• Home
  • »
  • News
  • »
  • state
  • »
  • Brahmanda Guruji: ಕರ್ನಾಟಕ ಮೂರು ಭಾಗವಾಗುತ್ತೆ, ದೇಶ ಇಬ್ಭಾಗವಾಗುತ್ತೆ! ಭಯಾನಕ ಭವಿಷ್ಯ ನುಡಿದ ಬ್ರಹ್ಮಾಂಡ ಗುರೂಜಿ

Brahmanda Guruji: ಕರ್ನಾಟಕ ಮೂರು ಭಾಗವಾಗುತ್ತೆ, ದೇಶ ಇಬ್ಭಾಗವಾಗುತ್ತೆ! ಭಯಾನಕ ಭವಿಷ್ಯ ನುಡಿದ ಬ್ರಹ್ಮಾಂಡ ಗುರೂಜಿ

ಬ್ರಹ್ಮಾಂಡ ಗುರೂಜಿ ನರೇಂದ್ರ ಬಾಬು ಶರ್ಮಾ

ಬ್ರಹ್ಮಾಂಡ ಗುರೂಜಿ ನರೇಂದ್ರ ಬಾಬು ಶರ್ಮಾ

ಹಾಸನಾಂಬೆ ಸನ್ನಿಧಿಯಲ್ಲಿ ಹೇಳುತ್ತೇನೆ. ಭಾರತ ದೇಶ ಎರಡು ಭಾಗ ಆಗುತ್ತೆ, ಎರಡು, ಎರಡು ರಾಷ್ಟ್ರಪತಿ ಆಗೋದು ಸತ್ಯ. ಇದು ನಡೆಯೋದು ನಿಜ, ಸತ್ಯ ಬ್ರಹ್ಮಾಂಡ ಗುರೂಜಿ ದೇಶವೇ ಬೆಚ್ಚಿಬೀಳೋ ಭವಿಷ್ಯ ನುಡಿದಿದ್ದಾರೆ. 

  • News18 Kannada
  • Last Updated :
  • Karnataka, India
  • Share this:

ಬ್ರಹ್ಮಾಂಡ ಗುರೂಜಿ ನರೇಂದ್ರ ಬಾಬು ಶರ್ಮಾ (Narendra Babu Sharma)  ಹಾಸನಾಂಬೆ ದೇವಿ ದರ್ಶನ ಪಡೆದ ಬಳಿಕ ರಾಜ್ಯದ ಬಗ್ಗೆ ಭೀಕರ ಭವಿಷ್ಯ ನುಡಿದಿದ್ದಾರೆ. ದೇವರ ಸತ್ಯವಾಗಿ ಹೇಳುತ್ತೇನೆ. 31 ವರ್ಷದೊಳಗೆ ಕರ್ನಾಟಕ (Karnataka) ಮೂರು ಭಾಗ ಆಗಿ, ಮೂರು ಮುಖ್ಯಮಂತ್ರಿ (Chief Minister), ಮೂವರು ರಾಜ್ಯಪಾಲರಾಗುತ್ತಾರೆ. ಇದು ಶಿವನ ಆಣೆಗೂ ಸತ್ಯ ಎಂದು ಬ್ರಹ್ಮಾಂಡ ಗುರೂಜಿ ಭಯಾನಕ ಭವಿಷ್ಯ ನುಡಿದಿದ್ದಾರೆ. 


ಬ್ರಹ್ಮಾಂಡ ಗುರೂಜಿ ಭವಿಷ್ಯ


ಹಾಸನದಲ್ಲಿ ದೇವಿ ದರ್ಶನದ ಬಳಿಕ ಭೀಕರ ಭವಿಷ್ಯ ನುಡಿದಿದ್ದಾರೆ. ದೇಶದ ಬಗ್ಗೆ ಮಾತನಾಡಿದಾಗ ಟ್ರೋಲ್ ಮಾಡ್ತಾರೆ. ಪಾರ್ಲಿಮೆಂಟ್ ಏನ್ ಕಟ್ಟಿದ್ದಾರೆ ಅದರು ಭಾರಿ ಘೋರವಾಗಿರುತ್ತೆ ಸಂಭವ ಅನ್ನೋದು ವೀರ ಬ್ರಹ್ಮ‌ಸ್ವಾಮಿ ಚರಿತ್ರೆಯಲ್ಲಿ ಬರೆದಿದ್ದಾರೆ. ತ್ರೀಕೋನಾತ್ಮಿಕ ದೀಪಿಕ, ಯಾವುದೇ ಪಾರ್ಲಿಮೆಂಟ್ ಗುಂಡಾಗಿರಬೇಕು, ಇಲ್ಲ ಚೌಕವಾಗಿರಬೇಕು. ಚಂದ್ರ ಇಲ್ಲ ಪೂರ್ತಿಯಾಗಿ ಕುಜನಾಂಶವಾಗಿರಬೇಕು. ತ್ರಿಕೋನ ಮಾಡಿದ ದಾಗ ಉಗ್ರವಾಗಿರುತ್ತೆ. ಇನ್ಮೇಲೆ ದೇಶದ ಮೇಲೆ, ಜನಗಳ ಮೇಲೆ ಒತ್ತಾಯ, ಒತ್ತಡಗಳು ಜಾಸ್ತಿ ಆಗುತ್ತೆ.


ಡಿಸೆಂಬರ್ ಅಂತ್ಯಕ್ಕೆ ಐದು ಗ್ರಹಗಳು ಒಟ್ಟಿಗೆ ಬರುತ್ತೆ


ಮೊದಲು ಕದ್ದುಮುಚ್ಚಿ ಲಂಚ ತೆಗೆದುಕೊಳ್ಳುತ್ತಿದ್ದರು, ಈಗ ಎಲ್ಲಾ ಓಪನ್. ದಡಂದಶಗುಣಂ ಭಗವಂತ ಆ ಸಮಯಕ್ಕೆ ಬಂದೇ ಬರುತ್ತಾನೆ. ಕಲಿಯುಗ ಅಂತ್ಯ ಕಾಲಕ್ಕೆ ರೋಗ ರುಜಿನಗಳು ಜಾಸ್ತಿ ಆಗುತ್ತೆ. ಡಿಸೆಂಬರ್ ಅಂತ್ಯಕ್ಕೆ ಐದು ಗ್ರಹಗಳು ಒಟ್ಟಿಗೆ ಬರುತ್ತೆ ಒಂಭತ್ತು ತಿಂಗಳು ಕೂರುತ್ತೆ. ಎರಡು ಗ್ರಹಣಗಳ ಹತ್ತಿರ ಬರಬಾರದು. ಜನರಿಗೆ ನೀರಿನ‌ ಅಭಾವ, ಬೆಂಕಿ, ಗಲಾಟೆ, ಘರ್ಷಣೆ, ಸ್ವಂತದವರ ಹತ್ತಿರ ಘರ್ಷಣೆಗಳು ಆಗುತ್ತೆ.


ಕರ್ನಾಟಕ ಮೂರು ಭಾಗ ಆಗುತ್ತೆ


ರಾಜ್ಯದಲ್ಲಿ ಯಾರೂ ನೆಮ್ಮದಿಯಿಂದ ಇರಲು ಸಾಧ್ಯವಿಲ್ಲ. ದೇವರ ಸತ್ಯವಾಗಿ 31 ವರ್ಷದೊಳಗೆ ಕರ್ನಾಟಕ ಮೂರು ಭಾಗ ಆಗುತ್ತೆ. ಮೂರು ಮುಖ್ಯಮಂತ್ರಿ, ಮೂವರು ವಿಶೇಷವಾಗಿ ರಾಜ್ಯಪಾಲರಾಗುತ್ತಾರೆ, ಶಿವನ ಆಣೆ ಮೇಲೆ ಸತ್ಯ.


ಇದನ್ನೂ ಓದಿ: Government Employees: ಪುಣ್ಯಕೋಟಿ ದತ್ತು ಯೋಜನೆಗೆ ರಾಜ್ಯ ಸರ್ಕಾರಿ ನೌಕರರಿಂದ 100 ಕೋಟಿ ದೇಣಿಗೆ


ಭಾರತ ದೇಶ ಎರಡು  ಭಾಗ ಆಗುತ್ತೆ!


ಹಾಸನಾಂಬೆ ಸನ್ನಿಧಿಯಲ್ಲಿ ಹೇಳುತ್ತೇನೆ. ಭಾರತ ದೇಶ ಎರಡು ಭಾಗ ಆಗುತ್ತೆ, ಎರಡು, ಎರಡು ರಾಷ್ಟ್ರಪತಿ ಆಗೋದು ಸತ್ಯ. 31 ವರ್ಷದಲ್ಲಿ ಹೀಗೆ ಆಗಬೇಕು ಅಂತ ನಾನು ಹೇಳಿದ್ದಲ್ಲ. ವೀರ ಬ್ರಹ್ಮಯ್ಯ, ಕೈವಾರ ತಾತಯ್ಯ, ಮಂಟೆ ಸ್ವಾಮಿಗಳು ಶಾಸನ ಬರೆದು ಇಟ್ಟಿದ್ಧಾರೆ. ಇದು ನಡೆಯೋದು ನಿಜ, ಸತ್ಯ ಬ್ರಹ್ಮಾಂಡ ಗುರೂಜಿ ದೇಶವೇ ಬೆಚ್ಚಿಬೀಳೋ ಭವಿಷ್ಯ ನುಡಿದಿದ್ದಾರೆ.


ಭಯಾನಕ ಭವಿಷ್ಯ ನುಡಿದ್ದ ಕೋಡಿಮಠ ಸ್ವಾಮೀಜಿ


ಮಂಡ್ಯ: ರಾಜ್ಯ, ದೇಶ, ವಿದೇಶದ ಆರ್ಥಿಕ, ರಾಜಕೀಯ, ಆರೋಗ್ಯ ಕ್ಷೇತ್ರ, ರೋಗ ರುಜಿನ, ಮಳೆ, ಬೆಳೆ ಇತ್ಯಾದಿಗಳ ಬಗ್ಗೆ ಭವಿಷ್ಯ (Predictions) ನುಡಿಯುವ ಕೋಡಿಮಠದ (Kodimath) ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರು (Shivannda Shivayogi Rajendra Swamiji) ಮತ್ತೊಂದು ಭಯಾನಕ ಭವಿಷ್ಯ ನುಡಿದಿದ್ದಾರೆ. ಮಂಡ್ಯದ (Mandya) ಬೂಕನಕೆರೆಗೆ ಆಗಮಿಸಿದ್ದ ಸ್ವಾಮೀಜಿ, ದೇಶದ ಹವಾಮಾನ (Weather) ಹಾಗೂ ರಾಜ್ಯ ರಾಜಕೀಯದ (State Politics) ಕುರಿತಂತೆ ಮಾತನಾಡಿದ್ದಾರೆ. ಮತ್ತೊಂದೆಡೆ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪ ಹೊತ್ತಿ, ತನಿಖೆ ಎದುರಿಸುತ್ತಿರುವ ಮುರುಘಾ ಮಠದ (Murugha Math) ಶಿವಮೂರ್ತಿ ಸ್ವಾಮಿ (Shivamurthy Swami) ಬಗ್ಗೆಯೂ ಪ್ರತಿಕ್ರಿಯೆ ನೀಡಿದ್ದಾರೆ.


ಇದನ್ನೂ ಓದಿ: Vijayapura: ಹುಲ್ಲುಲಗೋ..ಸಲಾಂಭ್ರಿಗೋ! ಉತ್ತರ ಕರ್ನಾಟಕದಲ್ಲಿ ಚರಗ ಹಬ್ಬದ ಸ್ಪೆಷಲ್ ಇದು


ಮತ್ತೆ ಜಲಪ್ರಳಯ, ಸುನಾಮಿ ಬರುವ ಆತಂಕ


ಮಂಡ್ಯದ ಬೂಕನಕೆರೆಗೆ ಆಗಮಿಸಿದ್ದ ಕೋಡಿಮಠ ಶ್ರೀಗಳು, ಮಳೆ ಅನಾಹುತ ಇನ್ನೂ ಮುಂದುವರಿಯಲಿದೆ ಎಂದಿದ್ದಾರೆ. ದೇಶಾದ್ಯಂತ ಜಲಪ್ರಳಯ ಎದುರಾಗಲಿದೆ, ಸುನಾಮಿ ಸಹ ಬರುವ ಸಾಧ್ಯತೆಯೂ ಇದೆ ಅಂತ ಎಚ್ಚರಿಕೆ ನೀಡಿದ್ರು.

Published by:ಪಾವನ ಎಚ್ ಎಸ್
First published: