Duniya Vijay ಬರೋವರೆಗೂ ತಾಳಿ ಕಟ್ಟಿಸಿಕೊಳ್ಳಲ್ಲ: ಹಠ ಹಿಡಿದ ದಾವಣೆಗೆರೆಯ ಮದುಮಗಳು!

Duniya Vijay: ಬೆಣ್ಣೆ ನಗರಿ ದಾವಣಗೆರೆ(Davangere)ಯಲ್ಲಿ ಯುವತಿಯೊಬ್ಬಳು ತನ್ನ ಮೆಚ್ಚಿನ ನಟ ದುನಿಯಾ ವಿಜಯ್ ತನ್ನ ಮದುವೆಗೆ ಬಂದು ಅಕ್ಷತೆ ಹಾಕಿ ಆಶೀರ್ವಾದ ಮಾಡಿದರೆ ಮಾತ್ರ ಮದುವೆಯಾಗುವುದಾಗಿ ಪಟ್ಟು ಹಿಡಿದಿದ್ದಾಳೆ. 

ಆಮಂತ್ರಣ ಪತ್ರಿಕೆಯಲ್ಲಿ ದುನಿಯಾ ವಿಜಯ್​ ಚಿತ್ರ

ಆಮಂತ್ರಣ ಪತ್ರಿಕೆಯಲ್ಲಿ ದುನಿಯಾ ವಿಜಯ್​ ಚಿತ್ರ

  • Share this:
ಸಿನಿಮಾ(Movie) ಪ್ರಪಂಚ ಅಂದರೆನೇ ಹಾಗೇ..ತೆರೆ ಮೇಲೆ ಬರುವ ನಟ(Hero)ರನ್ನು ಕಂಡರೇ ಪ್ರಾಣ ಕೊಡುವ ಅಭಿಮಾನಿಗಳು ಇದ್ದಾರೆ. ಸಾಮ್ಯವಾಗಿ ಹುಡುಗರು ತಮ್ಮ ನೆಚ್ಚಿ ಹೀರೋಗಳನ್ನು ಆರಾಧಿಸುತ್ತಾರೆ. ಯುವತಿ(Girl)ಯರು ಸಿನಿಮಾ ನೋಡುತ್ತಾರೆ. ಆದರೆ, ಹುಡುಗರಿಗೆ ಸಿನಿಮಾ ಕ್ರೇಜ್(Movie Craze)​ಗಳು ಜಾಸ್ತಿ ಇರುವುದು ಎಲ್ಲರಿಗೂ ಗೊತ್ತಿರುವ ವಿಷಯ. ತಮ್ಮ ನೆಚ್ಚಿನ ನಟರೊಂದಿಗೆ ಒಂದು ಫೋಟೋ(Photo)ಗಾಗಿ ಹರಸಾಹಸ ಪಡುತ್ತಾರೆ. ಇನ್ನೂ ಕೆಲವರು ತಮ್ಮ ಮದುವೆಗೆ(Marriage) ನಮ್ಮ ಹೀರೋಗಳು ಬರಬೇಕೆಂಬ ಆಸೆ ಇರುತ್ತೆ. ಸೆಲೆಬ್ರಿಟಿಗಳು ಕೂಡ ಕೆಲ ಅಭಿಮಾನಿಗಳ ಆಸೆಯನ್ನು ಪೂರೈಸಿದ್ದಾರೆ. ಅಭಿಮಾನಿಗಳ ಮದುವೆಗಳಿಗೆ ತೆರಳಿ ಶುಭಕೋರಿದ್ದಾರೆ. ಆದರೆ ಇಲ್ಲೊಬ್ಬ ಯುವತಿ ನಟ ದುನಿಯಾ ವಿಜಯ್(Duniya Vijay)​ ಬರುವವರೆಗೂ ತಾಳಿ ಕಟ್ಟಿಸಿಕೊಳ್ಳಲ ಅಂತ ಹಠ ಹಿಡಿದಿದ್ದಾಳೆ. ಸ್ಯಾಂಡಲ್‍ವುಡ್(Sandalwood) ನಟ ದುನಿಯಾ ವಿಜಯ್ ಅವರು ಆಗಮಿಸಿ ಆಶೀರ್ವಾದ ಮಾಡಿದರೆ ಮಾತ್ರ ಮದುವೆಯಾಗುತ್ತೇನೆ ಎಂದು ಯುವತಿಯೊಬ್ಬಳು ಪಟ್ಟು ಹಿಡಿದಿದ್ದಾಳೆ. ಸಾಮಾನ್ಯವಾಗಿ ಸಂಬಂಧಿಕರು(Relative), ಸ್ನೇಹಿತರು(Friends)  ಮದುವೆಯಾಗುವುದಿಲ್ಲ.  ಆದರೆ ಬೆಣ್ಣೆ ನಗರಿ ದಾವಣಗೆರೆ(Davangere)ಯಲ್ಲಿ ಯುವತಿಯೊಬ್ಬಳು ತನ್ನ ಮೆಚ್ಚಿನ ನಟ ದುನಿಯಾ ವಿಜಯ್ ತನ್ನ ಮದುವೆಗೆ ಬಂದು ಅಕ್ಷತೆ ಹಾಕಿ ಆಶೀರ್ವಾದ ಮಾಡಿದರೆ ಮಾತ್ರ ಮದುವೆಯಾಗುವುದಾಗಿ  ಯುವತಿ ಪಟ್ಟು ಹಿಡಿದಿದ್ದಾಳೆ. 

ಗೃಹ ಪ್ರವೇಶಕ್ಕೆ ವಿಜಿ ಬರುವಂತೆ ಪಟ್ಟು ಹಿಡಿದಿದ್ದ ಅಪ್ಪ!

ದಾವಣಗೆರೆಯ ರಾಮನಗರದ ಅನುಷ ಹಠ ಹಿಡಿದ ಯುವತಿಯಾಗಿದ್ದು, ಅನುಷಾ ಕುಟುಂಬಸ್ಥರು ಎಲ್ಲರೂ ದುನಿಯಾ ವಿಜಯ್ ಅಭಿಮಾನಿಗಳಾಗಿದ್ದು, ಕಳೆದ ಐದು ವರ್ಷದ ಹಿಂದೆ ಅನುಷಾ ತಂದೆ ಶಿವಾನಂದ್ ಮನೆ ಕಟ್ಟಿಸಿ ಅದಕ್ಕೆ ದುನಿಯಾ ಋಣ ಎಂದು ಹೆಸರಿಟ್ಟಿದ್ದರು. ಅಲ್ಲದೆ ದುನಿಯಾ ವಿಜಯ್ ಬರುವವರೆಗೂ ಮನೆ ಓಪನಿಂಗ್ ಮಾಡುವುದಿಲ್ಲ ಎಂದು ಹಾಗೇಯೇ ಬಿಟ್ಟಿದ್ದರು. ಈ ವಿಚಾರ ತಿಳಿದು ವಿಜಯ್ ದಾವಣಗೆರೆಗೆ ಆಗಮಿಸಿ ಅಭಿಮಾನಿಯ ಗೃಹ ಪ್ರವೇಶ ಮಾಡಿದ್ದರು.

ಮದುವೆಗೆ ಬರಲೇಬೇಕಂತೆ ದುನಿಯಾ ವಿಜಿ!






ರಾಮನಗರದ ಶಿವಾನಂದ ಭಜಂತ್ರಿ ಅವರ ಪುತ್ರಿ ಅನುಷಾ ಅವರ ವಿವಾಹವು ಸ್ವಗೃಹದಲ್ಲಿ ನವೆಂಬರ್‌ 29ರಂದು ಪ್ರಕಾಶ್‌ ಎಂಬ ಯುವಕನ ಜೊತೆ ನಿಗದಿಯಾಗಿದೆ. ದುನಿಯಾ ವಿಜಯ್‌ ಅವರ ಅಪ್ಪಟ ಅಭಿಮಾನಿಯಾಗಿರುವ ಅನುಷಾ ಅವರು ತಮ್ಮ ಮದುವೆಗೆ ನೆಚ್ಚಿನ ನಟ ಬರಲೇಬೇಕು ಎಂದು ದಾರಿ ಕಾಯುತ್ತಿದ್ದಾರೆ. ವಿವಾಹ ಆಮಂತ್ರಣ ಪತ್ರಿಕೆಯಲ್ಲೂ ತಮ್ಮ ಫೋಟೊ ಪಕ್ಕ ನೆಚ್ಚಿನ ನಟನ ಫೋಟೊವನ್ನು ಮುದ್ರಿಸಿದ್ದಾರೆ. ‘ಒಂಟಿ ಸಲಗ’ ಎಂದು ಕೈಗೆ ಹಚ್ಚೆಯನ್ನೂ ಹಾಕಿಸಿಕೊಂಡಿದ್ದಾರೆ. ಈ ಸುದ್ದಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಇದನ್ನು ಓದಿ: ಈ ಸಿನಿಮಾದಲ್ಲಿ ಹೀರೋಯಿನ್ ಯಾಕಿಲ್ಲ? ಕೊನೆಗೂ ರಹಸ್ಯ ಬಿಚ್ಚಿಟ್ಟ ರಾಜ್ ಬಿ ಶೆಟ್ಟಿ!

‘ಬರಲಿದ್ದಾರೆ ಎಂಬ ವಿಶ್ವಾಸ ಇದೆ’

‘ನಾನು ದುನಿಯಾ ವಿಜಯ್‌ ಅಪ್ಪಟ ಅಭಿಮಾನಿ. ನನ್ನ ಮದುವೆಗೆ ವಿಜಯಣ್ಣ ಬಂದು ಅಕ್ಷತೆ ಹಾಕಬೇಕು ಎಂದು ಅಭಿಮಾನಿಗಳ ಸಂಘದ ರಾಜ್ಯ ಅಧ್ಯಕ್ಷರಿಗೆ ಮೂರು ತಿಂಗಳ ಹಿಂದೆಯೇ ಮನವಿ ಸಲ್ಲಿಸಿದ್ದೇನೆ. ಅವರು ಬಂದು ಹಾರೈಸಿದರೆ ಮಾತ್ರ ಮದುವೆ ಮಾಡಿಕೊಳ್ಳಬೇಕು ಎಂದು ನಿರ್ಧರಿಸಿದ್ದೇನೆ. ಅಭಿಮಾನಿಯ ಮನವಿಗೆ ಸ್ಪಂದಿಸಿ, ಮದುವೆಗೆ ಬರಲಿದ್ದಾರೆ ಎಂಬ ವಿಶ್ವಾಸ ಇದೆ’ ಎಂದು ಅನುಷಾ ತಮ್ಮ ಮನದಾಳದ ಆಸೆಯನ್ನು ಹೇಳಿಕೊಂಡರು.








ಇದೀಗ ಈ ಸುದ್ದಿ ಸಾಮಾಜಿಕ ಜಾಲತಾನದಲ್ಲಿ ಸಖತ್​ ವೈರಲ್ ಆಗುತ್ತಿದೆ. ಈಕೆಯದ್ದು ಅಭಿಮಾನನಾ? ಅಥವಾ ಹುಚ್ಚು ಅಭಿಮಾನನಾ ಅಂತ ನೆಟ್ಟಿಗರು ಕಮೆಂಟ್​ ಮಾಡುತ್ತಿದ್ದಾರೆ.
Published by:Vasudeva M
First published: