Shivamogga: ಹೆತ್ತ ಮಗುವಿಗೆ ಹಾಲುಣಿಸಲಾಗದ್ದಕ್ಕೆ ಪ್ರಾಣವೇ ಕಳೆದುಕೊಂಡ ತಾಯಿ

ಹಾಲುಣಿಸುವಿಕೆ (ಸಾಂದರ್ಭಿಕ ಚಿತ್ರ)

ಹಾಲುಣಿಸುವಿಕೆ (ಸಾಂದರ್ಭಿಕ ಚಿತ್ರ)

ಶನಿವಾರ ತಡರಾತ್ರಿ ಘಟನೆ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಶನಿವಾರ ಮನೆಯಲ್ಲಿ ಶಾಂತಾ ಹಾಗೂ ಮಗು ಕಾಣದಿದ್ದಾಗ ಪೋಷಕರು ಹುಡುಕಾಟ ನಡೆಸಿದ್ದಾರೆ. ಹೊಂಡದಲ್ಲಿ ಮಗುವಿನ ಶವ ಕಂಡು ಬಂದಿದೆ.

  • Share this:

ಶಿವಮೊಗ್ಗ: ಹತ್ತೆ ಮಗುವಿಗೆ ಹಾಲುಣಿಸಲು (Milk Feeding) ಸಾಧ್ಯವಾಗದ ಹಿನ್ನೆಲೆ ನೊಂದ ತಾಯಿ (Mother) ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಶಿವಮೊಗ್ಗ ಜಿಲ್ಲೆಯ ಸೊರಬ (Soraba, Shivamogga) ತಾಲೂಕಿನ ಕುಪ್ಪಗಡ್ಡೆ ಗ್ರಾಮದಲ್ಲಿ (Kappegadde Village) ನಡೆದಿದೆ. 28 ವರ್ಷದ ಶಾಂತಾ ಆತ್ಮಹತ್ಯೆಗೆ ಶರಣಾದ ತಾಯಿ. 40 ದಿನಗಳ ಹಿಂದೆ ಶಾಂತಾ ಹೆಣ್ಣುಮಗುವಿಗೆ ಜನ್ಮ ನೀಡಿದ್ದರು. ಆದ್ರೆ ಶಾಂತಾ ಅವರಿಗೆ ಎದೆಹಾಲು ಬಂದಿರಲಿಲ್ಲ. ಇದರಿಂದ ಶಾಂತಾ ಮಾನಸಿಕವಾಗಿ ಕುಗ್ಗಿದ್ದರು. ಮಗುವಿಗೆ ಹಾಲುಣಿಸಲು ಆಗುತ್ತಿಲ್ಲ. ಇದರಿಂದ ಮಗು ಸೊರಗುತ್ತಿದೆ ಎಂದು ಶಾಂತಾ ನೊಂದಿದ್ದರು. ಇದೀಗ ಮಗುವಿನೊಂದಿಗೆ ಹೊಂಡಕ್ಕೆ ಹಾರಿ ಶಾಂತಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


ಶನಿವಾರ ತಡರಾತ್ರಿ ಘಟನೆ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಶನಿವಾರ ಮನೆಯಲ್ಲಿ ಶಾಂತಾ ಹಾಗೂ ಮಗು ಕಾಣದಿದ್ದಾಗ ಪೋಷಕರು ಹುಡುಕಾಟ ನಡೆಸಿದ್ದಾರೆ. ಹೊಂಡದಲ್ಲಿ ಮಗುವಿನ ಶವ ಕಂಡು ಬಂದಿದೆ.


ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಮಗು ಮತ್ತು ತಾಯಿ ಶವವನ್ನ ಹೊಂಡದಿಂದ ಹೊರಗೆ ತೆಗೆದಿದ್ದಾರೆ.


ಮೊದಲ ಹೆರಿಗೆ


28 ವರ್ಷದ ಶಾಂತಾ ಅವರನ್ನು ಸೊರಬ ತಾಲೂಕಿನ ಜಡ್ಡಿಹಳ್ಳಿ ಗ್ರಾಮದ ಮಧು ಎಂಬವರೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ಶಾಂತಾ ಅವರಿಗೆ ಇದು ಚೊಚ್ಚಲ ಹೆರಿಗೆಯಾಗಿತ್ತು. ಈ ಸಂಬಂಧ ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




50 ಕ್ವಿಂಟಾಲ್ ಹತ್ತಿ ಬೆಂಕಿಗಾಹುತಿ


ಆಕಸ್ಮಿಕವಾಗಿ ಬೆಂಕಿ ತಗುಲಿ 50 ಕ್ವಿಂಟಾಲ್ ಹತ್ತಿ ಬೆಂಕಿಗಾಹುತಿಯಾದ ಘಟನೆ ಯಾದಗಿರಿಯ ಗುರುಮಠಕಲ್ ತಾಲೂಕಿನ ಬದ್ದೆಪಲ್ಲಿ ಗ್ರಾಮದಲ್ಲಿ ನಡೆದಿದೆ.


ಇದನ್ನೂ ಓದಿ:   Crime News: 6 ತಿಂಗಳ ಕಂದಮ್ಮನನ್ನು ಬಿಟ್ಟು ನೇಣಿಗೆ ಕೊರಳೊಡ್ಡಿದ ತಾಯಿ

top videos


    ರೈತ ಬುಗ್ಗಪ್ಪಗೆ ಎಂಬವರು ಹತ್ತಿ ಬೆಲೆ ಇಳಿಕೆ ಹಿನ್ನೆಲೆ ಜಮೀನಿನ ಮನೆಯಲ್ಲಿ ಹತ್ತಿ ಸಂಗ್ರಹಿಸಿಟ್ಟಿದ್ದರು. ಈ ವೇಳೆ ಹತ್ತಿ, ಎರಡು ಕುರಿ ಸೇರಿ 6 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ. ಈ ಘಟನೆ ಸಂಬಂಧ ಸೈದಾಪುರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು