• Home
  • »
  • News
  • »
  • state
  • »
  • ಘಾಟಿ ಸುಬ್ರಹ್ಮಣ್ಯ ದೇವಸ್ಥಾನದ ಇತಿಹಾಸದಲ್ಲಿ ಮೊದಲ ಬಾರಿಗೆ ದೇವಾಲಯದ ಪ್ರಾಂಗಣದಲ್ಲಿ ಬ್ರಹ್ಮರಥೋತ್ಸವ

ಘಾಟಿ ಸುಬ್ರಹ್ಮಣ್ಯ ದೇವಸ್ಥಾನದ ಇತಿಹಾಸದಲ್ಲಿ ಮೊದಲ ಬಾರಿಗೆ ದೇವಾಲಯದ ಪ್ರಾಂಗಣದಲ್ಲಿ ಬ್ರಹ್ಮರಥೋತ್ಸವ

ಬ್ರಹ್ಮರಥೋತ್ಸವ

ಬ್ರಹ್ಮರಥೋತ್ಸವ

ಕೊರೋನಾ  ವೈರಸ್  ಹಿನ್ನಲೆ ಸಾರ್ವಜನಿಕ  ಬ್ರಹ್ಮರಥೋತ್ಸವ  ರದ್ದು ಮಾಡಲಾಗಿದ್ದು,  ದೇವಸ್ಥಾನದ ಪ್ರಾಂಗಣದಲ್ಲಿಯೇ ಸಾಂಕೇತಿಕವಾಗಿ ಬ್ರಹ್ಮರಥೋತ್ಸವ  ನೆರವೇರಿಸಲಾಯಿತು

  • Share this:

ದೊಡ್ಡಬಳ್ಳಾಪುರ (ಜ.19) : ರಾಜ್ಯದ ಪ್ರಮುಖ  ಧಾರ್ಮಿಕ  ಕ್ಷೇತ್ರಗಳಲ್ಲಿ ಒಂದಾದ ಘಾಟಿ  ಸುಬ್ರಹ್ಮಣ್ಯ  ಕ್ಷೇತ್ರದಲ್ಲಿ  ಸರಳವಾಗಿ ಬ್ರಹ್ಮರಥೋತ್ಸವ ನೆರೆವೇರಿತು.  ಪ್ರತಿವರ್ಷಪುಷ್ಯ ಷಷ್ಠಿಯ ದಿನದಂದು ಕ್ಷೇತ್ರದಲ್ಲಿ ಸುಬ್ರಹ್ಮಣ್ಯ  ಸ್ವಾಮಿಗೆ ಬ್ರಹ್ಮರಥೋತ್ಸವ  ನಡೆಯುತ್ತದೆ.  ಪ್ರತಿ  ಬಾರಿಯು ಅದ್ಧೂರಿಯಿಂದ ನಡೆಯುತ್ತಿದ್ದ ಬ್ರಹ್ಮರಥೋತ್ಸವಕ್ಕೆ ಈ ಬಾರಿ ಕೋವಿಡ್ -19  ತಡೆ ಹಾಕಿದೆ.  ಕೊರೋನಾ  ವೈರಸ್  ಹಿನ್ನಲೆ ಸಾರ್ವಜನಿಕ  ಬ್ರಹ್ಮರಥೋತ್ಸವ  ರದ್ದು ಮಾಡಲಾಗಿದ್ದು,  ದೇವಸ್ಥಾನದ ಪ್ರಾಂಗಣದಲ್ಲಿಯೇ ಸಾಂಕೇತಿಕವಾಗಿ ಬ್ರಹ್ಮರಥೋತ್ಸವ  ನೆರವೇರಿಸಲಾಯಿತು. ದೇವಸ್ಥಾನದ  ಇತಿಹಾಸದಲ್ಲಿ  ಮೊದಲ ಬಾರಿಗೆ  ದೇವಸ್ಥಾನದ ಪ್ರಾಂಗಣದಲ್ಲಿ  ಬ್ರಹ್ಮರಥೋತ್ಸವ ನಡೆದಿದ್ದು ಇದೇ ಮೊದಲು. ಜೊತೆಗೆ ಇದೇ ಮೊದಲಿಗೆ ರಥ  ದೇವಸ್ಥಾನವನ್ನು ಪ್ರದಕ್ಷಿಣೆ ಹಾಕಿದ್ದು ವಿಶೇಷವಾಗಿತ್ತು.  ಬ್ರಹ್ಮರಥೋತ್ಸವಕ್ಕೆ ಸಾರ್ವಜನಿಕರಿಗೆ ಪ್ರವೇಶ  ನಿಷೇಧಿಸಲಾಗಿತ್ತು.


ಇಂದು ಮುಂಜಾನೆ  4 ಗಂಟೆಯಿಂದ ಭಕ್ತರಿಗೆ ದೇವರ ದರ್ಶನಕ್ಕೆ  ವ್ಯವಸ್ಥೆ  ಮಾಡಲಾಗಿದ್ದು,  ಜಾತ್ರೆ ಹಿನ್ನಲೆ ಭಕ್ತರ ಸಾಗರವೇ  ಕ್ಷೇತ್ರದಲ್ಲಿ ಜಮಾಯಿಸಿತು, ಹುತ್ತಕ್ಕೆ ಹಾಲೇರೆಯುವುದು.  ನಾಗರ ಕಲ್ಲಿಗೆ ಪೂಜೆ ಮಾಡುವ ಮೂಲಕ ಮಹಿಳೆಯರು ದೇವರ ಭಕ್ತಿಗೆ ಪಾತ್ರರಾದರು.


ಜನಜಾತ್ರೆ


ಈ ಬಾರಿ   ಮಂಗಳವಾರದಂದೇ ಪುಷ್ಯ ಷಷ್ಠಿ ಬಂದಿರುವುದರಿಂದ ಶ್ರೀ ಸುಬ್ರಹ್ಮಣ್ಯ ಸ್ವಾಮಿಗಳ ರಥೋತ್ಸವವನ್ನು ದೇವಾಲಯದ ಆವರಣದ ಒಳಗೆ ಸರಳವಾಗಿ  ರಥೋತ್ಸವ ಆಚರಿಸಲು ಈ ಮೊದಲೇ ನಿರ್ಧಾರ ಮಾಡಲಾಗಿತ್ತು. ಅದರಂತೆ ಸಾರ್ವಜನಿಕರಿಗೆ ಈ ಬಾರಿ   ಬ್ರಹ್ಮ ರಥೋತ್ಸವ ನಡೆಯುವುದಿಲ್ಲವೆಂದು  ಪ್ರಚಾರ ಪಡಿಸಲಾಗಿತ್ತು. ಆದರೂ ಸಹಾ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ದೇವರ ದರ್ಶನಕ್ಕೆ ಆಗಮಿಸಿದ್ದು ಮಾತ್ರ ವಿಶೇಷವಾಗಿತ್ತು.


ಬ್ರಹ್ಮ ರಥೋತ್ಸವ ಮಾತ್ರ ಇಲ್ಲ ವೆಂಬುದು ಬಿಟ್ಟರೆ, ಕ್ಷೇತ್ರದಲ್ಲಿ ಜನ ಜಾತ್ರೆಯೆ ನೆರದಿತ್ತು. ಆದರೆ, ರಥೋತ್ಸವ ಸ್ಥಳಕ್ಕೆ  ಸಾರ್ವಜನಿಕರಿಗೆ ಪ್ರವೇಶ ಇರಲಿಲ್ಲ. ಭಕ್ತಾದಿಗಳಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿತ್ತು.  ದೇವರ ದರ್ಶನಕ್ಕೆ ಯಾವುದೇ ರೀತಿಯ ನೂಕು ನುಗ್ಗಲು ಉಂಟಾಗದಂತೆ ಜನರನ್ನು ನಿಯಂತ್ರಿಸಲು ಪೊಲೀಸರು ಬಿಗಿ ಬಂದೋಬಸ್ತ್​ ನಡೆಸಿದ್ದರು. ಭಕ್ತರಿಗೆ ಕ್ಷೇತ್ರದಲ್ಲಿ ಲಘು ಉಪಹಾರ ಮತ್ತು ನೀರಿನ ವ್ಯವಸ್ಥೆ ದೇವಾಲಯ ಆಡಳಿತ ಮಂಡಳಿ ಮಾಡಿತ್ತು.


ಕ್ಷೇತ್ರದ ಹಿನ್ನೆಲೆ


600 ವರ್ಷಗಳ  ಇತಿಹಾಸ ಘಾಟಿ ಸುಬ್ರಹ್ಮಣ್ಯ  ಕ್ಷೇತ್ರಕ್ಕಿದೆ, ಸರ್ಪ ಮತ್ತು  ಗರುಡುನಿಗೆ ದ್ವೇಷವಿದ್ದು,  ಸರ್ಪಗಳ  ಸಂಖ್ಯೆ  ಕ್ಷಿಣವಾಗುತ್ತಿರುತ್ತದೆ.  ಸರ್ಪರೂಪಿಯಾಗಿ ಸುಬ್ರಹ್ಮಣ್ಯ  ಈ ಕ್ಷೇತ್ರದಲ್ಲಿ ತಪಸ್ಸು  ಮಾಡುತ್ತಾನೆ. ಲಕ್ಷ್ಮಿನರಸಿಂಹ ವಿಷ್ಣುರೂಪಿಯಾಗಿ ಪ್ರತ್ಯೇಕ್ಷನಾಗಿ ಸರ್ಪ ವಂಶಕ್ಕೆ ರಕ್ಷಣೆ ನೀಡುವುದ್ದಾಗಿ ಅಭಯ ನೀಡುತ್ತಾನೆ. ದೇವಸ್ಥಾನದ  ಮೂಲ ವಿಗ್ರಹ ಸಾಲಿಗ್ರಾಮದ ಏಕಶಿಲೆಯಲ್ಲಿ ಲಕ್ಷ್ಮೀನರಸಿಂಹ  ಮತ್ತು ಸುಬ್ರಹ್ಮಣ್ಯ ಸ್ವಾಮಿ  ವಿಗ್ರಹ ಇರುವುದು ವಿಶೇಷ. ಪೂರ್ವಾಭಿಮುಖಲಾಗಿ ಸುಬ್ರಹ್ಮಣ್ಯ  ಮತ್ತು ಪಶ್ಕಿಮಾಭಿಮುಖವಾಗಿ ಲಕ್ಷ್ಷೀನರಸಿಂಹ ಉದ್ಬವಾಗಿದೆ. ಸುಬ್ರಹ್ಮಣ್ಯ  ಸ್ವಾಮಿಯ ಬೆನ್ನಿನ ಮೇಲೆ ಲಕ್ಷ್ಮಿನರಸಿಂಹ ಇರುವುದು ಕ್ಷೇತ್ರದ ವಿಶೇಷತೆ. ಯಾವುದೇ ರೀತಿಯ  ಸರ್ಪ ದೋಷ  ಇರುವರುಕ್ಷೇತ್ರಕ್ಕೆ  ಭೇಟಿ ನೀಡುವ ಮೂಲಕ ದೋಷದಿಂದ ಮುಕ್ತರಾಗ ಬಹುದೆಂಬುದು ಕ್ಷೇತ್ರದಲ್ಲಿನ ವಾಡಿಕೆ.

Published by:Seema R
First published: