ನವೆಂಬರ್​ನಿಂದ ಮೋದಿಗೆ ಕಂಟಕ, ಬಿಎಸ್​ವೈ ಅಧಿಕಾರ ಪೂರೈಸಲ್ಲ; ಬ್ರಹ್ಮಾಂಡ ಗುರೂಜಿ ಭವಿಷ್ಯ

ನವೆಂಬರ್​ 4ರ ಬಳಿಕ ಎರಡು ದೊಡ್ಡ ಗ್ರಹಗಳು ಒಂದೆಡೆ ಸೇರಲಿವೆ. ರಾಜ್ಯದಲ್ಲಿ ಯಡಿಯೂರಪ್ಪ ಅವರಿಗೆ ಮುಂದಿನ ದಿನಗಳಲ್ಲಿ ಕಷ್ಟ ಎದುರಾಗಲಿದೆ. ಯಡಿಯೂರಪ್ಪ ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಅವಧಿಯನ್ನು ಪೂರೈಸುವುದಿಲ್ಲ. ಅವರ ಬಳಿಕ ಹೊಸಬರು ರಾಜ್ಯದ ಸಿಎಂ ಆಗಿ ಅಧಿಕಾರ ಚುಕ್ಕಾಣಿ ಹಿಡಿಯಲಿದ್ದಾರೆ

Seema.R | news18-kannada
Updated:October 18, 2019, 12:18 PM IST
ನವೆಂಬರ್​ನಿಂದ ಮೋದಿಗೆ ಕಂಟಕ, ಬಿಎಸ್​ವೈ ಅಧಿಕಾರ ಪೂರೈಸಲ್ಲ; ಬ್ರಹ್ಮಾಂಡ ಗುರೂಜಿ ಭವಿಷ್ಯ
ಬ್ರಹ್ಮಾಂಡ ಗುರೂಜಿ
  • Share this:
ಹಾಸನ (ಅ.18): ಎರಡನೇ ಬಾರಿ ದೇಶದ ಅಧಿಕಾರ ಚುಕ್ಕಾಣಿ ಹಿಡಿದಿರುವ ಪ್ರಧಾನಿ ನರೇಂದ್ರ ಮೋದಿಗೆ ದೊಡ್ಡ ಕಂಟಕ ಎದುರಾಗಲಿದೆ.  ಇದೇ ನವೆಂಬರ್​ 4ರಿಂದ ಸಂಕ್ರಾಂತಿವರೆಗೆ ಮೋದಿಗೆ ಸಮಯ ಸರಿಯಿಲ್ಲ. ಅವರಿಗೆ ಕಷ್ಟ ಎದುರಾಗಲಿದೆ ಎಂದು ಬ್ರಹ್ಮಾಂಡ ಗುರೂಜಿ ಭವಿಷ್ಯ ನುಡಿದಿದ್ದಾರೆ. 

ಹಾಸನಾಂಬೆ ದರ್ಶನ ಪಡೆದ ಬಳಿಕ ಮಾತನಾಡಿದ ಅವರು,  ಮೋದಿಯ ಅಧಿಕಾರ ಈ ಅವಧಿಗೆ ಕೊನೆಯಾಗಲಿದೆ.  ನವೆಂಬರ್ 4 ರ ಬಳಿಕ ರಾಜ್ಯದಲ್ಲಿ ಮತ್ತೆ ಪ್ರವಾಹ ಬರಲಿದ್ದು, ಜನರು ಸಂಕಷ್ಟಕ್ಕೆ ಒಳಗಾಗಲಿದ್ದಾರೆ ಎಂದರು.

ನವೆಂಬರ್​ 4ರ ಬಳಿಕ ಎರಡು ದೊಡ್ಡ ಗ್ರಹಗಳು ಒಂದೆಡೆ ಸೇರಲಿವೆ. ರಾಜ್ಯದಲ್ಲಿ ಯಡಿಯೂರಪ್ಪ ಅವರಿಗೆ ಮುಂದಿನ ದಿನಗಳಲ್ಲಿ ಕಷ್ಟ ಎದುರಾಗಲಿದೆ. ಯಡಿಯೂರಪ್ಪ ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಅವಧಿಯನ್ನು ಪೂರೈಸುವುದಿಲ್ಲ. ಅವರ ಬಳಿಕ ಹೊಸಬರು ರಾಜ್ಯದ ಸಿಎಂ ಆಗಿ ಅಧಿಕಾರ ಚುಕ್ಕಾಣಿ ಹಿಡಿಯಲಿದ್ದಾರೆ ಎಂದರು.

ದಕ್ಷಿಣ ಭಾರತದಲ್ಲಿ ಕರ್ನಾಟಕದಿಂದ ಖಾತೆ ತೆರೆದಿರುವ ಬಿಜೆಪಿ ಮುಂದಿನ ದಿನಗಳಲ್ಲಿ ಇಲ್ಲಿ ಕೂಡ ಅಧಿಕಾರ ಕಳೆದುಕೊಳ್ಳಲಿದೆ. ದಕ್ಷಿಣ ಭಾರತದ ಯಾವುದೇ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದಿಲ್ಲ ಎಂದಿದ್ದಾರೆ.

ಇದನ್ನು ಓದಿ: ಬೆಳಗ್ಗೆ ಆಣೆ ಮಾಡಿ ಸಂಜೆ ತಾಯಿ ಚಾಮುಂಡೇಶ್ವರಿಯ ಕ್ಷಮೆಯಾಚಿಸಿದ ಸಾರಾ ಮಹೇಶ್

ದೇಶದಲ್ಲಿ ಈಗಾಗಲೇ ವಸ್ತುಗಳ  ಬೆಲೆಗಳು ಗಗನ ಮುಖಿಯಾಗಿದ್ದು, ಮುಂದೆ ಒಂದು ಕೆಜಿ ಅಕ್ಕಿಗೆ 1 ಸಾವಿರ ರೂಪಾಯಿ ಆಗಲಿದೆ. ಜನರು ತಿನ್ನಲೂ ಅನ್ನಕ್ಕೆ ಕಷ್ಟಪಡಲಿದ್ದಾರೆ. ಕೇತು ಜೊತೆ ಚಂದರ ಇರುವ ಕಾರಣಕ್ಕೆ ಕಳ್ಳತನ ಹೆಚ್ಚಾಗಲಿದೆ.  ದೇಶದಲ್ಲಿ ಮುಂದೊಂದು ದಿನ ಮಹಾನ್​ ಕಾಳಗ ನಡೆಯಲಿದ್ದು, ಈ ಯುದ್ದ ಹೆಣ್ಣಿನ ಮೂಲಕ ಅಂತ್ಯಗೊಳ್ಳಲಿದೆ ಎಂದರು.

(ವರದಿ : ಡಿಜಿಎಂ ಹಳ್ಳಿ ಅಶೋಕ್​) 
First published:October 18, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ