ಬೀದಿನಾಯಿಗೆ ಮತ್ತೊಂದು ಬಲಿ; ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದ ಬಾಲಕ ಪ್ರವೀಣ

news18
Updated:September 1, 2018, 10:17 PM IST
ಬೀದಿನಾಯಿಗೆ ಮತ್ತೊಂದು ಬಲಿ; ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದ ಬಾಲಕ ಪ್ರವೀಣ
news18
Updated: September 1, 2018, 10:17 PM IST
ನ್ಯೂಸ್​18 ಕನ್ನಡ

ಬೆಂಗಳೂರು (ಸೆ. 1): ಮೂರು ದಿನಗಳ ಹಿಂದೆ ನಗರದ ವಿಭೂತಿಪುರದ ಕೆರೆ ಬಳಿ  ಈಜಲು ಹೋಗಿದ್ದ ಪ್ರವೀಣ್​ ಎಂಬ ಬಾಲಕನ ಮೇಲೆ 10ಕ್ಕೂ ಹೆಚ್ಚು ಬೀದಿನಾಯಿಗಳು ದಾಳಿ ಮಾಡಿತ್ತು. ಮಣಿಪಾಲ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕ ಇಂದು ಕೊನೆಯುಸಿರೆಳೆದಿದ್ದಾನೆ.

ಬೀದಿ ನಾಯಿಗಳಿಂದ ದಾಳಿಗೊಳಗಾಗಿದ್ದ ಬಾಲಕ ಪ್ರವೀಣ್​ ಸ್ಥಿತಿ ಗಂಭೀರವಾಗಿದ್ದರಿಂದ ಮಣಿಪಾಲ್​ ಆಸ್ಪತ್ರೆಗೆ ಸೇರಿಸಲಾಗಿತ್ತು. ಬೀದಿನಾಯಿಗಳ ವಿಷಯದಲ್ಲಿ ನಿರ್ಲಕ್ಷ್ಯ ತೋರಿದ ಮಹದೇವಪುರ ವಲಯ ಪಶುಪಾಲನೆ ವಿಭಾಗದ ಸಹಾಯಕ ನಿರ್ದೇಶಕ ಶ್ರೀರಾಮ್​, ಪಶುಪಾಲನೆ ಗುತ್ತಿಗೆದಾರ ರವಿಶಂಕರ್​, ಹಿರಿಯ ಪಶು ವೈದ್ಯಕೀಯ ಪರೀಕ್ಷಕ ಅರುಣ್​ ಮುತಾಲಿಕ್​ ದೇಸಾಯಿ ಅವರನ್ನು ಹೆಚ್​ಎಎಲ್​ ಠಾಣೆಯ ಪೊಲೀಸರು ನಿನ್ನೆ ಬಂಧಿಸಿದ್ದರು. ನಾಯಿಗಳ ದಾಳಿಯಿಂದ ತೀವ್ರ ಗಾಯಗಳಿಗೀಡಾಗಿದ್ದ ಬಾಲಕ ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.

 

ಮುರುಗಮ್ಮ ಹಾಗೂ ಮನೋಜ್ ದಂಪತಿಯ ಮಗ ಪ್ರವೀಣನ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಭರಿಸುವುದಾಗಿ ಮೇಯರ್ ಸಂಪತ್ ರಾಜ್ ಭರವಸೆ ನೀಡಿದ್ದರು.ಬೀದಿನಾಯಿಗಳ ಸಂತತಿ ಹೆಚ್ಚುತ್ತಲೇ ಇದ್ದು, ಅವುಗಳನ್ನು ನಿಯಂತ್ರಿಸಲು ಬಿಬಿಎಂಪಿ ಸಿಬ್ಬಂದಿ ಯಾವುದೇ ಸೂಕ್ತ ಕ್ರಮಗಳನ್ನು ಕೈಗೊಳ್ಳದ ಕಾರಣದಿಂದ ಬಾಲಕ ಇಂದು ಸಾವನ್ನಪ್ಪಿದ್ದಾನೆ.
First published:September 1, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ