Ramanagara: ಭ್ರಷ್ಟಾಚಾರದ ಬ್ಯ್ರಾಂಡ್! ಸಚಿವ ಅಶ್ವಥ್ ನಾರಾಯಣ್​​ಗೆ ಡಿಕೆಶಿ ಟಾಂಗ್

ಡಿ.ಕೆ.ಶಿವಕುಮಾರ್ ಭ್ರಷ್ಟಾಚಾರದ ಬ್ರಾಂಡ್ ಎಂದು ಅಶ್ವಥ್ ನಾರಾಯಣ್ ಹೇಳಿಕೆ ವಿಚಾರವಾಗಿ ಮಾತನಾಡಿಯಾರು ಭ್ರಷ್ಟಾಚಾರ ಮಾಡಿದ್ದಾರೆ ಅವರನ್ನ ತನಿಖೆ ಮಾಡಲು ಹೇಳಿ, ಜೀವಂತವಾಗಿದ್ದಾರೆ, ಅಧಿಕಾರದಲ್ಲಿ ಇದ್ದಾರೆ. PSI ಅಕ್ರಮ ನೇಮಕಾತಿ ಅಥವಾ ಅರ್ಕಾವತಿ ವಿಷಯದಲ್ಲಿ ಹಗರಣ ಮಾಡಿದ್ರೆ ತನಿಖೆ ಮಾಡಲಿ ಎಂದಿದ್ದಾರೆ.

ಡಿಕೆ ಶಿವಕುಮಾರ್

ಡಿಕೆ ಶಿವಕುಮಾರ್

  • Share this:
ರಾಮನಗರ(ಜೂ.07): ಜಿಲ್ಲೆಯ ಕನಕಪುರದ (Kanakapura) ಯಡಮಾರನಹಳ್ಳಿ ಗ್ರಾಮದಲ್ಲಿ ನೂತನ ಸಿದ್ದಪ್ಪಾಜಿ ದೇವಸ್ಥಾನ ಉದ್ಘಾಟನಾ ಸಮಾರಂಭದಲ್ಲಿ ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DKShivakumar) ಭಾಗಿಯಾಗಿದ್ದರು.‌ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಸ್ವಾಮೀಜಿಯವರು ಸಹ ಉಪಸ್ಥಿತಿ ಇದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್PSI ಅಕ್ರಮ ನೇಮಕಾತಿಯಲ್ಲಿ (Recruitment) ಮಾಗಡಿಯ ದರ್ಶನ್ ಗೌಡ ಅರೆಸ್ಟ್ ವಿಚಾರವಾಗಿ ಮಾತನಾಡಿ ನನಗೆ ಏನು ಸತ್ಯ ಗೊತ್ತಿತ್ತು ಅದರ ಆಧಾರದ ಮೇಲೆ ಹೇಳಿದ್ದೆ, ಅವತ್ತು ಸಿಒಡಿ ಯವರು ಕರೆದುಕೊಂಡು ಹೋಗಿದ್ದರು, ಮತ್ತೆ ಕಳುಹಿಸಿದ್ದರು ಎಂದಿದ್ದಾರೆ.

ವಿಚಾರಣೆ ಮಾಡದೇ ಹೇಗೆ ಹೇಳಲು ಸಾಧ್ಯ, ಫೋನ್ ಯಾರು ಮಾಡಿದ್ದರು, ಯಾಕೆ ಮಾಡಿದ್ದರೂ ಎಂಬುದು ಹೇಳಿರಲಿಲ್ಲ. ಬಹಳ ಅಬ್ಬರದಿಂದ ಸರ್ಕಾರದವರು, ಮಂತ್ರಿಗಳು ಮಾತನಾಡ್ತಿದ್ದರು.‌ ಈಗ ಕರೆದುಕೊಂಡು ಹೋಗಿದ್ದಾರೆ, ನಮಗೆ ಎಲ್ಲಾ ಗೊತ್ತಿತ್ತು. ನಮ್ಮ ಜಿಲ್ಲೆಯಲ್ಲಿ ಎಷ್ಟು ಜನ ಪಾಸಾಗಿದ್ದಾರೆ ಅನ್ನೋದು, ಮುಚ್ಚೋಕೆ ಏನೇನು ಪ್ರಯತ್ನ ಮಾಡಿದ್ದರು. ಈಗ ಕರೆದುಕೊಂಡು ಹೋಗಿ FIR ಫೈಲ್ ಮಾಡಿದ್ದಾರೆ ಎಂದಿದ್ದಾರೆ.

18 - 20 ಜನ ಹುಡುಗರನ್ನ ಅರೆಸ್ಟ್ ಮಾಡಿದರೆ ಸಾಲುವುದಿಲ್ಲ

ಪಾಪ ಆ ಹುಡುಗರು ಬಾಳೆಹಣ್ಣು ತಿನ್ನೋಕೆ ಬಂದೋರು, ಅಂಗಡಿ ಓಪನ್ ಇದ್ದರೆ ವ್ಯಾಪಾರಕ್ಕೆ ಬರ್ತಾರೆ.‌ ಇದರಲ್ಲಿ ಯಾವ ರಾಜಕಾರಣಿ, ಆಫೀಸರ್ ಇದ್ದರೂ ಹೊರತರಬೇಕು.  ಬರೀ 18 - 20 ಜನ ಹುಡುಗರನ್ನ ಅರೆಸ್ಟ್ ಮಾಡಿದರೆ ಸಾಲುವುದಿಲ್ಲ, ನಮಗೂ ಎಲ್ಲಾ ವಿಚಾರ ಗೊತ್ತಿದೆ ಎಂದಿದ್ದಾರೆ.

ಅಶ್ವತ್ಥ್ ನಾರಾಯಣ್​ಗೆ ಟಾಂಗ್

ಒಬ್ಬನಿಗೆ ಪ್ರತ್ಯೇಕವಾಗಿ ಇನ್ ಸರ್ವೀಸ್ ಆರ್ಡರ್ ಮಾಡಿದ್ದಾರೆ ಗೊತ್ತಿದೆ. ಬಹಳದೊಡ್ಡ ಭ್ರಷ್ಟಾಚಾರದ ಕೂಪ ಕರ್ನಾಟಕದಲ್ಲಿದೆ, ಇದರ ವಿರುದ್ಧ ಅಲ್ಲ ಎಲ್ಲಾ ನೇಮಕಾತಿಯಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ನಮ್ಮ ಹೋರಾಟ ನಡೆಯಲಿದೆ. ‌ನನ್ನ ಹೋರಾಟ ಇದೊಂದೇ ಅಲ್ಲ, ಎಲ್ಲಾ ನಿರುದ್ಯೋಗ ಯುವಕರ ಹಿತದೃಷ್ಟಿಯಿಂದ ನನ್ನ ಹೋರಾಟ ಎಂದು ಸಚಿವ ಅಶ್ವಥ್ ನಾರಾಯಣ ಗೆ ಡಿ.ಕೆ.ಶಿವಕುಮಾರ್ ಟಾಂಗ್ ನೀಡಿದರು.

ನಮ್ಮನ್ನೆಲ್ಲ ತೋಡಿ ಸಮಾಧಿ ಮಾಡಲಿ

ಇನ್ನು  ಕಾಂಗ್ರೆಸ್ ನಾಯಕರು ಅವರ ಹಳ್ಳ ಅವರೇ ತೋಡಿಕೊಳ್ತಿದ್ದಾರೆಂಬ ಅಶ್ವಥ್ ನಾರಾಯಣ ಹೇಳಿಕೆಗೆ ಪ್ರತಿಕ್ರಿಯೆ ನೀಡಿ ಆಯ್ತು ನಮ್ಮನ್ನೆಲ್ಲ ತೋಡಿ ಸಮಾಧಿ ಮಾಡಲಿ ನಡೀರಿ ಎಂದರು.

ಇದನ್ನೂ ಓದಿ: Puttur: ಉಪ್ಪಿನಂಗಡಿ ಕಾಲೇಜಿಗೆ ಹಿಜಾಬ್ ಧರಿಸಿ‌ ಬಂದರೆ ಕಠಿಣ ಕ್ರಮ! ಶಾಸಕ ಮಠಂದೂರು ವಾರ್ನಿಂಗ್

ಡಿ.ಕೆ.ಶಿವಕುಮಾರ್ ಭ್ರಷ್ಟಾಚಾರದ ಬ್ರಾಂಡ್ ಎಂದು ಅಶ್ವಥ್ ನಾರಾಯಣ್ ಹೇಳಿಕೆ ವಿಚಾರವಾಗಿ ಮಾತನಾಡಿಯಾರು ಭ್ರಷ್ಟಾಚಾರ ಮಾಡಿದ್ದಾರೆ ಅವರನ್ನ ತನಿಖೆ ಮಾಡಲು ಹೇಳಿ, ಜೀವಂತವಾಗಿದ್ದಾರೆ, ಅಧಿಕಾರದಲ್ಲಿ ಇದ್ದಾರೆ. PSI ಅಕ್ರಮ ನೇಮಕಾತಿ ಅಥವಾ ಅರ್ಕಾವತಿ ವಿಷಯದಲ್ಲಿ ಹಗರಣ ಮಾಡಿದ್ರೆ ತನಿಖೆ ಮಾಡಲಿ ಎಂದಿದ್ದಾರೆ.

ತನಿಖೆ ಮಾಡಲು ಇಲ್ಲಿ ಯಾರು ಬೇಡ ಅನ್ನೋಲ್ಲ

ಅವರ ಬಳಿ ಇನ್ನೂ ಅಧಿಕಾರ ಇದೆ‌. ತನಿಖೆ ಮಾಡಲು ಇಲ್ಲಿ ಯಾರು ಬೇಡ ಅನ್ನೋಲ್ಲ. ಇಲ್ಲಿ ಜನ ಯಾರ ಕಡೆ ಬೆರಳು ಮಾಡಿ ತೋರಿಸುತ್ತಿದ್ದಾರೆ. ಎಲ್ಲಾ ಸಾಕ್ಷಿ ಕಣ್ಣಲ್ಲೇ ಸಿಗುತ್ತಾ ಇದೆಎಂದು ಅಶ್ವಥ್ ನಾರಾಯಣ್ ಗೆ ಟಾಂಗ್ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಭ್ರಷ್ಟಾಚಾರದ ಬ್ಯ್ರಾಂಡಿಂಗ್ ಡಿಕೆಶಿ ಎಂದಿದ್ದ ಅಶ್ವಥ್ ನಾರಾಯಣ ಗೆ ಟಾಂಗ್ ನೀಡಿದರು.
Published by:Divya D
First published: