ರಾಜ್ಯದಲ್ಲಿ ಕಳೆದ ಎರಡ್ಮೂರು ದಿನಗಳಿಂದ ವರುಣನ ಆರ್ಭಟ (Heavy Rain) ಜೋರಾಗಿದೆ. ಮಳೆಯಿಂದ ಅಲ್ಲಲ್ಲಿ ಅವಾಂತರ ಸೃಷ್ಟಿಯಾಗ್ತಿದೆ. ಬೆಂಗಳೂರಿನಲ್ಲೂ (Bengaluru) ಭಾರೀ ಮಳೆಯಾಗುತ್ತಿದೆ. ಬೆಂಗಳೂರಿನಲ್ಲಿ ಮೋಡ ಮುಸುಕಿದ ವಾತಾವರಣ ಇದೆ. ಇದರ ನಡುವೆ ತುಮಕೂರಿನಲ್ಲಿ ಭಾರೀ ಅನಾಹುತವೊಂದು ತಪ್ಪಿದೆ. ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ (G.Parameshwar) ಸ್ವಲ್ಪದರಲ್ಲೇ ಪಾರಾಗಿದ್ದಾರೆ (Great Escape). ತುಮಕೂರಿನಲ್ಲಿ ಸೇತುವೆಯೊಂದು (Bridge) ಕುಸಿದಿದೆ. ಅದೇ ಸೇತುವೆ ಮೇಲೆ 5 ನಿಮಿಷಕ್ಕೂ ಮುನ್ನ ಪ್ರಯಾಣಿಸಿದ್ದ ಕಾಂಗ್ರೆಸ್ ನಾಯಕ ಪರಮೇಶ್ವರ್ ಗ್ರೇಟ್ ಎಸ್ಕೇಪ್ ಆಗಿದ್ದಾರೆ. ತುಮಕೂರು (Tumakuru) ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ತೀತಾ-ಗೊರವನಹಳ್ಳಿ ಸೇತುವೆಯಲ್ಲಿ ಈ ಘಟನೆ ನಡೆದಿದೆ. ಸ್ವಲ್ಪದರಲ್ಲೇ ಡಾ.ಜಿ.ಪರಮೇಶ್ವರ್ ಅಪಾಯದಿಂದ ಪಾರಾಗಿದ್ದಾರೆ.
ಮಳೆಯಿಂದ ಅಲ್ಲಲ್ಲಿ ಅವಾಂತರ ಸೃಷ್ಟಿಯಾಗ್ತಿದೆ. ತುಮಕೂರಿನಲ್ಲಿ ಭಾರೀ ಅನಾಹುತವೊಂದು ತಪ್ಪಿದೆ. ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸಾಗುತ್ತಿದ್ದಂತೆ ಸೇತುವೆ ಕುಸಿದಿದೆ. ಮಾಜಿ ಡಿಸಿಎಂ ಪರಮೇಶ್ವರ್ ಸ್ವಲ್ಪದರಲ್ಲೇ ಪಾರಾಗಿದ್ದಾರೆ.
ಪರಮೇಶ್ವರ್ ಹೋದ ಐದೇ ನಿಮಿಷಕ್ಕೆ ಸೇತುವೆ ಕುಸಿತ!
ತುಮಕೂರಿನಲ್ಲಿ ಭಾರೀ ಮಳೆಯಾಗ್ತಿದೆ. ಕಳೆದ ರಾತ್ರಿ ಸುರಿದ ಮಳೆಗೆ ಇಂದು ಮುಂಜಾನೆ ತೀತಾ ಸೇತುವೆ ಅರ್ಧ ಕುಸಿದಿತ್ತು. ಕೊರಟಗೆರೆ ತಾಲ್ಲೂಕಿನ ತೀತಾ-ಗೊರವನಹಳ್ಳಿ ಸೇತುವೆ ಡ್ಯಾಮೇಜ್ ಆಗಿತ್ತು. ಇಂದು ಮಾಜಿ ಉಪಮುಖ್ಯಮಂತ್ರಿ ಪರಮೇಶ್ವರ್ ಅಲ್ಲಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ನದಿಯೊಡಲು ಮಲಿನಗೊಳಿಸುತ್ತಿರುವ ನಗರಸಭೆ: ಚರಂಡಿ ನೀರು ಭೀಮಾನದಿಗೆ!
ನಿನ್ನೆ ಸೇತುವೆ ಕುಸಿತ ಹಿನ್ನೆಲೆ ಇಂದು ಸಂಜೆ ಡಾ.ಜಿ ಪರಮೇಶ್ವರ್ ಭೇಟಿ ನೀಡಿದ್ದರು. ಭೇಟಿ ವೇಳೆ ಸೇತುವೆ ಮೇಲೆ ನಿಂತು ಕುಸಿತವನ್ನು ಪರಮೇಶ್ವರ್ ವೀಕ್ಷಿಸಿದ್ದರು. ಪರಮೇಶ್ವರ್ ಭೇಟಿಯಾಗಿ ಮುಂದೆ ಹೋದ 5 ನಿಮಿಷಕ್ಕೆ ಸೇತುವೆಯ ಇನ್ನೊಂದು ಭಾಗ ಕುಸಿತವಾಗಿದೆ.
ಪರಮೇಶ್ವರ್ ನಿಂತು ವೀಕ್ಷಿಸಿದ್ದ ಸ್ಥಳವೂ ಕುಸಿತ!
ಪರಮೇಶ್ವರ್ ಒಂದು ಭಾಗದಲ್ಲಿ ನಿಂತು ಪರಿಶೀಲನೆ ನಡೆಸಿದ್ದರು. ಅವರು ಹೋದ ಬಳಿಕ ಮತ್ತೊಂದು ಭಾಗವೂ ಕುಸಿತವಾಗಿದೆ. ಸೇತುವೆ ಎರಡೂ ಭಾಗದಲ್ಲೂ ಬಿರುಕು ಬಿಟ್ಟು ಆಳಕ್ಕೆ ಕುಸಿದಿದೆ. ಅದೃಷ್ಟವಶಾತ್ ಎಲ್ಲಾ ಕಡೆಯಿಂದ ಪರಮೇಶ್ವರ್ ಗ್ರೇಟ್ ಎಸ್ಕೇಪ್ ಆಗಿದ್ದಾರೆ.
ದಾವಣಗೆರೆಯಲ್ಲಿ ವರುಣನ ಆರ್ಭಟ
ದಾವಣಗೆರೆಯಲ್ಲಿ ಸತತ ಒಂದು ಗಂಟೆಯಿಂದ ಎಡಬಿಡದೇ ಮಳೆ ಸುರಿಯುತ್ತಿದೆ. ಮಳೆಯಿಂದಾಗಿ ದಾವಣಗೆರೆ ನಗರದ ರಸ್ತೆಗಳು ನದಿಯಂತಾಗಿದೆ. ದಾವಣಗೆರೆಯ ಈರುಳ್ಳಿ ಮಾರುಕಟ್ಟೆ ಬಳಿ ಹರಿಯುತ್ತಿದ್ದ ನೀರಿನಲ್ಲಿ ಬೈಕ್ ಸವಾರರು ಬಿದ್ದ ಘಟನೆಯೂ ನಡೆದಿದೆ. 3 ಮಂದಿ ಒಂದೇ ಬೈಕ್ನಲ್ಲಿ ಕೂತು ಈರುಳ್ಳಿ ಮಾರ್ಕೆಟ್ನ ರೈಲ್ವೆ ಬ್ರಿಡ್ಜ್ ಬಳಿ ರಸ್ತೆ ದಾಟುತಿದ್ದರು.
ಈ ವೇಳೆ ನೀರಿನ ರಭಸಕ್ಕೆ ಬೈಕ್ ಮುಂದಕ್ಕೆ ಹೋಗಲು ಆಗದೆ ಮಗುಚಿ ಬಿದ್ದಿದೆ. ನಂತರ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಬೈಕ್ನ್ನು ಸವಾರರು ಎತ್ತಿಕೊಂಡು ಬಂದಿದ್ದಾರೆ. ಪಕ್ಕದಲ್ಲೆ ಮ್ಯಾನ್ ಹೋಲ್ ರಿಪೇರಿಗೆ ಪಾಲಿಕೆ ಅಧಿಕಾರಿಗಳು ಗುಂಡಿ ತೋಡಿ ಬಿಟ್ಟಿದ್ದರು. ಕೊಂಚ ಯಾಮಾರಿದ್ರೂ ಪ್ರಾಣಾಪಾಯ ಆಗುವ ಸಾಧ್ಯತೆ ಇತ್ತು. ಜಗಳೂರು, ಹರಪನಹಳ್ಳಿ, ಸಂಪರ್ಕಿಸುವ ಮುಖ್ಯ ರಸ್ತೆ ಇದಾಗಿದೆ.
ಇದನ್ನೂ ಓದಿ: ಕೊನೆಗೂ ಗಂಗಾವಳಿ ನದಿಯಿಂದ ಲಾರಿ ಮೇಲಕ್ಕೆ, ಸಂದೀಪ್ ಇನ್ನೂ ನಾಪತ್ತೆ!
ಚಿಕ್ಕಬಳ್ಳಾಪುರದಲ್ಲಿ ಕೋಳಿಫಾರಂಗೆ ನುಗ್ಗಿದ ನೀರು
ಕೆರೆ ಕೋಡಿ ಹರಿದು ಕೋಳಿ ಫಾರ್ಮ್ ಗೆ ನೀರು ನುಗ್ಗಿ 15 ಸಾವಿರ ಕೋಳಿಗಳು ನೀರುಪಾಲಾದ ಘಟನೆ ನಡೆದಿದೆ. ಎನ್ .ಲಕ್ಷ್ಮಿನಾರಾಯಣರೆಡ್ಡಿ ಎನ್ನುವವರಿಗೆ ಸೇರಿದ ಕೋಳಿಗಳು ನೀರುಪಾಲಾಗಿದೆ. ಚಿಕ್ಕಬಳ್ಳಾಫುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಗ್ರಾಮದಲ್ಲಿ ಘಟನೆ ನಡೆದಿದೆ.
ಕೋಳಿಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಚೋಳಶೆಟ್ಟಿಹಳ್ಳಿ ಗ್ರಾಮದ ಬಳಿ ನಾಯನಕೆರೆ ಕೋಡಿ ಹರಿದು ಅವಾಂತರ ಸೃಷ್ಟಿಯಾಗಿದೆ. ರಾಜಕಾಲುವೆಗಳು ಒತ್ತುವರಿಯಾಗಿ ರೈತರ ಜಮೀನುಗಳಿಗೆ ನೀರು ನುಗ್ಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ