Kurudumale: ಕುರುಡುಮಲೆ ವಿನಾಯಕ ಬ್ರಹ್ಮ ರಥೋತ್ಸವ ಸಂಪನ್ನ, ಮಳೆಹಾನಿ ತಡೆಯುವಂತೆ ವಿಘ್ನೇಶ್ವರನಲ್ಲಿ ಮನವಿ

ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನಲ್ಲಿರೊ ಕುರುಡುಮಲೆ ವಿನಾಯಕನ ಪುಣ್ಯ ಕ್ಷೇತ್ರ, ಸುಮಾರು 400 ವರ್ಷಗಳ ಹಿಂದೆ, ಶ್ರೀ ಕೃಷ್ಣದೇವರಾಯರು ಈ ದೇಗುಲವನ್ನ ನಿರ್ಮಿಸಿದ್ದಾರೆ, ಏಕ ಸಾಲೀಗ್ರಾಮ 14 ಅಡಿಯ ಮೂರ್ತಿಯೆಂದು ಈ ಭವ್ಯ ಕ್ಷೇತ್ರ ವಿಶ್ವವಿಖ್ಯಾತಿ ಪಡೆದಿದೆ.

ಕುರುಡುಮಲೆ ಗಣೇಶ ದೇವರು

ಕುರುಡುಮಲೆ ಗಣೇಶ ದೇವರು

  • Share this:
ಮುಳಬಾಗಿಲು, ಕೋಲಾರ: ರಾಜ್ಯಾದ್ಯಂತ ಗಣೇಶ ಹಬ್ಬದ (Ganesh Festival) ಸಂಭ್ರಮ ಇನ್ನೂ ಮುಂದುವರೆದಿದೆ. ಕೋಲಾರ (Kolar) ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲಿ ಹಬ್ಬ ಮುಂದುವರೆದಿದೆ. ರಾಜ್ಯದ ಪ್ರಮುಖ ಗಣಪತಿ ದೇಗುಲಗಳಲ್ಲಿ (Ganapathi Temple) ಪೂಜೆ ಪುನಸ್ಕಾರ ನಡೆಯುತ್ತಿದೆ. ಇದೇ ರೀತಿ ಕೋಲಾರ ಜಿಲ್ಲೆಯ ಮುಳಬಾಗಿಲು (Mulabagil)  ತಾಲೂಕಿನ ಪ್ರಸಿದ್ಧ ಕುರುಡುಮಲೆಯ (Kurudumale) ಗಣೇಶ ದೇವಸ್ಥಾನದಲ್ಲೂ ವಿಶೇಷ ಪೂಜೆಗಳು (Pooja) ನಡೆಯುತ್ತಿವೆ. ಇನ್ನು ಗಣೇಶ ಹಬ್ಬದ ಪ್ರಯುಕ್ತ ರಾಜ್ಯದಲ್ಲಿ ಏಕೈಕ ಲಕ್ಷ್ಮೀ ಗಣಪತಿ ರಥೋತ್ಸವ (Lakshmi Ganapathi Rathotsava) ಎಂಬ ಹಿರಿಮೆ ಪಡೆದ ಕುರುಡುಮಲೆ ಗಣೇಶನ ಬ್ರಹ್ಮೋತ್ಸವ (Bhrahmotsava) ನಿರ್ವಿಘ್ನವಾಗಿ ನಡೆದಿದೆ.

ಲಕ್ಷ್ಮೀ ಗಣಪತಿ ರಥೋತ್ಸವ ಸಂಪನ್ನ

ಗಣೇಶ ಹಬ್ಬದ ಪ್ರಯುಕ್ತ ರಾಜ್ಯದಲ್ಲಿ ಏಕೈಕ ಲಕ್ಷ್ಮೀ ಗಣಪತಿ ರಥೋತ್ಸವ ಎಂಬ ಹೆಗ್ಗಳಿಕೆ, ಕೋಲಾರದ ಕುರುಡುಮಲೆ ವಿನಾಯಕ ದೇಗುಲ ಹೊಂದಿದೆ, ಕ್ಷೇತ್ರಕ್ಕೆ ಬಂದು ಬೇಡಿಕೊಂಡರೆ ಯಾವ ಕೆಲಸವಾದರು ವಿಘ್ನವಿಲ್ಲದೆ, ಸುಲಲಿತವಾಗಿ ನಡೆಯುತ್ತದೆ ಎಂಬುದು ದೇವರ ಮಹಿಮೆಯಾಗಿದೆ. ಅದಕ್ಕಾಗಿಯೇ ಜಿಲ್ಲೆಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯನ್ನೆ ತಾತ್ಕಾಲಿಕವಾಗಿ ನಿಲ್ಲಿಸಪ್ಪ ಸ್ವಾಮಿ ಎಂದು, ಜೆಡಿಎಸ್ ಪಕ್ಷದ ಕೋರ್ ಕಮಿಟಿ ಸದಸ್ಯ ಸಮೃದ್ದಿ ಮಂಜುನಾಥ್ ದೇವರಲ್ಲಿ ಕೋರಿಕೆ ಸಲ್ಲಿಸಿದ್ದಾರೆ.

ಬ್ರಹ್ಮರಥೋತ್ಸವ


ಮಳೆ ನಿಲ್ಲಿಸುವಂತೆ ಗಣಪತಿಯಲ್ಲಿ ಪ್ರಾರ್ಥನೆ

ಮಳೆ ನಿಲ್ಲಿಸುವಂತೆ ಮುಳಬಾಗಿಲು ಜೆಡಿಎಸ್ ಅಭ್ಯರ್ಥಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದೀಗ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಗೆ ತಾತ್ಕಾಲಿಕವಾಗಿ ತಡೆಯುವಂತೆ ಜೆಡಿಎಸ್ ನಾಯಕರು ದೇವರ ಮೊರೆ ಹೋಗಿದ್ದಾರೆ. ಕುರುಡುಮಲೆ ದೇವರ ಬ್ರಹ್ಮ ರಥೋತ್ಸವ ಕಾರ್ಯಕ್ರಮ ಪ್ರಯುಕ್ತ ಹಮ್ಮಿಕೊಂಡಿದ್ದ ರಥೋತ್ಸವ ಕಾರ್ಯಕ್ರಮದಲ್ಲಿ ಜೆಡಿಎಸ್ ನಾಯಕರು ಭಾಗಿಯಾಗಿದ್ದು  ಸಾವಿರಾರು ಜನರು ರಥೋತ್ಸವ ನೋಡಲು ನೆರೆದಿದ್ದರು.

ಭಕ್ತರಿಂದ ದೇವರ ದರ್ಶನ


ಇದನ್ನೂ ಓದಿ: Ganesh Chaturthi 2022: ಧರ್ಮ ಸಂಘರ್ಷದ ನಡುವೆ ಭಾವೈಕ್ಯತೆ ಸಂದೇಶ; ಮುಸ್ಲಿಂ ಕುಟುಂಬದಿಂದ ಗಣೇಶ ಚತುರ್ಥಿ ಆಚರಣೆ!

ರಥೋತ್ಸವ ಕಣ್ತುಂಬಿಕೊಂಡ ಭಕ್ತರು

ಇನ್ನು ವಿನಾಯಕ ದೇಗುಲದ ರಥ ಬೀದಿಯಲ್ಲಿ ಸಾಗಿದ ಬೃಹತ್ ರಥೋತ್ಸವವನ್ನ, ಕಣ್ತುಂಬಿಕೊಳ್ಳಲು ದಾರಿಯುದ್ದಕ್ಕು ಭಕ್ತರು ನೆರೆದಿದ್ದ ದೃಶ್ಯಗಳು ಕಂಡುಬಂತು.

ಬ್ರಹ್ಮರಥೋತ್ಸವ ಸಂಪನ್ನ


ಕೊರೋನಾ ಬಳಿಕ ಸಂಭ್ರಮ

ಕೊರೊನಾ ಹಿನ್ನಲೆ ಕಳೆದೆರಡು ವರ್ಷಗಳಿಂದ ಕುರುಡುಮಲೆ ಬ್ರಹ್ಮ ರಥೋತ್ಸವ ಕಾರ್ಯಕ್ರಮ ನಡೆದಿರಲಿಲ್ಲ, ಆದರೆ ಕೊರೊನಾ ನಂತರ ಹಮ್ಮಿಕೊಂಡಿದ್ದ ಜಾತ್ರೆ ಪ್ರಯುಕ್ತ, ಬ್ರಹ್ಮ ರಥೋತ್ಸವ ಕಾರ್ಯಕ್ರಮ ಕಣ್ತುಂಬಿಕೊಳ್ಳಲು ಸಾವಿರಾರು ಜನರು ನೆರೆದಿದ್ದರು.

ಮಳೆ ಹಾನಿ ತಡೆಯುವಂತೆ ಪ್ರಾರ್ಥನೆ


ಕುರುಡುಮಲೆ ಕ್ಷೇತ್ರದ ಇತಿಹಾಸ ಏನು?

ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನಲ್ಲಿರೊ ಕುರುಡುಮಲೆ ವಿನಾಯಕನ ಪುಣ್ಯ ಕ್ಷೇತ್ರ, ಸುಮಾರು 400 ವರ್ಷಗಳ ಹಿಂದೆ, ಶ್ರೀ ಕೃಷ್ಣದೇವರಾಯರು ಈ ದೇಗುಲವನ್ನ ನಿರ್ಮಿಸಿದ್ದಾರೆ, ಏಕ ಸಾಲೀಗ್ರಾಮ 14 ಅಡಿಯ ಮೂರ್ತಿಯೆಂದು ಈ ಭವ್ಯ ಕ್ಷೇತ್ರ ವಿಶ್ವವಿಖ್ಯಾತಿ ಪಡೆದಿದೆ.

ಕೂಡಮಲೆಯಿಂದ ಕುರುಡುಮಲೆ ಹೆಸರು

ಮಹಾನ್ ಋಷಿಮುನಿ ಕೌಂಡಿನ್ಯ ಮಹರ್ಷಿ ಇಲ್ಲಿ ನೆಲೆಸಿದ್ದರಿಂದ ಕುರುಡುಮಲೆ ಗ್ರಾಮ ಕೌಂಡಿನ್ಯ ಗ್ರಾಮವೆಂದೇ ಮೊದಲು ಕರೆಯಲಾಗುತ್ತಿತ್ತು, ಆದರೆ ಕೃತಕ ಯುಗದಲ್ಲಿ ತ್ರಿಪುರಾಸುರ ರಾಕ್ಷಸನ ವರ್ತನೆ ಮಿತಿ ಮೀರಿದ್ದರಿಂದ ದೇವತೆಗಳೆಲ್ಲರೂ ತ್ರಿಮೂರ್ತಿಗಳ ಬಳಿ ರಾಕ್ಷಸನ ಸಂಹಾರಕ್ಕಾಗಿ ಬೇಡಿದ್ದರಿಂದ, ಸಾಕ್ಷಾತ್ ಪರಮಶಿವನು ತನ್ನ ಮಗ ವಿನಾಯಕನನ್ನು ಇಲ್ಲಿ ಸ್ತಾಪಿಸಿದರೆಂದು ಪುರಾಣಗಳಲ್ಲಿದೆ. ಹಾಗಾಗಿ ಈ ಪ್ರದೇಶಕ್ಕೆ ಕೂಡುಮಲೆ ಎಂಬ ಹೆಸರು ಇತ್ತಂತೆ, ಇದೀಗ ಕುರುಡುಮಲೆ ಎಂದು ದೇಶ, ವಿದೇಶದಲ್ಲಿಯೂ ಪ್ರಚಲಿತದಲ್ಲಿದೆ.

ಇದನ್ನೂ ಓದಿ: Ganesh Chaturthi 2022: ಗಣೇಶ ಬಂದ, ಕಾಯಿ-ಕಡುಬು ತಿಂದ! ರಾಜ್ಯಾದ್ಯಂತ ಗಣಪತಿ ಹಬ್ಬದ ಸಂಭ್ರಮ

ಭಕ್ತರ ಆಸೆ ಪೂರೈಸುವ ವಿಘ್ನೇಶ್ವರ

ಕ್ಷೇತ್ರಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರೆ ಸಕಲ ಸಂಕಷ್ಟಗಳು ದೂರವಾಗಿ, ಸಂತಾನ ಭಾಗ್ಯ, ವಿದ್ಯಾ ಭಾಗ್ಯ ದೊರೆಯುತ್ತದೆ ಎಂಬುದು ಭಕ್ತರ ನಂಬಿಕೆಯಾಗಿದೆ.
Published by:Annappa Achari
First published: