Mysuru: ಮಾಂಗಲ್ಯಧಾರಣೆ ವೇಳೆ ಕುಸಿದ ವಧು: ವರನ ಪೋಷಕರಿಂದ ಜೋರು ಗಲಾಟೆ; ಮುಂದೇನಾಯ್ತು?

ಪ್ರಿಯಕರನ ಸಂದೇಶಕ್ಕೆ ವರ ಬಗ್ಗದಿದ್ದಾಗ ಯುವತಿಯೇ ಮಾಂಗಲ್ಯಧಾರಣೆ ವೇಳೆ ಕುಸಿದು ಬಿದ್ದಂತೆ ಹೈಡ್ರಾಮಾ ಮಾಡಿದ್ದಾಳೆ. ಇದರಿಂದ ಮದುವೆ ನಿಂತಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮದುವೆ (Marriage) ಅನ್ನೋದು ಎರಡು ಮನಸ್ಸುಗಳ ಸಮ್ಮಿಲನ. ಜೋಡಿ (Couple) ಪರಸ್ಪರ ಒಪ್ಪಿದ ನಂತ್ರವೇ ಪೋಷಕರು (Parents) ಮದುವೆ ನಿಶ್ಚಯ ಮಾಡಬೇಕು. ಕೆಲವೊಮ್ಮೆ ಪೋಷಕರ ಒತ್ತಡದಿಂದ ಮದುವೆ ಒಪ್ಪಿಕೊಳ್ಳುವ ಯುವಕ ಅಥವಾ ಯುವತಿ ಕೊನೆ ಕ್ಷಣದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಪೋಷಕರನ್ನು ತಲೆ ತಗ್ಗಿಸುವಂತೆ ಮಾಡುತ್ತದೆ. ಹಾಗಾಗಿ ಮದುವೆ ನಿಶ್ಚಯಕ್ಕೂ ಮೊದಲೇ ಪೋಷಕರು ಮಕ್ಕಳ ಇಷ್ಟದ ಬಗ್ಗೆ ತಿಳಿದುಕೊಂಡು ಮುಂದುವರಿಯೋದು ಉತ್ತಮ. ಇಂತಹುವುದೇ ಒಂದು ಘಟನೆ ಮೈಸೂರಿನಲ್ಲಿ (Mysuru) ನಡೆದಿದೆ. ತಾಳಿಗೆ ಕೊರಳೊಡ್ಡುವ ವೇಳೆ ಕುಸಿದು ಬಿದ್ದಂತೆ ವಧು (Bride) ನಾಟಕವಾಡಿದ್ದಾಳೆ. ನಂತರ ಯುವತಿ ಪೋಷಕರ ಮುಂದೆ ಪ್ರೀತಿಯ ವಿಚಾರ ಹೇಳಿಕೊಂಡಿದ್ದಾಳೆ. ಕಲ್ಯಾಣ ಮಂಟಪದಲ್ಲಿ ಹೈಡ್ರಾಮಾ ನಡೆದು, ಮದುವೆ (Marriage Cancel) ಮುರಿದಿದೆ.

ಮೈಸೂರಿನ ವಿದ್ಯಾಭಾರತಿ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆಯುತ್ತಿತ್ತು. ಮೈಸೂರಿನ ಸುಣ್ಣದಕೇರಿಯ ಯುವತಿ ಮತ್ತು ಹೆಚ್.ಡಿ.ಕೋಟೆಯ ಯುವಕನ ಜೊತೆ ಮದುವೆ ನಿಶ್ಚಯವಾಗಿತ್ತು. ಶನಿವಾರ ಸಂಜೆ ಆರತಕ್ಷತೆಯೂ ನಡೆದಿತ್ತು. ವೇದಿಕೆ ಮೇಲೆ ನಿಂತು ಜೋಡಿ ಸಂಬಂಧಿಕರು ಮತ್ತು ಆಪ್ತರ ಜೊತೆ ನಿಂತು ಫೋಟೋಗೆ ಪೋಸ್ ನೀಡಿದ್ದರು. ಆದ್ರೆ ಭಾನುವಾರ ಹೀಗೆ ನಡೆಯುತ್ತೆ ಯಾರೂ ಊಹೆ ಸಹ ಮಾಡಿರಲಿಲ್ಲ.

ತಾಳಿ ಕಟ್ಟುವ ವೇಳೆ ವಧುವಿನ ಹೈಡ್ರಾಮಾ

ಭಾನುವಾರ ಬೆಳಗ್ಗೆ ಮದುವೆ ಮುಹೂರ್ತ ನಿಗದಿ ಆಗಿತ್ತು. ತಾಳಿ ಕಟ್ಟುವ ವೇಳೆ ವಧು ಮಾಡಿದ ನಾಟಕ ಕಂಡು ಎಲ್ಲರೂ ಅಚ್ಚರಿಗೊಳಗಾಗಿದ್ದರು. ತಾಳಿ ಕಟ್ಟುತ್ತಿರುವಾಗ ವಧು ಕುಸಿದು ಬಿದ್ದಿದ್ದಾಳೆ. ಆಗ ತಾನು ಪ್ರೀತಿಸಿದ ಯುವಕನನ್ನೇ ಮದುವೆ ಆಗಬೇಕು ಎಂದು ಯುವತಿ ಹೇಳಿದ್ದಾಳೆ.

ಇದನ್ನೂ ಓದಿ:  Hubballi Crime News: ಬನ್ರೋ ಹೋಗೋಣ ಅಂದ್ರು: ಹೋದ ಮೂವರು ಗೆಳೆಯರು ಜೈಲು ಪಾಲಾದ್ರು!

ಇನ್ನೂ ವಧುವಿನ ಮಾತು ಕೇಳುತ್ತಿದ್ದಂತೆ ವರನ ಪೋಷಕರು ದೊಡ್ಡ ಮಟ್ಟದಲ್ಲಿ ಗಲಾಟೆ ಮಾಡಿದ್ದಾರೆ. ವಿಷಯ ಮುಚ್ಚಿಟ್ಟು ಮದುವೆ ಮಾಡಿಸುತ್ತಿರೋದು ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ.

ವರನಿಗೆ ಮೆಸೇಜ್ ಕಳುಹಿಸಿದ್ದ ಪ್ರಿಯಕರ

ಯುವತಿಯ ಮದುವೆ ನಿಶ್ಚಯವಾಗುತ್ತಿದ್ದಂತೆ ಆಕೆಯ ಪ್ರಿಯಕರ ವರನಿಗೆ ಮೆಸೇಜ್ ಮಾಡಿದ್ದನು. ನಾನು ಮತ್ತು ನೀನು ಮದುವೆ ಆಗುತ್ತಿರುವ ಯುವತಿ ಇಬ್ಬರು ಪರಸ್ಪರ ಪ್ರೀತಿ ಮಾಡುತ್ತಿದ್ದೇವೆ. ನೀನು ಮದುವೆ ಆಗಬೇಡ ಎಂದು ಮೆಸೇಜ್ ಕಳುಹಿಸಿದ್ದ. ಆದ್ರೆ ಈ ಸಂದೇಶವನ್ನು ನಿರ್ಲಕ್ಷಿಸಿ ವರ ಮದುವೆ ಆಗಲು ಮುಂದಾಗಿದ್ದನು.

ಪ್ರಿಯಕರನ ಸಂದೇಶಕ್ಕೆ ವರ ಬಗ್ಗದಿದ್ದಾಗ ಯುವತಿಯೇ ಮಾಂಗಲ್ಯಧಾರಣೆ ವೇಳೆ ಕುಸಿದು ಬಿದ್ದಂತೆ ಹೈಡ್ರಾಮಾ ಮಾಡಿದ್ದಾಳೆ. ಇದರಿಂದ ಮದುವೆ ನಿಂತಿದೆ.

ಪೊಲೀಸರ ಸಮಕ್ಷಮದಲ್ಲಿ ಸಮಸ್ಯೆ ಇತ್ಯರ್ಥ

ವಧುವಿನ ಪ್ರೀತಿಯ ವಿಷಯ ತಿಳಿಯುತ್ತಿದ್ದಂತೆ ಆಕ್ರೋಶಗೊಂಡ ವರನ ಪೋಷಕರು, ಮದುವೆಗಾಗಿ ಖರ್ಚು ಮಾಡಿರುವ 5 ಲಕ್ಷ ರೂ ಮತ್ತು ವಧುವಿಗೆ ನೀಡಿರುವ ರೇಷ್ಮೆ ಸೀರೆ ಮತ್ತು ಚಿನ್ನಾಭರಣ ಹಿಂದಿರುಗಿಸುವಂತೆ ಗಲಾಟೆ ಮಾಡಿದ್ದಾರೆ. ಇದರಿಂದಾಗಿ ಕಲ್ಯಾಣ ಮಂಟಪದಲ್ಲಿ ಎರಡೂ ಕುಟುಂಬಗಳ ನಡುವೆ ಗಲಾಟೆ ಉಂಟಾಗಿತ್ತು.

ಕಲ್ಯಾಣ ಮಂಟಪಕ್ಕೆ ಆಗಮಿಸಿದ ಪೊಲೀಸರು

ಕಲ್ಯಾಣ ಮಂಟಪದಲ್ಲಿ ನಡೆಯುತ್ತಿರುವ ಗಲಾಟೆ ವಿಷಯ ಕೇಳಿ ಸ್ಥಳಕ್ಕೆ ಮೈಸೂರಿನ ಕೆ.ಆರ್.ಠಾಣೆ ಪೊಲೀಸರು ಆಗಮಿಸಿದ್ದಾರೆ. ಪೊಲೀಸರ ಮುಂದೆಯೂ ಯುವತಿ ಪ್ರೀತಿಸಿದ ಯುವಕನನ್ನೇ ಮದುವೆ ಆಗೋದಾಗಿ ಹೇಳಿದ್ದಾಳೆ.

ಇದನ್ನೂ ಓದಿ:  FDI in Karnataka: ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಭಾರತದ ದಾಖಲೆ, ಕರ್ನಾಟಕದ್ದೇ ಸಿಂಹಪಾಲು! ಅಂಕಿ ಅಂಶ ಇಲ್ಲಿದೆ

ಕೊನೆಗೆ ಪೊಲೀಸರು ಎರಡು ಕುಟುಂಬಸ್ಥರನ್ನು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ನಂತರ ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಂಡಿದ್ದಾರೆ. ವಧುವಿಗೆ ನೀಡಿದ ಚಿನ್ನಾಭರಣವನ್ನು ವರನ ಕಡೆಯುವರು ಹಿಂಪಡೆದುಕೊಂಡಿದ್ದಾರೆ. ವಧುವಿನ ಪೋಷಕರು ಠಾಣೆಯಲ್ಲಿ ವರನ ಪೋಷಕರಿಗೆ ನಷ್ಟ ಭರಿಸಿಕೊಟ್ಟಿದ್ದಾರೆ. ಆದರೆ ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ. ಯುವತಿ ಪೋಷಕರ ಜೊತೆ ಮನೆಗೆ ಹಿಂದಿರುಗಿದ್ದಾಳೆ.
Published by:Mahmadrafik K
First published: