ಬೆಂಗಳೂರು (ಡಿ.08): ಮಕ್ಕಳಿಗೆ (Children) ಹೊಡೆಯೋದಿರಲಿ ಬುದ್ದಿ ಮಾತು ಹೇಳುವುದು ಕೂಡ ಕಷ್ಟವಾಗಿ ಹೋಗಿದೆ. ಯಾವಾಗಲು ಮೊಬೈಲ್ (Mobile) ಹಿಡಿದುಕೊಂಡು ಆಟವಾಡ್ತಿದ್ದ ಮಗನಿಗೆ ಪೋಷಕರು (Parents) ಮೊಬೈಲ್ ಬಿಟ್ಟು ಓದು ಎಂದು ಹೇಳಿದ್ದಕ್ಕೆ 7ನೇ ತರಗತಿಯ 13 ವರ್ಷದ ವಿದ್ಯಾರ್ಥಿಯೊಬ್ಬ (Student) ನೇಣಿಗೆ ಶರಣಾಗಿದ್ದಾನೆ.
ಸ್ಟೋರ್ ರೂಂನಲ್ಲಿ ನೇಣಿಗೆ ಶರಣಾದ ಬಾಲಕ
13 ವರ್ಷದ ಯಶಸ್ ಗೌಡ ಆತ್ಮಹತ್ಯೆಗೆ ಶರಣಾದ ಬಾಲಕನಾಗಿದ್ದಾನೆ. ಬೆಂಗಳೂರು-ಹೊಸೂರು ಮುಖ್ಯರಸ್ತೆಯ ಅತ್ತಿಬೆಲೆ ಎಂಬಲ್ಲಿ ಮಂಗಳವಾರ ರಾತ್ರಿ 8.30ರ ಸುಮಾರಿಗೆ ಬಾಲಕ ಸ್ಟೋರ್ ರೂಂನ ಸೀಲಿಂಗ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಬಾಲಕ ಯಶಸ್ ತಂದೆ ರೈತನಾಗಿದ್ದು, ಮೃತ ಬಾಲಕನಿಗೋ ಓರ್ವ ಸಹೋದರಿ ಕೂಡ ಇದ್ದಾಳೆ.
ಖಾಸಗಿ ಶಾಲೆಯಲ್ಲಿ ಓದುತ್ತಿದ್ದ ಯಶಸ್
ಸ್ವಾಮಿ ವಿವೇಕಾನಂದ ನಗರದ ಖಾಸಗಿ ಶಾಲೆಯಲ್ಲಿ ಯಶಸ್ ವ್ಯಾಸಂಗ ಮಾಡುತ್ತಿದ್ದ. ಕೊರೊನಾ ಸಮಯದ ವೇಳೆ ಮಗನಿಗೆ ಆನ್ಲೈನ್ ಕ್ಲಾಸ್ ಕೇಳಲು ಪೋಷಕರು ಮೊಬೈಲ್ ಕೊಡಿಸಿದ್ರು. ಅಂದಿನಿಂದ ನನ್ನ ಮಗ ಮೊಬೈಲ್ ಫೋನ್ ಗೆ ದಾಸನಾಗಿದ್ದ ಎಂದು ತಂದೆ ಹೇಳಿಕೆ ನೀಡಿದ್ದಾರೆ.
ಫೋನ್ನಲ್ಲೇ ಕಾಲ ಕಳೆಯುತ್ತಿದ್ದ ಬಾಲಕ
ನಿತ್ಯ ಶಾಲೆಯಿಂದ ಮನೆಗೆ ಬಂದ ನಂತರ ಫೋನ್ ಹಿಡಿದುಕೊಂಡು ಕುಳಿತು ಬಿಡುತ್ತಿದ್ದ. ಮಗನಿಂದ ಫೋನ್ ಪಡೆಯೋದು ಕಷ್ಟವಾಗಿತ್ತಂತೆ. ಮೊಬೈಲ್ ಚಟಕ್ಕೆ ಬಿದ್ದು ಮಗ ಸರಿಯಾಗಿ ಹೋಮ್ ವರ್ಕ್ ಮಾಡುತ್ತಿಲ್ಲ, ಸರಿಯಾಗಿ ಓದುತ್ತಿಲ್ಲ ಎಂದು ಪೋಷಕರು ಕಂಗಾಲಾಗಿದ್ದರು. ಫೋನ್ ಇಲ್ಲದಿದ್ದರೆ, ಹುಡುಗ ಟಿವಿ ನೋಡುತ್ತಾ ಕುಳಿತುಕೊಳ್ಳುತ್ತಿದ್ದನಂತೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ರೂಮ್ಗೆ ಹೋಗಿ ಬಾಗಿಲು ಹಾಕಿಕೊಂಡ ಬಾಲಕ
ಮೊಬೈಲ್ ಬಿಟ್ಟು ಓದು ಎಂದು ಬಾಲಕನಿಗೆ ಪೋಷಕರು ಬೈಯ್ದಿದ್ದಾರೆ. ಮೊಬೈಲ್ ಕಿತ್ತುಕೊಂಡಿದ್ದಕ್ಕೆ ಸಿಟ್ಟಾದ ಬಾಲಕ ರೂಮ್ಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾನೆ. 1 ಗಂಟೆ ಕಳೆದರೂ ಬಾಲಕ ಹೊರಗೆ ಬಂದಿಲ್ಲ. ಗಾಬರಿಯಾದ ತಾಯಿ ಒಳಗೆ ಹೋಗಿ ನೋಡಿದಾಗ ಮಗ ನೇಣು ಬಿಗಿದುಕೊಂಡಿರುವುದು ಗೊತ್ತಾಗಿದೆ.
ಚಿಕಿತ್ಸೆ ಫಲಿಸದೆ ಯಶಸ್ ಸಾವು
ಮಗನ ಸ್ಥಿತಿ ಕಂಡ ತಾಯಿ ಜೋರಾಗಿ ಕಿರುಚಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ನೆರೆಹೊರೆಯವರು ಆಂಬ್ಯುಲೆನ್ಸ್ಗೆ ಕರೆ ಮಾಡಿದ್ದಾರೆ. ಯಶಸ್ನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು ಆದರೆ ಚಿಕಿತ್ಸೆ ಫಲಿಸದೆ ಆತ ಸಾವನ್ನಪ್ಪಿದ್ದಾನೆ. ಘಟನೆ ಕುರಿತು ರಾತ್ರಿ 10 ಗಂಟೆ ಸುಮಾರಿಗೆ ಪೊಲೀಸರಿಗೆ ಮಾಹಿತಿ ನೀಡಲಾಯಿತು.
Dharwad: ಆತ್ಮಹತ್ಯೆಗೆ ಶರಣಾದ ಲಾಡ್ಜ್ನಲ್ಲಿದ್ದ ಜೋಡಿ; ಮೂರು ದಿನದಿಂದ ವಾಸ್ತವ್ಯ
ಪೊಲೀಸರ ಭೇಟಿ ಪರಿಶೀಲನೆ
ಬೆಂಗಳೂರು ಗ್ರಾಮಾಂತರ ಪೊಲೀಸ್ ವ್ಯಾಪ್ತಿಯ ನಗರದ ಹೊರವಲಯದಲ್ಲಿರುವ ಹೊಸಕೋಟೆಯ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಸೂಲಿಬೆಲೆ ಠಾಣಾ ವ್ಯಾಪ್ತಿಯ ಪೊಲೀಸರು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತಾಯಿ ಬೈದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಬಾಲಕ
ಶಾಲೆಗೆ (School) ಚಕ್ಕರ್ ಹಾಕಿದ್ದಕ್ಕೆ ತಾಯಿ (mother) ಬೈದು, ಒಂದೆರಡು ಏಟು ಕೊಟ್ಟಿದ್ದಕ್ಕೆ 14 ವರ್ಷದ ಬಾಲಕನೋರ್ವ (Boy Death) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದ. ಪೃಥ್ವಿರಾಜ್ ನೇಣಿಗೆ ಕೊರಳೊಡ್ಡಿದ ಬಾಲಕ. ಬೆಂಗಳೂರು ಉತ್ತರ ತಾಲೂಕಿನ ಕಡಬಗೆರೆ (Kadabagere) ಗ್ರಾಮದಲ್ಲಿ ಘಟನೆ ನಡೆದಿತ್ತು. ಮೃತ ಪೃಥ್ವಿರಾಜ್ ಶಾಲೆಗೆ ಗೈರಾಗುತ್ತಿದ್ದನು. ಕಡಬಗೆರೆ ನಿವಾಸಿ ವಿಜಯ್ ಕುಮಾರ್ ಮತ್ತು ಸವಿತಾ ದಂಪತಿಯ ಮಗ. ಈ ಹಿನ್ನೆಲೆ ತಾಯಿ ಸವಿತಾ ಬೈದು, ಒಂದೆರಡು ಏಟು ನೀಡಿ ತಿಳಿ ಹೇಳಿದ್ದರು. ಪೃಥ್ವಿರಾಜ್ ಕಡಬಗೆರೆ ಸರ್ಕಾರಿ ಶಾಲೆಯಲ್ಲಿ 7ನೇ ತರಗತಿ ವ್ಯಾಸಂಗ ಮಾಡುತ್ತಿದ್ದನು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ