HOME » NEWS » State » BRIDGE MAY COLLAPSE AT CHIKKAMAGALURU BUT OFFICERS DONT CARE VCTV LG

ಲಕ್ಷ ಲಕ್ಷ ಬಿಲ್ ಮಾಡಿಕೊಂಡು ನಿರ್ಮಿಸಿದ ಸೇತುವೆ ಮೂರೇ ತಿಂಗಳಲ್ಲಿ ಬೀಳುವ ಹಂತಕ್ಕೆ..!

ಎಂಟತ್ತು ಕಿ.ಮೀ. ಬಳಸಿ ಬರಬೇಕು. ಜೀವ ಹೋಗೋ ಸಂದರ್ಭದಲ್ಲಿ ದೇವ್ರೇ ಗತಿ. 3 ಕೋಟಿ ಅನುದಾನ ಬಂದಿದೆ ಅಂತ ಹೇಳಿಯೇ ವರ್ಷವಾಯ್ತು. ಕೆಲಸ ಮಾತ್ರ ಇನ್ನೂ ಆರಂಭವಾಗಿಲ್ಲ. ಕಮಿಷನ್ ಕ್ಯಾತೆಯಿಂದ ಸೇತುವೆ ನಿರ್ಮಿಸ್ತಿಲ್ಲ ಅನ್ನೋ ಮಾತು ಕೇಳಿಬರ್ತಿದೆ.

news18-kannada
Updated:March 2, 2021, 3:05 PM IST
ಲಕ್ಷ ಲಕ್ಷ ಬಿಲ್ ಮಾಡಿಕೊಂಡು ನಿರ್ಮಿಸಿದ ಸೇತುವೆ ಮೂರೇ ತಿಂಗಳಲ್ಲಿ ಬೀಳುವ ಹಂತಕ್ಕೆ..!
ಸೇತುವೆ
  • Share this:
ಚಿಕ್ಕಮಗಳೂರು(ಮಾ.02): 2019ರ ಆಗಸ್ಟ್ ತಿಂಗಳ ಮಳೆಗೆ ಕೊಚ್ಚಿ ಹೋದ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಂಕೇನಹಳ್ಳಿ ಸೇತುವೆಗೆ ಯಾಕೋ ಮುಕ್ತಿ ಸಿಗುವ ಹಾಗೆ ಕಾಣ್ತಿಲ್ಲ. ಹಳ್ಳಿ ಜನರ ವ್ಯಥೆ ಕೇಳೋರು ಇಲ್ಲದಂತೆ ಕಾಣ್ತಿದ್ದು, ಎರಡು ವರ್ಷಗಳೇ ಮುಗಿಯೋಕೆ ಬಂದರೂ, ಬ್ರಿಡ್ಜ್  ನಿರ್ಮಾಣಕ್ಕೆ ಸರ್ಕಾರ ಮುಂದಾಗಿಲ್ಲ. ತಾತ್ಕಾಲಿಕವಾಗಿ ಸಂಕ ನಿರ್ಮಿಸಿದರೂ, ಅದು ಬೀಳುವ ಹಂತಕ್ಕೆ ತಲುಪಿದೆ.

2019ರ ಆಗಸ್ಟ್ ತಿಂಗಳ ರಣ ಮಳೆಗೆ ಸೇತುವೆ ಬಲಿಯಾಗಿತ್ತು. ಅಂದಿನಿಂದ ಸೇತುವೆಗಾಗಿ ಇವರ ಹೋರಾಟ ಅಷ್ಟಿಷ್ಟಲ್ಲ. ಸ್ಥಳಕ್ಕೆ ಭೇಟಿ ಕೊಟ್ಟಿದ್ದ ಸಂಸದೆ ಶೋಭಾ ಹಾಗೂ ಶಾಸಕ ಕುಮಾರಸ್ವಾಮಿಗೆ ಘೇರಾವ್ ಹಾಕಿದ ಮೇಲೆ ಕಬ್ಬಿಣದ ತಾತ್ಕಾಲಿಕ ಕಾಲುಸಂಕ ಹಾಕಿ, ಶೀಘ್ರವೇ ಸೇತುವೆ ನಿರ್ಮಿಸ್ತೀವಿ ಅಂದಿದ್ರು. ಮತ್ತೆ ಆಕಡೆ ಮುಖ ಹಾಕಿಲ್ಲ. ಈಗ ಇಡೀ ವರ್ಷ ಸುರಿದ ಅಕಾಲಿಕ ಮಳೆಯಿಂದ ಆ ಸೇತುವೆ ಕೂಡ ದಿನ ಎಣಿಸುತ್ತಿದೆ. ಹೇಮಾವತಿಯ ವೇಗಕ್ಕೆ ಕ್ರಮೇಣ ಮಣ್ಣು ಕುಸಿಯುತ್ತಿದೆ. ಮಣ್ಣು ಕುಸಿದ್ರೆ ಕಾಲುಸಂಕಕ್ಕೆ ಗ್ರಿಪ್ ಅನ್ನೋದೇ ಇರಲ್ಲ. ಕಳಚಿ ಬೀಳೋದು ಗ್ಯಾರಂಟಿ. ಈ ಮಳೆಗಾಲಕ್ಕೆ ಫಿಕ್ಸ್. ಅಷ್ಟರಲ್ಲಿ ಸೇತುವೆ ನಿರ್ಮಿಸಿ ಅಂತ ಜನ ಪರಿಪರಿಯಾಗಿ ಬೇಡಿಕೊಂಡರೂ ಸರ್ಕಾರಕ್ಕೆ ಕಿವಿ ಕೇಳಿಸಿಲ್ಲ. ಇದು ಸಂಕವೂ ಕೊಚ್ಚಿ ಹೋದ್ರೆ ನಮ್ಮದ್ದು ಮತ್ತದೇ ಆತಂಕದ ಬದುಕು ಅನ್ನೋದು ಜನರ ಅಳಲು.

Corona Virus: ಕೊರೋನಾ ಸೋಂಕಿಗೆ ಬಲಿಯಾದ ಬಿಜೆಪಿ ಸಂಸದ ನಂದ ಸಿಂಗ್ ಚೌಹಾಣ್

ಇನ್ನು ಈ ಕಾಲುಸಂಕದ ಮೇಲೂ ಭಯದಿಂದಲೇ ಓಡಾಡ್ತಿದ್ದಾರೆ. ಇದರ ಮೇಲೆ ನಡೆಯುವಾಗ ಬರೋ ಶಬ್ಧ ಹಳ್ಳಿಗರನ್ನ ಮತ್ತಷ್ಟು ಕಂಗಾಲಾಗಿಸಿದೆ. ಈ ಸೇತುವೆ ಮೇಲೆ ಎಂಟಕ್ಕೂ ಹೆಚ್ಚು ಹಳ್ಳಿಯ ಜನ ಅವಲಂಬಿತರಾಗಿದ್ದಾರೆ. ಈ ಸಂಕವೂ ಕೊಚ್ಚಿ ಹೋದ್ರೆ ಅವರ ಬದುಕು ಮತ್ತಷ್ಟು ಅತಂತ್ರವಾಗಲಿದೆ. ಎಂಟತ್ತು ಕಿ.ಮೀ. ಬಳಸಿ ಬರಬೇಕು. ಜೀವ ಹೋಗೋ ಸಂದರ್ಭದಲ್ಲಿ ದೇವ್ರೇ ಗತಿ. 3 ಕೋಟಿ ಅನುದಾನ ಬಂದಿದೆ ಅಂತ ಹೇಳಿಯೇ ವರ್ಷವಾಯ್ತು. ಕೆಲಸ ಮಾತ್ರ ಇನ್ನೂ ಆರಂಭವಾಗಿಲ್ಲ. ಕಮಿಷನ್ ಕ್ಯಾತೆಯಿಂದ ಸೇತುವೆ ನಿರ್ಮಿಸ್ತಿಲ್ಲ ಅನ್ನೋ ಮಾತು ಕೇಳಿಬರ್ತಿದೆ.

ಸರ್ಕಾರ, ಶಾಸಕರು, ಸಂಸದರು, ಅಧಿಕಾರಿಗಳಿಗೆ ಬೇಡಿ ಬೇಜಾರಾಗಿ ಈಗ ಪ್ರಧಾನಿ ಮೋದಿಗೆ ಪತ್ರ ಬರೆದು ಸೇತುವೆ ನಿರ್ಮಿಸಿಕೊಡುವಂತೆ ಮನವಿ ಮಾಡಿದ್ದಾರೆ. ಈ ಬಗ್ಗೆ ಮೂಡಿಗೆರೆ ಶಾಸಕರನ್ನ ಕೇಳಿದ್ರೆ ಹೌದು, ತಾತ್ಕಾಲಿಕ ಸೇತುವೆ ಕುಸಿದು ಬೀಳೋದು ನಿಜ, ಸೇತುವೆ ನಿರ್ಮಾಣವಾಗಿದೆ, ಎಲ್ಲಾ ಆಗಿ ಹೋಗಿದೆ, ಎಲ್ಲಾ ಆಗಿದೆ, ಅದು ಇದು ಅಂತಾ ಏನೇನೋ ಮಾತಾನಾಡುತ್ತಿದ್ದಾರೆ. ಸುದ್ದಿ ಮಾಡಿ ನನಗೆ ಒಳ್ಳೆಯದು ಅಂತಿದ್ದಾರೆ.

ಜನ ಫಾರಂ 53 ರಡಿ ಜಾಗ ಕೇಳಲಿಲ್ಲ. ತೋಟಕ್ಕೆ ದಾರಿ ಕೇಳ್ಲಿಲ್ಲ. ಬೆಳೆ ನಷ್ಟಕ್ಕೆ ಪರಿಹಾರ ಕೇಳಲಿಲ್ಲ. ಕೇಳಿದ್ದು ಸೇತುವೆಯನ್ನಷ್ಟೆ. ಆದ್ರೆ, ಸರ್ಕಾರ ಎರಡು ವರ್ಷದಿಂದ ಅದೊಂದನ್ನೂ ಮಾಡಿ ಕೊಡ್ಲಿಲ್ಲ. ಎರಡು ವರ್ಷದಿಂದ ಜನ ಸೇತುವೆಗಾಗಿ ಪರಿಪರಿಯಾಗಿ ಬೇಡ್ತಿದ್ದಾರೆ. ಶಾಸಕರು-ಸಂಸದರಿಗೆ ಹೊಸ ಕಾರು ಖರೀದಿಗೆ ಅಸ್ತು ಅಂದಿರುವ ಸರ್ಕಾರದ ಬಳಿ ಅದಕ್ಕೆಲ್ಲಾ ದುಡ್ಡಿದೆ. ಇನೇನು ನಾಳೆ-ನಾಡಿದ್ದು ಅನ್ನುವಷ್ಟರಲ್ಲಿ ಮತ್ತೆ ಮಳೆಗಾಲ ಬರುತ್ತೆ. ಈ ಸೇತುವೆ ಇರುತ್ತೋ-ಇಲ್ವೋ. ಜನ ಏನ್ ಮಾಡ್ತಾರೋ ದೇವೇ ಬಲ್ಲ.
Published by: Latha CG
First published: March 2, 2021, 2:57 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories