• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Crime News: ಹುಡುಗಿಯ ರೀತಿ ಮೆಸೇಜ್ ಮಾಡಿ ಕರೆಸಿ ಚಾಕುವಿನಿಂದ ಇರಿದ್ರು; ಇತ್ತ ಸ್ನೇಹಿತನಿಂದಲೇ ಅತ್ಯಾಚಾರಕ್ಕೆ ಯತ್ನ

Crime News: ಹುಡುಗಿಯ ರೀತಿ ಮೆಸೇಜ್ ಮಾಡಿ ಕರೆಸಿ ಚಾಕುವಿನಿಂದ ಇರಿದ್ರು; ಇತ್ತ ಸ್ನೇಹಿತನಿಂದಲೇ ಅತ್ಯಾಚಾರಕ್ಕೆ ಯತ್ನ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮಾತನಾಡುತ್ತಲೇ ಸಿದ್ಧಾರ್ಥ ಮೇಲೆ ಇಬ್ಬರು ಮೇಲೆ ಹಲ್ಲೆ ನಡೆಸಿದ್ದಾರೆ. ನಂತರ ಚಾಕುವಿನಿಂದ ಸಿದ್ದಾರ್ಥ್ ತೊಡೆಗೆ ಇರಿದು ಚೇತನ್ ಮತ್ತು ಸಹಚರರು ಪರಾರಿಯಾಗಿದ್ದಾರೆ.

  • Share this:

ಬೆಂಗಳೂರು: ರಾಜಧಾನಿಯಲ್ಲಿ (Bengaluru) ಅಪರಾಧ ಪ್ರಕರಣಗಳ (Crime News) ಸಂಖ್ಯೆ ಹೆಚ್ಚಾಗ್ತಿದೆಯಾ ಎಂಬ ಆತಂಕ ಎದುರಾಗಿದೆ. ಚಾಕು ಇರಿತ (Stabbing), ಕಳ್ಳತನದಂತಹ (Theft Case) ಪ್ರಕರಣಗಳು ವರದಿ ಆಗುತ್ತಲೇ ಇರುತ್ತವೆ. ಇದೀಗ ಯುವಕನೋರ್ವನಿಗೆ ಚಾಕುವಿನಿಂದ ಇರಿಯಲಾಗಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಬೆಂಗಳೂರಿನ ಗೋವಿಂದ್ ರಾಜ್‌ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸಿದ್ಧಾರ್ಥ್ ಚಾಕುವಿನಿಂದ ಇರಿತಕ್ಕೊಳಗಾದ ಯುವಕ. ಚೇತನ್ ಎಂಬ ಯುವಕ ಇನ್​ಸ್ಟಾಗ್ರಾಂನಲ್ಲಿ ಕೀರ್ತಿ ಎಂಬ ಹೆಸರಿನಲ್ಲಿ ನಕಲಿ ಖಾತೆ ಕ್ರಿಯೇಟ್ (Fake Account Create) ಮಾಡಿ ಸಿದ್ಧಾರ್ಥ್​​ಗೆ ಹುಡುಗಿಯಂತೆ ಮೆಸೇಜ್ ಮಾಡುತ್ತಿದ್ದನು. ಆರಂಭದಲ್ಲಿ ಹುಡುಗಿ ಅಂತ ತಿಳಿದು ಸಿದ್ಧಾರ್ಥ್ ಮೆಸೇಜ್ ಮಾಡುತ್ತಿದ್ದನು.


ಹೀಗೆ ಸಿದ್ಧಾರ್ಥ್ ಮತ್ತು ಚೇತನ್ ಕೆಲವು ದಿನಗಳವರೆಗೆ ಮೆಸೇಜ್ ಮಾಡಿಕೊಂಡಿದ್ದಾರೆ. ಕೆಲ ದಿನಗಳ ನಂತರ ಇದು ಫೇಕ್ ಅಂತ ಸಿದ್ಧಾರ್ಥ್​ ಗೆ ಗೊತ್ತಾಗಿದೆ. ಆಗ ಯಾಕೆ ಮೆಸೇಜ್ ಮಾಡ್ತಾಯಿದ್ದೀಯಾ ಅಂತ ಸಿದ್ಧಾರ್ಥ್  ಪ್ರಶ್ನೆ ಮಾಡಿದ್ದಾನೆ. ಆಗ ಸರಿ ನನ್ನನ್ನು ಭೇಟಿ‌ ಮಾಡು ಹೇಳ್ತೀನಿ ಅಂತ ಚೇತನ್ ಕರೆಸಿಕೊಂಡಿದ್ದಾನೆ.


ಸಹಚರರ ಜೊತೆ ಬಂದಿದ್ದ ಚೇತನ್


ಗೋವಿಂದ್ ರಾಜ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಿದ್ಧಾರ್ಥ್ ಮತ್ತು ಚೇತನ್ ಭೇಟಿಯಾಗಿದ್ದಾರೆ. ಈ ವೇಳೆ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಚೇತನ್ ಮೊದಲೇ ಪ್ಲ್ಯಾನ್ ಮಾಡಿ ಚಾಕು ತಂದಿದ್ದ. ಜೊತೆಗೆ ತನ್ನ ಸಹಚರರನ್ನು ಕರೆದುಕೊಂಡು ಬಂದಿದ್ದನು.


ಮಾತನಾಡುತ್ತಲೇ ಸಿದ್ಧಾರ್ಥ ಮೇಲೆ ಇಬ್ಬರು ಮೇಲೆ ಹಲ್ಲೆ ನಡೆಸಿದ್ದಾರೆ. ನಂತರ ಚಾಕುವಿನಿಂದ ಸಿದ್ದಾರ್ಥ್ ತೊಡೆಗೆ ಇರಿದು ಚೇತನ್ ಮತ್ತು ಸಹಚರರು ಪರಾರಿಯಾಗಿದ್ದಾರೆ. ಚಾಕುವಿನಿಂದ ಇರಿತಕ್ಕೊಳಗಾದ ಸಿದ್ಧಾರ್ಥ್ ನಡು ರಸ್ತೆಯಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ.


ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ


ಸದ್ಯ ಸಿದ್ಧಾರ್ಥ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾನೆ. ಸಿದ್ದಾರ್ಥ್ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಗೋವಿಂದ್ ರಾಜ್‌ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




ಸ್ನೇಹಿತನಿಂದಲೇ ಅತ್ಯಾಚಾರಕ್ಕೆ ಯತ್ನ


ಪಾರ್ಟಿ ಮಾಡುವ ನೆಪದಲ್ಲಿ ಸ್ನೇಹಿತನೇ ಯುವತಿಯ ಮೇಲೆ ಅತ್ಯಾಚಾರಕ್ಕೆ ಯತ್ನ‌‌ ನಡೆಸಿರುವ ಘಟನೆ ಬೆಂಗಳೂರಿನ ವಿವೇಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.


ಇಬ್ಬರು ಯುವಕರು ಮತ್ತು ಇಬ್ಬರು ಯುವತಿಯರು ಪಾರ್ಟಿ ಮಾಡಲು ಒಂದು ಕಡೆ ಸೇರಿದ್ದರು. ಕಾಶ್ಮೀರ ಮೂಲದ ಓರ್ವ ಯುವತಿ, ಇಬ್ಬರು ಉತ್ತರ ಭಾರತ ಮೂಲದ ಯುವಕರು ಒಂದೇ ವಿಶ್ವವಿದ್ಯಾಲಯದಲ್ಲಿ ಓದಿದ್ದರಿಂದ ಎಲ್ಲರೂ ಪರಿಚಿತರು. ನಾಲ್ವರು ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ಆರೋಪಿಗಳನ್ನು ಅದಿತ್ಯ ಮತ್ತು ಅಜಯ್ ಎಂದು ಗುರುತಿಸಲಾಗಿದೆ.


ಅದು ಸಲುಗೆ ಮೇಲೆಯೇ ಯುವತಿಯರು ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಕುಡಿದ ನಶೆಯಲ್ಲಿ ಓರ್ವ ಸ್ನೇಹಿತೆ ಮೇಲೆ ಒಬ್ಬ ಅತ್ಯಾಚಾರಕ್ಕೆ ಯತ್ನಿಸಿದ್ರೆ, ಮತ್ತೋರ್ವ ಮತ್ತೊಬ್ಬ ಯುವತಿ ಮೇಲೆ ಲೈಂಗಿಕ ದೌರ್ಜನ್ಯ‌ ಎಸಗಿದ್ದಾನೆ. ಸದ್ಯ ಪೊಲೀಸರು ಇಬ್ಬರು ಯುವಕರನ್ನು ಬಂಧಿಸಿದ್ದು, ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ.


ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದು, ಯುವತಿಯರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ.


ಇದನ್ನೂ ಓದಿ : Crime news: ಅತ್ಯಾಚಾರಕ್ಕೆ ಯತ್ನಿಸಿದವನ ತುಟಿ ಕಚ್ಚಿ ತುಂಡರಿಸಿದ ಯುವತಿ! ಮಾನಗೇಡಿ ಕೃತ್ಯಕ್ಕೆ ಬಂದವ ಈಗ ಆಸ್ಪತ್ರೆ ಪಾಲು!


ಅಪ್ರಾಪ್ತೆ ಮೇಲೆ ಅತ್ಯಾಚಾರ


ಲಿವ್‌ ಇನ್ ಟುಗೆದರ್‌ನಲ್ಲಿದ್ದ (Live in Relationship) ವ್ಯಕ್ತಿಯೊಬ್ಬ ಆಕೆಯ ಅಪ್ರಾಪ್ತ ವಯಸ್ಸಿನ ಮಗಳ (Minor Girl) ಮೇಲೆ ನಿರಂತರ ಅತ್ಯಾಚಾರ (Crime news) ಎಸಗಿರುವ ಅಮಾನವೀಯ (Harassment) ಘಟನೆ ರಾಜಸ್ತಾನದಲ್ಲಿ (Rajasthan) ನಡೆದಿದೆ. ತಡವಾಗಿ ಈ ಪ್ರಕರಣ ಬೆಳಕಿಗೆ ಬಂದಿದ್ದು, ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು (Rajasthan Police) ಆತನನ್ನು ಜೈಲಿಗೆ ತಳ್ಳಿದ್ದಾರೆ.

Published by:Mahmadrafik K
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು