Bride Death: ತಲೆ ಮೇಲೆ ಅಕ್ಕಿ ಕಾಳು ಹಾಕಬೇಕಿತ್ತು; ವಿಧಿಯಾಟದಿಂದಾಗಿ ಬಾಯಿಗೆ ಹಾಕುವಂತಾಗಿದೆ; ಆರತಕ್ಷತೆ ವೇಳೆ ಕುಸಿದ ವಧು
ಚೈತ್ರಾ ಆರತಕ್ಷತೆ ದಿನ ಏಕಾಏಕಿ ಕುಸಿದಿದ್ದಾಳೆ. ಪೋಷಕರು ಕೂಡಲೇ ಮಗಳನ್ನು ನಿಮಾನ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಈ ವೇಳೆಗಾಗಲೇ ಚೈತ್ರಾಳ ಮೆದುಳು ನಿಷ್ಕ್ರಿಯಗೊಂಡಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇದೀಗ ಈ ದುಃಖದ ನಡುವೆಯೇ ಪೋಷಕರು ಮಗಳ ಅಂಗಾಂಗಗಳನ್ನು ದಾನ ಮಾಡಿದ್ದಾರೆ.
Bride Death: ಸಾವು (Death) ಹೇಗೆ ಬರುತ್ತೆ ಅಂತ ಹೇಳಲು ಸಾಧ್ಯವಿಲ್ಲ. ಚೆನ್ನಾಗಿಯೇ ಮಾತನಾಡುತ್ತಿದ್ದ, ಈಗ ತಾನೇ ಅಲ್ಲಿದ್ದ, ಇಲ್ಲಿದ್ದ ಅಂತ ಜನರು ಹೇಳುತ್ತಿರುತ್ತಾರೆ. ಫೆಬ್ರವರಿ 9ರಂದು ಶಿವಮೊಗ್ಗದ ಭದ್ರಾವತಿ ಮಗನ ಮದುವೆ ಸಂತಸದಲ್ಲಿದ್ದ ತಂದೆ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಇದೀಗ ಕೋಲಾರ (Kolar) ಜಿಲ್ಲೆಯಲ್ಲಿ ಯುವತಿ ಆರತಕ್ಷತೆ ದಿನವೇ (Reception) ನಿಧನವಾಗಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ. 26 ವರ್ಷದ ಚೈತ್ರಾ ಮದುವೆ(Marriage)ಗೆ ಸಿದ್ಧಗೊಂಡಿದ್ದಳು. ಮನದಲ್ಲಿ ನೂರಾರು ಕನಸು, ಆಸೆಗಳಿದ್ದವು. ನಾಳೆ ಜೀವನದ ಮತ್ತೊಂದು ಮಹತ್ವದ ಪುಟ ತೆರೆದುಕೊಳ್ಳಲಿದೆ ಎಂದು ಸಂಭ್ರಮದಲ್ಲಿ ಚೈತ್ರಾ ಇದ್ದಳು. ಇತ್ತ ಕುಟುಂಬಸ್ಥರು ಮಗಳ ಮದುವೆ ಸಿದ್ಧತೆಯಲ್ಲಿ ತೊಡಗಿಕೊಂಡಿದ್ದರು. ಇಂದು ಆರತಕ್ಷತೆ, ನಾಳೆ ಮಗಳ ಮದುವೆ ಮಾಡಬೇಕು ಎಂದು ಓಡಾಡುತ್ತಿದ್ದ ಕುಟುಂಬಸ್ಥರು ಈಗ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. ಯುವತಿ ಸಾವಿಗೆ (Bride Death) ಕಂಬನಿ ಮಿಡಿದಿರುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ (Health Minister Dr K Sudhakar) ಸಂತಾಪ ಸೂಚಿಸಿದ್ದಾರೆ.
ಈ ಫೋಟೋದಲ್ಲಿರುವ ಯುವತಿ ಹೆಸರು ಚೈತ್ರಾ, ವಯಸ್ಸು 26. ಎಲ್ಲವೂ ಸರಿಯಾಗಿದ್ರೆ ಕುಟುಂಬಸ್ಥರು ಚೈತ್ರಾ ತಲೆ ಮೇಲೆ ಅಕ್ಕಿ ಕಾಳು ಹಾಕಬೇಕಿತ್ತು. ಆದ್ರೆ ಎಲ್ಲವೂ ವಿಧಿಯಾಟ, ಇಂದು ಮಗಳ ಬಾಯಿಗೆ ಅಕ್ಕಿಕಾಳು ಹಾಕುವ ಕಠಿಣ ಪರಿಸ್ಥಿತಿ ಬಂದಿದೆ. ಚೈತ್ರಾ ಮದುವೆ ಫೆಬ್ರವರಿ 6 ಮತ್ತು 7 ರಂದು ಹೊಸಕೋಟೆ ಮೂಲದ ಯುವಕನ ಜೊತೆ ನಿಶ್ಚಯವಾಗಿತ್ತು. ನಿಶ್ಚಯ ಮಾಡಿದಂತೆ ಆಗಿದ್ರೆ ಶ್ರೀನಿವಾಸಪುರ ಪಟ್ಟಣದ ಮಾರುತಿ ಸಭಾ ಭವನದಲ್ಲಿ ಚೈತ್ರ ಮದುವೆ ನಡೆಯಬೇಕಿತ್ತು.
ಮಗಳ ಅಂಗಾಂಗ ದಾನ ಮಾಡಿದ ಪೋಷಕರು
ಚೈತ್ರಾ ಆರತಕ್ಷತೆ ದಿನ ಏಕಾಏಕಿ ಕುಸಿದಿದ್ದಾಳೆ. ಪೋಷಕರು ಕೂಡಲೇ ಮಗಳನ್ನು ನಿಮಾನ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಈ ವೇಳೆಗಾಗಲೇ ಚೈತ್ರಾಳ ಮೆದುಳು ನಿಷ್ಕ್ರಿಯಗೊಂಡಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇದೀಗ ಈ ದುಃಖದ ನಡುವೆಯೇ ಪೋಷಕರು ಮಗಳ ಅಂಗಾಂಗಗಳನ್ನು ದಾನ ಮಾಡಿದ್ದಾರೆ.
ಟ್ವಿಟ್ಟರ್ ನಲ್ಲಿ ಚೈತ್ರಾ ಫೋಟೋ ಹಂಚಿಕೊಂಡಿರುವ ಸಚಿವ ಸುಧಾಕರ್ ಕಂಬನಿ ಮಿಡಿದಿದ್ದಾರೆ. 26 ವರ್ಷದ ಚೈತ್ರಾಗೆ ಇಂದು ದುರಂತದ ದಿನವಾಗಿದೆ. ವಿಧಿಯಾಟದಲ್ಲಿ ಅಗಲಿರುವ ಚೈತ್ರಾ ಆರತಕ್ಷತೆ ದಿನವೇ ಕುಸಿದ ಪರಿಣಾಮ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ನಿಮಾನ್ಸ್ ವೈದ್ಯರು ಮೆದುಳು ನಿಷ್ಕ್ರಿಯಗೊಂಡಿರುವ ಮಾಹಿತಿ ನೀಡಿದ್ದಾರೆ. ಇಂತಹ ಸಮಯದಲ್ಲಿಯೂ ಪೋಷಕರು ಮಗಳ ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಿದ್ದಾರೆ ಎಂದು ಸಚಿವ ಸುಧಾಕರ್ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.
It was a big day for the 26-year Chaitra but destiny had other plans. She collapsed during her wedding reception at Srinivasapur in Kolar district. She was later declared as brain dead at NIMHANS. Despite the heart breaking tragedy, her parents have decided to donate her organs. pic.twitter.com/KQZff1IEoq
ಈ ಘಟನೆ ನಡೆದಿದ್ದು, ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಗರದ ಉಜ್ಜನೀಪುರದಲ್ಲಿ. ಇಲ್ಲಿಯ ನಿವಾಸಿಯಾಗಿದ್ದ ಬೋರೆಗೌಡರ ಪುತ್ರನ ಮದುವೆ ಶಿವಮೊಗ್ಗ ಸಿದ್ರಹಳ್ಳಿ ಗ್ರಾಮದ ಯುವತಿ ಜೊತೆ ಮದುವೆ ಫಿಕ್ಸ್ ಆಗಿತ್ತು. ಫೆಬ್ರವರಿ 9 ಮತ್ತು 10ರಂದು ಎರಡೂ ಕುಟುಂಬಸ್ಥರು ಮದುವೆ ನಿರ್ಧರಿಸಿದ್ದರು. ಮದುವೆಗೆ ಎಲ್ಲ ಸಿದ್ಧತೆಯೂ ನಡೆದಿತ್ತು. ಆದ್ರೆ ವರನ ತಂದೆ ನಿಧನದಿಂದ ಮದುವೆ ಮನೆಯಲ್ಲಿ ಸೂತಕ ಆವರಿಸಿತ್ತು.
ಮಗನ ಮದುವೆ ಹಿನ್ನೆಲೆ ಬೋರೆಗೌಡರು ವಿವಿಧ ಕೆಲಸಗಳಲ್ಲಿ ಬೆಳಗ್ಗೆಯಿಂದಲೂ ಬ್ಯುಸಿಯಾಗಿದ್ರು. ಫೆ.9ರ ಮಧ್ಯಾಹ್ನ ಇದ್ದಕ್ಕಿದ್ದಂತೆ ಸುಸ್ತಾಗಿದ್ದ ಬೋರೆಗೌಡರು ಕುಸಿದಿದ್ದರು. ಕೂಡಲೇ ಕುಟುಂಬಸ್ಥರು ಸ್ಥಳೀಯ ಆಸ್ಪತ್ರೆಗೆ ಬೋರೆಗೌಡರನ್ನು ಕರೆದುಕೊಂಡು ಹೋಗಲು ಮುಂದಾಗಿದ್ದರು. ಆದ್ರೆ ಮಾರ್ಗಮಧ್ಯೆಯೇ ಬೋರೆಗೌಡರು ನಿಧನರಾಗಿದ್ದಾರೆ.
ಮಗನ ಮದುವೆ ಮಾಡಬೇಕೆಂದು ಸಡಗರದಿಂದ ಓಡಾಡುತ್ತಿದ್ದ ಹಿರಿಯ ಜೀವವನ್ನ ಕಳೆದುಕೊಂಡ ಕುಟುಂಬ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದೆ. ಕಣ್ಣೀರು ಹಾಕುತ್ತಿರುವ ಕುಟುಂಬಸ್ಥರು ದೇವರಿಗೆ ಶಾಪ ಹಾಕುತ್ತಿದ್ದಾರೆ.
Published by:Mahmadrafik K
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ