷ್ಮಣ ಸವದಿ ಹಾಗೂ ಸಿಸಿ ಪಾಟೀಲ್ ಹಾಗೂ ಕೃಷ್ಣ ಪಾಲೆಮಾರ್ ಅವರು ಅಧಿವೇಶನದ ಸಮಯದಲ್ಲಿ ಬ್ಲೂ ಫಿಲಂ ನೋಡಿದ ಆರೋಪ ಕೇಳಿಬಂದಿತು. ಈ ಪ್ರಕರಣದಲ್ಲಿ ರಾಷ್ಟ್ರಮಟ್ಟದಲ್ಲಿ ಭಾರೀ ಸದ್ದು ಮಾಡಿತ್ತು. ಪ್ರಕರಣ ಸಂಬಂಧ ಸದನ ಸಮಿತಿ ತನಿಖೆ ನಡೆಸಿತ್ತು. ಈ ವರದಿಯಲ್ಲಿ ಲಕ್ಷ್ಮಣ ಸವದಿ ತಪ್ಪು ಸಾಬೀತಾಗಿತ್ತು. ಉಳಿದಿಬ್ಬರು ಸಚಿವರ ಪಾತ್ರ ಏನು ಇಲ್ಲ ಎಂದು ವರದಿ ಹೇಳಿತ್ತು.


  ಇದನ್ನು ಓದಿ: Ramesh Jarkiholi: ರಾಸಲೀಲೆ ವಿಡಿಯೋ ಪ್ರಕರಣ; ಸಚಿವ ಸ್ಥಾನಕ್ಕೆ ರಮೇಶ್ ಜಾರಕಿಹೊಳಿ ರಾಜೀನಾಮೆ


  ಎಚ್.ವೈ. ಮೇಟಿ


  ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಅಬಕಾರಿ ಸಚಿವರಾಗಿದ್ದ ಎಚ್.ವೈ. ಮೇಟಿ ಅವರ ರಾಸಲೀಲೆ ಪ್ರಕರಣ ರಾಜ್ಯದಲ್ಲಿ ಭಾರೀ ಸದ್ದು ಮಾಡಿತ್ತು. ಆ ಬಳಿಕ ಅವರಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ಪಡೆದು, ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಯಿತು. ಪ್ರಕರಣದ ಸುದೀರ್ಘ ತನಿಖೆ ನಡೆಸಿದ ಸಿಐಡಿ, ಪ್ರಕರಣದ ಸಂಪೂರ್ಣ ವರದಿಯನ್ನು ಗೃಹಇಲಾಖೆಗೆ ನೀಡಿತ್ತು. ವವರದಿಯಲ್ಲಿ ಇದೊಂದು ‘ರಾಜಕೀಯ ದುರುದ್ದೇಶ ಪೂರ್ವ ಸಂಚಿನ ಕೃತ್ಯ’ ಹೇಳಲಾಗಿದೆ ಎಂದು ತಿಳಿದುಬಂದಿದೆ. ಅಂತೆಯೇ ಹಗರಣಕ್ಕೆ ಸೂಕ್ತ ಸಾಕ್ಷ್ಯಾಧಾರ ತನಿಖೆ ವೇಳೆ ಲಭ್ಯವಾಗಿಲ್ಲ. ಮಾಧ್ಯಮದಲ್ಲಿ ಪ್ರಸಾರಗೊಂಡ ವಿಡಿಯೋ ಎಡಿಟ್ ಆಗಿದ್ದು, ಅಸಲಿ ವಿಡಿಯೋ ಅಲ್ಲ ಎಂದು ವಿಧಿವಿಜ್ಞಾನ ಪ್ರಯೋಗಾಲಯ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿತ್ತು.


  ಅರವಿಂದ ಲಿಂಬಾವಳಿ


  ಮಹದೇವಪುರ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಅವರ ಸಲಿಂಗ ಕಾಮದ ವಿಡಿಯೋಗಳು ರಾಜದಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಇದರಿಂದಾಗಿ ಇವರಿಗೆ ಈ ಸಮದಯಲ್ಲಿ ಅಸ್ತಿತ್ವಕ್ಕೆ ಬಂದಿದ್ದ ಬಿಜೆಪಿ ಸರ್ಕಾರದಲ್ಲಿ ಸಚಿವ ಸ್ಥಾನ ಕೈ ತಪ್ಪಿತ್ತು. ಇದೀಗ ಅವರಿಗೆ ಸ್ಥಾನ ನೀಡಲಾಗಿದೆ.

  Published by:HR Ramesh
  First published: