ಬೆಂಗಳೂರು: ಪ್ರೇಯಸಿಯಿಂದ ಬರ್ತ್ ಡೇ ಕೇಕ್ (Birthday Cake) ಕತ್ತರಿಸಿ ನಂತರ ಕುತ್ತಿಗೆ ಕೊಯ್ದು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ರಾಜಗೋಪಾಲನಗರ (Rajagopla nagar) ಪೊಲೀಸ್ ಠಾಣೆಯಲ್ಲಿ ನಡೆದಿದೆ. 24 ವರ್ಷದ ನವ್ಯಾ ಕೊಲೆಯಾದ ಯುವತಿ. ಆಂತರಿಕ ಭದ್ರತಾ ವಿಭಾಗದಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡ್ತಿದ್ದ ನವ್ಯಾ ಕಳೆದ ಆರು ವರ್ಷಗಳಿಂದ ಪ್ರಶಾಂತ್ ಎಂಬಾತನನ್ನು ಪ್ರೀತಿಸುತ್ತಿದ್ದರು. ಪ್ರಶಾಂತ್ ಮತ್ತು ನವ್ಯಾ ರಾಮನಗರ ಜಿಲ್ಲೆಯ ಕನಕಪುರ (Kanakapur, Ramanagar) ಮೂಲದವರು. ಮಂಗಳವಾರ ನವ್ಯಾ ಬರ್ತ್ ಡೇ ಇತ್ತು. ಆದರೆ ನಿನ್ನೆ ಪ್ರಶಾಂತ್ ಕೇಕ್ ತಂದು ಹುಟ್ಟುಹಬ್ಬ ಆಚರಣೆ ಮಾಡಿದ್ದನು.
ಲಗ್ಗರೆಯಲ್ಲಿ ನವ್ಯಾ ನಿವಾಸಕ್ಕೆ ಬಂದಿದ್ದ ಪ್ರಶಾಂತ್ ಕೊಲೆ ಮಾಡಿದ್ದಾನೆ. ಕೇಕ್ ತಿನ್ನಿಸಿದ ಮರುಕ್ಷಣವೇ ಹರಿತವಾದ ಚಾಕುವಿನಿಂದ ಕತ್ತು ಕೊಯ್ದು ಕೊಲೆಗೈದಿದ್ದಾನೆ. ಮೃತ ಯುವತಿಯ ಶವವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸದ್ಯ ಆರೋಪಿಯನ್ನ ಬಂಧಿಸಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಬೇರೆಯವರ ಜೊತೆ ಚಾಟಿಂಗ್
ಇತ್ತೀಚೆಗೆ ನವ್ಯಾ ಬೇರೆಯವರ ಜೊತೆ ಚಾಟಿಂಗ್ ಮಾಡುತ್ತಿದ್ದಾಳೆ ಎಂದು ಪ್ರಶಾಂತ್ ಅನುಮಾನ ವ್ಯಕ್ತಪಡಿಸಿದ್ದನು. ಇದೇ ವಿಚಾರಕ್ಕೆ ಇಬ್ಬರ ಮಧ್ಯೆ ಜಗಳ ಸಹ ಆಗಿತ್ತು. ಇದೇ ಅನುಮಾನದ ಮೇಲೆ ಬರ್ತ್ ಡೇ ಆಚರಿಸಿ ಬಳಿಕ ಕೊಲೆ ಮಾಡಿದ್ದಾನೆ.
ಘೋರ ದುರಂತದಲ್ಲಿ 6 ಜನ ಸಾವು
ದಕ್ಷಿಣ ಕನ್ನಡ ಜಿಲ್ಲೆಯ ಸಂಪಾಜೆ ಗೇಟ್ ಬಳಿ ಬಸ್ ಹಾಗೂ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಆರು ಜನರು ಮೃತಪಟ್ಟಿದ್ದಾರೆ. ಮಡಿಕೇರಿಯಿಂದ ಸುಳ್ಯ ಕಡೆ ಬರುತ್ತಿದ್ದಾಗ ಘೋರ ದುರಂತ ಸಂಭವಿಸಿದೆ.. ಕಾರಿನಲ್ಲಿ ಇಬ್ಬರು ಮಹಿಳೆಯರು, ಓರ್ವ ಪುರುಷ ಹಾಗೂ ಇಬ್ಬರು ಮಕ್ಕಳಿದ್ದರು.
ಇದನ್ನೂ ಓದಿ: Bengaluru: ಮನೆಗೆ ಪ್ರತಿಷ್ಠಿತ ಕಂಪನಿಯ ಪೇಂಟ್ ಮಾಡಿಸುತ್ತಿದ್ದೀರಾ? ನೀವು ಮೋಸ ಹೋಗಬಹುದು ಹುಷಾರ್!
ಕಾರು ಹಾಗೂ ಖಾಸಗಿ ಬಸ್ ನಡುವೆ ಭೀಕರ ಅಪಘಾತ ಸಂಭವಿಸಿರೋ ಘಟನೆ ತುಮಕೂರಿನ ಹಿರೇಹಳ್ಳಿಯಲ್ಲಿ ನಡೆದಿದೆ. ತುಮಕೂರು ಕಡೆಯಿಂದ ಬೆಂಗಳೂರು ಕಡೆಗೆ ಹೋಗ್ತಿದ್ದ ಇನೋವಾ ಕಾರಿಗೆ, ಬೆಂಗಳೂರು ಕಡೆಯಿಂದ ಬರ್ತಿದ್ದ ಬಸ್ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ನುಗ್ಗುಜ್ಜಾಗಿದ್ದು, ಕಾರಿನಲ್ಲಿದ್ದರ ಐವರು ಸಾವನ್ನಪ್ಪಿದ್ದಾರೆ. ಮೃತದೇಹಗಳನ್ನ ತುಮಕೂರು ಜಿಲ್ಲಾಸ್ಪತ್ರೆ ಶವಗಾರಕ್ಕೆ ರವಾನಿಸಲಾಗಿದೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ