ಕೋಲಾರ (ಜು.3): ಊರ ಹಬ್ಬ ಅಂದ್ರೆ ನೆನಪಾಗೋದು ಹಾಡು, ಡ್ಯಾನ್ಸು. ಆದ್ರೆ ಕೋಲಾರಲ್ಲಿ ಇನ್ಮುಂದೆ ಹಾಡು, ಡ್ಯಾನ್ಸ್ಗೆ (Dance) ಬ್ರೇಕ್ ಬೀಳಲಿದೆ. ಟಪ್ಪಾಂಗುಚ್ಚಿ ಸ್ಪೆಪ್ಸ್ ಹಾಕುವ ಕರಗ ಪೂಜಾರಿಗಳ ಮೇಲೆ ಕ್ರಿಮಿನಲ್ ಕೇಸ್ (Criminal Case) ದಾಖಲಿಸಲು ನಿರ್ಧಾರ ಮಾಡಲಾಗಿದೆ. ಕೋಲಾರ (Kolara) ನಗರದಲ್ಲಿ ತಿಗಳ ಜನಾಂಗದ ಸಮನ್ವಯ ಸಮಿತಿ ಸಭೆ ನಡೆಸಿ ಈ ನಿರ್ಧಾರ ಕೈಗೊಂಡಿದೆ. ಸಭೆಯಲ್ಲಿ ಕರಗ ದೇಗುಲಗಳ ಸಮಿತಿ ಸದಸ್ಯರು, ಕರಗ ಪೂಜಾರಿಗಳು (Karaga Poojari) ಭಾಗಿಯಾಗಿದ್ರು. ಕರಗ ಆಚರಿಸುವ ವಿಚಾರದಲ್ಲಿ ತಿಗಳ ಸಮುದಾಯದ ಕಟ್ಟುಪಾಡು ಪಾಲಿಸಲು ಒಕ್ಕೂರಲ ನಿರ್ಧಾರ ಕೈಗೊಳ್ಳಲಾಗಿದೆ. ಸಿನಿಮಾ ಹಾಡುಗಳಿಗೆ ಸ್ಟೆಪ್ ಹಾಕಿದ್ದ ಕರಗ ಪೂಜಾರಿಯ ವಿಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿತ್ತು. ಹೀಗಾಗಿ ಕರಗ ದೇಗುಲಗಳ ಸಮಿತಿ ಈ ನಿರ್ಧಾರ ಕೈಗೊಂಡಿದೆ.
ಸಿನಿಮಾ ಹಾಡಿಗೆ ಪೂಜಾರಿ ಸ್ಟೆಪ್
ಸಿನಿಮಾ ಹಾಡುಗಳಿಗೆ ಸ್ಟೆಪ್ ಹಾಕಿದ್ದ ಕರಗ ಪೂಜಾರಿಯ ವಿಡಿಯೋ ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದಕ್ಕೆ ಭಕ್ತರು ಕಾಮೆಂಟ್ ಕೂಡ ಮಾಡಿದ್ರು. ಕರಗ ಪೂಜಾರಿಗಳು ಸಿನಿಮಾ ಹಾಡುಗಳಿಗೆ ಕುಣಿಯೋದು ಸರಿಯಲ್ಲ. ಇದು ಜನರ ಧಾರ್ಮಿಕ ಭಾವನೆಗಳಿಗೆ ಅಡ್ಡಿಯಾಗಲಿದೆ ಎಂದು ಆನೇಕ ಜನರು ತಮ್ಮ ಅಭಿಪ್ರಾಯ ತಿಳಿಸಿದ್ರು.
ಕರಗ ಆಚರಣೆಯಲ್ಲಿ ಪಾವಿತ್ರ್ಯತೆ ಕಾಪಾಡಿ
ಹೀಗಾಗಿ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ತಿಗಳ ಜನಾಂಗದ ಸಮನ್ವಯ ಸಮಿತಿಯಿಂದ ಸಭೆ ನಡೆಸಿದ್ರು, ಸಭೆಯಲ್ಲಿ ತಿಗಳ ಜನಾಂಗದ ನಾಯಕರಾದ ಪಲ್ಲವಿ ಮಣಿ, ಮಂಜುನಾಥ್, ಜಿಲ್ಲಾಧ್ಯಕ್ಷ್ಯ ಉದಯ್ ಕುಮಾರ್ ಭಾಗಿಯಾಗಿದ್ರು. ಬೆಂಗಳೂರು ಕರಗದಂತೆ ಕರಗ ಆಚರಣೆಯಲ್ಲಿ ಪಾವಿತ್ರ್ಯತೆ ಕಾಪಾಡಿ ಎಂದು ಸಮುದಾಯದ ಸದಸ್ಯರು ಕರೆ ನೀಡಿದ್ದಾರೆ.
ಇದನ್ನೂ ಓದಿ: BMTC ಬಸ್ನಲ್ಲಿ ಇನ್ಮುಂದೆ ಕಂಡಕ್ಟರ್ ಇರೋದಿಲ್ಲ! ಟಿಕೆಟ್ ಪಡೆಯೋದು ಹೇಗೆ ಗೊತ್ತಾ?
ಚಿಕ್ಕ ತಿರುಪತಿಯಲ್ಲಿ ಭಕ್ತರ ಗತಿ ಗೋವಿಂದ ಗೋವಿಂದ
ಕೋಲಾರ: ಮಾಲೂರು (Malur) ತಾಲೂಕಿನ ಪ್ರಸನ್ನ ವೆಂಕಟೇಶ್ವರ ಸ್ವಾಮಿ ದೇಗುಲ (Prasanna Venkateshwara Swamy Temple) 'ಚಿಕ್ಕ ತಿರುಪತಿ'ಯೆಂದು (Chikka Tirupathi) ಹೆಸರುವಾಸಿ. ಆಂಧ್ರದ ತಿರುಪತಿ ದೇಗುಲಕ್ಕೆ ಹೋಗಲಾರದ ಸಾವಿರಾರು ಭಕ್ತರು (Devotees) ನಿತ್ಯ ಇಲ್ಲಿಗೆ ಭೇಟಿ ನೀಡುತ್ತಾರೆ. ಜೊತೆಗೆ ಆಂಧ್ರ, ತಮಿಳುನಾಡು, ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆಯಿಂದ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ವಾರಾಂತ್ಯದಲ್ಲಿ ಇಲ್ಲಿಗೆ ಬರೋ ಭಕ್ತರು ತಮ್ಮ ತಲೆ ಕೂದಲ ಹರಕೆಯನ್ನು ದೇವರಿಗೆ ಸಮರ್ಪಣೆ ಮಾಡುವುದುಂಟು. ದೇವರ ಹರಕೆ ತೀರಿಸುವ ಭಕ್ತರು ಸ್ನಾನದ (Bath) ಬಿಸಿ ನೀರಿಗಾಗಿ (Hot Water) ಪರದಾಡುವಂತಾಗಿದೆ. ವಾರ್ಷಿಕ ಎರಡೂವರೆ ಕೋಟಿ (2.5 Crores) ರೂಪಾಯಿಗು ಹೆಚ್ಚು ಆದಾಯವಿರೊ ಜಿಲ್ಲೆಯ ಶ್ರೀಮಂತ ದೇಗುಲ ಎಂಬ ಖ್ಯಾತಿಯನ್ನ ಗಳಿಸಿದ್ದರೂ, ಇಲ್ಲಿ ಭಕ್ತರಿಗೆ ಸರಿಯಾದ ವ್ಯವಸ್ಥೆ ಇಲ್ಲ.
ಇದನ್ನೂ ಓದಿ: Suicide: ಪ್ರೀತಿ ನಿರಾಕರಿಸಿದ್ದಕ್ಕೆ ಮನನೊಂದು ಯುವಕ ನೇಣಿಗೆ ಶರಣು
ಸಾಮೂಹಿಕ ಕೋಣೆಯಲ್ಲಿ ಮಹಿಳೆಯರ ಸ್ನಾನ!
ಇಲ್ಲಿ ಪ್ರತ್ಯೇಕ ಸ್ನಾನದ ಕೊಠಡಿ ಇಲ್ಲ, ಎಲ್ಲರು ಒಂದು ಕೋಣೆಯಲ್ಲೆ ನಿಂತು ಸ್ನಾನ ಮಾಡಬೇಕು. ಮಹಿಳೆಯರಿಗೆ ಪ್ರತ್ಯೇಕ ಕೊಠಡಿ ವ್ಯವಸ್ತೆಯಿಲ್ಲದೇ, ಎಲ್ಲರೂ ಒಟ್ಟಿಗೆ ಸ್ನಾನ ಮಾಡುವುದು ಇರುಸು ಮುರುಸು ಉಂಟು ಮಾಡುವ ಸಂಗತಿಯಾಗಿದೆ. ಚಳಿಗಾಲದಲ್ಲಿ ಕೊರೆಯುವ ಚಳಿಯಲ್ಲೂ ತಣ್ಣೀರಲ್ಲೆ ಸ್ನಾನ ಮಾಡುವ ದುಃಸ್ಥಿತಿ ಇದೆ. ಬೇರೆ ದಾರಿಯಿಲ್ಲದೆ ಬಿಸಿ ನೀರಿಗಾಗಿ ಖಾಸಗಿಯವರ ಮನೆಗಳನ್ನ ಭಕ್ತರು ಆಶ್ರಯಿಸಿದ್ದಾರೆ. ಮಕ್ಕಳ ಸ್ನಾನಕ್ಕಾಗಿ 30, 50 ರುಪಾಯಿ ನೀಡಿ, ರಸ್ತೆ ಬದಿಯ ಶೆಡ್ಗಳಲ್ಲಿ ಮಕ್ಕಳಿಗೆ ಸ್ನಾನ ಮಾಡಿಸಿ ದೇವರ ದರ್ಶನಕ್ಕೆ ತೆರಳುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ