ಕರಾವಳಿ ಕ್ರೀಡೆ ಕಂಬಳಕ್ಕೆ ಮತ್ತೆ ತಡೆ​? ಸುಪ್ರೀಂ ಕೋರ್ಟ್​​ ಮೊರೆ ಹೋದ ಪೇಟಾ

ಕಂಬಳ ನಡೆಸಲು ಅನೇಕ ನಿಯಮಾವಳಿಗಳನ್ನು ರೂಪಿಸಲಾಗಿದೆ. ಕೋಣಗಳಿಗೆ ಹೊಡೆಯುವಂತಿಲ್ಲ, ಕೋಣಗಳ ಓಟಕ್ಕೆ ಬೆತ್ತ ಹಿಡಿಯುವಂತಿಲ್ಲ, ಮೂಗಿಗೆ ಹಗ್ಗ ಹಾಕಬಾರದು, ನೂರು ಮೀಟರ್ ಗಿಂತ ಹೆಚ್ಚು ವೇಗದಲ್ಲಿ ಕೋಣಗಳನ್ನು ಓಡಿಸುವಂತಲ್ಲ, ಹೆಚ್ಚಿನ ಉಷ್ಣಾಂಶವಿದ್ದ ವೇಳೆ ಕೋಣಗಳನ್ನು ಓಡಿಸಲೇಬಾರದು ಎಂಬಿತ್ಯಾದಿ ನಿಯಮಾವಳಿಗಳ ಸಹಿತ ಅನೇಕ ಷರತ್ತುಗಳನ್ನು ಹೇರಲಾಗಿದೆ.

Latha CG | news18-kannada
Updated:November 21, 2019, 10:57 PM IST
ಕರಾವಳಿ ಕ್ರೀಡೆ ಕಂಬಳಕ್ಕೆ ಮತ್ತೆ ತಡೆ​? ಸುಪ್ರೀಂ ಕೋರ್ಟ್​​ ಮೊರೆ ಹೋದ ಪೇಟಾ
ಕಂಬಳ
  • Share this:
ಉಡುಪಿ(ನ.21): ಕರಾವಳಿಯಲ್ಲಿ ಕಂಬಳ ಕೋಣದ ಓಟಕ್ಕೆ ಮತ್ತೆ ಬ್ರೇಕ್ ಬೀಳುವ ಅಪಾಯ ಕಂಡು ಬರುತ್ತಿದೆ. ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ ಕೊಟ್ಟ ನಂತರ ಕಳೆದ ವರ್ಷ ಕಂಬಳದ ಜಾತ್ರೆ ಸುಸೂತ್ರವಾಗಿ ನಡೆದಿತ್ತು. ಆದರೆ ಈ ಕಂಬಳಗಳಲ್ಲಿ ನಡೆದ ಲೋಪದೋಷಗಳನ್ನೇ ಮುಂದಿಟ್ಟುಕೊಂಡು ಮತ್ತೆ 'ಪೇಟಾ' ಸುಪ್ರೀಂ ಕೋರ್ಟ್ ಮೊರೆ ಹೋಗಿದೆ. ನವೆಂಬರ್ ಅಂತ್ಯದಲ್ಲಿ ಆರಂಭವಾಗಬೇಕಾದ ಕಂಬಳದ ಸೀಸನ್ ಗೆ ಮತ್ತೊಮ್ಮೆ ಹಿನ್ನಡೆಯಾಗುವ ಅಪಾಯ ಎದುರಾಗಿದೆ.

ಕರಾವಳಿಯಲ್ಲಿ ನಡೆಯುವ ಕೋಣಗಳ ಓಟ ಜಗದ್ವಿಖ್ಯಾತ. ಕಂಬಳ ಅಂದ ತಕ್ಷಣ ಕರಾವಳಿ ಜನರಿಗೆ ರೋಮಾಂಚನವಾಗುತ್ತದೆ. ಆದರೆ ಕಳೆದ ಕೆಲವು ವರ್ಷಗಳಿಂದ ಕಂಬಳಕ್ಕೆ ಕರಾಳಛಾಯೆ ವ್ಯಾಪಿಸಿದೆ. ಪ್ರಾಣಿದಯಾ ಸಂಘವಾದ ‘ಪೇಟಾ’ದವರು ಕಂಬಳದಲ್ಲಿ ನಡೆಯುವ ಕೋಣಗಳ ಮೇಲಿನ ಹಿಂಸೆಯನ್ನು ಉದ್ದೇಶವಾಗಿಟ್ಟುಕೊಂಡು, ಕಾನೂನು ಹೋರಾಟ ಆರಂಭಿಸಿದ ನಂತರ ಕಂಬಳದ ವೇಗಕ್ಕೆ ಬ್ರೇಕ್ ಬಿದ್ದಿದೆ. ಒಂದು ವರ್ಷ ಕಂಬಳ ನಡೆದರೆ ಮತ್ತೊಂದು ವರ್ಷ ನಡೆಯಲ್ಲ.

ಸಿದ್ದರಾಮಯ್ಯನವರಿಗೆ ನನ್ನ ಮೇಲೆ ಪ್ರೀತಿ ಜಾಸ್ತಿ; ಸಚಿವ ಶ್ರೀರಾಮುಲು

ಕಳೆದ ವರ್ಷ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ ಕೊಟ್ಟ ಹಿನ್ನೆಲೆಯಲ್ಲಿ ನಿಯಮಾವಳಿಗಳ ಅನುಸಾರ ಕಂಬಳ ನಡೆದಿತ್ತು. ಆದರೆ ಕೆಲವೊಂದು ಕಂಬಳಗಳಲ್ಲಿ ನಡೆದ ನಿಯಮಬಾಹಿರ ವರ್ತನೆಯನ್ನೇ ಮುಂದಿಟ್ಟುಕೊಂಡು ಪೇಟಾದವರು ಈ ಬಾರಿ ಮತ್ತೊಮ್ಮೆ ತಡೆಯಾಜ್ಞೆ ತರಲು ಮುಂದಾಗಿದ್ದಾರೆ. ಕಳೆದ ವರ್ಷನಡೆದ ಕಂಬಳಗಳ ಪೈಕಿ ನಾಲ್ಕು ಕಡೆ ಅಂದರೆ ಬಾರಾಡಿ, ಮೂಡಬಿದಿರೆ, ವಾಮಂಜೂರು ಮತ್ತು ಕೂಳೂರಿನಲ್ಲಿ ನಿಯಮಬಾಹಿರವಾಗಿ ವರ್ತಿಸಲಾಗಿದೆ. ಕೋಣಗಳ ಮೇಲೆ ಹಿಂಸೆ ನಡೆದಿದೆ ಎಂದು ಪೇಟಾದವರು ಮತ್ತೊಮ್ಮೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಇದು ಕಂಬಳ ಪ್ರೇಮಿಗಳ ನೋವಿಗೂ ಕಾರಣವಾಗಿದೆ.

ಕಂಬಳ ನಡೆಸಲು ಅನೇಕ ನಿಯಮಾವಳಿಗಳನ್ನು ರೂಪಿಸಲಾಗಿದೆ. ಕೋಣಗಳಿಗೆ ಹೊಡೆಯುವಂತಿಲ್ಲ, ಕೋಣಗಳ ಓಟಕ್ಕೆ ಬೆತ್ತ ಹಿಡಿಯುವಂತಿಲ್ಲ, ಮೂಗಿಗೆ ಹಗ್ಗ ಹಾಕಬಾರದು, ನೂರು ಮೀಟರ್ ಗಿಂತ ಹೆಚ್ಚು ವೇಗದಲ್ಲಿ ಕೋಣಗಳನ್ನು ಓಡಿಸುವಂತಲ್ಲ, ಹೆಚ್ಚಿನ ಉಷ್ಣಾಂಶವಿದ್ದ ವೇಳೆ ಕೋಣಗಳನ್ನು ಓಡಿಸಲೇಬಾರದು ಎಂಬಿತ್ಯಾದಿ ನಿಯಮಾವಳಿಗಳ ಸಹಿತ ಅನೇಕ ಷರತ್ತುಗಳನ್ನು ಹೇರಲಾಗಿದೆ.

ಇದು ಲಂಚ ಯೋಜನೆಯಲ್ಲದೇ ಮತ್ತೇನು? ಚುನಾವಣಾ ಬಾಂಡ್​ಗಳ ಎಲ್ಲಾ ವಿವರ ಬಹಿರಂಗಗೊಳಿಸಿ: ಸಂಸತ್​ನಲ್ಲಿ ಸರ್ಕಾರಕ್ಕೆ ಕಾಂಗ್ರೆಸ್ ಆಗ್ರಹ

ಆದರೆ ಕೋಣಗಳ ಮಾಲೀಕರಿಗೆ ಈ ಎಲ್ಲಾ ಮಾಹಿತಿಗಳ ಕೊರತೆಯಿಂದ ಕಳೆದ ಬಾರಿ ಕಂಬಳ ನಡೆದಾಗ ಕೆಲವೊಂದು ಸಣ್ಣಪುಟ್ಟ ದೋಷಗಳು ಆಗಿವೆ. ಇದರ ವಿಡಿಯೋ ಚಿತ್ರೀಕರಣ ಮಾಡಿಕೊಂಡ ಪೇಟಾದವರು ಮತ್ತೊಮ್ಮೆ ತಡೆಯಾಜ್ಞೆ ಕೋರಿ ಸುಪ್ರೀಂ ಮೊರೆ ಹೋಗಿದ್ದಾರೆ. ಸದ್ಯ ಈ ಪ್ರಕರಣ ಸುಪ್ರೀಂ ಕೋರ್ಟ್​​​​ನ ಸಾಂವಿಧಾನಿಕ ಪೀಠದಲ್ಲಿ , ಐವರು  ನ್ಯಾಯಮೂರ್ತಿಗಳ ಮುಂದಿದೆ. ಯಾವಾಗ ವಿಚಾರಣೆ ಆರಂಭವಾಗುತ್ತೋ ಗೊತ್ತಿಲ್ಲ. ನವೆಂಬರ್ ಅಂತ್ಯಕ್ಕೆ ಆರಂಭವಾಗ ಬೇಕಾದ ಕಂಬಳಕ್ಕೆ ಈ ತೀರ್ಪಿನಿಂದ ಯಾವ ರೀತಿಯ ಪರಿಣಾಮವಾಗುತ್ತೆ ಎನ್ನುವ ಭಯ ಕಂಬಳಪ್ರಿಯರಲ್ಲಿದೆ.ಕಂಬಳ ಒಂದು ಆರಾಧನಾ ಕಲೆ. ದೈವಗಳ ಆರಾಧನೆಯ ಭಾಗವಾಗಿ ಕೋಣಗಳನ್ನು ಓಡಿಸುವುದು ಪದ್ದತಿ. ಕ್ರಮೇಣ ಇದಕ್ಕೆ ಸ್ಪರ್ಧೆಯ ಸ್ವರೂಪ ಬಂದಿದ್ದು, ಕಂಬಳದ ಕಾಲಮಾನ ಮತ್ತು ನಂಬಿಕೆಗಳನ್ನು ಕೋರ್ಟ್ ಮುಂದೆ ನಿರೂಪಿಸುವ ಬಹುದೊಡ್ಡ ಸವಾಲಿದೆ. ನಿಯಮಾವಳಿಗಳನ್ನು ಮೀರದೆ ಕಂಬಳ ನಡೆಸೋದು ಕೂಡಾ ಸುಲಭದ ಕೆಲಸವಲ್ಲ. ಮುಂದೇನಾಗುತ್ತೋ ಕಾದು ನೊಡಬೇಕು.

(ವರದಿ: ಪರೀಕ್ಷಿತ್ ಶೇಟ್)
First published:November 21, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading