ಚಾಮರಾಜನಗರ: ಬಿಜೆಪಿ ಅಭ್ಯರ್ಥಿ, ಸಚಿವ ವಿ.ಸೋಮಣ್ಣ (V Somanna) ಚಾಮರಾಜನಗರದಲ್ಲಿ (Chamarajangar) ಬೆಳ್ಳಂಬೆಳಗ್ಗೆ ಮತಬೇಟೆಗೆ (votes) ಮುಂದಾಗಿದ್ದಾರೆ. ಟೀ ಕ್ಯಾಂಟೀನ್, ಪಾರ್ಕ್, ಪೇಪರ್ ಅಂಗಡಿ, ಸ್ಟೇಡಿಯಂ ಮೊದಲಾದ ಕಡೆ ತೆರಳುತ್ತಿರುವ ಸೋಮಣ್ಣ ಮತಯಾಚನೆ ಮಾಡುತ್ತಿದ್ದಾರೆ. ಮತ ಯಾಚನೆ ಮಾಡುವ ವೇಳೆ ಸೋಮಣ್ಣ ಅವರ ಬಳಿ ಬಂದ ಬಾಲಕ (Boy), ಸಿಎಂ ಆಗೋಕೆ ಏನು ಮಾಡಬೇಕು ಎಂದು ಪ್ರಶ್ನೆ ಮಾಡಿದ್ದಾನೆ. ನೀನೂ ಏನು ಮಾಡಬೇಡ? ಹೋಗಪ್ಪಾ ತಂದೆ ಚೆನ್ನಾಗಿ ಓದು. ಸಿಎಂ-ಗಿಎಂ ಎಲ್ಲಾ ಲೆಲ್ಲಾ ಇಲ್ಲ. ನೀನೇ ದೊಡ್ಡ ಸಿಎಂ. ಚೆನ್ನಾಗಿ ಓದು, ಸ್ಪೋರ್ಟ್ಸ್ ಆಕ್ಟಿವಿಟಿಯಲ್ಲಿರು. ಬಾಕಿದೆಲ್ಲಾ ಬಿಟ್ಟು ಬಿಡು. ನಿನ್ನ ಹಣೆಯಲ್ಲಿ ಬರೆದಿದ್ರೆ ಆಗ್ತೀಯಾ ಎಂದು ಬಾಲಕನಿಗೆ ಸೋಮಣ್ಣ ಕಿವಿಮಾತು ಹೇಳಿದರು.
ನನಗೆ ಪಾರ್ಟಿ ತಾಯಿ ಇದ್ದಂತೆ. ನೀನೊಬ್ಬ ಬದಲಾವಣೆಯಾಗು, ಬದಲಾವಣೆಯಾದಿಗದ್ರೆ ನಿಮಗೆ ನಷ್ಟವಾಗೋದು. ಒಳ್ಳೆಯದಕ್ಕೆ ನಾನು ಪ್ರಾಣ ಕೊಡ್ತೀನಿ. ಕೆಟ್ಟವರನ್ನು ಮಾತ್ರ ಬಿಡಲ್ಲ ಎಂದು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿಕೊಂಡವರಿಗೆ ಸೋಮಣ್ಣ ಎಚ್ಚರಿಕೆ ನೀಡಿದರು.
ಸಿದ್ದರಾಮಯ್ಯಗೋಸ್ಕರ ಒದೆ ತಿಂದಿದ್ದೇನೆ
2006 ಚಾಮುಂಡೇಶ್ವರಿ ಚುನಾವಣೆಯಲ್ಲಿ ಸಿದ್ದರಾಮಯ್ಯಗೋಸ್ಕರ ಒದೆ ತಿಂದಿದ್ದೇನೆ. ಬರಿಮೈಯಲ್ಲಿ ದೇವಾಲಪುರದಿಂದ ಮೈಸೂರಿಗೆ ಹೋಗಿದ್ದೇನೆ. ನನ್ನ ಕಾರಿನ ಗ್ಲಾಸ್ ಒಡೆದಿದ್ದರು ಪ್ಯಾಂಟ್ ಹರಿದು ಹಾಕಿದ್ದರು.
ಆವತ್ತು ನನ್ನ ಸಮಾಜ ಎದುರು ಹಾಕಿಕೊಂಡು ಅವರಿಗೋಸ್ಕರ ಕೆಲಸ ಮಾಡಿದ್ದೆ. ಇದೆಲ್ಲಾ ಸಿದ್ದರಾಮಯ್ಯ ಸಾಹೇಬರ ತಲೇಲಿ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ನಾನು ಮತ್ತು ಅವರು ಅಭ್ಯರ್ಥಿಗಳಷ್ಟೇ
ನಾನು ಸಾಹೇಬ್ರೆ ಅಂತೀನಿ ಅವರು ಏಕವಚನದಲ್ಲಿ ಮಾತನಾಡ್ತಾರೆ. ಇದೆ ನನಗೂ ಮತ್ತು ಅವರಿಗೂ ಇರೋ ವ್ಯತ್ಯಾಸ. ಅವರು ಈಗ ವಿರೋಧ ಪಕ್ಷದ ನಾಯಕರೂ ಅಲ್ಲ, ನಾನು ಮಂತ್ರಿನೂ ಅಲ್ಲ. ನಾನು ಮತ್ತು ಅವರು ಅಭ್ಯರ್ಥಿಗಳಷ್ಟೇ ಎಂದು ಹೇಳಿದರು.
ಇದನ್ನೂ ಓದಿ: Karnataka High court: ರಾಘವೇಶ್ವರ ಶ್ರೀ, ಕಲ್ಲಡ್ಕ ಪ್ರಭಾಕರ್ ಭಟ್ಗೆ ಬಿಗ್ ರಿಲೀಫ್
ವರುಣಾದಲ್ಲಿ ಸ್ಪರ್ಧೆ ವಿಧಿನಿಯಮ
ನಾನು ಅವರನ್ನು ಮುತ್ಸದಿ ನಾಯಕ ಎಂದು ಭಾವಿಸಿದ್ದೆ. ಅವನ್ಯಾರು, ಇವನ್ಯಾರು ಅನ್ನೋ ಡೈಲಾಗ್ ಕಡಿಮೆ ಮಾಡಿದ್ರೆ ಒಳ್ಳೆಯದು. ರಾಜಕೀಯದಲ್ಲಿ ತಾಳ್ಮೆ ಮುಖ್ಯ. ನಾನು ವರುಣಾದಲ್ಲಿ ಸ್ಪರ್ಧೆ ಮಾಡ್ತಿರೋದು ವಿಧಿನಿಯಮ ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ