• Home
  • »
  • News
  • »
  • state
  • »
  • Organ Donation: ಮೆದುಳು ನಿಷ್ಕ್ರಿಯಗೊಂಡಿದ್ದ ಮಗನ ಅಂಗಾಂಗ ದಾನ; ಸಾವಿನಲ್ಲೂ ಸಾರ್ಥಕತೆ ಮೆರೆದ ಪೋಷಕರು

Organ Donation: ಮೆದುಳು ನಿಷ್ಕ್ರಿಯಗೊಂಡಿದ್ದ ಮಗನ ಅಂಗಾಂಗ ದಾನ; ಸಾವಿನಲ್ಲೂ ಸಾರ್ಥಕತೆ ಮೆರೆದ ಪೋಷಕರು

ಮೃತ ವಿದ್ಯಾರ್ಥಿ ಚಂದ್ರು

ಮೃತ ವಿದ್ಯಾರ್ಥಿ ಚಂದ್ರು

ಕಾರು ಡಿಕ್ಕಿಯಾಗಿ ತೀವ್ರ ಅಸ್ವಸ್ಥಗೊಂಡಿದ್ದ ಚಂದ್ರುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಕಾರಣ ಚಂದ್ರುವಿನ ಬ್ರೈನ್ ಡೆಡ್ ಆಗಿರೋದಾಗಿ ವೈದ್ಯರು ಪೋಷಕರಿಗೆ ತಿಳಿಸಿದ್ದರು.

  • Share this:

ಹಾಸನ: ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮೆದುಳು ನಿಷ್ಕ್ರಿಯಗೊಂಡಿದ್ದ (Brain death) ಯುವಕ ಅಂಗಾಂಗ ದಾನ (Organ Donation) ಮಾಡಿ ಸಾವಿನ ನೋವಲ್ಲೂ ಪೋಷಕರು ಸಾರ್ಥಕತೆ ಮೆರೆದ ಘಟನೆ ಹಾಸನದಲ್ಲಿ ನಡೆದಿದೆ. ಜಿಲ್ಲೆಯ ಆಲೂರು ತಾಲೂಕಿನ ಹೊಲ್ಲಹಳ್ಳಿ ಗ್ರಾಮದ ವಿದ್ಯಾರ್ಥಿ (PUC Student) ಚಂದ್ರು (17)ವಿನ ಅಂಗಾಂಗಳನ್ನು ಸೋಮಶೇಖರ್ ಮೀನಾಕ್ಷಿ ದಂಪತಿ ದಾನ ಮಾಡಿ, ಇತರರಿಗೆ ಜೀವದಾನ ನೀಡಿದ್ದಾರೆ.


ಏನಿದು ಘಟನೆ?


ಜನವರಿ 8ರಂದು ಹಾಸನದ ಆಲೂರು ಸಮೀಪ ಅಪಘಾತದಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿ ಚಂದು(17) ಗಂಭೀರವಾಗಿ ಗಾಯಗೊಂಡಿದ್ದ. ಕಾರು ಡಿಕ್ಕಿಯಾಗಿ ತೀವ್ರ ಅಸ್ವಸ್ಥಗೊಂಡಿದ್ದ ಚಂದ್ರುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆತಂದು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.


ಮೃತ ವಿದ್ಯಾರ್ಥಿ ಚಂದ್ರು


ಇದನ್ನೂ ಓದಿ: PM Modi: 'ಮೋದಿ ಮನುಷ್ಯ ಅಲ್ರಿ ದೇವರು; ಅದಕ್ಕೆ ಹಾರ ಹಾಕಲು ಹೋಗಿದ್ದೆ'- ಕೇಳಿದ್ರಾ 12ರ ಬಾಲಕನ ಮಾತು?


ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಕಾರಣ ಚಂದ್ರುವಿನ ಬ್ರೈನ್ ಡೆಡ್ ಆಗಿರೋದಾಗಿ ವೈದ್ಯರು ಪೋಷಕರಿಗೆ ತಿಳಿಸಿದ್ದರು. ಈ ವೇಳೆ ದುಃಖದಲ್ಲೂ ನಿನ್ನೆ ಸೋಮಶೇಖರ್ ಮೀನಾಕ್ಷಿ ದಂಪತಿ ಪೋಷಕರು ಮಗನ ಅಂಗಾಂಗ ದಾನಕ್ಕೆ ಸಮ್ಮತಿ ಸೂಚಿಸಿದ್ದರು. ಇಂದು ಆಲೂರಿನ ತಾಲೂಕು ಕ್ರೀಡಾಂಗಣ ಮೈದಾನದಲ್ಲಿ ಅಗಲಿದ ವಿದ್ಯಾರ್ಥಿಗೆ ಅಂತಿಮ ನಮನ ಸಲ್ಲಿಸಲು ಅವಕಾಶ ನೀಡಲಾಗಿದೆ.


ಸರ್ಕಾರಿ ಆಸ್ಪತ್ರೆ ದುಸ್ಥಿತಿ


ಒಂದೇ ಡ್ರಿಪ್ ಸೆಟ್‍ನ್ನು ಮೂರ್ನಾಲ್ಕು ರೋಗಿಗಳಿಗೆ ಹಾಕುತ್ತಿರುವ ಘಟನೆ ಹಾಸನ ಜಿಲ್ಲೆಯ (Hassan) ಜಾವಗಲ್​ನಲ್ಲಿ (Javagal) ನಡೆದಿದೆ. ಒಂದು ಸೂಜಿಯನ್ನು ಮತ್ತೊಬ್ಬರಿಗೆ ಹಾಕಬಾರದು. ಹಾಗೆ ಸೂಜಿ ಚುಚ್ಚಿದರೆ ಒಬ್ಬರಿಂದ ಮತ್ತೊಬ್ಬರಿಗೆ ರೋಗ ಹರಡುವ ಸಾಧ್ಯತೆಯಿರುತ್ತದೆ ಎಂದು ತಿಳಿದಿದ್ದರೂ, ಸರ್ಕಾರಿ ಆಸ್ಪತ್ರೆಯ (Government Hospital) ಕಾಂಪೌಂಡರ್ ಒಂದೇ ಡ್ರಿಪ್ ಸೆಟ್‍ನ್ನು ಮೂರು ಜನರಿಗೆ ಹಾಕಿ ನಿರ್ಲಕ್ಷ್ಯ ತೋರಿದ್ದಾರೆ.


ಸರ್ಕಾರಿ ಆಸ್ಪತ್ರೆ ಸಿಬ್ಬಂದಿ


ಈ ಕುರಿತಂತೆ ರೋಗಿಯೊಬ್ಬರ ಸಂಬಂಧಿಕರೊಂದಿಗೆ ಕಾಂಪೌಂಡರ್ ಮಾತನಾಡುವ ವೀಡಿಯೊ ಎಲ್ಲೆಡೆ ವೈರಲ್ ಆಗಿದೆ. ಇನ್ನೂ ಈ ಬಗ್ಗೆ ಪ್ರಶ್ನಿಸಿದರೆ ಒಂದು ಡ್ರಿಪ್ ಸೆಟ್ ಸೂಜಿಯನ್ನು ಮೂರು ರೋಗಿಗಳಿಗೆ ಹಾಕುತ್ತೇವೆ. ಒಂದು ಗ್ಲೂಕೋಸ್ ಬಾಟಲ್ ಹಾಕೋದಕ್ಕೆ 50 ರೂಪಾಯಿ ತಗೋತಿವಿ.  ಈ ರೀತಿ ಮಾಡುವಂತೆ ವೈದ್ಯರೇ ಹೇಳಿದ್ದಾರೆ ಸಿಬ್ಬಂದಿ ಉತ್ತರಿಸಿದ್ದಾರೆ.


ಇದನ್ನೂ ಓದಿ: Santokh Singh Chaudhary: ಕಾಂಗ್ರೆಸ್​ ಸಂಸದ ಸಂತೋಖ್ ಸಿಂಗ್ ಚೌಧರಿ ನಿಧನ, ಭಾರತ್ ಜೋಡೋ ಯಾತ್ರೆ ಸ್ಥಗಿತ!


ವಿಡಿಯೋ ವೈರಲ್​ ಆಗುತ್ತಿದ್ದಂತೆ ಹಲವು ಆಸ್ಪತ್ರೆ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಒಂದು ಸೂಜಿ ಮತ್ತೊಬ್ಬರಿಗೆ ಚುಚ್ಚಿದರೆ ಒಬ್ಬರಿಂದ ಮತ್ತೊಬ್ಬರಿಗೆ ರೋಗ ಹರಡೋ ಸಾಧ್ಯತೆ ಇರುತ್ತೆ. ಇಷ್ಟು ಜ್ಞಾನವಿಲ್ಲದೇ ಸಿಬ್ಬಂದಿ ಕೆಲಸ ಮಾಡ್ತಿದ್ದಾರೆ ಎಂದು ಸರ್ಕಾರಿ ಆಸ್ಪತ್ರೆಗಳ ಕಾರ್ಯವೈಖರಿಗೆ ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದ್ದು, ತಪ್ಪಿತಸ್ಥರ ವಿರುದ್ಧ ಸೂಕ್ತ‌ ಕ್ರಮಕ್ಕೆ ಒತ್ತಾಯ ಮಾಡಿದ್ದಾರೆ.


ಸಮುದ್ರದಲ್ಲಿ ಮುಳುಗುತ್ತಿದ್ದ ಮೂವರ ರಕ್ಷಣೆ


ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಸಮುದ್ರ ತೀರದಲ್ಲಿ ಅಲೆಗಳ ಅಬ್ಬರಕ್ಕೆ ಸಿಲುಕಿ ಕೊಚ್ಚಿ ಹೋಗುತ್ತಿದ್ದ ಮೂವರು ಯುವಕರನ್ನು ರಕ್ಷಣೆ ಮಾಡಲಾಗಿದೆ. ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ಮೂಲದ ಮಾರುತಿ (20) ಚಂದನ(16), ಮಧುಸೂದನ (11) ಎಂಬ ಯುವಕರನ್ನು ಲೈಫ್ ಗಾರ್ಡ್ ಸಿಬ್ಬಂದಿ ರಕ್ಷಣೆ ಮಾಡಿದ್ದು, ಕುಟುಂಬ ಸಮೇತರಾಗಿ ಗೋಕರ್ಣಕ್ಕೆ ಪ್ರವಾಸಕ್ಕೆ ಬಂದ ಸಂದರ್ಭದಲ್ಲಿ ಘಟನೆ ನಡೆದಿದೆ.


ಎಲ್ಲರೂ ಸೇರಿ ಸಮುದ್ರದಲ್ಲಿ ಈಜಾಡಲು ತೆರಳಿದ್ದು, ಈ ವೇಳೆ ನೀರು ಪಾಲಾಗುತ್ತಿದ್ದ ಯುವಕರನ್ನು ಗಮನಿಸಿದ ಲೈಫ್ ಗಾರ್ಡ್ ಸಿಬ್ಬಂದಿಗಳಾದ ಮೋಹನ್ ಅಂಬಿಗ, ಶಿವಪ್ರಸಾದ ಅಂಬಿಗ, ಬೀಚ್ ಸುಪ್ರವೈಸರ್ ರವಿ ನಾಯ್ಕ್, ಪ್ರವಾಸಿ ಮಿತ್ರ ರಘುವೀರ ನಾಯ್ಕ ಯುವಕರನ್ನು ರಕ್ಷಣೆ ಮಾಡಿದ್ದಾರೆ. ಗೋಕರ್ಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Published by:Sumanth SN
First published: