ರಾಜ್ಯಾದ್ಯಂತ ಖಾಸಗಿ ಶಾಲೆಗಳಲ್ಲಿ ಪ್ರೇಮಿಗಳ ದಿನದ ಆಚರಣೆಗೆ ಬ್ರೇಕ್..!

ಇತ್ತೀಚಿನ ದಿನಗಳಲ್ಲಿ ಪ್ರೇಮ ವಿಚಾರದಲ್ಲಿ ಮಕ್ಕಳಲ್ಲಿ ಗುಂಪುಗಾರಿಕೆ, ಕೊಲೆ ಹೊಡೆದಾಟದಂತಹ ಘಟನೆಗಳು ವರದಿಯಾಗುತ್ತಿವೆ. ಇದು ಮಕ್ಕಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ

G Hareeshkumar | news18
Updated:February 12, 2019, 4:26 PM IST
ರಾಜ್ಯಾದ್ಯಂತ ಖಾಸಗಿ ಶಾಲೆಗಳಲ್ಲಿ ಪ್ರೇಮಿಗಳ ದಿನದ ಆಚರಣೆಗೆ ಬ್ರೇಕ್..!
ಸಾಂದರ್ಭಿಕ ಚಿತ್ರ
G Hareeshkumar | news18
Updated: February 12, 2019, 4:26 PM IST
ಬೆಂಗಳೂರು (ಫೆ.12) : ಪ್ರೇಮಿಗಳ ದಿನಕ್ಕೆ ಇನ್ನೂ ಕೇವಲ ಎರಡೇ ದಿನ... ಪ್ರೀತಿಸಿದವರಿಗೆ ಇಷ್ಟವಾದ್ದನ್ನು ಕೊಟ್ಟು ಖುಷಿ ಪಡಿಸಲು ಬೇಕಾದ ಎಲ್ಲ ಸಿದ್ದತೆಗಳೊಂದಿಗೆ ಕಾಯುತ್ತಿದ್ದಾರೆ... ಇದಕ್ಕೆ ಶಾಲಾ-ಕಾಲೇಜುಗಳೂ ಹೊರತಾಗಿಲ್ಲ.

ಆದರೆ ಈ ಬಾರಿ ರಾಜ್ಯದಾದ್ಯಂತ ಖಾಸಗಿ ಶಾಲೆಗಳಲ್ಲಿ ಪ್ರೇಮಿಗಳ ದಿನಾಚರಣೆಗೆ ಬ್ರೇಕ್ ಬಿದ್ದಿದೆ. ಈ ಬಗ್ಗೆ ಕರ್ನಾಟಕ ಖಾಸಗಿ ಶಾಲೆಗಳ ಆಡಳಿತ ಮಂಡಳಿಯ ಸಂಘಟನೆ ಖಾಸಗಿ ಶಾಲೆಗಳಿಗೆ ಸೂಚನೆ ನೀಡಿದೆ ಎನ್ನಲಾಗಿದೆ.

ಸೂಚನೆಗಳು ಹೀಗಿವೆ...

ಮನೆಗಳಲ್ಲಿ ಪೋಷಕರು, ಶಾಲೆಗಳಲ್ಲಿ ಶಿಕ್ಷಕರು ಹಾಗೂ ಸದಸ್ಯರು ವಿದ್ಯಾರ್ಥಿಗಳ ಬ್ಯಾಗ್​ಗಳನ್ನು ಪರಿಶೀಲಿಸಬೇಕು. ಅನುಮತಿ ಇಲ್ಲದ ಚೀಲಗಳನ್ನು ಮಕ್ಕಳು ಶಾಲೆಯ ಒಳಗೆ ತಂದರೆ ಅವುಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಪತ್ರದಲ್ಲಿ ತಿಳಿಸಲಾಗಿದೆಇತ್ತೀಚಿನ ದಿನಗಳಲ್ಲಿ ಪ್ರೇಮ ವಿಚಾರದಲ್ಲಿ ಮಕ್ಕಳಲ್ಲಿ ಗುಂಪುಗಾರಿಕೆ, ಕೊಲೆ ಹೊಡೆದಾಟದಂತಹ ಘಟನೆಗಳು ವರದಿಯಾಗುತ್ತಿವೆ. ಇದು ಮಕ್ಕಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಈ ನಿರ್ಧಾರ ತೆಗೆದುಕೊಳ್ಳಲಾಗಿದೆಯಂತೆ.


Loading...

'ಶಾಲಾ ಆವರಣದಲ್ಲಿ ಪ್ರೇಮಿಗಳ ದಿನದಂದು ಗ್ರೀಟಿಂಗ್​ ಕಾಡ್​ರ್ ಸೇರಿದಂತೆ ಯಾವ ರೀತಿಯ  ಉಡುಗೊರೆಗಳನ್ನು ವಿನಿಮಯ ಮಾಡುವಂತಿಲ್ಲ. ಆ ದಿನದಂದು ಮಕ್ಕಳು ಚಟುವಟಿಕೆಗಳ ಮೇಲೆ ಕಣ್ಣಿಡಬೇಕು. ಶಾಲೆಗೆ ಬರುತ್ತಾರೋ ಇಲ್ಲವೇ ಬೇರೆ ಕಡೆ ಹೋಗಿ ಸಮಯ ಕಳೆಯುತ್ತಾರೋ ಎನ್ನುವುದರ ಬಗ್ಗೆ ಹೆಚ್ಚು ಗಮನ ಹರಿಸಬೇಕು' ಎಂದು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ಹೇಳಿದ್ದಾರೆ.

ಇದನ್ನೂ ಓದಿ :  ಆಡಿಯೋ ಪ್ರಕರಣ: ಎಸ್​ಐಟಿ ತನಿಖೆಗೆ ಒಪ್ಪಿಸಲೇಬೇಕು ಇದೇ ನನ್ನ ಇಂಗಿತ; ರಮೇಶ್​ ಕುಮಾರ್​

ಪ್ರೇಮಿಗಳ ದಿನಾಚರಣೆ ದಿನ ಕೆಂಪು ಬಟ್ಟೆ ತೊಡುವ ಸಾಧ್ಯತೆ ಇರುತ್ತದೆ. ಈ ಬಣ್ಣ ಪ್ರೇಮದ ಸಂಕೇತವಾಗಿದೆ. ಕೆಲವು ಮಕ್ಕಳು ಮನೆಯಿಂದ ಸಮಸ್ತ್ರದಲ್ಲಿ ಹೊರಟು ಬೇರೆ ಕಡೆ ಬಟ್ಟೆ ಬದಲಿಸಿ ಕೆಂಪು ಬಣ್ಣದ ಬಟ್ಟೆ ತೊಟ್ಟುಕೊಳ್ಳುತ್ತಾರೆ. ಈ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬಾರದೆಂದು ವಿದ್ಯಾರ್ಥಿಗಳಿಗೆ ಪಾಲಕರು ತಿಳಿಸಬೇಕು ಎಂದು ಕ್ಯಾಮ್ಸ್ ಪತ್ರದಲ್ಲಿ ತಿಳಿಸಿದೆ.
First published:February 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ