ಪಟ್ಟಣ ಪಂಚಾಯತಿ ಬೇಡ, ಸ್ವತಂತ್ರ ಗ್ರಾಮ ಪಂಚಾಯತಿ ರಚಿಸುವಂತೆ ಆಗ್ರಹಿಸಿ ಚುನಾವಣೆ ಬಹಿಷ್ಕಾರ

ಕಬ್ಬೂರ ಪಟ್ಟಣ ಪಂಚಾಯತಿ ವ್ಯಾಪ್ತಿಗೆ ಒಪ್ಪಿಗೆ ಇಲ್ಲವೆಂದು ನಾಲ್ಕು ಗ್ರಾಮಗಳ ಗ್ರಾಮಸ್ಥರು ನ್ಯಾಯಾಲಯದ ಮೋರೆ ಹೋಗಿದ್ದರು. ಹೀಗಾಗಿ ಕಬ್ಬೂರ ಪಟ್ಟಣ ಸೇರಿ ಇತರೆ ನಾಲ್ಕು ಗ್ರಾಮಗಳು ಸ್ಥಳೀಯ ಮಟ್ಟದ ಚುನಾವಣೆಯಿಂದ ದೂರು ಉಳಿದುಕೊಂಡಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಚಿಕ್ಕೋಡಿ (ಡಿ. 20): ಪಟ್ಟಣ ಪಂಚಾಯತಿಯಿಂದ ತಮ್ಮ ಗ್ರಾಮಗಳನ್ನು ಸ್ವತಂತ್ರವಾಗಿಸಿ, ನಮಗೆ ಸ್ವತಂತ್ರ ಗ್ರಾಮ ಪಂಚಾಯತಿ ಬೇಕು ಎಂದು ಜೋಡಟ್ಟಿ, ಮೀರಾಪೂರಹಟ್ಟಿ, ಚಿಕ್ಕೋಡಿ ರೋಡ ಹಾಗೂ ಕೆಂಚನಟ್ಟಿ ಗ್ರಾಮಗಳು ಕಳೆದ ಎರಡು ಅವಧಿಯಿಂದ ಚುನಾವಣೆಯಿಂದ ದೂರ ಉಳಿದು ಬಹಿಷ್ಕಾರ ಹಾಕುತ್ತಲೆ ಬಂದಿವೆ. ರಾಜ್ಯ ಸರಕಾರ ದೊಡ್ಡ ಗ್ರಾಮ ಪಂಚಾಯತಿಗಳನ್ನು ಪಟ್ಟಣ ಪಂಚಾಯತಿ ಮತ್ತು ಪುರಸಭೆಗಳನ್ನಾಗಿ ಮೆಲ್ದರ್ಜೆಗೊಳಿಸುವ ಪಟ್ಟಿಯಲ್ಲಿ ಚಿಕ್ಕೋಡಿ ತಾಲೂಕಿನ ಕಬ್ಬೂರ ಗ್ರಾಮ ಪಂಚಾಯತಿ ಪಟ್ಟಣ ಪಂಚಾಯತಿಯಾಗಿ ಮೆಲ್ದರ್ಜೆಗೊಂಡಿದೆ. ಈ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಜೋಡಟ್ಟಿ, ಮೀರಾಪೂರಹಟ್ಟಿ, ಚಿಕ್ಕೋಡಿ ರೋಡ ಹಾಗೂ ಕೆಂಚನಟ್ಟಿ ಗ್ರಾಮಗಳು ಸೇರಿಕೊಂಡಿವೆ. ಕಬ್ಬೂರ ಪಟ್ಟಣದಿಂದ ಐದು ಮತ್ತು ಏಳು ಕಿ.ಮೀ ದೂರ ಇರುವ ನಮ್ಮ ಹಳ್ಳಿಗಳಿಗೆ ಕಬ್ಬೂರ ಪಟ್ಟಣ ಪಂಚಾಯತಿ ಬೇಡ. ನಮಗೆ ಸ್ವತಂತ್ರ ಗ್ರಾಮ ಪಂಚಾಯತಿ ರಚಿಸಬೇಕೆಂದು ನಾಲ್ಕು ಗ್ರಾಮಗಳು ಒತ್ತಾಯಿಸಿವೆ.

ಕಬ್ಬೂರ ಪಟ್ಟಣದಿಂದ ನಾಲ್ಕೈದು ಕಿಲೋಮೀಟರ್ ದೂರ ಇರುವ ಜೋಡಟ್ಟಿ, ಮೀರಾಪೂರಹಟ್ಟಿ, ಚಿಕ್ಕೋಡಿ ರೋಢ, ಕೆಂಚನಟ್ಟಿ ನಾಲ್ಕು ಗ್ರಾಮಗಳು ಸೇರಿ ಒಟ್ಟು ನಾಲ್ಕು ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿವೆ. ನಾಲ್ಕು ಗ್ರಾಮಗಳನ್ನು ಸೇರಿಸಿ ನೂತನ ಗ್ರಾಮ ಪಂಚಾಯತಿ ರಚಿಸಬೇಕೆಂದು ನಾಲ್ಕು ಗ್ರಾಮಗಳ ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ. ಈ ವ್ಯಾಜ್ಯದಿಂದ ಕಬ್ಬೂರ ಪಟ್ಟಣ ಪಂಚಾಯತಿಗೂ ಚುನಾವಣೆ ನಡೆದಿರಲಿಲ್ಲ. ಈಗ ಆಡಳಿತಾಧಿಕಾರಿ ಸಮ್ಮುಖದಲ್ಲಿ ಆಡಳಿತ ನಡೆಯುತ್ತಿದೆ. ಕಬ್ಬೂರ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಈ ನಾಲ್ಕು ಗ್ರಾಮಗಳು ಬರುವುದರಿಂದ ಸರಕಾರ ಕಬ್ಬೂರ, ಜೋಡಟ್ಟಿ, ಮೀರಾಪೂರಹಟ್ಟಿ, ಚಿಕ್ಕೋಡಿ ರೋಡ ಹಾಗೂ ಕೆಂಚನಟ್ಟಿ ಗ್ರಾಮಗಳನ್ನು ಸೇರಿಸಿ ನೂತನವಾಗಿ ಕಬ್ಬೂರ ಪಟ್ಟಣ ಪಂಚಾಯತಿಯನ್ನಾಗಿ ಸರಕಾರ ಆದೇಶ ಹೊರಡಿಸಿತು. ಕಬ್ಬೂರ ಪಟ್ಟಣ ಪಂಚಾಯತಿ ವ್ಯಾಪ್ತಿಗೆ ಒಪ್ಪಿಗೆ ಇಲ್ಲವೆಂದು ನಾಲ್ಕು ಗ್ರಾಮಗಳ ಗ್ರಾಮಸ್ಥರು ನ್ಯಾಯಾಲಯದ ಮೋರೆ ಹೋಗಿದ್ದರು. ಹೀಗಾಗಿ ಕಬ್ಬೂರ ಪಟ್ಟಣ ಸೇರಿ ಇತರೆ ನಾಲ್ಕು ಗ್ರಾಮಗಳು ಸ್ಥಳೀಯ ಮಟ್ಟದ ಚುನಾವಣೆಯಿಂದ ದೂರು ಉಳಿದುಕೊಂಡಿದೆ.

ಕಂದಾಯ ಗ್ರಾಮಗಳೆಂದು ಘೋಷಣೆ:

ಪಟ್ಟಣ ಪಂಚಾಯತಿ ಬೇಡವೆಂದು ಪಟ್ಟು ಹಿಡಿದು ನ್ಯಾಯಾಲಯದ ಮೋರೆ ಹೋದ ಪ್ರಕರಣದ ಕುರಿತು ಜನರ ಅಭಿಪ್ರಾಯ ತಿಳಿಸಿ ಯೋಗ್ಯ ಕ್ರಮ ಕೈಗೊಳ್ಳಬೆಕೆಂದು ನ್ಯಾಯಾಲಯ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರರಿಗೆ ಸೂಚನೆ ನೀಡಿದ ಬಳಿಕ ಜಿಲ್ಲಾಧಿಕಾರಿಗಳ ತಂಡ ನಾಲ್ಕು ಗ್ರಾಮಗಳ ಜನರ ಅಭಿಪ್ರಾಯ ಪಡೆದುಕೊಂಡು ಕಬ್ಬೂರ  ಹೊರತು ಪಡಿಸಿ ಕಂದಾಯ ಗ್ರಾಮವೆಂದು ಘೋಷಣೆ ಮಾಡಿದ್ದಾರೆ.

ಶೀಘ್ರ ಸರ್ವೇ ನಡೆಸಿ ಚುನಾವಣೆ ನಡೆಸಬೇಕು:

ಇನ್ನು ಕಬ್ಬೂರ ಪಟ್ಟಣ ಪಂಚಾಯತಿ ವ್ಯಾಪ್ತಿಗೆ ಸೇರುವುದು ನಮ್ಮ ನಾಲ್ಕು ಗ್ರಾಮಸ್ಥರ ಒಪ್ಪಿಗೆ ಇಲ್ಲ, ಹೀಗಾಗಿ ಜಿಲ್ಲಾಧಿಕಾರಿಗಳು ಕಂದಾಯ ಗ್ರಾಮಗಳನ್ನಾಗಿ ಘೋಷಣೆ ಮಾಡಿದ್ದಾರೆ. ನಾಲ್ಕು ಗ್ರಾಮಸ್ಥರು ಕಳೆದ ಹತ್ತು ವರ್ಷಗಳಿಂದ ಚುನಾವಣೆಯಿಂದ ಸ್ಥಳಿಯ ಚುನಾವಣೆಗಳಿಂದ ದೂರು ಉಳಿದುಕೊಂಡಿದ್ದಾರೆ. ಜಿಲ್ಲಾಧಿಕಾರಿಗಳು ಶೀಘ್ರವಾಗಿ ಸರ್ವೇ ಮಾಡಿ ಹೊಸ ಗ್ರಾಮ ಪಂಚಾಯತಿ ರಚಿಸಿ ಚುನಾವಣೆ ನಡೆಸಬೇಕು. ಗ್ರಾಮಗಳ ಅಭಿವೃದ್ಧಿಗೆ ಸರಕಾರ ಒತ್ತು ನೀಡಬೇಕೆಂದು ಜೋಡಟ್ಟಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
Published by:Seema R
First published: