ಮಗನ ಭವಿಷ್ಯಕ್ಕಾಗಿ ಸಾಲ ಮಾಡಿ ಕಾರು ಕೊಡಿಸಿದ ಕೂಲಿಕಾರ ಕುಟುಂಬದ ಬಿಪಿಎಲ್​ ಕಾರ್ಡ್​ ರದ್ದು

ಬಿಪಿಎಲ್ ಕಾರ್ಡು ರದ್ದಾಗಿರುವುದರಿಂದ ಕೂಲಿ ಮಾಡಿ ಬದುಕುತ್ತಿರುವ ಕುಟುಂಬದ ಸಂಜೀವ್ ಈಗ ಆತಂಕಕ್ಕೆ ಒಳಗಾಗಿದ್ದಾರೆ.

ಬಿಪಿಎಲ್ ಕಾರ್ಡು ರದ್ದಾಗಿರುವುದರಿಂದ ಕೂಲಿ ಮಾಡಿ ಬದುಕುತ್ತಿರುವ ಕುಟುಂಬದ ಸಂಜೀವ್ ಈಗ ಆತಂಕಕ್ಕೆ ಒಳಗಾಗಿದ್ದಾರೆ.

ಬಿಪಿಎಲ್ ಕಾರ್ಡು ರದ್ದಾಗಿರುವುದರಿಂದ ಕೂಲಿ ಮಾಡಿ ಬದುಕುತ್ತಿರುವ ಕುಟುಂಬದ ಸಂಜೀವ್ ಈಗ ಆತಂಕಕ್ಕೆ ಒಳಗಾಗಿದ್ದಾರೆ.

  • Share this:
ಕೊಡಗು (ಫೆ. 25):  ಕಾರು, ಟಿವಿ, ಫ್ರಿಡ್ಜ್ ಇದ್ದರೆ ಬಿಪಿಎಲ್ ಕಾರ್ಡ್ ರದ್ದು ಮಾಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಖಾತೆ ಸಚಿವ ಉಮೇಶ್ ಕತ್ತಿ ಅವರು ಹೇಳಿದ್ದು ಜಾರಿಗೆ ಬಂದಿದೆಯಾ ಎನ್ನುವ ಅನುಮಾನ ಮೂಡಿದೆ. ಇದಕ್ಕೆ ಇಂಬುಕೊಡುವಂತೆ  ಜಿಲ್ಲೆಯ ಮಡಿಕೇರಿ ತಾಲೂಕಿನ ಕಣ್ಣ ಬಲಮುರಿ ಗ್ರಾಮದ ಸಂಜೀವ್ ಎಂಬುವವರ ಬಿಪಿಎಲ್ ಕಾರ್ಡ್ ತಡೆ ಹಿಡಿಯಲಾಗಿದೆ. ಸಂಜೀವ್ ಅವರ ಮಗ ಸಂದೀಪ ಕಳೆದ ಎರಡು ತಿಂಗಳ ಹಿಂದೆಯಷ್ಟೇ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಬ್ಯಾಂಕಿನಲ್ಲಿ ಸಾಲ ಮಾಡಿ ಕಾರು ಖರೀದಿಸಿದ್ದಾರೆ. ಹೀಗಾಗಿ ಫೆಬ್ರವರಿ ತಿಂಗಳಲ್ಲಿ ಇವರ ಬಿಪಿಎಲ್ ಕಾರ್ಡನ್ನು ರದ್ದು ಮಾಡಿ ಎಪಿಎಲ್ ಕಾರ್ಡ್ ಆಗಿ ಪರಿವರ್ತಿಸಲಾಗಿದೆ. ಸಂಜೀವ್ ಅವರಿಗೆ ಜನವರಿ ತಿಂಗಳಲ್ಲೂ ಪಡಿತರ ವಿತರಣೆ ಮಾಡಲಾಗಿದೆ. ಆದರೆ, ಫೆಬ್ರವರಿ ತಿಂಗಳಲ್ಲಿ ಅವರು ಪ್ರತೀ ತಿಂಗಳಂತೆ ರೇಷನ್ ತೆಗೆದುಕೊಳ್ಳಲು ಹೋದಾಗ ನಿಮ್ಮ ಮನೆಯಲ್ಲಿ ಬಳಕೆಗಾಗಿ ಸ್ವಂತ ಕಾರು ಇರುವುದರಿಂದ ಇನ್ನು ಮುಂದೆ ನಿಮ್ಮ ಬಿಪಿಎಲ್ ಕಾರ್ಡ್ ರದ್ದಾಗಲಿದೆ ಎಂದು ನ್ಯಾಯಬೆಲೆ ಅಂಗಡಿಯ ಮೇಲ್ವಿಚಾರಕ ಕವಿನ್ ವಾಪಸ್ ಕಳುಹಿಸಿದ್ದಾರೆ.

ಬಿಪಿಎಲ್ ಕಾರ್ಡು ರದ್ದಾಗಿರುವುದರಿಂದ ಕೂಲಿ ಮಾಡಿ ಬದುಕುತ್ತಿರುವ ದಲಿತ ಕುಟುಂಬದ ಸಂಜೀವ್ ಈಗ ಆತಂಕಕ್ಕೆ ಒಳಗಾಗಿದ್ದಾರೆ. ಸಂಜೀವ್ ಅವರ ಮಗ ಸಂದೀಪ್ ಖಾಸಗಿ ಫೈನಾನ್ಸ್ ಒಂದರಲ್ಲಿ ಕೆಲಸ ಮಾಡುತ್ತಿದ್ದು, ಅದರಲ್ಲಿ ಕೆಲಸ ಮಾಡಲು ಅನುಕೂಲವಾಗಲೆಂದು ತಾಯಿ ಶಾರದ ಹೆಸರಿನಲ್ಲಿ ಧರ್ಮಸ್ಥಳ ಸ್ವ ಸಹಾಯ ಸಂಘದಲ್ಲಿ ಸಾಲ ಪಡೆದು ಬ್ಯಾಂಕಿನಲ್ಲೂ ಲೋನ್ ಮಾಡಿ ಕಾರು ಖರೀದಿಸಿದ್ದಾರೆ. ಕಾವೇರಿ ಹೊಳೆ ದಂಡೆಯಲ್ಲಿ ಸಂಜೀವ್ ಅವರ ಮನೆ ಇದ್ದು, ಕಳೆದ ಮೂರು ವರ್ಷದಿಂದ ಪ್ರವಾಹದಲ್ಲಿ ಸಿಲುಕಿ ಮನೆ ಬಹುತೇಕ ಕುಸಿದಿದಿದೆ. ಕೂಲಿ ಮಾಡಿದರೂ ಕಾರು ಇದೆ ಎನ್ನುವ ಕಾರಣಕ್ಕೆ ಇವರ ಕಾರ್ಡನ್ನು ರದ್ದು ಮಾಡಲಾಗಿದೆ.

ಇದನ್ನು ಓದಿ: ಜಮೀನನ್ನು ತಮ್ಮ ಹೆಸರಿಗೆ ಮಾಡಲಿಲ್ಲ ಎಂದು ಜಮಖಂಡಿ ಉಪತಹಶೀಲ್ದಾರ್ ಮೇಲೆ ಸೀಮೆ ಎಣ್ಣೆ ಸುರಿದು ಕೊಲೆಗೆ ಯತ್ನಿಸಿದ ತಂದೆ ಮಗ!

ಇದು ಕೇವಲ ಇವರ ಕಥೆ ಮಾತ್ರವಲ್ಲ ಹೊದ್ದೂರು ಗ್ರಾಮದ ಮೂವರದು ಇದೇ ಕಥೆ. ಹೊದ್ದೂರು ಗ್ರಾಮದಲ್ಲೂ ಗೋಪಾಲ, ಬಾನು ಸಾಹೇ, ಸಾದ್‍ಅಲಿ ಈ ಮೂವರ ಬಿಪಿಎಲ್ ಕಾರ್ಡನ್ನು ತಡೆಹಿಡಿಯಲಾಗಿದೆ.

ಹೀಗಾಗಿ ಸಚಿವ ಉಮೇಶ್ ಕತ್ತಿ ಅವರು ಹೇಳಿಕೆ ಕಾರ್ಯಗತಕ್ಕೆ ಬಂದಿದೆಯೇ ಎಂಬ ಅನುಮಾನ ಶುರುವಾಗಿದೆ. ಈ ಕುರಿತು ಆಹಾರ ಮತ್ತು ನಾಗರಿಕ ಇಲಾಖೆ ಉಪನಿರ್ದೇಶಕರನ್ನು ಕೇಳಿದರೆ, ಇದು ಈಗ ಬಂದಿರುವ ಆದೇಶವಲ್ಲ. 2017 ರಲ್ಲೇ ಆದೇಶವಾಗಿದ್ದು, ಅದನ್ನು ಸರಿಯಾಗಿ ಜಾರಿ ಮಾಡಲು ಆಗಿರಲಿಲ್ಲ. ಈಗ ಇಲಾಖೆಯಿಂದಲೂ ಕಟ್ಟುನಿಟ್ಟಿನ ಸೂಚನೆ ಇದ್ದು ನಾಲ್ಕು ಚಕ್ರದ ಸ್ವಂತ ವಾಹನ, ನಗರ ಪ್ರದೇಶದಲ್ಲಿ 1,000 ಚದರ ಅಡಿಯ ಮನೆ ಇದ್ದರೆ, 1.20 ಲಕ್ಷ ಆದಾಯವಿದ್ದರೆ ಮತ್ತು ಸರ್ಕಾರಿ ನೌಕರರಾಗಿದ್ದರೆ ಅಂತವರ ಬಿಪಿಎಲ್ ಕಾರ್ಡುಗಳನ್ನು ತೆಗೆಯಲಾಗುತ್ತಿದೆ. ಅಂತಹ 1,217 ಕಾರ್ಡುಗಳನ್ನು ಈಗ ಗುರುತಿಸಿದ್ದು, ಅವುಗಳನ್ನು ಈಗಾಗಲೇ ತಡೆಹಿಡಿಯಲಾಗಿದೆ ಎಂದು ಆಹಾರ ಇಲಾಖೆ ಉಪನಿರ್ದೇಶಕ ಗೌರವ ಕುಮಾರ್ ಹೇಳಿದ್ದಾರೆ. ಸರ್ಕಾರದ ಈ ನಿರ್ಧಾರಕ್ಕೆ ಜೆಡಿಎಸ್ ಕೊಡಗು ಜಿಲ್ಲಾಧ್ಯಕ್ಷ ಕೆ.ಎಂ ಗಣೇಶ್ ಗ್ರಾಮಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಸರ್ಕಾರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
Published by:Seema R
First published: