Dharwad: ಜಿರೋ ಟ್ರಾಫಿಕ್​ನಲ್ಲಿ ಹೃದಯ ರವಾನೆ; ಮುಸ್ಲಿಂ ಯುವಕನ ಜೀವ ಉಳಿಸಿತು ಹಿಂದೂ ಯುವತಿ ಹೃದಯ

ಬೆಳಗಾವಿಯ ಕೆಎಲ್​​​​ಇ ಆಸ್ಪತ್ರೆಯಲ್ಲಿ 22 ವರ್ಷದ ಮುಸ್ಲಿಂ ಯುವಕನೊಬ್ಬ ಹೃದ್ರೋಗದಿಂದ ಬಳಲುತ್ತಿದ್ದರು. ಆ ಯುವಕನಿಗೆ ಕಸಿ ಮಾಡಲು ಬಾಲಕಿಯ ಹೃದಯವನ್ನು ರವಾನಿಸಲಾಗಿದೆ. ಜೀರೋ ಟ್ರಾಫಿಕ್​ನಲ್ಲಿ 2 ಪೊಲೀಸ್ ಬೆಂಗಾವಲು ವಾಹನದ ಸಹಾಯದಿಂದ ಕೆಎಲ್​ಇ ಆಸ್ಪತ್ರೆಗೆ ಬಾಲಕಿಯ ಹೃದಯ ರವಾನೆ ಆಗಿದೆ.

ಹೃದಯ ರವಾನೆ

ಹೃದಯ ರವಾನೆ

  • Share this:
ಧಾರವಾಡ (ಮೇ.11):  ಮೆದುಳು ನಿಷ್ಕ್ರಿಯಗೊಂಡ (Brain Is Inactive) ಯುವತಿಯ ಅಂಗಾಂಗಳು 4 ಜನರ ಜೀವ ಉಳಿಸಿದೆ. ಇದಕ್ಕಾಗಿ ಝೀರೊ ಟ್ರಾಫಿಕ್ (Zero Traffic) ಮೂಲಕ ಇಲ್ಲಿನ ಎಸ್‌ಡಿಎಂಯಿಂದ (SDM) ಅಂಗಾಂಗಗಳನ್ನು ಸಾಗಿಸಲಾಯಿತು. 17 ವರ್ಷದ ಬಾಲಕಿ ಇಲ್ಲಿನ ಎಸ್‌ಡಿಎಂ ಆಸ್ಪತ್ರೆಯಲ್ಲಿ ಕಳೆದ ಕೆಲ ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದ ಮೆದುಳು  ನಿಷ್ಕ್ರಿಯಗೊಂಡಿದೆ ಎಂದು ವೈದ್ಯರು (Doctor) ಘೋಷಿಸಿದರು. ಹೀಗಾಗಿ ಆಕೆಯ ಹೃದಯ ಮತ್ತು ಯಕೃತ್‌ ಅನ್ನು ದಾನ ಮಾಡಲು ಪಾಲಕರು ಒಪ್ಪಿಗೆ ಸೂಚಿಸಿದ್ದರು. ಆದರೆ ಗುರುತು ಬಹಿರಂಗಪಡಿಸಲು ನಿರಾಕರಿಸಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಹೃದಯವನ್ನು ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಯಲ್ಲಿ (Belagavi KLE Hospital) ಚಿಕಿತ್ಸೆ ಪಡೆಯುತ್ತಿರುವ ಯುವಕನಿಗೆ ನೀಡಲು ಇಲ್ಲಿಂದ ಆಂಬುಲೆನ್ಸ್ ಮೂಲಕ ಕೊಂಡೊಯ್ಯಲಾಯಿತು.

ಹಾಗೆಯೇ ಬೆಂಗಳೂರಿನ ಅಪೊಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಗೆ ಯಕೃತ್ ಕಸಿ ಮಾಡಲಾಗುತ್ತಿದ್ದು, ಅದಕ್ಕಾಗಿ ಹುಬ್ಬಳ್ಳಿ ವಿಮಾನ ನಿಲ್ದಾಣವರೆಗೆ ಝೀರೊ ಟ್ರಾಫಿಕ್‌ ಮೂಲಕ ಆಂಬುಲೆನ್ಸ್‌ಗಳು ತೆರಳಿದವು 2 ಮೂತ್ರಪಿಂಡಗಳಲ್ಲಿ ಒಂದು ಎಸ್‌ಡಿಎಂ ಆಸ್ಪತ್ರೆ ಹಾಗೂ ಹುಬ್ಬಳ್ಳಿಯ ತತ್ವದರ್ಶಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇಬ್ಬರಿಗೆ ಕಸಿ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಆಸ್ಪತ್ರೆಯಿಂದ ಸೋಮವಾರ ಸಂಜೆ ಸುಮಾರು 4.30ರ ಹೊತ್ತಿಗೆ ಹೊರಟ ಆಂಬುಲೆನ್ಸ್‌ಗಳು ಸಾಗುವ ಮಾರ್ಗದಲ್ಲಿ ಪೊಲೀಸರು ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಇದನ್ನೂ ಓದಿ: Karnataka Politics: ಇದು ಸಿದ್ದರಾಮೋತ್ಸವ ಅಲ್ಲ, ಸಿದ್ದರಾಮ ಉರುಸ್​; ಯತ್ನಾಳ್ ವ್ಯಂಗ್ಯ

50 ನಿಮಿಷದಲ್ಲಿ ಆಸ್ಪತ್ರೆ ತಲುಪಿದ ಹೃದಯ

ಬೆಳಗಾವಿಯ ಕೆಎಲ್​​​​ಇ ಆಸ್ಪತ್ರೆಯಲ್ಲಿ 22 ವರ್ಷದ ಮುಸ್ಲಿಂ ಯುವಕನೊಬ್ಬ ಹೃದ್ರೋಗದಿಂದ ಬಳಲುತ್ತಿದ್ದರು. ಆ ಯುವಕನಿಗೆ ಕಸಿ ಮಾಡಲು ಬಾಲಕಿಯ ಹೃದಯವನ್ನು ರವಾನಿಸಲಾಗಿದೆ. ಜೀರೋ ಟ್ರಾಫಿಕ್​ನಲ್ಲಿ 2 ಪೊಲೀಸ್ ಬೆಂಗಾವಲು ವಾಹನದ ಸಹಾಯದಿಂದ ಕೆಎಲ್​ಇ ಆಸ್ಪತ್ರೆಗೆ ಬಾಲಕಿಯ ಹೃದಯ ರವಾನೆ ಆಗಿದೆ. ಕೇವಲ 50 ನಿಮಿಷದಲ್ಲಿ ಅಂಗಾಂಗ ಆಸ್ಪತ್ರೆಯನ್ನು ತಲುಪಿದೆ. ಹೃದಯ ಶಸ್ತ್ರಚಿಕಿತ್ಸೆ ತಜ್ಞ ಡಾ. ರಿಚರ್ಡ್ ಸಾಲ್ಡಾನಾ ನೇತೃತ್ವದಲ್ಲಿ 6 ಗಂಟೆಗಳ ಕಾಲ ಹೃದಯ ಚಿಕಿತ್ಸೆ ನಡೆಯಲಿದೆ.

ಇದನ್ನೂ ಓದಿ: Mysuru Dasara 2022: ದಸರಾ ಗಜಪಡೆಗೆ 5 ಹೊಸ ಆನೆ; ಜಂಬೂ ಪಡೆಗೆ ಭರ್ಜರಿ ತಾಲೀಮು

ಹೃದಯ ಕಸಿ ಮಾಡಲು ಹಲವು ಕಾರಣಗಳು

ವಿಫಲವಾದ ಮತ್ತು ಅಪಸಾಮಾನ್ಯ ಹೃದಯದ ಸಂದರ್ಭದಲ್ಲಿ ಹೃದಯ ಕಸಿ ಅಗತ್ಯವಿರುತ್ತದೆ, ಇದನ್ನು ಇತರ ವಿಧಾನಗಳಿಂದ ಚಿಕಿತ್ಸೆ ನೀಡಲು ಸಾಧ್ಯವಿಲ್ಲ. ಹೃದಯ ಕಸಿ ಮಾಡುವ ಕೆಲವು ಕಾರಣಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ.

ರಕ್ತ ಕಟ್ಟಿ ಹೃದಯ ಸ್ಥಂಭನ - ಹೃದಯ ಸ್ನಾಯು ದುರ್ಬಲಗೊಳ್ಳುವುದರಿಂದ ಅದು ರಕ್ತವನ್ನು ಸಮರ್ಥವಾಗಿ ಪಂಪ್ ಮಾಡಲು ವಿಫಲವಾಗುತ್ತದೆ. ಇದು ಸಂಭವಿಸಬಹುದು

ತೀವ್ರ ಮಯೋಕಾರ್ಡಿಯಲ್ ಇನ್ಫ್ರಾಕ್ಷನ್

ಹೃದಯ ಸ್ನಾಯುಗಳ ವೈರಲ್ ಸೋಂಕು

ಅಧಿಕ ರಕ್ತದೊತ್ತಡ (ಅಧಿಕ ರಕ್ತದೊತ್ತಡ)

ಮಾರಣಾಂತಿಕ ವಾಲ್ವುಲರ್ ಹೃದಯ ಕಾಯಿಲೆ

ಜನ್ಮಜಾತ ಹೃದಯ ಸ್ಥಿತಿ

ಕಾರ್ಡಿಯಾಕ್ ಆರ್ಹೆತ್ಮಿಯಾ (ಅನಿಯಮಿತ ಹೃದಯ ಬಡಿತ)

ಶ್ವಾಸಕೋಶದ ಅಧಿಕ ರಕ್ತದೊತ್ತಡ

ದೀರ್ಘಕಾಲದ ಶ್ವಾಸಕೋಶದ ಕಾಯಿಲೆ

ಹೃದಯ ಶಸ್ತ್ರಚಿಕಿತ್ಸೆಗಳು ಮತ್ತು ಇತರ ಅಂಗಾಂಗ ಬದಲಿ ವೈದ್ಯಕೀಯ ಆರೈಕೆಗಾಗಿ ಭಾರತವು ಪ್ರಮುಖ ರಾಷ್ಟ್ರಗಳಲ್ಲಿ ಒಂದಾಗಿದೆ. ಭಾರತೀಯ ಶಸ್ತ್ರಚಿಕಿತ್ಸಕರು ತಮ್ಮ ಕೌಶಲ್ಯ ಮತ್ತು ಅನುಭವಕ್ಕಾಗಿ ವಿಶ್ವದಾದ್ಯಂತ ಪ್ರಸಿದ್ಧರಾಗಿದ್ದಾರೆ. ಭಾರತದ ಆಸ್ಪತ್ರೆಗಳು ಯಶಸ್ವಿ ಕಸಿಗಾಗಿ ಇತ್ತೀಚಿನ ಮತ್ತು ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿವೆ.
Published by:Pavana HS
First published: