ಪರೀಕ್ಷೆಯಲ್ಲಿ ಉತ್ತರ ಗೊತ್ತಿಲ್ದೆ ಪಬ್​ಜಿ ಆಡುವುದು ಹೇಗೆ ಎಂಬುದನ್ನು ವಿವರಿಸಿದ ವಿದ್ಯಾರ್ಥಿ

ಆದರೆ ವಾರ್ಷಿಕ ಪರೀಕ್ಷೆ ಹತ್ತಿರವಾದರೂ ಶರತ್​ಗೆ ಮೊಬೈಲ್​ ಕೆಳಗಿಟ್ಟು ಓದುವ ಮನಸ್ಸು ಆಗುತ್ತಿರಲಿಲ್ಲ.

zahir | news18
Updated:March 22, 2019, 6:11 PM IST
ಪರೀಕ್ಷೆಯಲ್ಲಿ ಉತ್ತರ ಗೊತ್ತಿಲ್ದೆ ಪಬ್​ಜಿ ಆಡುವುದು ಹೇಗೆ ಎಂಬುದನ್ನು ವಿವರಿಸಿದ ವಿದ್ಯಾರ್ಥಿ
ಸಾಂದರ್ಭಿಕ ಚಿತ್ರ
  • News18
  • Last Updated: March 22, 2019, 6:11 PM IST
  • Share this:
ಸಾಮಾನ್ಯವಾಗಿ ಪರೀಕ್ಷೆಯಲ್ಲಿ ಉತ್ತರ ನೆನಪಿಲ್ಲದಿದ್ದರೆ, ವಿಷಯಕ್ಕೆ ಸಂಬಂಧಿಸಿದಂತೆ ಒಂದಷ್ಟು ತೋಚಿದ್ದು ಗೀಚುವವರಿದ್ದಾರೆ. ಆದರೆ ಇಲ್ಲೊಬ್ಬ ವಿದ್ಯಾರ್ಥಿ ಉತ್ತರ ಪತ್ರಿಕೆಯಲ್ಲಿ ಮೊಬೈಲ್​ ಗೇಮ್ PUBG ಆಡುವುದು ಹೇಗೆ ಎಂಬುದನ್ನು ವಿವರಿಸಿ ಸುದ್ದಿಯಾಗಿದ್ದಾನೆ.

ಗದಗ ಮೂಲದ ಮೊದಲ ವರ್ಷದ ಶರತ್ ಎನ್ನುವ ವಿದ್ಯಾರ್ಥಿಯು ತನಗೆ ತಿಳಿಯದಿದ್ದ ಪ್ರಶ್ನೆಗೆ, ತನ್ನ ನೆಚ್ಚಿನ ಗೇಮ್ ಆಡುವುದು ಹೇಗೆ ಎಂಬುದನ್ನು ವಿವರಿಸಿದ್ದಾರೆ. ಅರ್ಥಶಾಸ್ತ್ರ ವಿಷಯ ಪ್ರಶ್ನೆಗೆ ಪಬ್​ಜಿ ಉತ್ತರ ನೀಡಿದ್ದಾನೆ. ಈ ಉತ್ತರ ಪತ್ರಿಕೆಯ ತುಣುಕು ಈಗ ವೈರಲ್ ಆಗಿದೆ. ಅಷ್ಟೇ ಅಲ್ಲದೆ ಈ ಉತ್ತರದ ಪರಿಣಾಮ ಶರತ್ ಫಸ್ಟ್​ ಪಿಯುನಲ್ಲಿ ಅನುತೀರ್ಣನಾಗಿದ್ದಾನೆ.

ಎಸ್​ಎಸ್​ಎಲ್​ಸಿವರೆಗೂ ಪ್ರತಿಭಾವನ್ವಿತ ವಿದ್ಯಾರ್ಥಿಯಾಗಿದ್ದ ಶರತ್​​ಗೆ ಪಿಯುಸಿನಲ್ಲಿ ಪಬ್​ಜಿ ಗೇಮ್​ನ ಗೀಳು ಅಂಟಿಕೊಂಡಿದೆ. ಇದರಿಂದ ಕಲಿಕೆಯ ಮೇಲಿನ ಆಸಕ್ತಿ ಸಂಪೂರ್ಣ ಕಡಿಮೆಯಾಗಿದೆ. ಅದರ ಪರಿಣಾಮ ಎಸ್​ಎಸ್​ಎಲ್​ಸಿಯಲ್ಲಿ ಶೇ.71 ರಷ್ಟು ಅಂಕಗಳಿಸಿದ ಶರತ್ ಈಗ ಫೇಲ್​ ಆಗಿ ಮನೆಯಲ್ಲಿ ಕೂರುವಂತಾಗಿದೆ.

ಉತ್ತರ ಪತ್ರಿಕೆಯ ತುಣುಕು


ಇವರ ತಂದೆಯು ಮತ್ತೊಂದು ಕಾಲೇಜಿನಲ್ಲಿ ಪ್ರಿನ್ಸಿಪಾಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ಮಗ ಮೊಬೈಲ್​ನಲ್ಲೇ ಹೆಚ್ಚು ನಿರತರಾಗಿರುವುದನ್ನು ಗಮನಿಸಿದ್ದರು. ಆದರೆ ಪೋಷಕರು ಶರತ್ ತನ್ನ ಸ್ನೇಹಿತರೊಂದಿಗೆ ಚಾಟಿಂಗ್​ನಲ್ಲಿ ತೊಡಗಿಸಿಕೊಂಡಿರುತ್ತಾನೆ ಎಂದು ನಿರ್ಲಕ್ಷ್ಯವಹಿಸಿದ್ದರು.

ಆದರೆ ವಾರ್ಷಿಕ ಪರೀಕ್ಷೆ ಹತ್ತಿರವಾದರೂ ಶರತ್​ಗೆ ಮೊಬೈಲ್​ ಕೆಳಗಿಟ್ಟು ಓದುವ ಮನಸ್ಸು ಆಗುತ್ತಿರಲಿಲ್ಲ. ಅಲ್ಲದೆ ಪಬ್​ಜಿ ಆಡಲೆಂದೇ ಹಲವು ಬಾರಿ ಕ್ಲಾಸ್​ಗೆ ಬಂಕ್ ಮಾಡಿದ್ದೆ. ನನಗೆ ಮೊದಲು ಓದುವ ಅಭ್ಯಾಸವಿದ್ದರೂ, ಈ ಆಟದ ಚಟಕ್ಕೆ ಬಿದ್ದು, ಪರೀಕ್ಷೆಯಲ್ಲಿ ಫೇಲಾಗಿರುವುದನ್ನು ಶರತ್ ಒಪ್ಪಿಕೊಳ್ಳುತ್ತಾನೆ.

ದನ್ನೂ ಓದಿ:: ಯಜಮಾನನ ಮಾನವೀಯತೆ: ಹಾಸಿಗೆ ಹಿಡಿದ ನಟನ ನೆರವಿಗೆ ನಿಂತ ಚಾಲೆಂಜಿಂಗ್ ಸ್ಟಾರ್ ದರ್ಶನ್ಇದೀಗ ಈತನನ್ನು ವೈದ್ಯರ ಸಮಾಲೋಚನೆಗೆ ಒಳಪಡಿಸಲು ಪೋಷಕರು ತೀರ್ಮಾನಿಸಿದ್ದು, ಈ ಮೂಲಕ ಮಗನನ್ನು ಪಬ್​ಜಿ ಹುಚ್ಚಾಟದಿಂದ ಮುಕ್ತಿಗೊಳಿಸಲು ನಿರ್ಧರಿಸಿದ್ದಾರೆ.

ಇದನ್ನೂ ಓದಿ: ಅತಿ ದೊಡ್ಡ ಸ್ಪೈಕ್ಯಾಮ್​ ಸೆಕ್ಸ್​ ಜಾಲ ಬಯಲು: 800 ದಂಪತಿಗಳ ಸರಸ ವಿಡಿಯೋ ಲೈವ್..!
First published: March 22, 2019, 6:11 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading