Heavy Rain: ವರುಣನ ಅಬ್ಬರಕ್ಕೆ ಸೇತುವೆ ಜಲಾವೃತ ಸಂಪರ್ಕ ಕಡಿತ, ಅಪಾರ ಪ್ರಮಾಣದ ಬೆಳೆ ನೀರುಪಾಲು

ವರುಣನ ಅಬ್ಬರಕ್ಕೆ  ಜಿಲ್ಲೆಯ  ಜನರು ತತ್ತರಿಸಿ ಹೋಗಿದ್ದಾರೆ. ನಿನ್ನೆ ರಾತ್ರಿ ಸುರಿದ ಮಳೆಗೆ ಸಂಪರ್ಕ ಸೇತುವೆಗಳು ಮುಳುಗಡೆಯಾಗಿ ಸಂಪರ್ಕ ಕಳೆದುಕೊಂಡಿವೆ. ಜನರು ಊರಿಗೆ ತೆರಳಲು ಪರದಾಡುವಂತಾಗಿದೆ.

ಸೇತುವೆ ಜಲಾವೃತ

ಸೇತುವೆ ಜಲಾವೃತ

  • Share this:
ಯಾದಗಿರಿ (ಜು.30): ವರುಣನ ಅಬ್ಬರಕ್ಕೆ ಜಿಲ್ಲೆಯ  ಜನರು ತತ್ತರಿಸಿ ಹೋಗಿದ್ದಾರೆ. ನಿನ್ನೆ ರಾತ್ರಿ ಸುರಿದ ಮಳೆಗೆ ಸಂಪರ್ಕ ಸೇತುವೆಗಳು (Connecting Bridges) ಮುಳುಗಡೆಯಾಗಿ ಸಂಪರ್ಕ ಕಳೆದುಕೊಂಡಿವೆ. ಜನರು ಊರಿಗೆ ತೆರಳಲು ಪರದಾಡುವಂತಾಗಿದೆ. ಯಾದಗಿರಿ (Yadagiri) ಜಿಲ್ಲೆಯಲ್ಲಿ ನಿನ್ನೆ ರಾತ್ರಿ ಭಾರಿ ಪ್ರಮಾಣದ ಮಳೆ (Heavy Rain) ಸುರಿದಿದ್ದು ಮಳೆಗೆ ಜನರು (People) ಸಂಕಷ್ಟ ಎದುರಿಸುವಂತಾಗಿದೆ.

ಸೇತುವೆ ಜಲಾವೃತ ಸಂಪರ್ಕ ಕಡಿತ!

ಯಾದಗಿರಿ ತಾಲೂಕಿನ ಹೆಡಗಿಮದ್ರಾ ಗ್ರಾಮದ ಹೊರಭಾಗದಲ್ಲಿರುವ ಹೆಡಗಿಮದ್ರಾ ಹಾಗೂ ಯಾದಗಿರಿ ಜಿಲ್ಲಾ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಜಲಾವೃತವಾಗಿದೆ.ಸೇತುವೆ ಮುಳುಗಡೆಯಾದ ಹಿನ್ನೆಲೆ ವಿದ್ಯಾರ್ಥಿಗಳು ಹಾಗೂ ಜನರು ಊರಿಗೆ ತೆರಳಲು ಪರದಾಡುವಂತಾಗಿದೆ. ನಂತರ ನೀರಿನ ಹರಿವು ಕಡಿಮೆಯಾದ ನಂತರ ವಿದ್ಯಾರ್ಥಿಗಳು ನಿಟ್ಟುಸಿರು ಬಿಟ್ಟು ವಿದ್ಯಾರ್ಥಿಗಳು ಹರಿಯುವ ನೀರಿನಲ್ಲಿಯೇ ಸೇತುವೆ ಮೂಲಕ ಶಾಲೆ ಹಾಗೂ ಕಾಲೇಜುಗೆ ತೆರಳಿದರು.

ಸೇತುವೆ ಎತ್ತರವಾಗಿ ನಿರ್ಮಾಣ ಮಾಡಿ!

ಪ್ರತಿ ಬಾರಿ ಭಾರಿ ಪ್ರಮಾಣದ ಮಳೆ ಬಂದರೆ ಹೆಡಗಿಮದ್ರಾ ಗ್ರಾಮದ ಸಂಪರ್ಕ ಸೇತುವೆಯು ಮುಳುಗಡೆಯಾಗುತ್ತದೆ. ಸೇತುವೆ ಮುಳುಗಡೆಯಾದಾಗ ಶಾಲೆ ಹಾಗೂ ಕಾಲೇಜು ಗೆ ತೆರಳಲು ವಿದ್ಯಾರ್ಥಿಗಳು ಸಾಧ್ಯವಾಗದೇ ಸಂಕಷ್ಟ ಎದುರಿಸುವಂತಾಗಿದೆ. ಹೀಗಾಗಿ ವಿದ್ಯಾರ್ಥಿಗಳು ಅಕ್ರೋಶ ವ್ಯಕ್ತಪಡಿಸಿದ್ದಾರೆ. ನಾವು ಮಳೆ ಬಂದಾಗ ಶಾಲೆಗೆ ಹೊಗಲು ಕಷ್ಟವಾಗುತ್ತದೆ ಸೇತುವೆ ಕೆಳಭಾಗದಲ್ಲಿದ್ದು ಮಳೆ ಬಂದಾಗ ಮುಳುಗಡೆಯಾಗುತ್ತದೆ. ಸೇತುವೆ ಎತ್ತರವಾಗಿ ನಿರ್ಮಾಣ ಮಾಡಬೇಕೆಂದು ವಿದ್ಯಾರ್ಥಿನಿ ಶೃತಿ ಆಗ್ರಹಿಸಿದ್ದಾರೆ.

ಇದನ್ನೂ ಓದಿ: CET Result: ಸಿಇಟಿ ಫಲಿತಾಂಶದಲ್ಲಿ ರಿಪೀಟರ್ಸ್​ಗೆ ಅನ್ಯಾಯ; ಸಚಿವರ ಮನೆ ಮುಂದೆ ಪ್ರತಿಭಟನೆ​



ಮನೆಗಳಿಗೆ ನುಗ್ಗಿದ್ದ ಮಳೆ ನೀರು!

ಮಳೆ ಅಬ್ಬರಕ್ಕೆ ಗುರುಮಿಠಕಲ್ ತಾಲೂಕಿನ ಪರಮೇಶಪಲ್ಲಿ, ನಂದೆಪಲ್ಲಿ ಸೇರಿದಂತೆ ಮೊದಲಾದ ಕಡೆ ಮನೆಯೊಳಗೆ ನೀರು ನುಗ್ಗಿದ್ದು ನೀರು ಹೊರಹಾಕಲು ಗ್ರಾಮಸ್ಥರು ಪರದಾಡುವಂತಾಗಿದೆ. ಪರಮೇಶಪಲ್ಲಿಯಲ್ಲಿ 20 ಕ್ಕು ಹೆಚ್ಚು ಮನೆ ಹಾಗೂ ನಂದೆಪಲ್ಲಿಯಲ್ಲಿ 10 ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿವೆ. ನಂದೆಪಲ್ಲಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಎರಡು  ಸೇತುವೆಗಳು ಜಲಾವೃತವಾಗಿವೆ. ಸೇತುವೆ ಮುಳುಗಡೆಯಾದ ಪರಿಣಾಮ ಸಂಪರ್ಕ ಕಡಿತಗೊಂಡಿದೆ.

ಶಾಲೆ ಆವರಣೊಳಗೆ ನುಗ್ಗಿದ್ದ ನೀರು ಪಂಚಾಯತಗೆ ಮುತ್ತಿಗೆ!

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಹೊಸಕೇರಾ ಗ್ರಾಮದ ಸರಕಾರಿ ಪ್ರೌಢ ಶಾಲೆ ಆವರಣದೊಳಗೆ ನೀರು ನುಗ್ಗಿದ್ದ ಪರಿಣಾಮ ವಿದ್ಯಾರ್ಥಿಗಳು ಶಾಲೆಗೆ ಬರಲು ಸಮಸ್ಯೆ ಎದುರಿಸುವಂತಾಗಿದೆ. ಇದರಿಂದ ಅಕ್ರೋಶಗೊಂಡ ವಿದ್ಯಾರ್ಥಿಗಳು ಪಂಚಾಯತ ಮುಂದೆ ಪ್ರತಿಭಟನೆ ನಡೆಸಿದರು. ಪಂಚಾಯತಗೆ ಮುತ್ತಿಗೆ ಹಾಕಿ ಗ್ರಾಮ ಪಂಚಾಯತ್ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು. ಅಧಿಕಾರಿಗಳು ಕೂಡಲೇ ಶಾಲೆಗೆ ಭೇಟಿ ನೀಡಿ ನೀರು ಹರಿದು ಹೋಗಲು ಅಗತ್ಯ ಕ್ರಮಕೈಗೊಳ್ಳಬೇಕೆಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

ಇದನ್ನೂ ಓದಿ : Monkeypox: ರಾಜ್ಯದಲ್ಲಿ ಮೊದಲ ಮಂಕಿಪಾಕ್ಸ್ ಕೇಸ್ ಪತ್ತೆ

ಮನೆ ಕುಸಿತ!

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಹಯ್ಯಾಳ ಗ್ರಾಮದಲ್ಲಿ ಮನೆ ಕುಸಿದಿದೆ. ಗುರುಮಿಠಕಲ್ ಪಟ್ಟಣದಲ್ಲಿ ಬಸ್ ನಿಲ್ದಾಣದ ಸುತ್ತುಗೊಡೆ ಕುಸಿದ ಬಿದಿದ್ದೆ.ಮನೆ ಛಾವಣಿ ಕುಸಿದ ಬಿದ್ದ ಪರಿಣಾಮ ಬುಗ್ಗಪ್ಪ ಅವರಿಗೆ ಸೇರಿದ ಎಮ್ಮೆಯು ಮೃತಪಟ್ಟಿದೆ‌.

ಬೆಳೆ ನೀರು ಪಾಲು!

ನಿನ್ನೆ ರಾತ್ರಿ ಸುರಿದ ಮಳೆ ಪರಿಣಾಮ ಹೆಡಗಿಮದ್ರಾ, ಮಿನಾಸಪುರ, ನಂದೆಪಲ್ಲಿ ಸೇರಿದಂತೆ ಮೊದಲಾದ  ಕಡೆ ಹತ್ತಿ, ಭತ್ತ, ತೊಗರಿ ಬೆಳೆ ನೀರು ಪಾಲಾಗಿ ಬೆಳೆ ಹಾನಿಯಾಗಿದೆ. ಈ ಬಗ್ಗೆ ಉಮೇಶ ಮುದ್ನಾಳ ಅವರು ಮಾತನಾಡಿ,ನಿನ್ನೆ ರಾತ್ರಿ ಸುರಿದ ಮಳೆಗೆ ಹತ್ತಿ, ತೊಗರಿ, ಭತ್ತದ ಬೆಳೆ ಹಾನಿಯಾಗಿದೆ. ಅಧಿಕಾರಿಗಳು ಕಚೇರಿಯಲ್ಲಿ ಕೆಲಸ ಮಾಡದೇ ಬೆಳೆ ಹಾನಿಯಾದ ಪ್ರದೇಶಕ್ಕೆ ಭೇಟಿ ನೀಡಿ ಹೆಚ್ಚಿನ ಪರಿಹಾರ ನೀಡುವ ಕೆಲಸ ಮಾಡಬೇಕೆಂದರು.
Published by:Pavana HS
First published: