ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡರ ಆಪ್ತನ ಮನೆ ಮೇಲೆ ಅರಣ್ಯಾಧಿಕಾರಿಗಳ ದಾಳಿ; ನಕ್ಷತ್ರ ಆಮೆ, ಪಿಸ್ತೂಲ್, ಶ್ರೀಗಂಧ ವಶ

ಕಾಂಗ್ರೆಸ್ ಶಾಸಕರ ಆಪ್ತ ಶಬರೀಶ್​ ಆನೆದಂತ ಕಳ್ಳಸಾಗಾಟ ಮಾಡುತ್ತಿದ್ದ ವೇಳೆ 2 ದಿನಗಳ ಹಿಂದೆ ಆತನನ್ನು ಬಂಧಿಸಲಾಗಿತ್ತು. ಬಂಧನದ ಬಳಿಕ ಶಬರೀಶ್ ಮನೆ ಮೇಲೆ ದಾಳಿ ನಡೆಸಲಾಗಿತ್ತು.

ಕಾಂಗ್ರೆಸ್​ ಶಾಸಕರ ಆಪ್ತ ಅಕ್ರಮವಾಗಿ ಸಂಗ್ರಹಿಸಿಟ್ಟುಕೊಂಡಿದ್ದ ವಸ್ತುಗಳನ್ನು ವಶಕ್ಕೆ ಪಡೆದ 
ಚಿಕ್ಕಮಗಳೂರು ಅರಣ್ಯಾಧಿಕಾರಿಗಳು

ಕಾಂಗ್ರೆಸ್​ ಶಾಸಕರ ಆಪ್ತ ಅಕ್ರಮವಾಗಿ ಸಂಗ್ರಹಿಸಿಟ್ಟುಕೊಂಡಿದ್ದ ವಸ್ತುಗಳನ್ನು ವಶಕ್ಕೆ ಪಡೆದ ಚಿಕ್ಕಮಗಳೂರು ಅರಣ್ಯಾಧಿಕಾರಿಗಳು

  • Share this:
ಚಿಕ್ಕಮಗಳೂರು (ಮಾ. 1): ಶೃಂಗೇರಿ ಕಾಂಗ್ರೆಸ್ ಶಾಸಕ ಟಿ.ಡಿ. ರಾಜೇಗೌಡರ ಆಪ್ತನ ಮನೆ ಮೇಲೆ ಚಿಕ್ಕಮಗಳೂರಿನ ಅರಣ್ಯಾಧಿಕಾರಿಗಳು ದಾಳಿ ನಡೆಸಿ, ನಕ್ಷತ್ರ ಆಮೆ, ಕಲ್ಲು ಆಮೆ, ಪಿಸ್ತೂಲ್, ಗಂಧದ ತುಂಡು ಸೇರಿದಂತೆ ಅಕ್ರಮವಾಗಿ ಸಂಗ್ರಹಿಸಿದ್ದ ಅನೇಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಶಾಸಕ ಟಿ.ಡಿ. ರಾಜೇಗೌಡರ ಆಪ್ತನಾಗಿರುವ ಶಬರೀಶ್ ಎಂಬಾತನ ಮನೆಯ ಮೇಲೆ ಚಿಕ್ಕಮಗಳೂರು ಅರಣ್ಯಾಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಆತನ ಮನೆಯಲ್ಲಿ ಸಂಗ್ರಹಿಸಿದ್ದ ನಕ್ಷತ್ರ ಆಮೆ,ಕಲ್ಲು ಆಮೆ, ಗನ್, ಪಿಸ್ತೂಲ್, ಬುಲೆಟ್​ಗಳು, ಗಂಧದ ತುಂಡು, ಜಿಲೆಟಿನ್ ಕಡ್ಡಿ, ಸ್ಫೋಟಕಗಳನ್ನು ವಶಕ್ಕೆ ಪಡೆಯಲಾಗಿದೆ. ಶೃಂಗೇರಿ ಪಟ್ಟಣದ ಕಾಂಚಿನಗರದಲ್ಲಿರುವ ಮನೆಯಲ್ಲಿ ಈ ವಸ್ತುಗಳನ್ನು ಅಕ್ರಮವಾಗಿ ಸಂಗ್ರಹಿಸಿಡಲಾಗಿತ್ತು.

ಇದನ್ನೂ ಓದಿ: ಚಿಕ್ಕಮಗಳೂರು ಉತ್ಸವದಲ್ಲಿ ಹೆಂಡತಿ- ಮಕ್ಕಳೊಂದಿಗೆ ಸಚಿವ ಸಿ.ಟಿ. ರವಿ ಭರ್ಜರಿ ಡ್ಯಾನ್ಸ್​

ಶಾಸಕರ ಆಪ್ತ ಶಬರೀಶ್​ ಆನೆದಂತ ಕಳ್ಳಸಾಗಾಟ ಮಾಡುತ್ತಿದ್ದ ವೇಳೆ 2 ದಿನಗಳ ಹಿಂದೆ ಆತನನ್ನು ಬಂಧಿಸಲಾಗಿತ್ತು. ಬಂಧನದ ಬಳಿಕ ಶಬರೀಶ್ ಮನೆ ಮೇಲೆ ದಾಳಿ ನಡೆಸಲಾಗಿತ್ತು. ಶಬರೀಶ್ ಅವರ ಅಪ್ಪ ರಮೇಶ್​ನನ್ನು ಕೂಡ ಈ ವೇಳೆ ಬಂಧಿಸಲಾಗಿತ್ತು. ಈ ಪ್ರಕರಣದ ತನಿಖೆಯಲ್ಲಿ ಮೂಗು ತೂರಿಸದಂತೆ ಕಾಂಗ್ರೆಸ್ ಶಾಸಕ ಟಿ.ಡಿ. ರಾಜೇಗೌಡರಿಗೆ ಬಿಜೆಪಿ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ.
First published: