ಉದ್ಘಾಟನೆಗೂ ಮುನ್ನ ಕುಸಿದುಬಿದ್ದ ರಾಜ್ಯ ಹೆದ್ದಾರಿ ಹೊಸ ಸೇತುವೆ; ಕುಸಿದ ಸೇತುವೆ ಮುಚ್ಚೋ ನಾಟಕ..!

ಈ ಸೇತುವೆಯ ಕಾಮಗಾರಿಯನ್ನು ಬಿಜೆಪಿ ಮುಖಂಡ ನಾಸೀರ್ ಎಂಬಾತ ಮಾಡುತ್ತಿದ್ದು, ಕೆಲ ಬಿಜೆಪಿ ಮುಖಂಡರ ಬೆಂಬಲದೊಂದಿಗೆ ಆದ ತಪ್ಪನ್ನು ಮುಚ್ಚಿ ಹಾಕಲಾಗುತ್ತಿದೆ. ಬೆಳಗಾಗುವುದರಲ್ಲಿ ಇಲ್ಲಿ ಏನೂ ಆಗಿಲ್ಲ ಅನ್ನೋ ತರ ಕಿಲಾಡಿ ಗುತ್ತಿಗೆದಾರ, ಅಧಿಕಾರಿಗಳ ತಂಡ ರಾತ್ರೋರಾತ್ರಿ ಬೆವರುಸುರಿಸಿ ಎಲ್ಲವನ್ನೂ ಸರಿಗಟ್ಟಿದ್ದಾರೆ.

news18-kannada
Updated:March 7, 2020, 7:10 AM IST
ಉದ್ಘಾಟನೆಗೂ ಮುನ್ನ ಕುಸಿದುಬಿದ್ದ ರಾಜ್ಯ ಹೆದ್ದಾರಿ ಹೊಸ ಸೇತುವೆ; ಕುಸಿದ ಸೇತುವೆ ಮುಚ್ಚೋ ನಾಟಕ..!
ಕುಸಿದುಬಿದ್ದ ಸೇತುವೆ.
  • Share this:
ಚಿಕ್ಕಮಗಳೂರು: ಅದು ರಾಜ್ಯ ಹೆದ್ದಾರಿ. ರಾಜ್ಯ ಹೆದ್ದಾರಿ ಅಂದಮೇಲೆ ದಿನನಿತ್ಯ ಸಾವಿರಾರು ವಾಹನಗಳು ಓಡಾಡುತ್ತವೆ. ಲಕ್ಷಾಂತರ ಪ್ರಯಾಣಿಕರು ಪ್ರಯಾಣಿಸುತ್ತಾರೆ. ಇಷ್ಟೊಂದು ಮಂದಿ ಓಡಾಡುವ ರಸ್ತೆಯಲ್ಲಿ ಇದ್ದಕ್ಕಿದ್ದಂತೆ ಸೇತುವೆ ಕುಸಿದು ಬೀಳುತ್ತದೆ. ಹೀಗೆ ಏಕಾಏಕಿ ಕುಸಿದುಬಿದ್ದ ಸೇತುವೆ ಯಾವುದೋ ಹಳೇ ಕಾಲದ್ದಲ್ಲ, ಬದಲಾಗಿ ಕಾಮಗಾರಿ ಮುಗಿದು ಇನ್ನೇನು ಸಂಚಾರಕ್ಕೆ ಅಣಿಯಾಗಿದ್ದ ಹೊಸ ಸೇತುವೆ!

ಉದ್ಘಾಟನೆಗೂ ಮುನ್ನ ರಾತ್ರೋರಾತ್ರಿ ಕುಸಿದು ಬಿದ್ದ ಸೇತುವೆಯನ್ನು ಆ ರಾತ್ರಿಯೇ ಅಧಿಕಾರಿಗಳು ಜೆಸಿಬಿ ಮೂಲಕ ಸ್ವಚ್ಛ ಮಾಡಿಸಿದ್ದಾರೆ. ಮತ್ತೊಂದೆಡೆ ಕುಸಿದು ಬಿದ್ದ ಸೇತುವೆಯ ಕಬ್ಬಿಣದ ಸಾಮಾಗ್ರಿಗಳನ್ನು ಕಿಲಾಡಿ ಗುತ್ತಿಗೆದಾರರು ಯಾರಿಗೂ ಗೊತ್ತಾಗದಂತೆ ಸಾಗಿಸುತ್ತಿದ್ದಾರೆ. ಬೆಳಗಾಗುವುದರೊಳಗೆ ಏನೂ ಆಗಿಲ್ಲ ಎಂಬಂತೆ  ಗುತ್ತಿಗೆದಾರು ವರ್ತಿಸಿದ್ದಾರೆ.

ಹೌದು, ಇದು ಚಿಕ್ಕಮಗಳೂರಿನಿಂದ ಬಾಳೆಹೊನ್ನೂರು, ಶೃಂಗೇರಿ, ಹೊರನಾಡು, ಕಳಸ, ಕೊಪ್ಪ, ಎನ್ಆರ್ ಪುರ ಸೇರಿದಂತೆ ಹತ್ತಾರು ಪ್ರದೇಶಗಳಲ್ಲಿ ಸಂಪರ್ಕ ಕಲ್ಲಿಸುವ ರಾಜ್ಯ ಹೆದ್ದಾರಿ. ಇದೇ ರಾಜ್ಯ ಹೆದ್ದಾರಿಯಲ್ಲಿ ಸದ್ಯ ಐದಾರು ಸೇತುವೆಗಳ ಕಾಮಗಾರಿ ನಡೆಯುತ್ತಿದ್ದು, ಈ ಕಾಮಗಾರಿಗಳು ಎಷ್ಟು ಗಟ್ಟಿಮುಟ್ಟಾಗಿವೆ ಅನ್ನೋದಕ್ಕೆ ನಿರ್ಮಾಣ ಹಂತದಲ್ಲೇ ಕುಸಿದು ಬಿದ್ದಿರುವ ಈ ಸೇತುವೆಯೇ ಪ್ರತ್ಯಕ್ಷ ಸಾಕ್ಷಿ.

ಚಿಕ್ಕಮಗಳೂರಿನಿಂದ 40 ಕೀಲೋ ಮೀಟರ್ ದೂರವಿರುವ ಬಸರವಳ್ಳಿ ಗ್ರಾಮದಲ್ಲಿ ರಾಜ್ಯ ಹೆದ್ದಾರಿಗೆ ಅಡ್ಡಲಾಗಿ ಸೇತುವೆ ನಿರ್ಮಾಣವಾಗುತ್ತಿದ್ದು, ಸೇತುವೆ ಕೆಲಸ ಶೇಕಡಾ 90ರಷ್ಟು ಮುಗಿದಿತ್ತು. ಇನ್ನೇನು ಕೆಲವೇ ದಿನಗಳಲ್ಲಿ ಈ ಸೇತುವೆಯನ್ನು ಸಂಚಾರಕ್ಕೆ ಮುಕ್ತ ಮಾಡಲು ಸಿದ್ದತೆಗಳು ನಡೆದಿತ್ತು. ಅಷ್ಟರಾಗಲೇ ರಾತ್ರೋರಾತ್ರಿ ಈ ಸೇತುವೆ ಕುಸಿದು ಬಿದ್ದಿದೆ. ಬ್ರಿಡ್ಜ್ ಕೊಲಪ್ಸ್ ಆಗಿರುವ ವಿಚಾರ ತಿಳಿದು ತಮ್ಮ ಬಣ್ಣ ಎಲ್ಲಿ ಬಯಲಾಗಿ ಬಿಡುತ್ತೋ ಅಂತಾ ರಾತ್ರೋರಾತ್ರಿ ಜೆಸಿಬಿಗಳನ್ನು ಬಳಸಿಕೊಂಡು ಎಲ್ಲವನ್ನೂ ಕ್ಲೀಯರ್ ಮಾಡಲಾಗಿದೆ. ಒಂದು ವೇಳೆ ಉದ್ಘಾಟನೆ ಬಳಿಕ ವಾಹನಗಳು ಓಡಾಡುವಾಗ ಈ  ಅನಾಹುತ ಸಂಭವಿಸಿದ್ದರೆ ಅದಕ್ಕೆ ಯಾರು ಹೊಣೆ ಅಂತಾ ಜನರು ಪ್ರಶ್ನಿಸಿದ್ದಾರೆ.

ಅಂದ ಹಾಗೆ ಈ ಸೇತುವೆಯ ಕಾಮಗಾರಿಯನ್ನು ಬಿಜೆಪಿ ಮುಖಂಡ ನಾಸೀರ್ ಎಂಬಾತ ಮಾಡುತ್ತಿದ್ದು, ಕೆಲ ಬಿಜೆಪಿ ಮುಖಂಡರ ಬೆಂಬಲದೊಂದಿಗೆ ಆದ ತಪ್ಪನ್ನು ಮುಚ್ಚಿ ಹಾಕಲಾಗುತ್ತಿದೆ. ಬೆಳಗಾಗುವುದರಲ್ಲಿ ಇಲ್ಲಿ ಏನೂ ಆಗಿಲ್ಲ ಅನ್ನೋ ತರ ಕಿಲಾಡಿ ಗುತ್ತಿಗೆದಾರ, ಅಧಿಕಾರಿಗಳ ತಂಡ ರಾತ್ರೋರಾತ್ರಿ ಬೆವರುಸುರಿಸಿ ಎಲ್ಲವನ್ನೂ ಸರಿಗಟ್ಟಿದ್ದಾರೆ. ಅಲ್ಲದೇ ಬಿದ್ದ ಸೇತುವೆಯ ಕಬ್ಬಿಣದ ಸಾಮಾಗ್ರಿಗಳನ್ನ ಸ್ವಲ್ಪದೂರದಲ್ಲಿ ಯಾರಿಗೂ ಕಾಣದಂತೆ ಮುಚ್ಚಿಟ್ಟಿದ್ದಾರೆ.

ಇದನ್ನು ಓದಿ: ಕೋಲಾರದಲ್ಲಿ ದ್ವೇಷದ ಬೆಂಕಿಗೆ ಸುಟ್ಟು ಕರಕಲಾದ 25 ಮಾವಿನ ಮರಗಳು

ರಾತ್ರಿ ಸೇತುವೆ ಕುಸಿದು ಬಿದ್ದಾಗ ಅಧಿಕಾರಿಗಳು, ಗುತ್ತಿಗೆದಾರರು ಸೇರಿದಂತೆ ಕಾರ್ಮಿಕರು ರಾತ್ರೋರಾತ್ರಿ ಕೆಲಸ ಮಾಡುತ್ತಿರುವ ವಿಡಿಯೋ ಕೂಡ ಲಭ್ಯವಾಗಿದೆ. ಆದರೆ ಈ ಬಗ್ಗೆ ಸಂಬಂಧಪಟ್ಟ ಎಂಜಿನಿಯರ್ ನ ಕೇಳಿದರೆ ಹೇಳುವ ಕಥೆಯೇ ಬೇರೆ. ಕೋಟ್ಯಂತರ ರೂ ವೆಚ್ಚದಲ್ಲಿ ರಾಜ್ಯ ಹೆದ್ದಾರಿ 27ರಲ್ಲಿ ಸೇತುವೆಗಳ ನಿರ್ಮಾಣ ಸೇರಿದಂತೆ ರಸ್ತೆ ಕಾಮಗಾರಿಯ ಕೆಲಸ ಮಾಡಲಾಗುತ್ತಿದೆ. ಆದರೆ ಇದು ಎಷ್ಟು ಕಳಪೆಯಾಗಿದೆ ಅನ್ನೋದಕ್ಕೆ ಬಸರವಳ್ಳಿ ಗ್ರಾಮದಲ್ಲಿ ರಾತ್ರೋರಾತ್ರಿ ಕುಸಿದುಬಿದ್ದ ಸೇತುವೆಯೇ ಪ್ರತ್ಯಕ್ಷ ಉದಾಹರಣೆ.
First published: March 7, 2020, 7:08 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading