• Home
  • »
  • News
  • »
  • state
  • »
  • Hubballi: ಟ್ಯೂಷನ್​ಗೆ ಹೋಗ್ತಿದ್ದ ವಿದ್ಯಾರ್ಥಿ ಮೇಲೆ ಪಿಟ್​ಬುಲ್​ ಡೆಡ್ಲಿ ಅಟ್ಯಾಕ್; ಕಿಮ್ಸ್​ಗೆ ದಾಖಲು

Hubballi: ಟ್ಯೂಷನ್​ಗೆ ಹೋಗ್ತಿದ್ದ ವಿದ್ಯಾರ್ಥಿ ಮೇಲೆ ಪಿಟ್​ಬುಲ್​ ಡೆಡ್ಲಿ ಅಟ್ಯಾಕ್; ಕಿಮ್ಸ್​ಗೆ ದಾಖಲು

ಕಿಮ್ಸ್

ಕಿಮ್ಸ್

ಕೊಪ್ಪಿಕರ ರಸ್ತೆಯಲ್ಲಿ ಯುವಕರ ಮೇಲೆ ನಾಯಿ ಡೆಡ್ಲಿ ಅಟ್ಯಾಕ್ ಆಗಿತ್ತು. ಅದರ ಬೆನ್ನ ಹಿಂದೆಯೇ ಬಂಕಾಪುರ ಚೌಕ್​​ನ ಪಾಟೀಲ್ ಗಲ್ಲಿಯಲ್ಲಿ ವಿದ್ಯಾರ್ಥಿ ಮೇಲೆ ಮಾರಣಾಂತಿಕ ದಾಳಿಯಾಗಿದೆ.

  • Share this:

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ (Hubballi) ನಾಯಿಗಳ ದಾಳಿ (Dog Attack) ಮುಂದುವರಿದಿದೆ. ಸಾಕು ನಾಯಿಯೊಂದು (Pet Dog) ಬಾಲಕನ ಮೇಲೆ ಭೀಕರ ದಾಳಿ ಮಾಡಿದೆ. ಪಿಟ್​​ಬುಲ್ ಜಾತಿಯ ಶ್ವಾನದ ದಾಳಿಗೆ ಸಿಲುಕಿ ಬಾಲಕನೋರ್ವ ಗಂಭೀರವಾಗಿ ಗಾಯಗೊಂಡಿರೋ ಘಟನೆ ಹುಬ್ಬಳ್ಳಿಯ ಬಂಕಾಪುರ ಚೌಕ ಬಳಿ‌ಯ ಪಾಟೀಲ್ ಗಲ್ಲಿಯಲ್ಲಿ ನಡೆದಿದೆ. ಪವನ್ ಅನಿಲ್‌ ದೊಡಮನಿ ಎಂಬ ಬಾಲಕನಿಗೆ ಗಂಭೀರ ಗಾಯಗಳಾಗಿವೆ. ಟ್ಯೂಷನ್​ಗೆ ಹೋಗುತ್ತಿದ್ದ ವೇಳೆ ನಾಯಿ ದಿಢೀರ್ ಅಟ್ಯಾಕ್ ಮಾಡಿದೆ. ಗುರುಸಿದ್ದಪ್ಪ‌ ಚನ್ನೋಜಿ ಎಂಬವರಿಗೆ ಸೇರಿದ ಪಿಟ್ ಬುಲ್ ಶ್ವಾನ (Pitbull Dog) ದಾಳಿ ಮಾಡಿದ್ದು, ಬಾಲಕನ ಸ್ಥಿತಿ ಚಿಂತಾಜನಕವಾಗಿದೆ. ಬಾಲಕನನ್ನ ಕಿಮ್ಸ್ ಆಸ್ಪತ್ರೆಗೆ (KIMS Hospital) ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬಾಲಕನ ಸ್ಥಿತಿ ಕಂಡು ಪೋಷಕರು ಮರುಗುತ್ತಿದ್ದಾರೆ. ಬೇಂಡಿಗೇರಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


ನಿಷೇಧಿತ ಪಿಟ್ ಬುಲ್ ಸಾಕಿದ್ದ ವ್ಯಕ್ತಿ


ಹೀಗೆ ಬಾಲಕನ ಮೇಲೆ ದಾಳಿ ಮಾಡಿರೋದು ಬೀದಿ ನಾಯಿಯಲ್ಲ. ಬದಲಿಗೆ ಸಾಕು ನಾಯಿಯಾಗಿದ್ದ ಪಿಟ್ ಬುಲ್. ಈ ಪಿಟ್ ಬುಲ್ ಭಾರತದ ಕೆಲವೆಡೆ ನಿಷೇಧಿತ ತಳಿಯಾಗಿದೆ.


ಬಹುತೇಕ ನಗರ ಪ್ರದೇಶಗಳಲ್ಲಿ ಪಿಟ್ ಬುಲ್ ನಿಷೇಧ ಮಾಡಲಾಗಿದೆ. ಆದರೆ ಹುಬ್ಬಳ್ಳಿಯಲ್ಲಿ ಅದನ್ನು ವ್ಯಕ್ತಿಯೋರ್ವ ಸಾಕಿದ್ದರೂ ಪಾಲಿಕೆಯ ಗಮನಕ್ಕೆ ಬಂದಿಲ್ಲ. ಗುರುಸಿದ್ದಪ್ಪ‌ ಚನ್ನೋಜಿ ಎಂಬವರಿಗೆ ಸೇರಿದ್ದ ಪಿಟ್ ಬುಲ್ ನಾಯಿ ಡೆಡ್ಲೀ ಅಟ್ಯಾಕ್ ಮಾಡಿದೆ. ನಿಷೇಧಿತ ತಳಿ ಹುಬ್ಬಳ್ಳಿಗೆ ಬಂತಾದ್ರೂ ಹೇಗೆ ಅನ್ನೋ ಪ್ರಶ್ನೆ ಎಲ್ಲರನ್ನೂ ಕಾಡಲಾರಂಭಿಸಿದೆ.


ಅಧಿಕಾರಿಗಳಿಂದಲೂ ಸಿಗದ ಮಾಹಿತಿ


ವಿಚಿತ್ರವೆಂದರೆ ಈ ಬಗ್ಗೆ ಪಾಲಿಕೆ ಅಧಿಕಾರಿಗಳಿಗೂ ಸೂಕ್ತ ಮಾಹಿತಿ ಇಲ್ಲ. ಮನೆ ಕಾಂಪೌಂಡ್ ಒಳಗಿದ್ದ ಪಿಟ್ ಬುಲ್, ದಾರಿಯಲ್ಲಿ ಹೋಗುತ್ತಿದ್ದ ವಿದ್ಯಾರ್ಥಿಯನ್ನು ನೋಡಿ ಕಾಂಪೌಂಡ್ ಹಾರಿ ಬಾಲಕನ ಮೇಲೆ ಅಟ್ಯಾಕ್ ಮಾಡಿದೆ. ಮುಖ ದೇಹ ಎನ್ನದೇ ದೇಹದ ವಿವಿಧೆಡೆ ಗಂಭೀರವಾಗಿ ಗಾಯಗೊಳಿಸಿದೆ.


ಘಟನೆ ನಡೆದ ತಕ್ಷಣ ನಾಯಿಯೊಂದಿಗೆ ಮಾಲೀಕ ಎಸ್ಕೇಪ್ ಆಗಿದ್ದಾನೆ. ಗುರುಸಿದ್ದಪ್ಪ‌ ಚನ್ನೋಜಿ ಮನೆಗೆ ಬೀಗ ಜಡಿದು ಕುಟುಂಬದ ಸದಸ್ಯರ ಸಮೇತ ಹೊರಟು ಹೋಗಿದ್ದಾರೆ. ಗುರುಸಿದ್ದಪ್ಪ‌ ಚನ್ನೋಜಿ ಮಾಜಿ ಕಾರ್ಪೊರೇಟರ್​​ರೊಬ್ಬ ಸಂಬಂಧಿ ಎನ್ನಲಾಗಿದೆ. ಪಿಟ್ ಬುಲ್ ನಾಯಿಯೊಂದಿಗೆ ಹಳಿಯಾಳಕ್ಕೆ ಹೋಗಿರೋ ಮಾಹಿತಿ ಲಭ್ಯವಾಗಿದೆ. ಪಿಟ್ ಬುಲ್ ಪ್ರಕರಣ ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.


ಕಳೆದ ಒಂದು ತಿಂಗಳಲ್ಲಿ 250 ನಾಯಿ ಕಡಿತ


ಹುಬ್ಬಳ್ಳಿಯಲ್ಲಿ ನಾಯಿಗಳ ಡೆಡ್ಲೀ ಅಟ್ಯಾಕ್ ಪ್ರಕರಣದ ನಂತರ ಹುಬ್ಬಳ್ಳಿಯಲ್ಲಿ ನಾಯಿ ಕಡಿತದ ಅಂಕಿ – ಅಂಶ ಕೇಳಿದ್ರೆ ನೀವೇ ಬೆಚ್ಚಿ ಬೀಳ್ತೀರಿ. ಕಳೆದ ಒಂದು ತಿಂಗಳಲ್ಲಿ ಕಿಮ್ಸ್​​ನಲ್ಲಿ ದಾಖಲಾದ ಪ್ರಕರಣಗಳೇ 250 ಅಂದ್ರೆ ನೀವೇ ಊಹಿಸಿ. ಸದ್ಯ ಕಿಮ್ಸ್​​ನಲ್ಲಿ ವ್ಯಾಕ್ಸಿನ್ ಹಾಕಿಸಿಕೊಳ್ಳುತ್ತಿರುವವರ ಸಂಖ್ಯೆ 750 ಆಗಿದೆ.


ಬಹುತೇಕರು ಇಂಜೆಕ್ಷನ್ ಹಾಕಿಸಿಕೊಂಡು ವಾಪಸ್ಸಾಗುತ್ತಿದ್ದಾರೆ. ಕೆಲವೊಬ್ಬರು ಮಾತ್ರ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ ಬಹುತೇಕ ಕೇಸ್​​ಗಳು ಹುಬ್ಬಳ್ಳಿ ನಗರದ್ದು ಅನ್ನೋದು ಗಮನಾರ್ಹ.


ಇದನ್ನೂ ಓದಿ: Udupi College: ಮುಸ್ಲಿಂ ವಿದ್ಯಾರ್ಥಿಯನ್ನು ಟೆರರಿಸ್ಟ್ ಎಂದ ಪ್ರಾಧ್ಯಾಪಕ ಅಮಾನತು


ಪ್ರತಿನಿತ್ಯ ನಾಯಿ ದಾಳಿ ಪ್ರಕರಣ


ಬೀದಿ ನಾಯಿಗಳ ಜೊತೆ ಸಾಕು ನಾಯಿಗಳ ಉಪಟಳದಿಂದ ಜನ ಕಂಗೆಟ್ಟಿದ್ದಾರೆ. ನಿತ್ಯ ಒಂದೆರಡು ಕಡೆ ನಾಯಿ ಕಚ್ಚೋದು ಕಾಮನ್ ಆಗಿದೆ. ಸ್ಲಂ ಪ್ರದೇಶದಲ್ಲಿ ಇದರ ಪ್ರಮಾಣ ಹೆಚ್ಚಳವಾಗಿದೆ. ಬಂಕಾಪುರ ಚೌಕ್, ಸೆಟ್ಲಮೆಂಟ್ ಪ್ರದೇಶ, ಹಳೆ ಹುಬ್ಬಳ್ಳಿ, ಗಣೇಶ ಪೇಟೆ, ಆನಂದ್ ನಗರ ಮತ್ತಿತರ ಕಡೆ ನಾಯಿ ಉಪಟಳ ಹೆಚ್ಚಿದೆ.


ಕೊಪ್ಪಿಕರ ರಸ್ತೆಯಲ್ಲಿ ಯುವಕರ ಮೇಲೆ ನಾಯಿ ಡೆಡ್ಲಿ ಅಟ್ಯಾಕ್ ಆಗಿತ್ತು. ಅದರ ಬೆನ್ನ ಹಿಂದೆಯೇ ಬಂಕಾಪುರ ಚೌಕ್​​ನ ಪಾಟೀಲ್ ಗಲ್ಲಿಯಲ್ಲಿ ವಿದ್ಯಾರ್ಥಿ ಮೇಲೆ ಮಾರಣಾಂತಿಕ ದಾಳಿಯಾಗಿದೆ.


ಶಾಶ್ವತ ಪರಿಹಾರಕ್ಕೆ ಸಾರ್ವಜನಿಕರ ಆಗ್ರಹ


ಕಳೆದ ಒಂದು ವಾರದಲ್ಲಿ ಎರಡು ಪ್ರಕರಣ ಮಾತ್ರ ಬೆಳಕಿಗೆ ಬಂದಿದೆ ಅಂತಾರೆ ಪಾಲಿಕೆ ಮುಖ್ಯ ವೈದ್ಯಾಧಿಕಾರಿ ಡಾ.ಶ್ರೀಧರ ದಂಡಪ್ಪನವರ. ನಾಯಿ ನಿಯಂತ್ರಣಕ್ಕೆ ಪ್ರಯತ್ನಿಸ್ತಿದ್ದೇವೆ. ಟೆಂಡರ್ ಕರೆಯಲಾಗಿದ್ದು, ಎರಡು ಪ್ರತ್ಯೇಕ ತಂಡಗಳನ್ನು ರಚಿಸ್ತೇವೆ. ನಾಯಿ ಹಿಡಿದು ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡ್ತೇವೆ ಎನ್ನುತ್ತಿದ್ದಾರೆ ವೈದ್ಯಾಧಿಕಾರಿಗಳು.


ಇದನ್ನೂ ಓದಿ:  Bettanagere Shankara: ನೆಟೋರಿಯಸ್ ರೌಡಿ ಬೆತ್ತನಗೆರೆ ಶಂಕರ ಪಾಲಿಟಿಕ್ಸ್​ಗೆ ಎಂಟ್ರಿ? BJP ನಾಯಕರ ಜೊತೆ ಸುತ್ತಾಟ


ಆದರೆ ಇದಕ್ಕೆ ಸಾರ್ವಜನಿಕರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚಿಕಿತ್ಸೆ ಮಾಡಿ ನಾಯಿಗಳನ್ನು ಇಲ್ಲೇ ಬಿಟ್ಟರೆ ಮತ್ತೆ ಕಚ್ಚುತ್ತೆ. ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಿ ಎಂದು ಜನರು ಆಗ್ರಹಿಸಿದ್ದಾರೆ.

Published by:Mahmadrafik K
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು