• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Davanagere: ಮೋದಿ ಕಾರ್ಯಕ್ರಮದಲ್ಲಿ ಭದ್ರತಾಲೋಪ; ಪ್ರಧಾನಿ ಬಳಿ ಓಡಿ ಬಂದ ಯುವಕನ್ಯಾರು?

Davanagere: ಮೋದಿ ಕಾರ್ಯಕ್ರಮದಲ್ಲಿ ಭದ್ರತಾಲೋಪ; ಪ್ರಧಾನಿ ಬಳಿ ಓಡಿ ಬಂದ ಯುವಕನ್ಯಾರು?

ಭದ್ರತಾ ಲೋಪ?

ಭದ್ರತಾ ಲೋಪ?

ಇನ್ನು ವಿಜಯಸಂಕಲ್ಪ ಮಹಾಸಂಗಮದಲ್ಲಿ ವೇದಿಕೆಯತ್ತ ನುಗ್ಗಿಬಂದ ಜನರ ಮೇಲೆ ಪೊಲೀಸರು ಲಾಠಿ ಬೀಸಿದ್ದಾರೆ. ಕಾರ್ಯಕ್ರಮದ ಹಿನ್ನೆಲೆ ಆಗಮಿಸಿದ್ದ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.

  • News18 Kannada
  • 4-MIN READ
  • Last Updated :
  • Davanagere, India
  • Share this:

ದಾವಣಗೆರೆ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಮಹಾಸಂಗಮದಲ್ಲಿ ಭದ್ರತಾ ಲೋಪ ಕಂಡುಬಂದಿದೆ. ಪ್ರಧಾನಿಗಳು ತೆರಳುತ್ತಿದ್ದ ವಾಹನದ ಬಳಿಗೆ ಏಕಾಏಕಿ ಯುವಕನೋರ್ವ ನುಗ್ಗಿ ಬಂದಿದ್ದನು. ಈ ವೇಳೆ ಎಚ್ಚೆತ್ತುಕೊಂಡ SPG ತಂಡ ಯುವಕನನ್ನ ತಡೆದಿದ್ದಾರೆ. ಆ ಬಳಿಕ ಯುವಕನನ್ನ (Youth) ಬಿಟ್ಟು ಕಳಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರೋ ಕಾನೂನು ಸುವ್ಯವಸ್ಥೆ ADGP ಅಲೋಕ್​ ಕುಮಾರ್ (ADGP Alok Kumar), ಇದು ಭದ್ರತಾ ಲೋಪ ಅಲ್ಲ, ಸಾಕಷ್ಟು ದೂರದಿಂದಲೇ ಹಿಡಿದು ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ. ನಿಷೇಧಿತ ಪ್ರದೇಶಕ್ಕೆ ಎನ್​ಸಿಸಿ ಅಧಿಕಾರಿ (NCC Officer) ಪ್ರವೇಶ ನೀಡಿದ ಘಟನೆಯೂ ನಿನ್ನೆ ನಡೆದಿದೆ.


ಈ ಸಂಬಂಧ ಮಾಧ್ಯಮವೊಂದಕ್ಕೆ ದಾವಣಗೆರೆ ಎಸ್​ಪಿ ರಿಷ್ಯಂತ್ ಪ್ರತಿಕ್ರಿಯೆ ನೀಡಿದ್ದಾರೆ. ಯಾವುದೇ ಭದ್ರತಾ ಲೋಪ ಉಂಟಾಗಿಲ್ಲ. ಬ್ಯಾರಿಕೇಡ್ ಬಿದ್ದ ಕಾರಣ ಯುವಕ ಮುಂದಕ್ಕೆ ಓಡಿ ಬಂದಿದ್ದಾನೆ. ಪ್ರಧಾನಿಗಳು ಮತ್ತು ಯುವಕನಿಗೆ 20 ಅಡಿ ಅಂತರವಿತ್ತು ಎಂದು ಎಸ್​ಪಿ ಹೇಳಿದ್ದಾರೆ.


ಯಾರು ಈ ಯುವಕ?


ಯುವಕ ಬಸವರಾಜ್ ಕೊಪ್ಪಳ ತಾಲೂಕಿನ ಗುಡ್ಲಾನೂರಿನ ನಿವಾಸಿ. 28 ವರ್ಷದ ಬಸವರಾಜ್ ಬಿಜೆಪಿ ಕಾರ್ಯಕರ್ತನಾಗಿದ್ದು, ಕಾರ್ಯಕ್ರಮದ ಹಿನ್ನೆಲೆ ದಾವಣಗೆರೆಗೆ ಆಗಮಿಸಿದ್ದನು. ಕುಡಿತದ ದಾಸನಾಗಿರುವ ಬಸವರಾಜ್ ಮದ್ಯ ಸೇವಿಸಿ ಬಂದು ಜಗಳ ಮಾಡುತ್ತಿದ್ದ ಎಂದು ವರದಿಯಾಗಿದೆ.



ಪೊಲೀಸರಿಂದ ಜನರಿಗೆ ಲಾಠಿ ರುಚಿ


ಇನ್ನು ವಿಜಯಸಂಕಲ್ಪ ಮಹಾಸಂಗಮದಲ್ಲಿ ವೇದಿಕೆಯತ್ತ ನುಗ್ಗಿಬಂದ ಜನರ ಮೇಲೆ ಪೊಲೀಸರು ಲಾಠಿ ಬೀಸಿದ್ದಾರೆ. ಕಾರ್ಯಕ್ರಮದ ಹಿನ್ನೆಲೆ ಆಗಮಿಸಿದ್ದ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.




ಇದನ್ನೂ ಓದಿ: DK Shivakumar: ಸಿ ಟಿ ರವಿ ವಿರುದ್ಧ ಮೊಕದ್ದಮೆ ಹೂಡಲು ಡಿ ಕೆ ಶಿವಕುಮಾರ್​ ನಿರ್ಧಾರ!

top videos


    ಇನ್ನು ವೇದಿಕೆಯ ಸುತ್ತಲಿದ್ದ ಎಲ್ಲಾ ದ್ವಾರಗಳನ್ನು ಬಂದ್ ಮಾಡಲಾಗಿತ್ತು. ಶೌಚಾಲಯಕ್ಕೂ ತೆರಳಲು ಬಿಡುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದರು.

    First published: